ಇಂಟರ್ನೆಟ್ ಇಲ್ಲದೇ ಕ್ರೋಮ್ ಬಳಕೆ ಮಾಡಬಹುದು…! ಹೇಗೆ..?
ಭಾರತದಲ್ಲಿ ಕಳೆದ ಎರಡು ವರ್ಷದಿಂದ ಮೊಬೈಲ ಡೇಟಾ ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ನಾಟಕೀಯವಾಗಿ ಬೆಳವಣಿಗೆಯನ್ನು ಹೊಂದಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ಭಾರತೀಯರಿಗಾಗಿಯೇ ಹೊಸ ಹೊಸ ಸೇವೆಯನ್ನು ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ ತನ್ನ ಬ್ರೌಸರ್ ಆಗಿರುವ ಕ್ರೋಮ್ ನಲ್ಲಿ ಇಂಟರ್ನೆಟ್ ಇಲ್ಲದೆಯೂ ಬ್ರೌಸ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಆಂಡ್ರಾಯ್ಡ್ ನಲ್ಲಿ ಕ್ರೋಮ್ ಬಳಕೆ ಮಾಡಿಕೊಳ್ಳುವರಿಗೆ ಮಾತ್ರವೇ ಇಂಟರ್ನೆಟ್ ಇಲ್ಲದೆಯೂ ಬ್ರೌಸ್ ಮಾಡುವ ಅವಕಾಶವನ್ನು ಗೂಗಲ್ ಮಾಡಿಕೊಟ್ಟಿದ್ದು, ಇದಕ್ಕಾಗಿ ಕ್ರೋಮ್ ನಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿದೆ. ಇಂಟರ್ನೆಟ್ ಇರುವ ಸಂದರ್ಭದಲ್ಲಿ ಮಾಹಿತಿಗಳನ್ನು ಪಡೆದುಕೊಂಡು, ನೆಟ್ ಇಲ್ಲದೇ ಇದ್ದಾಗ ಅದನ್ನು ಬಳಕೆಗೆ ನೀಡಲಿದೆ. ಈ ಕುರಿತು ಮಾಹಿತಿಯೂ ಇಲ್ಲಿದೆ.

ಆಪ್ ಡೇಟ್ ಮಾಡಿ:
ಕ್ರೋಮ್ ನಲ್ಲಿ ಇಂಟರ್ನೆಟ್ ಇಲ್ಲದೆಯೂ ಬ್ರೌಸ್ ಮಾಡುವ ಅವಕಾಶವನ್ನು ಪಡೆಯುವ ಸಲುವಾಗಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿ ಇರುವ ಕ್ರೋಮ್ ಆಪ್ ಅನ್ನು ಆಪ್ ಡೇಟ್ ಮಾಡಬೇಕಾಗಿದೆ. ಹೀಗೇ ಮಾಡಿದಲ್ಲಿ ಹೊಸ ಆಯ್ಕೆಯೂ ಕ್ರೋಮ್ ನಲ್ಲಿ ಸೇರಿಕೊಳ್ಳಲಿದೆ.

ಲೋಕೇಷನ್:
ಒಮ್ಮೆ ನಿಮ್ಮ ಸ್ಮಾರ್ಟ್ ಫೋನ್ ವೈ-ಫೈಗೆ ಕನೆಟ್ ಆದ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಲೋಕೇಷನ್ ಸುತ್ತಮುತ್ತಲಿನ ಪ್ರಮುಖ ವಿಷಯಗಳ ಬಗ್ಗೆ ಆಫ್ ಲೈನ್ ಡೌನ್ ಲೋಡ್ ಮಾಡಿಕೊಳ್ಳಲಿದೆ. ನಂತರ ಇಂಟರ್ನೆಟ್ ಇಲ್ಲದ ಸಂದರ್ಭದಲ್ಲಿ ಆ ಮಾಹಿತಿಗಳನ್ನು ನಿಮ್ಮ ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ನಿಮ್ಮ ಇಂಟರ್ನೆಟ್ ಬಳಕೆಯೂ ಬೇಕಾಗಿಲ್ಲ.

ಆಟೋ ಡೌನ್ ಲೋಡ್:
ಈ ಆಫ್ ಲೈನ್ ನಲ್ಲಿ ಬ್ರೌಸ್ ಮಾಡುವ ಡೇಟಾವನ್ನು ಕ್ರೊಮ್ ತಾನೇ ಡೌನ್ ಲೋಡ್ ಮಾಡಿಕೊಳ್ಳಲಿದೆ. ಇದರಿಂದಾಗಿ ನೀವು ಯಾವುದೇ ರೀತಿಯಲ್ಲಿಯೂ ಟೆನ್ಷನ್ ತೆಗೆದುಕೊಳ್ಳಬೇಕಾಗಿಲ್ಲ. ಎಲ್ಲಾ ಆಟೋ ಡೌನ್ ಲೋಡ್ ಆಗಲಿದ್ದು, ಇದರಿಂದ ನಿಮಗೆ ಹೆಚ್ಚಿನ ಲಾಭವೂ ಆಗಲಿದೆ.

ಭಾರತಕ್ಕಾಗಿಯೇ ವಿಶೇಷ:
ನಮ್ಮ ದೇಶದಲ್ಲಿ ಎಲ್ಲಾ ಕಡೆಗಳಲ್ಲಿಯೂ ಇಂಟರ್ನೆಟ್ ಸೇವೆಯೂ ಲಭ್ಯವಿರುವುದಿಲ್ಲ. ಈ ಹಿನ್ನಲೆಯಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಸಹಾಯ ಮಾಡುವ ಸಲುವಾಗಿಯೇ ಈ ಹೊಸ ಆಯ್ಕೆಯನ್ನು ಬಳಕೆಗೆ ನೀಡಿದೆ ಎನ್ನಲಾಗಿದೆ. ಇದರಿಂದ ಸಾಕಷ್ಟು ಲಾಭವಾಗಲಿದೆ. ಇದರಿಂದಾಗಿ ಮೊಬೈಲ್ ಬ್ರೌಸಿಂಗ್ ಸುಲಭವಾಗಲಿದೆ.


Click it and Unblock the Notifications








