Home
ಸುದ್ದಿಜಾಲ

ಗೂಗಲ್ ಕ್ರೋಮ್ ಬಳಕೆದಾರರಿಗೆ CERT-In ನಿಂದ ತುರ್ತು ಎಚ್ಚರಿಕೆ!

ಭಾರತ ಸರ್ಕಾರದ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು (CERT-In) ಗೂಗಲ್ ಕ್ರೋಮ್ ಬಳಕೆದಾರರಿಗೆ ಹೊಸ ಸೈಬರ್ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ಅಕ್ಟೋಬರ್ 30ರಂದು ಬಿಡುಗಡೆಯಾದ ಹೊಸ ವರದಿಯಲ್ಲಿ, ಕ್ರೋಮ್ ಬ್ರೌಸರ್‌ನ ವಿಂಡೋಸ್‌, ಮ್ಯಾಕ್‌ ಮತ್ತು ಲಿನಕ್ಸ್‌ ಆವೃತ್ತಿಗಳಲ್ಲಿ ಹಲವು ಹೈ-ರಿಸ್ಕ್ ದೋಷಗಳು ಕಂಡುಬಂದಿವೆ. ಈ ದೋಷಗಳನ್ನು ಹ್ಯಾಕರ್‌ಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದ್ದು, ಗೂಗಲ್ ಕ್ರೋಮ್ ಬಳಕೆದಾರರೆಲ್ಲರೂ ತಕ್ಷಣ ಅಪ್ಡೇಟ್ ಮಾಡಲು ಸೂಚಿಸಲಾಗಿದೆ.

CERT-In ಪ್ರಕಟಿಸಿರುವ CIVN-2025-0288 ಎಚ್ಚರಿಕೆಯ ಪ್ರಕಾರ, Google Chrome 142.0.7444.59 (Linux) ಹಾಗೂ 142.0.7444.59/60 (Windows ಮತ್ತು macOS) ಕ್ಕಿಂತ ಹಳೆಯ ಆವೃತ್ತಿಗಳು ಅಪಾಯದಲ್ಲಿವೆ. ಈ ದೋಷಗಳು ಬ್ರೌಸರ್‌ನ V8 JavaScript Engine, Autofill, Extensions, Media ಮತ್ತು Omnibox ಭಾಗಗಳಲ್ಲಿ ಪತ್ತೆಯಾಗಿವೆ. ಇದರಿಂದ ಹ್ಯಾಕರ್‌ಗಳು ದೂರದಿಂದಲೇ ಸುಲಭವಾಗಿ ಬಳಕೆದಾರರ ಡಿವೈಸ್ ಹ್ಯಾಕ್ ಮಾಡಿ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು.

ಏಕೆ ಇದು ಗಂಭೀರ ಸಮಸ್ಯೆಯಾಗಿದೆ?
CERT-In ಈ ಸಮಸ್ಯೆಯನ್ನು "High Severity Vulnerability" ಎಂದು ಗುರುತಿಸಿದೆ. ಈ ಹೈ-ರಿಸ್ಕ್ ದೊಷಗಳ ಮೂಲಕ ಹ್ಯಾಕರ್‌ಗಳು ಬಳಕೆದಾರರನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ಅಪಾಯಕಾರಿ ವೆಬ್‌ಸೈಟ್‌ಗಳಿಗೆ ಕರೆದೊಯ್ಯಬಹುದು. ಅಂತಹ ಸೈಟ್‌ಗಳನ್ನು ತೆರೆಯುತ್ತಿದ್ದಂತೆಯೇ, ದುಷ್ಕೃತ್ಯ ಕೋಡ್‌ಗಳು ಕಾರ್ಯನಿರ್ವಹಿಸಿ ಕಂಪ್ಯೂಟರ್‌ನ ಮೇಲೆ ನಿಯಂತ್ರಣ ಪಡೆಯುವ ಸಾಧ್ಯತೆ ಇದೆ. ಇದರಿಂದ ಅವರು,

  • ಹ್ಯಾಕರ್‌ಗಳು ನಿಮ್ಮ ಕಂಪ್ಯೂಟರ್‌ನಲ್ಲಿ ಮಾಲ್ವೇರ್ ಸ್ಥಾಪಿಸಬಹುದು
  • ವೈಯಕ್ತಿಕ ಡೇಟಾ ಮತ್ತು ಪಾಸ್ವರ್ಡ್‌ಗಳನ್ನು ಕದಿಯಬಹುದು
  • ಸಂಪೂರ್ಣ ಸಿಸ್ಟಮ್‌ನ ಮೇಲೆ ನಿಯಂತ್ರಣ ಪಡೆಯಬಹುದು
  • ಅಷ್ಟೇ ಅಲ್ಲದೆ, ದಾಳಿ ಸ್ಪೂಫಿಂಗ್ ಅಥವಾ ಡೇಟಾ ಮ್ಯಾನಿಪ್ಯುಲೇಷನ್ ರೂಪದಲ್ಲಿಯೂ ಆಗಬಹುದು. ಈ ದೋಷಗಳಿಗೆ CVE-2025-12429 ರಿಂದ CVE-2025-12447 ವರೆಗೆ ಐಡೆಂಟಿಫೈಯರ್‌ಗಳು ನೀಡಲಾಗಿದೆ.
  • ಗೂಗಲ್ ಕ್ರೋಮ್ ಬಳಕೆದಾರರಿಗೆ CERT-In ನಿಂದ ತುರ್ತು ಎಚ್ಚರಿಕೆ!

ರಕ್ಷಿಸಿಕೊಳ್ಳುವುದು ಹೇಗೆ?
ಸೈಬರ್ ಅಪಾಯದಿಂದ ದೂರ ಇರಲು ಗೂಗಲ್ ಕ್ರೋಮ್‌ನ ಹೊಸ ಆವೃತ್ತಿಗೆ (142.0.7444.60 ಅಥವಾ ಅದರ ಮೇಲಿನ) ತಕ್ಷಣ ಅಪ್ಡೇಟ್ ಮಾಡಬೇಕು.ಅಪ್ಡೇಟ್ ಮಾಡಲು,

  • ಕ್ರೋಮ್‌ನಲ್ಲಿ ಮೆನು ಬಟನ್ ತೆರೆಯಿರಿ.
  • Help > About Google Chrome ಆಯ್ಕೆಮಾಡಿ.
  • ಅಪ್ಡೇಟ್ ಲಭ್ಯವಿದ್ದರೆ, ಅದು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಿ ಇನ್‌ಸ್ಟಾಲ್ ಆಗುತ್ತದೆ.

ಅಪ್ಡೇಟ್‌ ನಂತರ ಬ್ರೌಸರ್ ಮರುಪ್ರಾರಂಭಿಸಿ. ಗೂಗಲ್ ತನ್ನ ಅಧಿಕೃತ ಬ್ಲಾಗ್‌ನಲ್ಲಿ Stable Channel Update for Desktop (October 28, 2025) ಎಂಬ ಶೀರ್ಷಿಕೆಯಡಿ ಈ ದೋಷಗಳಿಗೆ ಪರಿಹಾರ ನೀಡುವ ಪ್ಯಾಚ್‌ಗಳ ವಿವರಗಳನ್ನು ಹಂಚಿಕೊಂಡಿದೆ.

ಈ ಆಧುನಿಕ ಡಿಜಿಟಲ್ ಯುಗದಲ್ಲಿ ಭದ್ರತೆ ಎಂದರೆ ಕೇವಲ ಪಾಸ್‌ವರ್ಡ್ ಸುರಕ್ಷತೆ ಅಲ್ಲ, ನಿರಂತರ ಅಪ್ಡೇಟ್‌ಗಳೇ ನಿಜವಾದ ರಕ್ಷಣೆ. ಹಳೆಯ ಆವೃತ್ತಿಗಳು ಸೈಬರ್ ದಾಳಿಗಳಿಗೆ ಬಾಗಿಲು ತೆರೆದಂತಾಗುತ್ತವೆ. ಆದ್ದರಿಂದ ಎಲ್ಲ ಗೂಗಲ್ ಕ್ರೋಮ್ ಬಳಕೆದಾರರು ತಕ್ಷಣ ತಮ್ಮ ಬ್ರೌಸರ್‌ಗಳನ್ನು ನವೀಕರಿಸಿ ಸುರಕ್ಷಿತರಾಗುವುದು ಅತ್ಯಂತ ಅಗತ್ಯ. ಗಮನಿಸಿ: ಈ ತುರ್ತು ಎಚ್ಚರಿಕೆಯು ನಿಮ್ಮ ರಕ್ಷಣೆಗಾಗಿ ಮಾತ್ರ. ಇದರಿಂದ ಭಯಪಡಬೇಕಾಗಿಲ್ಲ. ಈ ಮೇಲೆ ತಿಳಿಸಿರುವ ಸುಲಭ ಕ್ರಮದ ಮೂಲಕ ನಿಮ್ಮ ಕ್ರೋಮ್ ಅನ್ನು ಅಪ್‌ಡೇಟ್ ಮಾಡಿ.

Best Mobiles in India

English summary
The CIVN-2025-0288 alert issued by CERT-In indicates that Google Chrome versions earlier than 142.0.7444.59 for Linux and 142.0.7444.59/60 for Windows and macOS are vulnerable. These security issues are present in various components of the browser, including the V8 JavaScript Engine, Autofill, Extensions, Media, and Omnibox.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+