Subscribe to Gizbot

ನಿಮ್ಮ ಆರೋಗ್ಯ ತಪಾಸಣೆ ಮಾಡುವ ಜಾಕೆಟ್ ಬೇಕೇ?

Written By:

ನಿಮ್ಮ ಹೃದಯ ಮತ್ತು ಮೆದುಳಿನ ಒಳಭಾಗದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಿಮ್ಮ ಜಾಕೆಟ್ ಅನ್ನು ಸದ್ಯದಲ್ಲೇ ಪರಿಶೀಲಿಸಲಿದೆ. ಹೌದು ಈ ಜಾಕೆಟ್ ಅನ್ನು ನೀವು ಧರಿಸಿದರೆ ಸಾಕು ನಿಮ್ಮ ಸಂಪೂರ್ಣ ಆರೋಗ್ಯದ ಮಾಹಿತಿಯನ್ನು ವೈದ್ಯರಿಗೆ ಇದು ತಿಳಿಸುತ್ತದೆ.

(ಇದನ್ನೂ ಓದಿ: ರೆಡ್ಮೀ ನೋಟ್ ಮುಂಗಡ ಕಾಯ್ದಿರಿಸಿ ಅದೃಷ್ಟಶಾಲಿಗಳು ನೀವಾಗಿ)

ತಾಮ್ರ, ಪಾಲಿಮರ್, ಗಾಜು ಮತ್ತು ಬೆಳ್ಳಿಯ ಪದರಗಳನ್ನು ಬಳಸಿ ಕೆನಡಾದ ವಿಜ್ಞಾನಿಗಳ ತಂಡವು ಈ ಬಟ್ಟೆಯನ್ನು ತಯಾರುಪಡಿಸಿದೆ. ಸೆನ್ಸಾರ್ ಮತ್ತು ಏಂಟೆನಾ ಎರಡರಲ್ಲೂ ಈ ಬಟ್ಟೆ ಕಾರ್ಯನಿರ್ವಹಿಸಲಿದೆ. ಇದನ್ನು ಹತ್ತಿ ಮತ್ತು ಉಣ್ಣೆಯನ್ನು ಬಳಸಿ ಇದನ್ನು ನೇಯಬಹುದಾದ್ದರಿಂದ ಇದು ಬಾಳಿಕೆ ಬರುವಂಥದ್ದಾಗಿದೆ.

ನಿಮ್ಮ ಆರೋಗ್ಯದ ಮೇಲೆ ಕಣ್ಣಿಡುವ ಜಾಕೆಟ್ ಇದು

ಇದರ ಸಿಗ್ನಲ್ ಗುಣಮಟ್ಟವನ್ನು ವಾಣಿಜ್ಯ ಆಂಟೇನಾಗಳಿಗೆ ಹೋಲಿಸಬಹುದು. ಫೈಬರ್‌ನ ವಲಯವು ಗ್ಲುಕೋಸ್ ಮಟ್ಟ, ಹೃದಯ ಬಡಿತ, ಮೆದುಳಿನ ಚಟುವಟಿಕೆ ಮತ್ತು ಅಂತರಿಕ್ಷ ಕಕ್ಷೆಗಳನ್ನು ಇದು ಮೇಲ್ವಿಚಾರಣೆ ಮಾಡುತ್ತದೆ.

ಈ ಬಟ್ಟೆಯು ದೀರ್ಘಕಾಲದ ರೋಗಗಳಿರುವವರಿಗೆ, ಒಂಟಿಯಾಗಿ ವಾಸಿಸುವ ಹಿರಿಯರಿಗೆ, ಅಗ್ನಿಶಾಮಕ ದಳ ಮತ್ತು ಪೋಲೀಸರಿಗೆ ನೆರವಾಗಲಿದೆ.

ತಂತ್ರಜ್ಞಾನವನ್ನು ವೈರ್‌ಲೆಸ್ ನೆಟ್‌ವರ್ಕ್‌ಗೆ ಸಂಪರ್ಕಪಡಿಸಬೇಕು ಮತ್ತು ಇದರಿಂದಾಗಿ ವಿದ್ಯುತ್ ಪೂರೈಕೆಯ ಸಮಸ್ಯೆ ಕೂಡ ಬಗೆಹರಿಯುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

English summary
This article tells about Your jacket could soon be monitoring what is going on inside your heart and brain and send the critical information to your doctor for a quick analysis.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot