ಕ್ಲೌಡ್‌ವಾಕರ್‌ನ ಬರ್ಸ್ಟ್ I2000 ಮತ್ತು E3000 ಸೌಂಡ್‌ಬಾರ್ ಲಾಂಚ್‌!

|

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಮಾರ್ಟ್‌ ಟಿವಿ ಬರ್ಸ್ಟ ಸೌಂಡ್‌ಬಾರ್‌ಗಳು ಲಾಂಚ್‌ ಆಗಿದ್ದು, ಸ್ಮಾರ್ಟ್‌ ಟಿವಿಗಳಿಗೆ ತಕ್ಕಂತೆ ಸ್ಮಾರ್ಟ್‌ಸೌಂಡ್‌ಬಾರ್‌ಗಳನ್ನ ಮಾರುಕಟ್ಟೆಗೆ ಹಲವಾರು ಕಂಪೆನಿಗಳು ಈಗಾಗ್ಲೆ ಪರಿಚಯಿಸಿವೆ. ಇದೇ ಮಾದರಿಯಲ್ಲಿ ಸ್ಮಾರ್ಟ್‌ ಟಿವಿ ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಕ್ಲೌಡ್ ವಾಕರ್ ಕಂಪನಿಯೂ ಒಂದೇ ಬಾರಿಗೆ ಎರಡು ಸೌಂಡ್‌ಬಾರ್‌ಗಳನ್ನ ಲಾಂಚ್‌ ಮಾಡಿದ್ದು, ಅಮೆಜಾನ್‌ ಇಂಡಿಯಾ ತಾಣದಲ್ಲಿ ಖರೀದಿಗೆ ಲಭ್ಯವಿದೆ.

ಹೌದು

ಹೌದು, ಸ್ಮಾರ್ಟ್‌ ಟಿವಿ ವಲಯದಲ್ಲಿ ಈಗಾಗ್ಲೆ ಸಖತ್‌ ಸೌಂಡ್‌ ಮಾಡಿರೋ ಕ್ಲೌಡ್‌ವಾಕರ್ ಕಂಪೆನಿ ತನ್ನ ಹೊಸ ಆವೃತ್ತಿಯ ಕ್ಲೌಡ್‌ವಾಕರ್ ಬರ್ಸ್ಟ್ ಸೌಂಡ್‌ಬಾರ್ I2000, ಮತ್ತು ಬರ್ಸ್ಟ್ E3000 ಎಂಬ ಎರಡು ಬರ್ಸ್ಟ್ ಟಿವಿ ಸೌಂಡ್‌ಬಾರ್‌ಗಳನ್ನು ಲಾಂಚ್‌ ಮಾಡಿದೆ. ಈ ಸೌಂಡ್‌ಬಾರ್‌ಗಳಲ್ಲಿ ಬ್ಲೂಟೂತ್ 5.0, ಬಿಲ್ಟ್‌ ಇನ್‌ ಸಬ್ ವೂಫರ್ ಮತ್ತು 11 ಎಲ್ಇಡಿ ಪಾರ್ಟಿ ಲೈಟ್ ಮೋಡ್‌ಗಳಿದ್ದು, ಬಳಕೆದಾರರು ಚಲನಚಿತ್ರಗಳು, ಕ್ರೀಡೆ, ಗೇಮಿಂಗ್ ಅಥವಾ ಮ್ಯೂಸಿಕ್‌ ತಕ್ಕಂತೆ ಸೌಂಡ್‌ ಸಿಸ್ಟಂ ಅಳವಡಿಸಿಕೊಳ್ಳಲು ಕ್ಲೌಡ್‌ವಾಕರ್ ಬರ್ಸ್ಟ್ ಸೌಂಡ್‌ಬಾರ್ ಉತ್ತಮ ಆಯ್ಕೆಯಾಗಿದೆ ಎಂದು ಹೇಳಲಾಗ್ತಿದೆ.

ಕ್ಲೌಡ್‌ವಾಕರ್ ಬರ್ಸ್ಟ್ ಸೌಂಡ್‌ಬಾರ್ I2000

ಕ್ಲೌಡ್‌ವಾಕರ್ ಬರ್ಸ್ಟ್ ಸೌಂಡ್‌ಬಾರ್ I2000

ಕ್ಲೌಡ್‌ವಾಕರ್ ಬರ್ಸ್ಟ್ ಸೌಂಡ್‌ಬಾರ್ I2000, ಸೌಂಡ್‌ನಲ್ಲಿ ಡೀಪ್ ಬಾಸ್‌ಗಾಗಿ 2.1 ಚಾನೆಲ್ 50 ಡಬ್ಲ್ಯೂ ಸ್ಪೀಕರ್ ವ್ಯವಸ್ಥೆಯ ಜೊತೆಗೆ ಸಬ್ ವೂಫರ್ ಹೊಂದಿದೆ. ಜೊತೆಗೆ ಈ ಸೌಂಡ್‌ಬಾರ್‌ ಬ್ಲೂಟೂತ್ 5.0 ಅನ್ನು ಹೊಂದಿದ್ದು, ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಈ ಸ್ಪೀಕರ್‌ನಲ್ಲಿ ಜಾಜ್, ಪಾಪ್, ಕ್ಲಾಸಿಕ್, ಫ್ಲಾಟ್ ಮತ್ತು ರಾಕ್ ನಂತಹ ಈಕ್ವಲೈಜರ್ ಮೋಡ್‌ ಕನೆಕ್ಟಿವಿಟಿಯನ್ನ ಹೊಂದಿದೆ. ಟಿವಿ, ಸೆಟ್-ಟಾಪ್ ಬಾಕ್ಸ್, ಡಿವಿಡಿ, ಬ್ಲೂ-ರೇ ಮತ್ತು ಎಂಪಿ 3 ಪ್ಲೇಯರ್‌ಗಳನ್ನು ಸಂಪರ್ಕಿಸಲು ಸೌಂಡ್‌ಬಾರ್‌ಗಳು ಆಕ್ಸ್, ಲೈನ್ ಐಎನ್ ಮತ್ತು ಆಪ್ಟಿಕಲ್ ಪೋರ್ಟ್‌ನಂತಹ ಅನೇಕ ಸಂಪರ್ಕ ಆಯ್ಕೆಗಳನ್ನು ಹೊಂದಿವೆ.

ಕ್ಲೌಡ್‌ವಾಕರ್ ಬರ್ಸ್ಟ್ ಸೌಂಡ್‌ಬಾರ್ E3000

ಕ್ಲೌಡ್‌ವಾಕರ್ ಬರ್ಸ್ಟ್ ಸೌಂಡ್‌ಬಾರ್ E3000

ಈ ಸೌಂಡ್‌ಬಾರ್‌ 2.1 ಚಾನೆಲ್ ವೈರ್ಡ್ ಬ್ಲೂಟೂತ್ ಸೌಂಡ್‌ಬಾರ್ ಸಬ್‌ವೂಪರ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ, ಇದು 100W ಸೌಂಡ್‌ ಔಟ್‌ಪುಟ್‌ ನೀಡಲಿದೆ. ಜೊತೆಗೆ ಸಬ್‌ವೂಪರ್‌ ಸೌಂಡ್‌ಗಾಗಿ 60W ಎಕ್ಸಾಟರ್ನಲ್‌ಬಾಸ್ ಹೊಂದಿದೆ. ಅಲ್ಲದೆ, ಕ್ಲೌಡ್‌ವಾಕರ್ ಬರ್ಸ್ಟ್ E3000 ಬ್ಲೂಟೂತ್ 5.0 ಹೊಂದಿದ್ದು ಇದರಿಂದ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಸಾಧನಗಳಿಂದ ನೇರವಾಗಿ ಸಂಗೀತ ಸ್ಟ್ರೀಮಿಂಗ್ ಅನ್ನು ಸಕ್ರಿಯಗೊಳಿಸಬಹುದಾಗಿದೆ. ಜೊತೆಗೆ ಟಿವಿ, ಮೊಬೈಲ್, ಸೆಟ್-ಟಾಪ್ ಬಾಕ್ಸ್, ಡಿವಿಡಿ, ಬ್ಲೂ-ರೇ ಮತ್ತು ಎಂಪಿ 3 ಪ್ಲೇಯರ್‌ ಜೊತೆ ಸಂಪರ್ಕ ಸಾಧಿಸಲು ಆಕ್ಸ್, ಲೈನ್ ಇನ್ ಮತ್ತು ಆಪ್ಟಿಕಲ್ ಪೋರ್ಟ್‌ನಂತಹ ಅನೇಕ ಸಂಪರ್ಕ ಆಯ್ಕೆಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಈ ಎರಡು ಸ್ಪೀಕರ್‌ನಲ್ಲೂ 11 ಎಲ್‌ಇಡಿ ಲೈಟಿಂಗ್ ಮೋಡ್‌ಗಳನ್ನು ಅಳವಡಿಸಲಾಗಿದೆ. ಈ ದೀಪಗಳಲ್ಲಿ ಕೆಂಪು, ನೀಲಿ, ಹಸಿರು ಮತ್ತು ಹಳದಿ ಬಣ್ಣಗಳು ಸೇರಿವೆ. ಸದ್ಯ ಬರ್ಸ್ಟ್ I2000, 5,999 ರೂ ಬೆಲೆಯನ್ನ ಹೊಂದಿದ್ದರೆ, ಬರ್ಸ್ಟ್ E3000 7,999 ರೂ ಬೆಲೆಯನ್ನ ಹೊಂದಿದೆ. ಈ ಎರಡು ಸೌಂಡ್‌ಬಾರ್‌ಗಳು ಅಮೆಜಾನ್ ಇಂಡಿಯಾ ತಾಣದಲ್ಲಿ ಖರೀದಿಗೆ ಲಭ್ಯವಿದೆ.

Most Read Articles
Best Mobiles in India

Read more about:
English summary
CloudWalker has announced its Burst TV soundbars. These can be used with your smart TV to provide a powerful audio experience. The soundbar features Bluetooth 5.0, a built-in sub-woofer and 11 LED party light modes. The CloudWalker Burst soundbar is meant to be a powerful option irrespective of whether users are involved in movies, sports, gaming or music.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more