ಕ್ಲಬ್‌ಹೌಸ್ ಪರಿಚಯಿಸಿರುವ ಈ ಫೀಚರ್ಸ್ ನಿಮಗೆ ಹೊಸ ಅನುಭವ ನೀಡಲಿದೆ!
ಸೊಶೀಯಲ್ ಆಡಿಯೋ ಅಪ್ಲಿಕೇಶನ್ ಕ್ಲಬ್‌ಹೌಸ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟ್ರೆಂಡ್ ಸೆಟ್ ಮಾಡಿದೆ. ಫೇಸ್‌ಬುಕ್, ಟ್ವಿಟರ್‌ಗೆ ಸಾಕಷ್ಟು ಪೈಪೋಟಿ ನೀಡುತ್ತಿರುವ ಕ್ಲಬ್‌ಹೌಸ್ ಬಳಕೆದಾರರ ನೆಚ್ಚಿನ ಅಪ್ಲಿಕೇಶನ್ ಎನಿಸಿಕೊಂಡಿದೆ. ಸದ್ಯ ಇದೀಗ ಕ್ಲಬ್‌ಹೌಸ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಹೊಸ ರಿಪ್ಲೇ ಫೀಚರ್ಸ್ ಅನ್ನು ಪರಿಚಯಿಸಿದೆ. ಇದು ರೂಮ್ಸ್ ಹೋಸ್ಟ್ ಮಾಡುವವರಿಗೆ ಸೆಶನ್ ಅನ್ನು ರೆಕಾರ್ಡ್ ಮಾಡಲು ಅನುಮತಿಸಲಿದೆ. ಜೊತೆಗೆ ಸೆಶನ್ ರೆಕಾರ್ಡ್ ಅನ್ನು ಕ್ಲಬ್ ಅಥವಾ ಪ್ರೊಫೈಲ್ ನಲ್ಲಿ ಸೇವ್ ಮಾಡಲಿದೆ.

ಹೌದು, ಕ್ಲಬ್‌ಹೌಸ್ ಅಪ್ಲಿಕೇಶನ್ ಬಳಕೆದಾರರಿಗೆ ಹೊಸ ರಿಪ್ಲೇ ಫೀಚರ್ಸ್ ಅನ್ನು ಪರಿಚಯಿಸಿದೆ. ಇದು ಸೆಶನ್ ರೆಕಾರ್ಡ್ ಮಾಡುವುದಕ್ಕೆ ಸಹಾಯ ಮಾಡಲಿದೆ ಎಂದು ಹೇಳಲಾಗಿದೆ. ಸದ್ಯ ಈ ಹೊಸ ಫೀಚರ್ಸ್ ಆಂಡ್ರಾಯ್ಡ್ ಮತ್ತು iOS ಎರಡೂ ಡಿವೈಸ್‌ಗಳಲ್ಲಿಯೂ ಲಭ್ಯವಾಗಲಿದೆ. ಇನ್ನು ಈ ಫೀಚರ್ಸ್ ಮೂಲಕ ನೀವು ಮಾಡುವ ಸೆಶನ್ ರೆಕಾರ್ಡಿಂಗ್ ಅನ್ನು ಬಾಹ್ಯವಾಗಿ ಡೌನ್‌ಲೋಡ್ ಮಾಡಲು ಮತ್ತು ಶೇರ್ ಮಾಡುವುದಕ್ಕೆ ಅವಕಾಶವವನ್ನು ಸಹ ನೀಡಲಾಗಿದೆ. ಹಾಗಾದ್ರೆ ಕ್ಲಬ್‌ಹೌಸ್ ಸೇರಿದ ಹೊಸ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ಲಬ್‌ಹೌಸ್ ಪರಿಚಯಿಸಿರುವ ಹೊಸ ರಿಪ್ಲೇ ಫೀಚರ್ಸ್ ಟ್ವಿಟರ್‌ನ ಸ್ಪೇಸಸ್‌ಗಾಗಿ ಪ್ರಾರಂಭಿಸಿದ ಫೀಚರ್ಸ್ ಅನ್ನು ಹೋಲುತ್ತದೆ. ಇದು ಹೋಸ್ಟ್‌ಗಳಿಗೆ ಆಡಿಯೊ ಚಾಟ್ ಸೆಶನ್ ಅನ್ನು ರೆಕಾರ್ಡ್ ಮಾಡಲು ಮತ್ತು ಇತರರೊಂದಿಗೆ ಶೇರ್ ಮಾಡಲು ಅನುಮತಿ ನೀಡಲಿದೆ. ಈ ಫೀಚರ್ಸ್ ಅನ್ನು ಯಾವುದೇ ಪಬ್ಲಿಕ್ ರೂಮ್ಸ್‌ಗೆ ಟಾಗಲ್ ಆನ್ ಅಥವಾ ಆಫ್ ಮಾಡಲು ಅಡ್ಮಿನ್ ಆಯ್ಕೆ ಮಾಡಬಹುದಾಗಿದೆ. ಆದರಿಂದ ರಿಪ್ಲೇ ಫೀಚರ್ಸ್ ಅನ್ನು ಐಚ್ಛಿಕ ಆಯ್ಕೆಯ ಮಾದರಿಯಲ್ಲಿ ಸೆಟ್ ಮಾಡಲಾಗಿದೆ.

ಇನ್ನು ಹೊಸ ಫೀಚರ್ಸ್ ರಿಪ್ಲೇಯನ್ನು ಸಕ್ರಿಯಗೊಳಿಸಿದಾಗ, ಕ್ಲಬ್‌ಹೌಸ್ ಬಳಕೆದಾರರು ಯಾವಾಗ ಬೇಕಾದರೂ ಕಂಪ್ಲೀಟ್ ಸೆಶನ್ ಅನ್ನು ರಿಪ್ಲೇ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ನೀವು ರೆಕಾರ್ಡ್ ಮಾಡಲಾದ ಸೆಶನ್ ಕೂಡ ನಿಮಗೆ ಲೈವ್ ರೂಮ್‌ನ ಅನುಭವವನ್ನು ನೀಡಲಿದೆ. PTR ಗಳು, ಮೈಕ್ ಟ್ಯಾಪ್‌ಗಳು ಕೂಡ ಲಭ್ಯವಿದೆ. ಲೈವ್ ಸೆಶನ್‌ನಂತೆ ಬಳಕೆದಾರರು ಡೈನಾಮಿಕ್ಸ್ ಮತ್ತು ರೂಂನಲ್ಲಿ ಒಳಗೊಳ್ಳುವಿಕೆಯನ್ನು ಅನುಭವಿಸಲು ಸಾಧ್ಯವಾಗಲಿದೆ.

ಇದಲ್ಲದೆ ಈ ಫೀಚರ್ಸ್‌ನಲ್ಲಿ ರೆಕಾರ್ಡ್ ಮಾಡಿದ ಸಂಭಾಷಣೆಯನ್ನು ವೀಕ್ಷಿಸಲು ನಿರ್ಧರಿಸುವ ಕೇಳುಗರಿಗೆ ಹಲವು ಆಯ್ಕೆಗಳನ್ನು ನೀಡಲಿದೆ. ಮುಂದಿನ ಸ್ಪೀಕರ್‌ಗೆ ಸ್ಕಿಪ್ ಮಾಡುವುದು, ಸ್ಟಾಪ್ ಮಾಡುವುದು ಸೇರಿದಂತೆ ಹಲವು ಆಯ್ಕೆಗಳನ್ನು ನೀಡಲಿದೆ. ಇದರಲ್ಲಿ ಬಳಕೆದಾರರು 1.5 ಅಥವಾ 2x ವೇಗದಲ್ಲಿ ಸೆಶನ್ ಅನ್ನು ಕೇಳುವುದಕ್ಕೆ ಅವಕಾಶ ನೀಡಲಿದೆ.ಆದರೆ ಕ್ರಿಯೆಟರ್ಸ್ ತಮ್ಮ ರಿಪ್ಲೇ ಯಾರು ಕೇಳುತ್ತಿದ್ದಾರೆ ಎಂಬುದನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂಬುದನ್ನು ಗಮನಿಸುವುದು ಕೂಡ ಮುಖ್ಯವಾಗಲಿದೆ.

ಇನ್ನು ಕ್ಲಬ್‌ಹೌಸ್‌ನ ಹೊಸ ರಿಪ್ಲೇ ಫೀಚರ್ಸ್ ಪಿನ್ ಮಾಡಿದ ಲಿಂಕ್‌ಗಳನ್ನು ಸಹ ಬೆಂಬಲಿಸಲಿದೆ. ಇದು ಸಂಭಾಷಣೆಯ ಸಮಯದಲ್ಲಿ ವಿಭಿನ್ನ ಸೈಟ್‌ಗಳಿಗೆ ಲಿಂಕ್ ಮಾಡಲು ಚಾಟ್ ಮಾಡರೇಟರ್‌ಗಳನ್ನು ಸಕ್ರಿಯಗೊಳಿಸಲಿದೆ. ಈ ಲಿಂಕ್‌ಗಳು ರೆಕಾರ್ಡಿಂಗ್ ಅನ್ನು ಕೇಳುವವರಿಗೆ ಸಂಪೂರ್ಣವಾಗಿ ಸಂವಾದಾತ್ಮಕವಾದ ಅನುಭವ ನೀಡಲಿದೆ. ನಾವು ರಿಪ್ಲೇ ಫೀಚರ್ಸ್ ಅನ್ನು ಬಿಲ್ಡ್ ಮಾಡಲು ಹೊರಟಾಗ ಸಂವಾದಾತ್ಮಕವಲ್ಲದ ಆಡಿಯೊ ಸ್ಟ್ರೀಮ್‌ಗಳು ಮಾತ್ರ ಸಾಧ್ಯವಾಗದ ರೀತಿಯಲ್ಲಿ, ಲೈವ್ ಕ್ಲಬ್‌ಹೌಸ್ ಕೋಣೆಯ ಮ್ಯಾಜಿಕ್ ಮತ್ತು ಶಕ್ತಿಯನ್ನು ಸೆರೆಹಿಡಿಯುವಂತಹದನ್ನು ರಚಿಸಲು ನಾವು ಬಯಸಿದ್ದೇವೆ ಎಂದು ಕ್ಲಬ್‌ಹೌಸ್ ಹೇಳಿಕೊಂಡಿದೆ.

ಇದಲ್ಲದೆ ಕ್ಲಬ್‌ಹೌಸ್ ತನ್ನ ಪ್ಲಾಟ್‌ಫಾರ್ಮ್ ಅನ್ನು ಸ್ಥಳಿಯ ಜನರಿಗೂ ತಲುಪಿಸುವುದಕ್ಕೆ ಮುಂದಾಗಿದೆ. ಸ್ತಳಿಯ ಭಾಷೆಯಲ್ಲಿಯೇ ಬಳಸುವುದಕ್ಕೆ ಅವಕಾಶ ಕೊಡುವ ಮೂಲಕ ತನ್ನ ಪ್ರಸಿದ್ಧಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವುದಕ್ಕೆ ಮುಂದಾಗಿದೆ. ಇದಕ್ಕಾಗಿಯೇ ಭಾರತದಲ್ಲಿ ಹಿಂದಿ, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳನ್ನು ಸೇರಿಸಿದೆ. ಪ್ರಸ್ತುತ, ಈ ಹೊಸ ಅಪ್‌ಡೇಟ್ ಆಂಡ್ರಾಯ್ಡ್‌ನಲ್ಲಿ ಮಾತ್ರ ಲಭ್ಯವಿದೆ ಮತ್ತು ಶೀಘ್ರದಲ್ಲೇ ಐಒಎಸ್ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಸದ್ಯ ಕ್ಲಬ್‌ಹೌಸ್ ಅಪ್ಲಿಕೇಶನ್ ನಲ್ಲಿ ಕನ್ನಡ ಭಾಷೆಗೂ ಕೂಡ ಅವಕಾಶ ಸಿಕ್ಕಿದೆ. ಇದರಿಂದ ಇನ್ಮುಂದೆ ಕ್ಲಬ್‌ಹೌಸ್‌ನಲ್ಲಿಯೂ ಕನ್ನಡದ ಕಲರವ ಕೇಳಿ ಬರಲಿದೆ. ಈ ಮೂಲಕ ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಕನ್ನಡಗರಿಗೆ ಗುಡ್‌ನ್ಯೂಸ್ ದೊರಕಿದೆ. ಕ್ಲಬ್‌ಹೌಸ್ ಸೊಶೀಯಲ್ ಆಡಿಯೋ ಅಪ್ಲಿಕೇಶನ್ ಆಗಿರುವುದರಿಂದ ಸ್ಥಳೀಯ ಭಾಷೆಗಳಲ್ಲಿ ಮುಕ್ತ ಸಂವಾದ ನಡೆಸಲು ಸಾಧ್ಯವಾಗಲಿದೆ. ಇದರಿಂದ ಬಳಕೆದಾರರು ತಮ್ಮ ಚಾಟ್ ರೂಮ್‌ಗಳಲ್ಲಿ ಸಂವಹನ ನಡೆಸಬಹುದು.


Click it and Unblock the Notifications








