ಬಳಕೆದಾರರಿಗೆ ಹಲವು ಆಯ್ಕೆಯ ಹೊಸ ಫೀಚರ್ಸ್‌ ಪರಿಚಯಿಸಿದ ಕ್ಲಬ್‌ಹೌಸ್‌!

|

ಪ್ರಸ್ತುತ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಸೌಂಡ್‌ ಮಾಡುತ್ತಿವೆ. ಈ ಪೈಕಿ ಇತ್ತೀಚಿಗೆ ಕ್ಲಬ್‌ಹೌಸ್‌ ಅಪ್ಲಿಕೇಶನ್‌ ಕುಡ ಸೇರಿದೆ. ಆಂಡ್ರಾಯ್ಡ್‌ ವರ್ಷನ್‌ನಲ್ಲಿ ಕ್ಲಬ್‌ಹೌಸ್‌ ಬಿಡುಗಡೆ ಆಗಿದ್ದೆ ತಡ, ಎಲ್ಲೆಡೆ ಕ್ಲಬ್‌ಹೌಸ್‌ ಸಂಚಲನ ಸೃಷ್ಟಿಸಿದೆ. ಇನ್ವೈಟ್‌ ಒನ್ಲಿ ಆಡಿಯೋ ಅಪ್ಲಿಕೇಶನ್‌ ಆಗಿರುವ ಕ್ಲಬ್‌ಹೌಸ್‌ ಜನಪ್ರಿಯ ಹಾದಿಯಲ್ಲಿ ಸಾಗಿದೆ. ವಿದ್ಯಾರ್ಥಿಗಳು, ಸಾಹಿತಿಗಳು, ರಾಜಕೀಯ ಗಣ್ಯರು ಎಲ್ಲರೂ ಕೂಡ ಕ್ಲಬ್‌ಹೌಸ್‌ನಲ್ಲಿ ಆಡಿಯೋ ಸಂವಾದ ನಡೆಸುವ ಮೂಲಕ ಇನ್ನಷ್ಟು ಜನಪ್ರಿಯತೆ ಗಳಿಸಿದ್ದಾರೆ.

ಪ್ಲಾಟ್‌ಫಾರ್ಮ್‌

ಹೌದು, ಇನ್ವೈಟ್‌ ಒನ್ಲಿ ಆಡಿಯೋ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಹೆಚ್ಚಿನ ಜನಪ್ರಿಯತೆ ಪಡದಿದೆ. ಇದೇ ಕಾರಣಕ್ಕೆ ಬಳಕೆದಾರರಿಗೆ ಹೊಸ ಮಾದರಿಯ ಫಿಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಕ್ಲಬ್‌ಹೌಸ್ ತನ್ನ ಬೀಟಾ ಬಳಕೆದಾರರಿಗಾಗಿ ಹೊಸ ಅಪ್‌ಡೇಟ್ ಅನ್ನು ಪರಿಚಯಿಸಿದೆ. ಇದು ಕ್ಲಿಪ್‌ಗಳು, ಯುನಿವರ್ಸಲ್ ಸರ್ಚ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಪ್ರಾದೇಶಿಕ ಆಡಿಯೋ ಬೆಂಬಲ ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗಾದ್ರೆ ಕ್ಲಬ್‌ಹೌಸ್‌ ಹೊಸದಾಗಿ ಪರಿಚಯಿಸಿರುವ ಅಪ್ಡೇಟ್‌ನಲ್ಲಿ ಏನೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ಲಿಪ್‌ಗಳು

ಕ್ಲಿಪ್‌ಗಳು

ಕ್ಲಬ್‌ಹೌಸ್‌ ಇದೀಗ ಪಬ್ಲಿಕ್‌ ರೂಮ್ಸ್‌ನಲ್ಲಿ 30 ಸೆಕೆಂಡುಗಳ ಕ್ಲಿಪ್‌ಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡಲು ಮುಂದಾಗಿದೆ. ಇದಕ್ಕಾಗಿ ಕ್ಲಿಪ್ಸ್ ಎಂಬ ಫೀಚರ್ಸ್‌ ಅನ್ನು ಸೇರಿಸುವುದಾಗಿ ಕಂಪನಿಯು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಘೋಷಿಸಿದೆ. ಇದರಿಂದ ಇಂಟರ್‌ನೆಟ್‌ನಲ್ಲಿ ಹೆಚ್ಚಿನ ಜನರನ್ನು ಪತ್ತೆಹಚ್ಚಲು ಮತ್ತು ಕ್ಲಬ್‌ಗೆ ಸೇರಲು ಸಾಧ್ಯವಾಗುತ್ತದೆ. ಇನ್ನು ನೀವು ರೂಮ್ಸ್‌ ಅನ್ನು ಪ್ರಾರಂಭಿಸಿದಾಗ, ನೀವು ಕ್ಲಿಪ್‌ಗಳನ್ನು ಸಕ್ರಿಯಗೊಳಿಸಬೇಕೆ ಎಂದು ಆಯ್ಕೆ ಸಿಗಲಿದೆ. ಇದು ಪಬ್ಲಿಕ್‌ ರೂಮ್ಸ್‌ಗಳಿಗೆ ಮಾತ್ರ ಲಭ್ಯವಿದ್ದು ನೀವು ಯಾವಾಗ ಬೇಕಾದರೂ ಇದನ್ನು ಟಾಗಲ್ ಮಾಡಬಹುದು. ಈ ಆಯ್ಕೆಯನ್ನು ಖಾಸಗಿ, ಸಾಮಾಜಿಕ ಅಥವಾ ಕ್ಲಬ್ ರೂಮ್ಸ್‌ಗಳಿಗೆ ನೀಡಿಲ್ಲ. ಇದರಲ್ಲಿ ಹೋಸ್ಟ್ ಕ್ಲಿಪ್‌ಗಳನ್ನು ಸಕ್ರಿಯಗೊಳಿಸಿದ ನಂತರ, ಪಬ್ಲಿಕ್‌ ರೂಮ್ಸ್‌ ಗಳಲ್ಲಿ ಲೈವ್ ಕೇಳುಗರು ಹೊಸ ಕತ್ತರಿ ಐಕಾನ್ ಲಬ್ಯವಾಗಲಿದೆ. ಇದರಿಂದ 30 ಸೆಕೆಂಡುಗಳ ಕ್ಲಿಪ್ ಅನ್ನು ರೆಕಾರ್ಡ್ ಮಾಡಲು ಯಾವಾಗ ಬೇಕಾದರೂ ಟ್ಯಾಪ್ ಮಾಡಬಹುದು.

ಯೂನಿವರ್ಸಲ್ ಸರ್ಚ್

ಯೂನಿವರ್ಸಲ್ ಸರ್ಚ್

ಇನ್ನು ಈ ಹೊಸ ಅಪ್ಡೇಟ್‌ನಲ್ಲಿ "ಯುನಿವರ್ಸಲ್ ಸರ್ಚ್" ಫೀಚರ್ಸ್‌ ಅನ್ನು ಸಹ ಪರಿಚಯಿಸಲಾಗಿದೆ. ಇದು ಬಳಕೆದಾರರಿಗೆ ಜನರು, ಕ್ಲಬ್‌ಗಳು, ಲೈವ್ ರೂಮ್‌ಗಳು ಮತ್ತು ಭವಿಷ್ಯದ ಈವೆಂಟ್‌ಗಳನ್ನು ಹೆಚ್ಚು ವೇಗವಾಗಿ ಸರ್ಚ್‌ ಮಾಡಲು ಅನುವು ಮಾಡಿಕೊಡುತ್ತದೆ. ಈ ಫೀಚರ್ಸ್‌ ಮೂಲಕ ಮುಂದಿನ ದಿನಗಳಲ್ಲಿ ನಿರ್ದಿಷ್ಟ ವಿಷಯಗಳ ಬಗ್ಗೆ ಯಾವಾಗಾ ಎಲ್ಲಿ ಈವೆಂಟ್‌ಗಳು ನಡೆಯಲಿವೆ ಅನ್ನೊದನ್ನ ತಿಳಿಯಲು ಸಹಾಯ ಮಾಡಲಿದೆ. ಈ ಫೀಚರ್ಸ್‌ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ.

ರಿಪ್ಲೇಸ್

ರಿಪ್ಲೇಸ್

ಇದಲ್ಲದೆ ಮುಂಬರುವ ದಿನಗಳಲ್ಲಿ, ಕ್ಲಬ್‌ಹೌಸ್ ಜನರು ತಮ್ಮ ಲೈವ್ ರೂಮ್‌ಗಳನ್ನು ಇನ್ನಷ್ಟು ನೂತನವಾಗಿ ಅನುಭವಿಸಲು ಹೊಸ ಫಿಚರ್ಸ್‌ ನೀಡಲು ಮುಂದಾಗಿದೆ. ಇದಕ್ಕಾಗಿ ಈವೆಂಟ್‌ ಕ್ರಿಯೆಟರ್ಸ್‌ಗೆ ರಿಪ್ಲೇಸ್‌ ಫೀಚರ್ಸ್‌ ನೀಡಲು ಯೋಜಿಸುತ್ತಿದೆ. ಇದು ಕ್ರಿಯೆಟರ್ಸ್‌ಗೆ ಒಂದು ರೂಮ್ಸ್‌ಅನ್ನು ರೆಕಾರ್ಡ್ ಮಾಡಲು, ಅವರ ಪ್ರೊಫೈಲ್‌ ನಲ್ಲಿ ಸೇವ್‌ ಮಾಡಲು ಅಥವಾ ಆಡಿಯೋವನ್ನು ಬಾಹ್ಯವಾಗಿ ಹಂಚಿಕೊಳ್ಳಲು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ನೀವು ರೂಮ್ಸ್‌ ಪ್ರಾರಂಭಿಸಿದಾಗ ರಿಪ್ಲೇಗಳನ್ನು ಸಕ್ರಿಯಗೊಳಿಸಬೇಕೆ ಎಂದು ನೀವು ಆಯ್ಕೆ ಮಾಡಬಹುದು. ನಿಮಗೆ ಬೇಕಿದ್ದಲ್ಲಿ ಇದನ್ನು ಆಯ್ಕೆ ಮಾಡಬಹುದು.

ಕ್ಲಬ್‌ಹೌಸ್ ಅಪ್ಲಿಕೇಶನ್ ಅನ್ನು ಬಳಸುವುದು ಹೇಗೆ?

ಕ್ಲಬ್‌ಹೌಸ್ ಅಪ್ಲಿಕೇಶನ್ ಅನ್ನು ಬಳಸುವುದು ಹೇಗೆ?

ಕ್ಲಬ್‌ಹೌಸ್ ಅಪ್ಲಿಕೇಶನ್ ಬಳಕೆ ತುಂಬಾ ಸರಳವಾಗಿದೆ. ಒಮ್ಮೆ ನೀವು ಅಪ್ಲಿಕೇಶನ್‌ನೊಂದಿಗೆ ತೊಡಗಿಕೊಂಡರೇ, ನೀವು ಆಪ್‌ನ ಗುಂಗು ಅನ್ನು ಪಡೆಯುತ್ತೀರಿ. ಇದು ರೂಮ್‌ಗಳನ್ನು ಹೋಸ್ಟ್ ಮಾಡುವುದು, ರೂಮ್‌ಗಳನ್ನು ಸೇರುವುದು ಮತ್ತು ನಿಮ್ಮ ಕೈ ಎತ್ತುವ ಮೂಲಕ ಮಾತನಾಡುವುದು. ನಿಮ್ಮ ಫೀಡ್‌ನಲ್ಲಿ ಸಂಬಂಧಿತ ರೂಮ್‌ಗಳನ್ನು ನೋಡಲು, ನಿಮ್ಮ ಆಸಕ್ತಿಯ ವಿಷಯಗಳಿಗೆ ಸೇರಿದ ಜನರನ್ನು ನೀವು ಅನುಸರಿಸಬೇಕು. ನೀವು ತಕ್ಷಣ ರೂಮ್‌ ಅನ್ನು ಪ್ರಾರಂಭಿಸಲು ಬಯಸದಿದ್ದರೆ, ನೀವು ಈವೆಂಟ್ ಅನ್ನು ನಿಗದಿಪಡಿಸಬಹುದು. ಫೀಡ್ನ ಮೇಲ್ಭಾಗದಲ್ಲಿ, ನಿಗದಿತ ಘಟನೆಗಳು ಪ್ರಾರಂಭವಾದಾಗ ನೀವು ಸೇರಬಹುದು. ನಿಮ್ಮ ಫೀಡ್‌ನಲ್ಲಿ ನೀವು ಈವೆಂಟ್‌ಗಳನ್ನು ಸಹ ಮಾಡದಿದ್ದರೆ, ಹೆಚ್ಚಿನದನ್ನು ನೋಡಲು ನೀವು ಕ್ಲಬ್‌ಗಳು ಮತ್ತು ಬಳಕೆದಾರರನ್ನು ಅನುಸರಿಸಬೇಕು.

Best Mobiles in India

Read more about:
English summary
The company is planning to offer a "Replays" feature to creators.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X