ಕನ್ನಡಿಗರಿಗೆ ಗುಡ್‌ ನ್ಯೂಸ್‌ ! ಇನ್ಮುಂದೆ ಕನ್ನಡದಲ್ಲೂ ಲಭ್ಯವಾಗಲಿದೆ ಕ್ಲಬ್‌ಹೌಸ್‌!

|

ಕ್ಲಬ್‌ಹೌಸ್‌ ಅಪ್ಲಿಕೇಶನ್‌ ಕನ್ನಡ ರಾಜ್ಯೋತ್ಸವದ ಸಮಯದಲ್ಲಿಯೇ ಕನ್ನಡಿಗರಿಗೆ ಗುಡ್‌ ನ್ಯೂಸ್‌ ನೀಡಿದೆ. ಇತ್ತೀಚಿನ ದಿನಗಳಲ್ಲಿ ಸೊಶೀಯಲ್‌ ಮೀಡಿಯಾ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ಕ್ಲಬ್‌ಹೌಸ್‌ ಇದೀಗ ಕನ್ನಡದಲ್ಲಿಯೂ ಲಭ್ಯವಾಗಲಿದೆ. ಸ್ಥಳೀಯ ಜನರಿಗೂ ಅವಕಾಶ ಸಿಗಬೇಕೆಂಬ ದೃಷ್ಟಿಯಿಂದ ಕ್ಲಬ್‌ಹೌಸ್‌ ಭಾರತದ ಹಲವು ಭಾಷೆಗಳಿಗೆ ತನ್ನ ಪ್ಲಾಟ್‌‌ಫಾರ್ಮ್‌ನಲ್ಲಿ ಅವಕಾಶ ನೀಡಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಪಾರ್ಮ್‌ನಲ್ಲಿ ಹೊಸದಾಗಿ 13 ಭಾಷೆಗಳಿಗೆ ಬಂಬಲ ನೀಡಲು ಮುಂದಾಗಿದೆ.

ಸೊಶೀಯಲ್‌

ಹೌದು, ಜನಪ್ರಿಯ ಸೊಶೀಯಲ್‌ ಆಡಿಯೊ ಅಪ್ಲಿಕೇಶನ್, ಕ್ಲಬ್‌ಹೌಸ್ ತನ್ನ ಪ್ಲಾಟ್‌ಫಾರ್ಮ್ನಲ್ಲಿ ಹೊಸದಾಗಿ 13 ಭಾಷೆಗಳನ್ನು ಸೇರಿಸಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸಾರ್ವಜನಿಕರಿಗೆ ಹೆಚ್ಚು ಪ್ರವೇಶಿಸಲು ಮತ್ತು ಸ್ಥಳೀಯ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದಕ್ಕಾಗಿ 13 ಹೊಸ ಭಾಷೆಗಳಿಗೆ ಬೆಂಬಲವನ್ನು ಸೇರಿಸಿದೆ. ಇದರಲ್ಲಿ ಭಾರತದ 5 ಭಾಷೆಗಳಾದ ಹಿಂದಿ, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಯನ್ನು ಸಹ ಒಳಗೊಂಡಿದೆ. ಹಾಗಾದ್ರೆ ಕ್ಲಬ್‌ಹೌಸ್‌ ಅನ್ನು ನಿಮ್ಮ ಸ್ಥಳೀಯ ಭಾಷೆಯಲ್ಲಿ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ಲಬ್‌ಹೌಸ್‌

ಕ್ಲಬ್‌ಹೌಸ್‌ ತನ್ನ ಪ್ಲಾಟ್‌ಫಾರ್ಮ್‌ ಅನ್ನು ಸ್ಥಳಿಯ ಜನರಿಗೂ ತಲುಪಿಸುವುದಕ್ಕೆ ಮುಂದಾಗಿದೆ. ಸ್ತಳಿಯ ಭಾಷೆಯಲ್ಲಿಯೇ ಬಳಸುವುದಕ್ಕೆ ಅವಕಾಶ ಕೊಡುವ ಮೂಲಕ ತನ್ನ ಪ್ರಸಿದ್ಧಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವುದಕ್ಕೆ ಮುಂದಾಗಿದೆ. ಇದಕ್ಕಾಗಿಯೇ ಭಾರತದಲ್ಲಿ ಹಿಂದಿ, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳನ್ನು ಸೇರಿಸಿದೆ. ಪ್ರಸ್ತುತ, ಈ ಹೊಸ ಅಪ್‌ಡೇಟ್ ಆಂಡ್ರಾಯ್ಡ್‌ನಲ್ಲಿ ಮಾತ್ರ ಲಭ್ಯವಿದೆ ಮತ್ತು ಶೀಘ್ರದಲ್ಲೇ ಐಒಎಸ್ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ.

ಜಪಾನೀಸ್

ಇನ್ನು ಈ ಹೊಸ ಅಪ್ಡೇಟ್‌ನಲ್ಲಿ ಭಾರತದ ಭಾಷೆಗಳು ಮಾತ್ರವಲ್ಲದೆ ಫ್ರೆಂಚ್, ಜರ್ಮನ್, ಇಂಡೋನೇಷಿಯನ್, ಇಟಾಲಿಯನ್, ಜಪಾನೀಸ್, ಕೊರಿಯನ್, ಪೋರ್ಚುಗೀಸ್ (ಬ್ರೆಜಿಲಿಯನ್) ಮತ್ತು ಸ್ಪ್ಯಾನಿಷ್‌ನಂತಹ ಇತರ ಭಾಷೆಗಳಿಗೂ ಬೆಂಬಲವನ್ನು ನೀಡಲು ಮುಂದಾಗಿದೆ. ಆಡ್ರಾಯ್ಡ್‌ನಲ್ಲಿ ಕ್ಲಬ್‌ಹೌಸ್ ಅಪ್ಲಿಕೇಶನ್‌ ಬಳಸಲು ಮುಂದಾದರೆ ಪ್ರಾದೇಶಿಕ ಭಾಷೆಗಳಲ್ಲಿ ಅಪ್ಲಿಕೇಶನ್‌ನಲ್ಲಿನ ಪ್ರಾಂಪ್ಟ್‌ಗಳು, ಅಧಿಸೂಚನೆಗಳು, ಕ್ಲಬ್ ಹೆಸರುಗಳು ಇತ್ಯಾದಿಗಳು ಕಾಣಲಿದೆ.

ಕ್ಲಬ್‌ಹೌಸ್‌

ಸದ್ಯ ಕ್ಲಬ್‌ಹೌಸ್‌ ಅಪ್ಲಿಕೇಶನ್ ನಲ್ಲಿ ಕನ್ನಡ ಭಾಷೆಗೂ ಕೂಡ ಅವಕಾಶ ಸಿಕ್ಕಿದೆ. ಇದರಿಂದ ಇನ್ಮುಂದೆ ಕ್ಲಬ್‌ಹೌಸ್‌ನಲ್ಲಿಯೂ ಕನ್ನಡದ ಕಲರವ ಕೇಳಿ ಬರಲಿದೆ. ಈ ಮೂಲಕ ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಕನ್ನಡಗರಿಗೆ ಗುಡ್‌ನ್ಯೂಸ್‌ ದೊರಕಿದೆ. ಸದ್ಯ ಕಳೆದ ಕೆಲವು ತಿಂಗಳುಗಳ ಅವಧಿಯಲ್ಲಿ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳವಣಿಗೆಯನ್ನು ಕಂಡಿದೆ. ಇದೇ ಕಾರಣಕ್ಕೆ ಸಾಕಷ್ಟು ಬಳಕೆದಾರರು ಸ್ಥಳೀಯ ಭಾಷೆಯ ಬೆಂಬಲವನ್ನು ಎಲ್ಲರನ್ನೂ ಬಯಸುಸತ್ತಿದ್ದರೂ, ಇದಕ್ಕೆ ಸ್ಪಂಧಿಸಿರುವ ಕ್ಲಬ್‌ಹೌಸ್‌ ಹೊಸ ಭಾಷೆಗಳನ್ನು ಪರಿಚಯಿಸಿದೆ. ಇನ್ನು ಕ್ಲಬ್‌ಹೌಸ್ ಸೊಶೀಯಲ್‌ ಆಡಿಯೋ ಅಪ್ಲಿಕೇಶನ್ ಆಗಿರುವುದರಿಂದ ಸ್ಥಳೀಯ ಭಾಷೆಗಳಲ್ಲಿ ಮುಕ್ತ ಸಂವಾದ ನಡೆಸಲು ಸಾಧ್ಯವಾಗಲಿದೆ. ಇದರಿಂದ ಬಳಕೆದಾರರು ತಮ್ಮ ಚಾಟ್‌ ರೂಮ್‌ಗಳಲ್ಲಿ ಸಂವಹನ ನಡೆಸಬಹುದು.

ಕ್ಲಬ್‌ಹೌಸ್‌

ಇನ್ನು ಕ್ಲಬ್‌ಹೌಸ್‌ ಇತ್ತೀಚಿಗಷ್ಟೆ ತನ್ನ ಪಬ್ಲಿಕ್‌ ರೂಮ್ಸ್‌ನಲ್ಲಿ 30 ಸೆಕೆಂಡುಗಳ ಕ್ಲಿಪ್‌ಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡಲು ಮುಂದಾಗಿದೆ. ಇದಕ್ಕಾಗಿ ಕ್ಲಿಪ್ಸ್ ಎಂಬ ಫೀಚರ್ಸ್‌ ಅನ್ನು ಸೇರಿಸುವುದಾಗಿ ಕಂಪನಿಯು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಘೋಷಿಸಿದೆ. ಇದರಿಂದ ಇಂಟರ್‌ನೆಟ್‌ನಲ್ಲಿ ಹೆಚ್ಚಿನ ಜನರನ್ನು ಪತ್ತೆಹಚ್ಚಲು ಮತ್ತು ಕ್ಲಬ್‌ಗೆ ಸೇರಲು ಸಾಧ್ಯವಾಗುತ್ತದೆ. ಇನ್ನು ನೀವು ರೂಮ್ಸ್‌ ಅನ್ನು ಪ್ರಾರಂಭಿಸಿದಾಗ, ನೀವು ಕ್ಲಿಪ್‌ಗಳನ್ನು ಸಕ್ರಿಯಗೊಳಿಸಬೇಕೆ ಎಂದು ಆಯ್ಕೆ ಸಿಗಲಿದೆ. ಇದು ಪಬ್ಲಿಕ್‌ ರೂಮ್ಸ್‌ಗಳಿಗೆ ಮಾತ್ರ ಲಭ್ಯವಿದ್ದು ನೀವು ಯಾವಾಗ ಬೇಕಾದರೂ ಇದನ್ನು ಟಾಗಲ್ ಮಾಡಬಹುದು. ಈ ಆಯ್ಕೆಯನ್ನು ಖಾಸಗಿ, ಸಾಮಾಜಿಕ ಅಥವಾ ಕ್ಲಬ್ ರೂಮ್ಸ್‌ಗಳಿಗೆ ನೀಡಿಲ್ಲ. ಇದರಲ್ಲಿ ಹೋಸ್ಟ್ ಕ್ಲಿಪ್‌ಗಳನ್ನು ಸಕ್ರಿಯಗೊಳಿಸಿದ ನಂತರ, ಪಬ್ಲಿಕ್‌ ರೂಮ್ಸ್‌ ಗಳಲ್ಲಿ ಲೈವ್ ಕೇಳುಗರು ಹೊಸ ಕತ್ತರಿ ಐಕಾನ್ ಲಬ್ಯವಾಗಲಿದೆ. ಇದರಿಂದ 30 ಸೆಕೆಂಡುಗಳ ಕ್ಲಿಪ್ ಅನ್ನು ರೆಕಾರ್ಡ್ ಮಾಡಲು ಯಾವಾಗ ಬೇಕಾದರೂ ಟ್ಯಾಪ್ ಮಾಡಬಹುದು.

ಕ್ಲಬ್‌ಹೌಸ್

ಇದಲ್ಲದೆ ಮುಂಬರುವ ದಿನಗಳಲ್ಲಿ, ಕ್ಲಬ್‌ಹೌಸ್ ಜನರು ತಮ್ಮ ಲೈವ್ ರೂಮ್‌ಗಳನ್ನು ಇನ್ನಷ್ಟು ನೂತನವಾಗಿ ಅನುಭವಿಸಲು ಹೊಸ ಫಿಚರ್ಸ್‌ ನೀಡಲು ಮುಂದಾಗಿದೆ. ಇದಕ್ಕಾಗಿ ಈವೆಂಟ್‌ ಕ್ರಿಯೆಟರ್ಸ್‌ಗೆ ರಿಪ್ಲೇಸ್‌ ಫೀಚರ್ಸ್‌ ನೀಡಲು ಯೋಜಿಸುತ್ತಿದೆ. ಇದು ಕ್ರಿಯೆಟರ್ಸ್‌ಗೆ ಒಂದು ರೂಮ್ಸ್‌ಅನ್ನು ರೆಕಾರ್ಡ್ ಮಾಡಲು, ಅವರ ಪ್ರೊಫೈಲ್‌ ನಲ್ಲಿ ಸೇವ್‌ ಮಾಡಲು ಅಥವಾ ಆಡಿಯೋವನ್ನು ಬಾಹ್ಯವಾಗಿ ಹಂಚಿಕೊಳ್ಳಲು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ನೀವು ರೂಮ್ಸ್‌ ಪ್ರಾರಂಭಿಸಿದಾಗ ರಿಪ್ಲೇಗಳನ್ನು ಸಕ್ರಿಯಗೊಳಿಸಬೇಕೆ ಎಂದು ನೀವು ಆಯ್ಕೆ ಮಾಡಬಹುದು. ನಿಮಗೆ ಬೇಕಿದ್ದಲ್ಲಿ ಇದನ್ನು ಆಯ್ಕೆ ಮಾಡಬಹುದು.

Best Mobiles in India

Read more about:
English summary
The list includes 5 Indian languages as well - Hindi, Kannada, Malayalam, Tamil, and Telegu.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X