Home
ಸುದ್ದಿಜಾಲ

ದೊಡ್ಡ ಸಿಹಿಸುದ್ದಿ: 1 ಲಕ್ಷ ಯುವಕರಿಗೆ ತರಬೇತಿ.. ಶೇ.70 ರಷ್ಟು ಉದ್ಯೋಗ.. ಸಿದ್ದರಾಮಯ್ಯ ಘೋಷಣೆ

ರಾಜ್ಯದ ಯುವಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಿಹಿಸುದ್ದಿ ಕೊಟ್ಟಿದ್ದಾರೆ. ಪ್ರಸಿದ್ಧ ಟೆಕ್ ಕಂಪನಿಗಳಲ್ಲಿ (Tech Companies) ಶೇ.70 ರಷ್ಟು ಉದ್ಯೋಗದ ಭರವಸೆ ನೀಡಿದ್ದಾರೆ. ಹೌದು, ಬರೋಬ್ಬರಿ 1,00,000 ಮಂದಿಗೆ ವಿವಿಧ ಟೆಕ್ ಕೌಶಲ್ಯಗಳ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ, ಐದು ಪ್ರಸಿದ್ಧ ಟೆಕ್ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜೊತೆಗೆ, ಎಐ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ಕರ್ನಾಟಕ ಸರ್ಕಾರ ಐದು ದೈತ್ಯ ಟೆಕ್ ಕಂಪನಿಗಳ ಜೊತೆಗೆ ಎಂಒಯು ಒಪ್ಪಂದ ಮಾಡಿಕೊಂಡಿದೆ. ಮುಖ್ಯವಾಗಿ ಮೈಕ್ರೋಸಾಫ್ಟ್, ಇಂಟೆಲ್, ಐಬಿಎಂ, ಅಕ್ಸೆಂಚರ್ ಮತ್ತು ಬಿಎಫ್​ಎಸ್​ಐ ಕನ್ಸಾರ್ಟಿಯಂ ಸಂಸ್ಥೆಗಳ ಜೊತೆಗೆ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದೆ. 'ನಿಪುಣ ಕರ್ನಾಟಕ' (Nipuna Karnataka) ಯೋಜನೆಯಡಿ ಈ ಕಂಪನಿಗಳು ಒಂದು ವರ್ಷದಲ್ಲಿ 1,00,000 ಮಂದಿಗೆ ವಿವಿಧ ಟೆಕ್ ಕೌಶಲ್ಯಗಳ ತರಬೇತಿ ನೀಡಲಿವೆ. ಇದಲ್ಲದೆ, ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿ ಎಐ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಸಿಹಿಸುದ್ದಿ: 1 ಲಕ್ಷ ಯುವಕರಿಗೆ ತರಬೇತಿ.. ಶೇ.70 ರಷ್ಟು ಉದ್ಯೋಗ.. ಸಿದ್ದರಾಮಯ್ಯ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ 27ನೇ 'ಬೆಂಗಳೂರು ಟೆಕ್ ಶೃಂಗಸಭೆ 2024' (Bengaluru Tech Summit 2024) ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿ, 'ನಿಪುಣ ಕರ್ನಾಟಕ' ನವೀನ ತಂತ್ರಜ್ಞಾನಗಳಲ್ಲಿ ಸ್ಥಳೀಯ ಪ್ರತಿಭೆಗಳ ಕೌಶಲ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹೆಚ್ಚಿನ ಬೇಡಿಕೆಯ ಕ್ಷೇತ್ರಗಳ ಅಗತ್ಯತೆಗಳಿಗೆ ಅನುಗುಣವಾಗಿ ಕರ್ನಾಟಕದ ಉದ್ಯೋಗಿಗಳನ್ನು ಸುಧಾರಿತ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವುದು ಇದರ ಉದ್ದೇಶವಾಗಿದೆ. ಈ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವ ಗುರಿ ಇದೆ ಎಂದು ಹೇಳಿದ್ದಾರೆ.

ಶೇ.70 ರಷ್ಟು ಉದ್ಯೋಗಿಗಳ ನೇಮಕ

'ನಿಪುಣ ಕರ್ನಾಟಕ'ದ ಭಾಗವಾಗಿ ಪ್ರಸಿದ್ಧ ಟೆಕ್ ದೈತ್ಯ ಕಂಪನಿಗಳಾದ ಮೈಕ್ರೋಸಾಫ್ಟ್, ಇಂಟೆಲ್, ಆಕ್ಸೆಂಚರ್, ಐಬಿಎಂ ಮತ್ತು ಬಿಎಫ್‌ಎಸ್‌ಐ ಕನ್ಸೋರ್ಟಿಯಂ ಜೊತೆಗೆ ಐದು ಕಾರ್ಯತಂತ್ರದ ಎಂಒಯುಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಈ ಎಂಒಯುಗಳು ಮುಂದಿನ ವರ್ಷದಲ್ಲಿ 1,00,000 ಮಂದಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ತರಬೇತಿ ಪಡೆದ ವೃತ್ತಿಪರರಲ್ಲಿ ಶೇ.70 ರಷ್ಟು ಮಂದಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಯಾವ ಕಂಪನಿಯಲ್ಲಿ ಎಷ್ಟು ಮಂದಿಗೆ ತರಬೇತಿ

* ಐಬಿಎಂ: 50 ಸಾವಿರ ಮಂದಿಗೆ ಎಐ ಮತ್ತು ಕ್ಲೌಡ್ ಟೆಕ್ನಾಲಜಿಯಲ್ಲಿ ತರಬೇತಿ.
* ಇಂಟೆಲ್: 20 ಸಾವಿರ ಮಂದಿಗೆ ಎಐ ತರಬೇತಿ.
* ಮೈಕ್ರೋಸಾಫ್ಟ್: 10 ಸಾವಿರ ಮಂದಿಗೆ ಡೀಪ್ ಟೆಕ್ ತರಬೇತಿ.
* ಅಕ್ಸೆಂಚರ್: 10 ಸಾವಿರ ಮಂದಿಗೆ ಎಮರ್ಜಿಂಗ್ ಟೆಕ್ನಾಲಜಿಯ ತರಬೇತಿ.
* ಬಿಎಫ್​ಎಸ್​ಐ ಕನ್ಸಾರ್ಟಿಯಂ: 10 ಸಾವಿರ ಮಂದಿಗೆ ಹಣಕಾಸು ಸೇವಾ ತಂತ್ರಜ್ಞಾನದಲ್ಲಿ ತರಬೇತಿ.
* ತರಬೇತಿ ಅವಧಿ: ಒಂದು ವರ್ಷ

ಸಿಹಿಸುದ್ದಿ: 1 ಲಕ್ಷ ಯುವಕರಿಗೆ ತರಬೇತಿ.. ಶೇ.70 ರಷ್ಟು ಉದ್ಯೋಗ.. ಸಿದ್ದರಾಮಯ್ಯ

ಮೂರು ದಿನಗಳ ಕಾಲ ಬೆಂಗಳೂರು ಟೆಕ್ ಸಮಿಟ್ 2024

ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ 'ಬೆಂಗಳೂರು ಟೆಕ್ ಸಮಿಟ್ 2024' ಕಾರ್ಯಕ್ರಮ ನಡೆಯಲಿದೆ. ಅಮೆರಿಕ, ರಷ್ಯಾ, ಕೊರಿಯಾ, ಜಪಾನ್, ಇಸ್ರೇಲ್, ಆಸ್ಟ್ರೇಲಿಯಾ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳ ಟೆಕ್ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮಾಡಲಿವೆ. ರಾಜ್ಯ ಸರ್ಕಾರದ ಜೊತೆಗೆ ಒಪ್ಪಂದಗಳು ಮಾತ್ರವಲ್ಲದೆ, ವಿವಿಧ ವರ್ಕ್​ಶಾಪ್, ಪ್ರಾಡಕ್ಟ್ ಬಿಡುಗಡೆ, ಸೆಮಿನಾರ್ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಲಿವೆ.

ಎಐ ಪ್ರಭಾವ, ಸೈಬರ್ ಸುರಕ್ಷತೆ ಬಗ್ಗೆ ಸಮ್ಮೇಳನ

ಸಮಾರಂಭದಲ್ಲಿ ಐಟಿ, ಡೀಪ್ ಟೆಕ್ ಮತ್ತು ಟ್ರೆಂಡ್ಸ್, ಬಯೋಟೆಕ್, ಹೆಲ್ತ್ ಟೆಕ್, ಸ್ಟಾರ್ಟ್ ಅಪ್ ಎಕೋಸಿಸ್ಟಮ್, ಗ್ಲೋಬಲ್ ಇನೋವೇಷನ್ ಅಲೈಯನ್ಸ್, ಭಾರತ ಮತ್ತು ಯುಎಸ್ಎ ಟೆಕ್ ಕಾನ್‌ಪ್ಲೇವ್ ಮತ್ತು ಹೊಸದಾಗಿ ಪರಿಚಯಿಸಲಾದ ಎಲೆಕ್ಟೋ ಸೆಮಿಕಾನ್ ಟ್ರ್ಯಾಕ್ ಬಗ್ಗೆ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಗ್ಲೋಬಲ್ ಹಂತ 2ರಲ್ಲಿ ಕೃಷಿ, ಲಾಜಿಸ್ಟಿಕ್ಸ್, ಬಾಹ್ಯಾಕಾಶ, ಶಿಕ್ಷಣದ ಮೇಲೆ ಎಐ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಪ್ರಭಾವ, ಸೈಬರ್ ಸುರಕ್ಷತೆ, ಜಿಸಿಸಿಗಳು ಮತ್ತು ಜಿವಿಸಿಗಳಲ್ಲಿನ ರೂಪಾಂತರಗಳ ಕುರಿತು ವಿಶೇಷ ಗೋಷ್ಠಿಗಳನ್ನು ಆಯೋಜಿಸಲಾಗಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+