Home
ಸುದ್ದಿಜಾಲ

ಜುಲೈ 8 ರಂದು CMF Phone 1 ಲಾಂಚ್: ಸೂಪರ್ AMOLED ಡಿಸ್‌ಪ್ಲೇ ಫಿಕ್ಸ್ !

ವೈಟಿಂಗ್ ಇಸ್ ಓವರ್ ! ಮೊಬೈಲ್‌ ಮಾರುಕಟ್ಟೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಸಿಎಂಎಫ್ ಫೋನ್ 1 (CMF Phone 1) ಬಿಡುಗಡೆಯ ದಿನಾಂಕವನ್ನು ಕೊನೆಗೂ ಬಹಿರಂಗಪಡಿಸಿದೆ. ನಥಿಂಗ್ (Nothing) ಸ್ಮಾರ್ಟ್‌ಫೋನ್‌ನ ಉಪ ಬ್ರಾಂಡ್‌ ಆಗಿ ಈ ಫೋನ್ ಮಾರುಕಟ್ಟೆಗೆ ಪ್ರವೇಶಿಸಲಿದೆ. ಇದೀಗ ಬುಧವಾರದಂದು ಈ ಸ್ಮಾರ್ಟ್‌ಫೋನ್‌ ಬಿಡುಗಡೆಯ ಕುರಿತು ಕಂಪನಿಯು ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ಬಹಿರಂಗಪಡಿಸಿದೆ. CMF ಫೋನ್ 1 HDR ಬೆಂಬಲದೊಂದಿಗೆ ಸೂಪರ್ AMOLED ಡಿಸ್‌ಪ್ಲೇ ಮತ್ತು ಹೆಚ್ಚಿನ ರಿಫ್ರೆಶ್ ರೇಟ್‌ ಅನ್ನು ಹೊಂದಿರುತ್ತದೆ ಎಂದು ಕಂಪನಿ ದೃಢಪಡಿಸಿದೆ. ಹಾಗಿದ್ರೆ ಈ ಮೊಬೈಲ್ ಕುರಿತು ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.

ಜುಲೈ 8 ರಂದು ನಥಿಂಗ್‌ನ ಮುಂದಿನ ಅಪ್ಡೇಟ್‌ ಸಮಯದಲ್ಲಿ ಹ್ಯಾಂಡ್‌ಸೆಟ್ ಅನ್ನು ಪ್ರಾರಂಭಿಸಲು ನಿರ್ಧರಿಸಿದೆ ಮತ್ತು ಇದು ಕಂಪನಿಯ ಉಪ-ಬ್ರಾಂಡ್ ಆದ CMF ನಿಂದ ತಯಾರಿಸಲಾದ ಮೊದಲ ಮೊಬೈಲ್ ಸಾಧನವಾಗಿದೆ. ಅದರ ಪ್ರಾರಂಭಕ್ಕೆ ಮೊದಲು CMF ಬಿಡುಗಡೆಯ ದಿನದವರೆಗೆ ಪ್ರತಿದಿನ ಸ್ಮಾರ್ಟ್‌ಫೋನ್‌ನ ಒಂದೊಂದು ವಿಷಯಗಳನ್ನು ಬಹಿರಂಗಪಡಿಸಲಿದ್ದು ಇದು ಡಿಸ್‌ಪ್ಲೇ ವಿಶೇಷತೆಗಳೊಂದಿಗೆ ಪ್ರಾರಂಭವಾಗಿದೆ.

ಜುಲೈ 8 ರಂದು CMF Phone 1 ಲಾಂಚ್: ಸೂಪರ್ AMOLED ಡಿಸ್‌ಪ್ಲೇ ಫಿಕ್ಸ್ !

CMF Phone 1 ಡಿಸ್‌ಪ್ಲೇ:
CMF ಈ ಕುರಿತು ಸಾಮಾಜಿಕ ಮಾಧ್ಯಮವಾಗಿರುವ X ಮೂಲಕ ಪೋಸ್ಟ್‌ ಒಂದನ್ನು ಮಾಡಿದ್ದು, ಇದು CMF ಫೋನ್ 1 ರ ಬಿಡುಗಡೆ ಹಾಗೂ ಡಿಸ್‌ಪ್ಲೇಯನ್ನು ಖಚಿತಪಡಿಸಿದೆ. ಇದು 6.67 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಹೊಂದಿರುತ್ತದೆ ಎಂದು ಅಧಿಕೃತ CMF ಖಾತೆಯು ಪೋಸ್ಟ್ ಮಾಡಿದೆ. ಡಿಸ್‌ಪ್ಲೇ 120Hz ನ ರಿಫ್ರೆಶ್ ರೇಟ್ ಅನ್ನು ಹೊಂದಿರುತ್ತದೆ ಮತ್ತು ವೈಬ್ರೆಂಟ್ ಮತ್ತು ಲೈಫ್ಲೈಕ್ ಬಣ್ಣಗಳ ಮೂಲಕ HDR ಬೆಂಬಲದೊಂದಿಗೆ ಬರಲಿದೆ.

CMF ನ Instagram ಪುಟದಲ್ಲಿ ಪೋಸ್ಟ್ ಮಾಡಲಾದ ಒಂದು ಸಣ್ಣ ವೀಡಿಯೊ ಕ್ಲಿಪ್ ಸಾಂಪ್ರದಾಯಿಕ LCD ಪ್ಯಾನೆಲ್‌ ಜೊತೆಗೆ ಫೋನ್ 1 ರ ಡಿಸ್‌ಪ್ಲೇ ಹೋಲಿಕೆಯನ್ನು ತೋರಿಸಿದೆ. ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇಯು ಯಾವುದೇ ಬೆಳಕಿನ ಸೋರಿಕೆ ಇಲ್ಲದೆ ಆಳವಾದ ಕಪ್ಪು ಬಣ್ಣವನ್ನು ಹೊಂದಿರುವಂತೆ ತೋರುತ್ತಿದೆ, AMOLED ಡಿಸ್‌ಪ್ಲೇಗಳ ಸಾಮರ್ಥ್ಯದ ಸೌಜನ್ಯವು ಪ್ರತ್ಯೇಕವಾಗಿ ಪಿಕ್ಸೆಲ್‌ಗಳನ್ನು ಆಫ್ ಮಾಡುತ್ತದೆ. ಕಂಪನಿಯ ಪ್ರಕಾರ, ಡಿಸ್‌ಪ್ಲೇ ಮೇಲಿನ ಗೋಚರತೆಗಾಗಿ 2,000 ನಿಟ್‌ಗಳವರೆಗೆ ಗರಿಷ್ಟ ಬ್ರೈಟ್‌ನೆಸ್‌ ಅನ್ನು ಹೊಂದಿದೆ.

ಈ ಪ್ರಕಟಣೆಯು CMF ಫೋನ್ 1 ರ ಪ್ರತಿಯೊಂದು ಮಾಹಿತಿಯನ್ನು ಮುಂದಿನ 9 ದಿನಗಳ ಕಾಲ ಅಂದರೆ ಫೋನ್ ಬಿಡುಗಡೆಯ ದಿನಾಂಕದ ವರೆಗೂ ಪ್ರತಿದಿನ ಒಂದೊಂದು ಮಾಹಿತಿಯನ್ನು ಬಹಿರಂಗಪಡಿಸಲಿದೆ ಎಂದು ಹೇಳಿದೆ. CMF ಪ್ರತಿದಿನ ಹ್ಯಾಂಡ್‌ಸೆಟ್‌ನ ಒಂದು ಘಟಕದ ಕುರಿತು ವಿವರಗಳನ್ನು ಹಂಚಿಕೊಳ್ಳುತ್ತದೆ. ಆದಾಗ್ಯೂ, CMF ಫೋನ್ 1 3,000 ಕ್ಕೂ ಅಧಿಕ ಘಟಕಗಳನ್ನು ಹೊಂದಿದೆ ಆ ಎಲ್ಲವನ್ನೂ ಪ್ರತ್ಯೇಕವಾಗಿ ಬಹಿರಂಗಪಡಿಸದೆ ಕೆಲವು ಪ್ರಮುಖ ಘಟಕಗಳನ್ನು ಮಾತ್ರ ಪ್ರತ್ಯೇಕವಾಗಿ ಬಹಿರಂಗಪಡಿಸಲಿದೆ. ಇದರ ಜೊತೆಗೆ, ಕಾರ್ಲ್ ಪೀ ನೇತೃತ್ವದ ಸ್ಟಾರ್ಟ್‌ಅಪ್ ಬಿಡುಗಡೆ ದಿನದವರೆಗೆ ಪ್ರತಿದಿನ ಹ್ಯಾಂಡ್‌ಸೆಟ್‌ನ ಒಂದೊಂದು ಕೊಡುಗೆಯನ್ನು ಘೋಷಿಸಲಿದೆ.

CMF Phone 1 ನಿರೀಕ್ಷಿತ ವಿಶೇಷತೆಗಳು:
CMF ಫೋನ್ 1 ಇದು 120Hz ರಿಫ್ರೆಶ್ ರೇಟ್‌ ಜೊತೆಗೆ 6.67 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ ಎಂದು ದೃಢಪಡಿಸಿದೆ. ಇದು ಹಿಂದಿನ ಸೋರಿಕೆಗಳನ್ನು ದೃಢೀಕರಿಸುತ್ತದೆ. ದೃಗ್ವಿಜ್ಞಾನದ ವಿಷಯದಲ್ಲಿ ಇದು ಹಿಂಭಾಗದಲ್ಲಿ 50 MP ಡ್ಯುಯಲ್ ಕ್ಯಾಮೆರಾ ಸಿಸ್ಟಮ್ ಮತ್ತು ಮುಂಭಾಗದಲ್ಲಿ 50 MP ಸೆಲ್ಫಿ ಶೂಟರ್‌ ಜೊತೆಗೆ ಸಜ್ಜುಗೊಂಡಿದೆ. ಹ್ಯಾಂಡ್‌ಸೆಟ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 SoC ನಿಂದ ರನ್‌ ಆಗಲಿದೆ ಹೇಳಲಾಗುತ್ತಿದೆ.

CMF Phone 1 ಇದು 5,000mAh ಬ್ಯಾಟರಿ ಜೊತೆಗೆ 33W ವೇಗದ ಚಾರ್ಜಿಂಗ್ (ವೈರ್ಡ್) ಬೆಂಬಲ ಪಡೆಯಲಿದೆ ಎಂದು ಹೇಳಲಾಗುತ್ತಿದೆ

Best Mobiles in India

English summary
CMF Phone 1 will be launched on July 8. The company has confirmed that it will feature a Super AMOLED display with HDR support and a higher refresh rate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+