Home
ಸುದ್ದಿಜಾಲ

ನಾಳೆ CMF Phone 2 Pro ಫಸ್ಟ್ ಸೇಲ್; 50MP + 50MP ಕ್ಯಾಮೆರಾ.. ಭರ್ಜರಿ ಆಫರ್ ಘೋಷಣೆ.. ಬೆಲೆಯೂ ಕಡಿಮೆ!

ನಥಿಂಗ್‌ ಸಂಸ್ಥೆಯ ಉಪ-ಬ್ರಾಂಡ್ ಸಿಎಂಎಫ್ (CMF) ನೂತನವಾಗಿ ಸಿಎಂಎಫ್‌ ಫೋನ್ 2 ಪ್ರೊ (CMF Phone 2 Pro) ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೊಬೈಲ್‌ ತನ್ನ ಅದ್ಭುತ ಫೀಚರ್ಸ್‌ಗಳಿಂದ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ, ಈ ಸ್ಮಾರ್ಟ್‌ಫೋನ್ ನಾಳೆ (ಮೇ 5) ಭಾರತದಲ್ಲಿ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಕಂಪನಿಯು ಆರಂಭಿಕ ಮಾರಾಟದ ಪ್ರಯುಕ್ತ ಭರ್ಜರಿ ಆಫರ್ ಘೋಷಿಸಿದೆ. ನೀವು 18,000 ಸಾವಿರಕ್ಕಿಂತ ಕಡಿಮೆ ಬೆಲೆಗೆ ಈ ಫೋನನ್ನು ನಿಮ್ಮದಾಗಿಸಿಕೊಳ್ಳಬಹುದು.

CMF ಫೋನ್ 2 ಪ್ರೊ ಫೋನ್ ಶಕ್ತಿಯುತ ಕಾರ್ಯಕ್ಷಮತೆ, ಆಕರ್ಷಕ ಡಿಸ್ಪ್ಲೇ ಮತ್ತು ಪ್ರೀಮಿಯಂ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊ ಪ್ರೊಸೆಸರ್ ಹೊಂದಿದೆ. ಹಾಗೆಯೇ ಇತ್ತೀಚಿನ ಆಂಡ್ರಾಯ್ಡ್ 15 ಆಧಾರಿತ ನಥಿಂಗ್ ಓಎಸ್ 3.2 ಹೊಂದಿದೆ. ಕಂಪನಿಯು ಮೂರು ವರ್ಷಗಳ ಆಂಡ್ರಾಯ್ಡ್ ನವೀಕರಣಗಳು ಮತ್ತು ಆರು ವರ್ಷಗಳ ಭದ್ರತಾ ಪ್ಯಾಚ್‌ಗಳ ಭರವಸೆ ನೀಡಿದೆ. ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ನಾಳೆ CMF Phone 2 Pro ಫಸ್ಟ್ ಸೇಲ್; ಭರ್ಜರಿ ಆಫರ್ ಘೋಷಣೆ, ಆಫರ್ ಬೆಲೆ ಎಷ್ಟು?

CMF ಫೋನ್ 2 ಪ್ರೊ ವೈಶಿಷ್ಟ್ಯಗಳು

CMF ಫೋನ್ 2 ಪ್ರೊ ಮೊಬೈಲ್ 6.77 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 480Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 3,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಡಿಸ್ಪ್ಲೇಯು ಈ ಫೋನ್ ಪಾಂಡಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ತಯಾರಿಸಲಾಗಿದೆ. ಇದು 8 ಕೋರ್ ಸಿಪಿಯು ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ ನಥಿಂಗ್ ಓಎಸ್ 3.2 ಜೊತೆಗೆ ಕೆಲಸ ಮಾಡುತ್ತದೆ.

CMF ಫೋನ್ 2 ಪ್ರೊ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ ದ್ವಿತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಟೆಲಿಸ್ಕೋಪ್ ಲೆನ್ಸ್ ಹೊಂದಿದೆ. ತೃತೀಯ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸೆನ್ಸರ್ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. ಈ ಫೋನ್ 5000mAh ಸಾಮರ್ಥ್ಯ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನ್ 33W ವೇಗದ ಚಾರ್ಜಿಂಗ್‌ ತಂತ್ರಜ್ಞಾನ ಹೊಂದಿದೆ. ಜೊತೆಗೆ 5W ರಿವರ್ಸ್ ವೈರ್ಡ್ ಚಾರ್ಜಿಂಗ್ ಸಹ ಒದಗಿಸಲಾಗಿದೆ.

CMF ಫೋನ್ 2 ಪ್ರೊ ಫೋನ್ ಭದ್ರತೆಗಾಗಿ ಅಂಡರ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP54 ರೇಟಿಂಗ್‌ ಪಡೆದಿದೆ. ಹಾಗೆಯೇ 150% ಅಲ್ಟ್ರಾ ವಾಲ್ಯೂಮ್ ಸ್ಪೀಕರ್‌ಗಳು ಮತ್ತು ಎರಡು ಹೈ ಡೆಫಿನಿಷನ್ ಮೈಕ್ರೊಫೋನ್‌ಗಳು ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಫೋನ್ 5G ಡ್ಯುಯಲ್ ಮೋಡ್ ಬೆಂಬಲ, 5G ಬ್ಯಾಂಡ್‌ಗಳು, ವೈ-ಫೈ 6, ಬ್ಲೂಟೂತ್ 5.3 ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ನಾಳೆ CMF Phone 2 Pro ಫಸ್ಟ್ ಸೇಲ್; ಭರ್ಜರಿ ಆಫರ್ ಘೋಷಣೆ, ಆಫರ್ ಬೆಲೆ ಎಷ್ಟು?

CMF ಫೋನ್ 2 ಪ್ರೊ ಬೆಲೆ ಮತ್ತು ಆಫರ್

CMF ಫೋನ್ 2 ಪ್ರೊ ಫೋನ್ 8GB RAM ನೊಂದಿಗೆ ಬಿಡುಗಡೆಯಾಗಿದೆ. 8GB RAM + 128GB ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ 18,999 ರೂ.ಗೆ ಮಾರಾಟವಾಗಲಿದೆ. 8GB RAM + 256GB ಸ್ಟೋರೇಜ್ ಹೊಂದಿರುವ ಮೊಬೈಲ್ 20,999 ರೂ.ಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ನಾಳೆಯಿಂದ (ಮೇ 5) ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.

ಕಂಪನಿಯು ಆರಂಭಿಕ ಮಾರಾಟದ ಪ್ರಯುಕ್ತ ಈ ಫೋನಿನ ಖರೀದಿ ಮೇಲೆ 1,000 ರೂ. ರಿಯಾಯಿತಿಯಲ್ಲಿ ನೀಡಲಿದೆ. ಹೆಚ್ಚುವರಿಯಾಗಿ 1000 ರೂ. ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ. ಇದು ಫ್ಲಿಪ್‌ಕಾರ್ಟ್, ಫ್ಲಿಪ್‌ಕಾರ್ಟ್ ಮಿನಿಟ್ಸ್, ಕ್ರೋಮಾ ಮತ್ತು ವಿಜಯ್ ಸೇಲ್ಸ್‌ನಲ್ಲಿ ಮಾರಾಟವಾಗಲಿದೆ. ಈ ಲಿಂಕ್‌ ಕ್ಲಿಕ್ ಮಾಡುವ ಮೂಲಕ ರಿಯಾಯಿತಿಯೊಂದಿಗೆ ಈ ಫೋನನ್ನು ಖರೀದಿಸಬಹುದು.

Best Mobiles in India

English summary
CMF Phone 2 Pro goes on sale in India tomorrow: India pricing, availability and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+