ಶಾಕಿಂಗ್ ಸುದ್ದಿ..ಬೆಂಗಳೂರಿನಲ್ಲಿ ದೇಶದ ಮೊದಲ 'ಬಿಟ್‌ಕಾಯಿನ್' ಎಟಿಎಂ ಸ್ಥಾಪಿಸಿದ್ದವ ಅರೆಸ್ಟ್!!

|

ಬೆಂಗಳೂರಿನಲ್ಲಿ ಆರಂಭವಾಗಿದ್ದ ದೇಶದ ಮೊದಲ 'ಬಿಟ್‌ಕಾಯಿನ್' ಎಟಿಎಂ ಅನ್ನು ಸೈಬರ್ ವಶಪಡಿಸಿಕೊಂಡಿದೆ. ದೇಶದಲ್ಲಿ ಬಿಟ್‌ಕಾಯಿನ್ ವ್ಯವಹಾರಕ್ಕೆ ಅನುಮತಿ ಇಲ್ಲದಿದ್ದರೂ ಸಹ ನಗರದಲ್ಲಿ ಅಳವಡಿಸಲಾಗಿದ್ದ ನಿರ್ಬಂಧಿತ 'ಬಿಟ್‌ಕಾಯಿನ್' ವ್ಯವಹಾರ ಚಟುವಟಿಕೆಗಳನ್ನು ಬಂದ್‌ ಮಾಡಿರುವ ನಗರ ಸೈಬರ್ ಕ್ರೈಂ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಯುನೋಕಾಯಿನ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹೆಸರಿನಲ್ಲಿ 'ಬಿಟ್‌ಕಾಯಿನ್' ಎಟಿಎಂ ತೆರೆದಿದ್ದ ತುಮಕೂರಿನ ಬಿ.ವಿ ಹರೀಶ್‌ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತನಿಂದ ಎರಡು ಲ್ಯಾಪ್‌ಟಾಪ್‌, ಒಂದು ಮೊಬೈಲ್‌, 5 ಕ್ರೆಡಿಟ್‌-ಡೆಬಿಟ್ ಕಾರ್ಡ್‌, ಒಂದು ಕ್ರಿಪ್ಟೊಕರೆನ್ಸಿಯ ಉಪಕರಣ, ಕಂಪನಿಯ 5 ಸೀಲ್‌ಗಳು ಹಾಗೂ 1.79 ಲಕ್ಷ ರೂ. ನಗದನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ದೇಶದ ಮೊದಲ 'ಬಿಟ್‌ಕಾಯಿನ್' ಎಟಿಎಂ ಸ್ಥಾಪಿಸಿದ್ದವ ಅರೆಸ್ಟ್!!

ಮಂಗಳವಾರ ಕಂಪೆನಿ ಕಚೇರಿ ಮೇಲೆ ದಾಳಿ ನಡೆಸಿದ ಸೈಬರ್ ಕ್ರೈಂ ಪೊಲೀಸರು ಬಿ.ವಿ ಹರೀಶ್‌ನನ್ನು ಬಂಧಿಸಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗಾದರೆ, ಏನಿದು ಬಿಟ್‌ಕಾಯಿನ್ ಪ್ರಕರಣ? 'ಬಿಟ್‌ಕಾಯಿನ್' ಎಟಿಎಂ ತೆರೆಯುವುದು ನಿಷಿದ್ದವೇ ಎಂಬುದನ್ನು ಮುಂದೆ ತಿಳಿಯಿರಿ.

ಬಿಟ್‌ಕಾಯಿನ್ ಎಂದರೆ ಏನು?

ಬಿಟ್‌ಕಾಯಿನ್ ಎಂದರೆ ಏನು?

ನಮ್ಮ ರೂಪಾಯಿ ಮತ್ತು ಅಮೆರಿಕಾದ ಡಾಲರ್‌ನಂತೆ ಇದು ಕೂಡ ಈಗ ಪ್ರಚಲಿತವಾಗಿರುವ ಆನ್‌ಲೈನ್ ಹಣ. ಇದನ್ನು ಮೊಬೈಲ್ ಅಥವಾ ಕಂಪ್ಯೂಟರ್ ಪರದೆಯ ಮೂಲಕ ಮಾತ್ರ ನೋಡಲು ಸಾಧ್ಯ. 2009 ರಲ್ಲಿ ಕ್ರಿಫ್ಟೋಗ್ರಫಿ ಎಂಬ ತಂತ್ರಜ್ಞಾನ ಬಳಸಿ ಈ ಡಿಜಿಟಲ್ ಅಥವಾ ಆನ್‌ಲೈನ್ ಹಣವನ್ನು ಹುಟ್ಟುಹಾಕಲಾಗಿದೆ. ಇದಕ್ಕೆ ಹವಾಲ ಹಣ ಎಂದು ಕರೆಯುತ್ತಾರೆ.

ಬಿಟ್‌ಕಾಯಿನ್ ಪೂರ್ತಿ ಡಿಜಿಟಲ್

ಬಿಟ್‌ಕಾಯಿನ್ ಪೂರ್ತಿ ಡಿಜಿಟಲ್

ಬಿಟ್‌ಕಾಯಿನ್ ಗೂಚರಿಸದ ಹಣವಾಗಿರುವುದರಿಂದ ಬಿಟ್‌ಕಾಯಿನ್‌ಗಳನ್ನು ಕಂಪ್ಯೂಟರಿನಲ್ಲಿರುವ ಡಿಜಿಟಲ್‌ ವ್ಯಾಲೆಟ್‌ಗಳಲ್ಲಷ್ಟೆ ಇಟ್ಟುಕೊಳ್ಳುವುದು ಸಾಧ್ಯ. ಶೇರುಗಳು ನಮ್ಮ ಕಣ್ಣಿಗೆ ಕಾಣದಂತೆ ಡಿಮ್ಯಾಟ್‌ ರೂಪದಲ್ಲಿರುತ್ತವಲ್ಲ ಹಾಗೆ. ಇದು ಕೂಡ ಅಂತರ್ಜಾಲ ಹಣವಾಗಿ ನಮ್ಮ ಬಳಿಇದ್ದರೂ ಪೂರ್ತಿ ಡಿಜಿಟಲ್ .ಅಂತರಜಾಲದಲ್ಲಿ ಚಲಾವಣೆಯಾಗುವ ಈ ಬಿಟ್‌ಕಾಯಿನ್ ಅಸ್ತಿತ್ವ ಕಂಪ್ಯೂಟರ್‌ ಪ್ರಪಂಚಕ್ಕೆ ಸೀಮಿತ.

ಬಿಟ್‌ಕಾಯಿನ್ ಹುಟ್ಟಿದ್ದು ಹೇಗೆ?

ಬಿಟ್‌ಕಾಯಿನ್ ಹುಟ್ಟಿದ್ದು ಹೇಗೆ?

2009ರಲ್ಲಿ ಈ ಬಿಟ್‌ಕಾಯಿನ್ ವ್ಯವಸ್ಥೆ ಪರಿಚಯವಾದದ್ದು, ಸಟೋಶಿ ನಕಾಮೋಟೋ ಎಂಬ ಹೆಸರಿನ ಅಜ್ಞಾತ ವ್ಯಕ್ತಿ ಬಿಟ್‌ಕಾಯಿನ್ ಸೃಷ್ಟಿಕರ್ತ ಎಂದು ಗುರುತಿಸಲಾಗುತ್ತದೆ. ಆದರೆ, ಬಿಟ್‌ಕಾಯಿನ್ ಸೃಷ್ಟಿಯ ಹಿಂದೆ ದೊಡ್ಡದೊಂದು ತಂಡವೇ ಇರುವ ಸಂಶಯ ಕೂಡ ಇದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ನಮಗೆ ಸಿಗುವುದಿಲ್ಲ.

ಬಿಟ್‌ಕಾಯಿನ್ ಬೆಲೆ ಎಷ್ಟು?

ಬಿಟ್‌ಕಾಯಿನ್ ಬೆಲೆ ಎಷ್ಟು?

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಒಂದು ಬಿಟ್‌ಕಾಯಿನ ಬೆಲೆ ಪ್ರಸ್ತುತ 4,74,044.49 ರೂಪಾಯಿಗಳು. ಅಂದರೆ ಒಂದು ಬಿಟ್‌ಕಾಯಿನ್ ಖರೀದಿಸಲು ನಾಲ್ಕು ಲಕ್ಷದ ಎಪ್ಪತ್ತೇಳು ಸಾವಿರ ರುಪಾಯಿಗಳನ್ನು ನೀವು ಖರ್ಚು ಮಾಡಬೇಕು. ನಿಮಗೆ ಗೊತ್ತಾ? ಕಳೆದ ಆರು ತಿಂಗಳ ಹಿಂದೆ ಒಂದು ಬಿಟ್‌ಕಾಯಿನ್ ಬೆಲೆ 12 ಲಕ್ಷದ ವರೆಗೂ ಮುಟ್ಟಿತ್ತು.

ಬಿಟ್‌ಕಾಯಿನ್ ಸಂಪಾದಿಸುವುದು ಹೇಗೆ?

ಬಿಟ್‌ಕಾಯಿನ್ ಸಂಪಾದಿಸುವುದು ಹೇಗೆ?

ಬಿಟ್‌ಕಾಯಿನ್ ಸಂಪಾದಿಸಬೇಕು ಎನ್ನುವವರು ತಮ್ಮ ಕಂಪ್ಯೂಟರುಗಳಲ್ಲಿ ಒಂದು ವಿಶೇಷ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳಬೇಕು. ಅನೇಕ ಜನರು ಹೀಗೆ ಸೇರಿದಾಗ ದೊರಕುವ ಸಂಸ್ಕರಣಾ ಸಾಮರ್ಥಯವನ್ನು ಬಳಸಿಕೊಂಡು ಬಳಕೆದಾರರು ನಡೆಸುವ ವಹಿವಾಟನ್ನೆಲ್ಲ ಸಂಸ್ಕರಿಸುವ ಕೆಲಸ ನಡೆಯುತ್ತದೆ. ಈ ಪ್ರಕ್ರಿಯೆ ಮುಂದುವರಿಯುತ್ತ ಹೋದಂತೆ ಅದರಲ್ಲಿ ನೆರವಾದವರಿಗೆ ಬಿಟ್‌ಕಾಯಿನ್ ರೂಪದ ಹಣ ದೊರಕುತ್ತ ಹೋಗುತ್ತದೆ ಎನ್ನಲಾಗಿದೆ.

ಬಿಟ್‌ಕಾಯಿನ್ ಮೋಸ ಸಾಧ್ಯವೇ?

ಬಿಟ್‌ಕಾಯಿನ್ ಮೋಸ ಸಾಧ್ಯವೇ?

ಬಿಟ್‌ಕಾಯಿನ್‌ಗಳು ಕಂಪ್ಯೂಟರಿನಲ್ಲಿ ಶೇಖರವಾಗಿರುತ್ತವೆ ಎಂದಾಕ್ಷಣ ಬೇರೆಲ್ಲ ಕಡತಗಳಂತೆ ಅವನ್ನೂ ಕಾಪಿ ಮಾಡಿಕೊಂಡು ಬಳಸಬಹುದೇ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ, ಬಿಟ್‌ಕಾಯಿನ್‌ ಅನ್ನು ಖರ್ಚುಮಾಡಿದೆವೆಂದರೆ ಆ ವ್ಯವಹಾರವನ್ನು ರದ್ದುಪಡಿಸುವುದು ಅಸಾಧ್ಯ. ಅಲ್ಲದೆ ಬಿಟ್‌ಕಾಯಿನ್‌ ಬಳಸಿ ನಡೆದ ವಹಿವಾಟಿನ ಬಗ್ಗೆ ಮಾಹಿತಿಯನ್ನು ಅಂತರಜಾಲದಲ್ಲಿ ಉಳಿಸಿಡಲಾಗುತ್ತದೆ.

ಬಿಟ್‌ಕಾಯಿನ್ ಸುರಕ್ಷಿತವೇ?

ಬಿಟ್‌ಕಾಯಿನ್ ಸುರಕ್ಷಿತವೇ?

ಸದ್ಯ ಬಿಟ್‌ಕಾಯಿನ್ ಮೇಲೆ ಯಾವುದೇ ಸರಕಾರ ಅಥವಾ ಕೇಂದ್ರೀಯ ಪ್ರಾಧಿಕಾರದ ನಿಯಂತ್ರಣ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ವಿವಿಧ ಸರಕಾರಗಳು ಬಿಟ್‌ಕಾಯಿನ್‌ ಮೇಲೆ ನಿರ್ಬಂಧ ಹೇರಿವೆ ಎನ್ನಬಹುದು. ಬಿಟ್‌ಕಾಯಿನ್ ಮೌಲ್ಯದಲ್ಲಿ ಬಹಳ ಕ್ಷಿಪ್ರವಾಗಿ ಸಂಭವಿಸುವ ಏರಿಳಿತಗಳಿಂದ ಅವುಗಳ ಸ್ಥಿರತೆಯ ಬಗೆಗೂ ಅನುಮಾನ ಮೂಡಿದೆ. ಇದೊಂದು ದೊಡ್ಡ ಮೋಸದ ಜಾಲ ಎಂದು ತಜ್ಞರು ಹೇಳುತ್ತಾರೆ.

Most Read Articles
Best Mobiles in India

English summary
A week ago, amid much fanfare, crypto-currency exchange Unocoin launched a kiosk where people could buy and sell bitcoins, in a mall in Bengaluru. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more