Home
ಸುದ್ದಿಜಾಲ

ಭಾರತದಲ್ಲಿ ಕಲರ್‌ಫುಲ್‌ ಗೇಮಿಂಗ್‌ ಲ್ಯಾಪ್‌ಟಾಪ್‌ ಲಾಂಚ್‌..ಇದರ ಡಿಸೈನ್‌ ನೋಡಿದ್ರೆ ವಾವ್ಹ್‌ ಅಂತೀರಾ!

ಭಾರತದಲ್ಲಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಉತ್ತಮ ಮಾರುಕಟ್ಟೆಯಿದೆ. ಅತ್ಯಾಕರ್ಷಕ ವಿನ್ಯಾಸ ಒಳಗೊಂಡ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಡಿಮ್ಯಾಂಡ್‌ ಇದೆ. ಇದೀಗ ಕಲರ್‌ಫುಲ್‌ ಕಂಪೆನಿ ಗೇಮಿಂಗ್‌ ಲ್ಯಾಪ್‌ಟಾಪ್‌ ವಲಯದಲ್ಲಿ ಹೊಸ ಸಂಚಲನ ಮೂಡಿಸುವುದಕ್ಕೆ ಮುಂದಾಗಿದೆ. ಅದರಂತೆ ಹೊಸ ಕಲರ್‌ಫುಲ್‌ Evol P15 ಗೇಮಿಂಗ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ.

ಹೌದು, ಭಾರತದಲ್ಲಿ ಕಲರ್‌ಫುಲ್‌ Evol P15 ಗೇಮಿಂಗ್ ಲ್ಯಾಪ್‌ಟಾಪ್ ಬಿಡುಗಡೆ ಆಗಿದೆ. ಇದು ಸ್ಟೀಲ್ ಬ್ಲೂ ಫಿನಿಶ್ ಮತ್ತು ಮುಚ್ಚಳದ ಮೇಲೆ RGB ಲೈಟಿಂಗ್‌ನೊಂದಿಗೆ ರೆಟ್ರೊ-ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಹೊಂದಿದ್ದು, ಗೇಮರ್‌ಗಳನ್ನು ಆಕರ್ಷಿಸಲಿದೆ. ಇನ್ನು ಈ ಲ್ಯಾಪ್‌ಟಾಪ್‌ 12ನೇ ತಲೆಮಾರಿನ ಇಂಟೆಲ್ ಕೋರ್ CPUನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನುಳಿದಂತೆ ಈ ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಭಾರತದಲ್ಲಿ ಕಲರ್‌ಫುಲ್‌ ಗೇಮಿಂಗ್‌ ಲ್ಯಾಪ್‌ಟಾಪ್‌ ಲಾಂಚ್‌!

Evol P15 ಗೇಮಿಂಗ್ ಲ್ಯಾಪ್‌ಟಾಪ್ ಫೀಚರ್ಸ್‌ ಹೇಗಿದೆ?
Evol P15 ಗೇಮಿಂಗ್ ಲ್ಯಾಪ್‌ಟಾಪ್ 15.6 ಇಂಚಿನ ಐಪಿಎಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ ಫುಲ್‌ ಹೆಚ್‌ಡಿ ಡಿಸ್‌ಪ್ಲೇ 144Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದೆ. ಇನ್ನು QHD ಸ್ಕ್ರೀನ್‌ 165Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದೆ. ಈ ಡಿಸ್‌ಪ್ಲೇಗಳು 72% NTSC ಅಥವಾ 100% NTSC ಕವರೇಜ್‌ನೊಂದಿಗೆ ವೈಬ್ರಂಟ್‌ ಕಲರ್‌ಗಳನ್ನು ನೀಡಲಿದ್ದು, ಸ್ಮೂತ್‌ ಗೇಮಿಂಗ್‌ ವಿಶ್ಯುಯಲ್‌ಗಳಿಗಾಗಿ G-SYNC ಬೆಂಬಲವನ್ನು ನೀಡುತ್ತವೆ ಎಂದು ವರದಿಯಾಗಿದೆ.

Evol P15 ಗೇಮಿಂಗ್ ಲ್ಯಾಪ್‌ಟಾಪ್ 12 ನೇ ತಲೆಮಾರಿನ ಇಂಟೆಲ್‌ ಕೋರ್‌ i5-12450H ಅಥವಾ ಕೋರ್‌ i7-12650H ಎನ್ನುವ ಎರಡು CPU ಆಯ್ಕೆಗಳಲ್ಲಿ ಬರಲಿದೆ. ಇದು NVIDIA GeForce RTX 4050 6GB ಗ್ರಾಫಿಕ್ಸ್‌ ಕಾರ್ಡ್‌ ಅನ್ನು ಹೊಂದಿದೆ. ಹಾಗೆಯೇ 16 GB DDR5 4800Hz RAM ಅನ್ನು ಹೊಂದಿದ್ದು, ಎರಡು DDR5 SO-DIMM ಸ್ಲಾಟ್‌ಗಳು ಲಭ್ಯವಿವೆ ಎನ್ನಲಾಗಿದೆ. ಜೊತೆಗೆ ಇದು 64GB ಯ ಗರಿಷ್ಠ ಸಾಮರ್ಥ್ಯವನ್ನು ಬಳಸುವುದಕ್ಕೆ ಅನುಮತಿಸಲಿದೆ ಎಂದು ಕಂಪೆನಿ ಹೇಳಿದೆ.

ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 1Gbps LAN ಪೋರ್ಟ್, Wi-Fi 6E ಮತ್ತು ಬ್ಲೂಟೂತ್ 5.3 ಅನ್ನು ಒಳಗೊಂಡಿದೆ. ಇದು USB 2.0 ಪೋರ್ಟ್ (ಟೈಪ್ A), USB 3.2 Gen 1 ಪೋರ್ಟ್ (ಟೈಪ್ A), USB 3.2 Gen 2 ಪೋರ್ಟ್ (ಟೈಪ್ A), ಮತ್ತು USB 3.2 Gen 2 ಪೋರ್ಟ್ (ಟೈಪ್ C) ನಂತಹ I/O ಪೋರ್ಟ್‌ಗಳನ್ನು ಕೂಡ ನೀಡಲಿದೆ. ಇದಲ್ಲದೆ ಮಿನಿ ಡಿಸ್ಪ್ಲೇಪೋರ್ಟ್ 1.4 ಮತ್ತು HDCP ಬೆಂಬಲದೊಂದಿಗೆ HDMI 2.1 ಪೋರ್ಟ್ ಸಹ ಪಡೆದುಕೊಂಡಿದೆ.

ಈ ಲ್ಯಾಪ್‌ಟಾಪ್‌ನಲ್ಲಿ ಆಡಿಯೋ ಅನುಭವವನ್ನು ಸೌಂಡ್ ಬ್ಲಾಸ್ಟರ್ ಸಿನಿಮಾ 6+ ಟೆಕ್ನಾಲಜಿಯೊಂದಿಗೆ ಹೆಚ್ಚಿಸಲಾಗಿದೆ. ಇದರಲ್ಲಿ ವೀಡಿಯೊ ಕರೆಗಳಿಗಾಗಿ 1 ಮೆಗಾಪಿಕ್ಸೆಲ್ HD ವೆಬ್‌ಕ್ಯಾಮ್‌ ಅನ್ನು ಸಹ ನೀಡಲಾಗಿದೆ. ಇದು 54Wh ಸಾಮರ್ಥ್ಯದ ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸಲಿದ್ದು, 180W ಪವರ್ ಬ್ರಿಕ್ ಅನ್ನು ಪ್ಯಾಕ್ ಮಾಡಲಿದೆ. ಇದು ಗೇಮಿಂಗ್‌ ಲ್ಯಾಪ್‌ಟಾಪ್‌ ಆಗಿರುವುದರಿಂದ ಇದರ ಕೂಲಿಂಗ್‌ ಸಿಸ್ಟಂನಲ್ಲಿ 6 ಹೀಟ್‌ಪೈಪ್ ಹೀಟ್‌ಸಿಂಕ್, ಡ್ಯುಯಲ್ ಫ್ಯಾನ್‌ಗಳು ಮತ್ತು ಶಾಖದ ಹರಡುವಿಕೆಗಾಗಿ ನಾಲ್ಕು ಏರ್ ವೆಂಟ್‌ಗಳನ್ನು ಅಳವಡಿಸಲಾಗಿದೆ. ಇದಲ್ಲದೆ ಬಳಕೆದಾರರು ಒಂದು-ಕೀ ಕೂಲಿಂಗ್ ಮೋಡ್ (Fn+1) ಮೂಲಕ ಮೂರು ಕೂಲಿಂಗ್ ಮೋಡ್‌ಗಳ ನಡುವೆ ಸುಲಭವಾಗಿ ಬದಲಾಯಿಸಬಹುದು.

ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಂಡಿರುವ ಈ ಗೇಮಿಂಗ್‌ ಲ್ಯಾಪ್‌ಟಾಪ್‌ ಬೆಲೆ ಎಷ್ಟಿರಲಿದೆ ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ. ಇದರ ಕಲರ್‌ ಆಯ್ಕೆಗಳ ಬಗ್ಗೆ ಕೂಡ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
Colorful Evol P15 gaming laptop with 165Hz Quad HD display launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+