'ನಮ್ಮ ಟೈಗರ್' ಕ್ಯಾಬ್ ಸೇವೆಗೆ 25 ಸಾವಿರ ಚಾಲಕರು ಎಂಟ್ರಿ..ಭಯದಲ್ಲಿ ಓಲಾ ಮತ್ತು ಉಬರ್!!

25 ಸಾವಿರ ಚಾಲಕರು ಟೈಗರ್ ಕ್ಯಾಬ್ ಸೇವೆಗೆ ಸೇರಲು ಖಚಿತವಾಗಿದ್ದು, ಆಪ್‌ಗೆ ಚಾಲಕರ ಮಾಹಿತಿಯನ್ನು ತುಂಬುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.!!

|

ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಹೊರಬರುತ್ತಿರುವ ನೂತನ ಕ್ಯಾಬ್ ಸೇವೆ 'ಟೈಗರ್ ಕ್ಯಾಬ್' ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುತ್ತಿದೆ. 25 ಸಾವಿರ ಚಾಲಕರು ಟೈಗರ್ ಕ್ಯಾಬ್ ಸೇವೆಗೆ ಸೇರಲು ಖಚಿತವಾಗಿದ್ದು, ಆಪ್‌ಗೆ ಚಾಲಕರ ಮಾಹಿತಿಯನ್ನು ತುಂಬುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.!!

ನಗರದ ಹೆಣ್ಣೂರು ರಸ್ತೆಯಲ್ಲಿ ಈಗಾಗಲೇ ಕಚೇರಿ ನಿರ್ಮಾಣಕಾರ್ಯ ಹಂತಿಮ ಹಂತದಲ್ಲಿದ್ದು, ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರೇ ಸೇರಿ ಆರಂಭಿಸಲಾಗುತ್ತಿರುವ ಟೈಗರ್ ಕ್ಯಾಬ್ನಿಂದಾಗಿ ಓಲಾ ಮತ್ತು ಉಬರ್ ಸಂಸ್ಥೆಗಳೂ ಚಾಲಕರ ಕೊರತೆಯನ್ನು ಅನುಭವಿಸುವ ಭೀತಿಯಲ್ಲಿವೆ ಎಂದು ಹೇಳಲಾಗುತ್ತಿದೆ.!! ಹಾಗಾದರೆ, ಟೈಗರ್ ಕ್ಯಾಬ್ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ.? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಹುಲಿ ಟೆಕ್ನಾಲಜೀಸ್

ಹುಲಿ ಟೆಕ್ನಾಲಜೀಸ್

ಟೈಗರ್ ಆಪ್ ನಿರ್ಮಿಸುವ ಸಲುವಾಗಿಯೇ ಹೆಸರಿನ ಹೊಸದೊಂದು ಕಂಪೆನಿ ಹುಟ್ಟುಹಾಕಿದ್ದಾರೆ. ‘ಹುಲಿ ಟೆಕ್ನಾಲಜೀಸ್‌' ಎಂಬ ಕಂಪನಿಯೂ ಜನ್ಮ ತಾಳಿದ್ದು, ಈ ಮೂಲಕ ಕ್ಯಾಬ್ ಸೇವೆ ಒದಗಿಸುತ್ತಿರುವ ಓಲಾ ಹಾಗೂ ಉಬರ್‌ ಕಂಪೆನಿಗಳಿಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ.

ಓಲಾ ಮತ್ತು ಉಬ್ಬರ್ ವಿರುದ್ಧವಾಗಿ:

ಓಲಾ ಮತ್ತು ಉಬ್ಬರ್ ವಿರುದ್ಧವಾಗಿ:

ಟೈಗರ್ ಕ್ಯಾಬ್ ಅನ್ನು ಓಲಾ ಮತ್ತು ಉಬ್ಬರ್ ವಿರುದ್ಧವಾಗಿಯೇ ನಡೆಸಲು ಮುಂದಾಗಿದ್ದಾರೆ. ಈ ಎರಡು ಕಂಪನಿಗಳು ಚಾಲಕರನ್ನು ಶೋಷಣೆ ಮಾಡುತ್ತಿದೆ. ಪ್ರೋತ್ಸಾಹಧನ ಕಡಿತ ಮಾಡುವುದು, ದಂಡ ವಿಧಿಸುವುದನ್ನು ಮಾಡುತ್ತಿದ್ದು, ಇದರಿಂದ ಹೊರ ಬಂದು ತಮ್ಮದೇ ಒಂದು ಆಪ್ ನಿರ್ಮಿಸಲು ಚಾಲಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಖಾಸಾಗಿ ಫೋರ್ಸ್

ಖಾಸಾಗಿ ಫೋರ್ಸ್

ಇದಲ್ಲದೇ ಇಂದಿನ ದಿನದಲ್ಲಿ ಟ್ಯಾಕಿಗಳಲ್ಲಿ ಪ್ರಯಾಣಿಕರಿಗೆ ಕಿರುಕುಳ ಮತ್ತು ಪ್ರಯಾಣಿಕರಿಂದ ಚಾಲಕರಿಗೆ ಕಿರುಕುಳ ನಡೆಯುವ ಪ್ರಕರಣಗಳು ನಡೆಯುತ್ತಿದೆ. ಇದರಿಂದಾಗಿ ಪ್ರಯಾಣಿಕರ ಹಾಗೂ ಚಾಲಕರ ಸಹಾಯಕ್ಕಾಗಿ ಖಾಸಗಿ ಫೋರ್ಸ್ ವೊಂದನ್ನು ರಚಿಸುವ ಸಾಧ್ಯತೆ ಇದೆ.

 ಟೈಗರ್ ಕ್ಯಾಬ್ ಬೆಲೆಗಳು

ಟೈಗರ್ ಕ್ಯಾಬ್ ಬೆಲೆಗಳು

ಟೈಗರ್ ಕ್ಯಾಬ್ ಸದ್ಯ ಮಾರುಕಟ್ಟೆಯಲ್ಲಿರುವ ಓಲಾ-ಉಬರ್ ಕಂಪನಿಗಳಿಗೆ ಸ್ಪರ್ಧೆಯನ್ನು ನೀಡಲಿದ್ದು, ಒಟ್ಟು ನಾಲ್ಕು ವರ್ಗದಲ್ಲಿ ಸೇವೆಯನ್ನು ನೀಡಲಿದೆ. ಮಿನಿ ಪ್ರತಿ ಕಿ.ಮೀ ಗೆ ರೂ.12.50 ಸ್ಪೋರ್ಟ್ಸ್ ಸೆಡಾನ್ ಪ್ರತಿ ಕಿ.ಮೀಗೆ ರೂ.14.50 ಎಸ್ ಯುವಿ ಹಾಗೂ ಹೊರವಲಯದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ ರೂ. 18.50

 ಆನ್‌ಲೈನ್ ಸೇವೆ ಲಭ್ಯ:

ಆನ್‌ಲೈನ್ ಸೇವೆ ಲಭ್ಯ:

ಟೈಗರ್ ಕ್ಯಾಬ್ ಬುಕ್ ಮಾಡಲು ಸ್ಮಾರ್ಟ್‌ಫೋನ್ ಬೇಕಾಗಿಲ್ಲ. ಆಪ್ ಮಾತ್ರವಲ್ಲದೇ ಆನ್‌ಲೈನಿನಲ್ಲಿಯೂ ಕ್ಯಾಬ್ ಬುಕ್ ಮಾಡಿಕೊಳ್ಳವ ಅವಕಾಶವನ್ನ ನೀಡಲಾಗುತ್ತಿದೆ.

<strong>5 ಅತ್ಯುತ್ತಮ ಫೇಸ್‌ಬುಕ್ ಕಂಟ್ರೋಲ್ ಟ್ರಿಕ್ಸ್ ಇಲ್ಲಿವೆ.!! ಏನಿದು ಕಂಟ್ರೋಲ್ !?</strong>5 ಅತ್ಯುತ್ತಮ ಫೇಸ್‌ಬುಕ್ ಕಂಟ್ರೋಲ್ ಟ್ರಿಕ್ಸ್ ಇಲ್ಲಿವೆ.!! ಏನಿದು ಕಂಟ್ರೋಲ್ !?

Best Mobiles in India

Read more about:
English summary
An app-based cab service by the drivers, under the guidance of former chief minister and JD(S) State President HD Kumaraswamy has been named Namma Tiger.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X