ಬ್ರೌಸ್ ಮಾಡುವಾಗ ಒಮ್ಮೊಮ್ಮೆ ಕಾಣುವ 401, 403, 404 ಎರರ್ ಸಂಖ್ಯೆಗಳ ಅರ್ಥವೇನು?

  ನೀವು ಗೂಗಲ್‌ನಲ್ಲಿ ಹುಡುಕಾಟ ಮಾಡಿ ಅಥವಾ URL ನಲ್ಲಿ ಟೈಪ್ ಮಾಡಿ ಒಂದು ವೆಬ್‌ಸೈಟ್ ತೆರೆದು ಒಳ ಪ್ರವೇಶಿಸಲು ಪ್ರಯತ್ನಿಸುತ್ತೀರಾ. ಆದರೆ ಒಮ್ಮೆಮ್ಮೆ ಅದು ಸಾಧ್ಯವಾಗುವುದಿಲ್ಲ. ಏಕೆಂದರೆ ಅಲ್ಲಿ ದೋಷಗಳು ಉಂಟಾಗಬಹುದು. ಆ ಸಮಯದಲ್ಲಿ ಮೂರು ಅಂಕಿಯ ರೂಪದಲ್ಲಿ HTTP ಸ್ಟೇಟಸ್ ಕೋಡ್ ಅನ್ನು ವೆಬ್ ಸರ್ವರ್ ನಿಮಗೆ ಕಳುಹಿಸುತ್ತದೆ.

  ಪ್ರತಿದಿನ ಒಂದಲ್ಲಾ ಒಂದು ವೆಬ್‌ಸೈಟ್ ಅನ್ನು ತೆರೆದು ನೋಡುವ ಡಿಜಿಟಲ್ ಕಾಲ ಇದಾಗಿರುವುದರಿಂದ ಇಂತಹ ಕೆಲವೊಂದು ಡಿಜಿಟಲ್ ಮಾಹಿತಿಗಳನ್ನು ನೀವು ತಿಳಿಯುವುದು ಅವಶ್ಯಕ. ಹುಡುಕಾಟಕ್ಕಾಗಿ ಯಾವುದೇ ವೆಬ್‌ಸೈಟ್ ಒಂದನ್ನು ತೆರೆದರೂ ಒಮ್ಮೊಮ್ಮೆ Error 401, Error 403, Error 404 ಎಂಬ ಎರರ್ ಸಂಖ್ಯೆಗಳು ದೊಡ್ಡದಾಗಿ ಕಾಣಿಸುವುದನ್ನು ನೀವು ನೋಡಬಹುದು.

  ಬ್ರೌಸ್ ಮಾಡುವಾಗ ಒಮ್ಮೊಮ್ಮೆ ಕಾಣುವ 401, 403, 404 ಎರರ್ ಸಂಖ್ಯೆಗಳ ಅರ್ಥವೇನು?

  ಈ ಮೂರು ಅಂಕಿಯ ರೂಪದ ಈ Error 401, Error 403, Error 404, ಎಂಬ ಎರರ್ ಸಂಖ್ಯೆಗಳು ಏಕೆ ಕಾಣಿಸಿಕೊಳ್ಳುತ್ತವೆ ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ. ಒಂದು ವೇಳೆ ತಿಳಿದಿದ್ದರೂ ಅದು Error 404 ಮಾತ್ರ.! ಹಾಗಾಗಿ, ಇಂದಿನ ಲೇಖನದಲ್ಲಿ ಈ ರೀತಿಯ ಎರರ್ ನಂಬರ್‌ಗಳು ಏಕೆ ಬರುತ್ತವೆ?, ಅವುಗಳಿಂದ ನಮಗೇನು ತಿಳಿಯುತ್ತದೆ? ಎಂಬುದನ್ನು ತಿಳಿಯೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  HTTP ಸ್ಟೇಟಸ್ ಕೋಡ್ ಎಂದರೇನು?

  ವೆಬ್‌ ಬ್ರೌಸರ್‌ನಿಂದ ನೀವು ಮಾಡಿದ ಪ್ರತಿ ವಿನಂತಿಯೂ ಸರ್ವರ್ ಕೋಡ್‌ನೊಂದದಿಗೆ ಪ್ರತಿಕ್ರಿಯಿಸುತ್ತದೆ. ಒಂದು ವೇಳೆ ಅದರಲ್ಲಿ ಯಾವುದಾದರು ದೋಷವಿದ್ದಲ್ಲಿ, ದೋಷದ ಕುರಿತು ಹೆಚ್ಚುವರಿ ಮಾಹಿತಿಯನ್ನು ನೀವು ಪಡೆಯಬಹುದು. ನೀವು ದೋಷದ ಕೋಡ್‌ ಅನ್ನು ಮತ್ತು ಅದರ ಕೆಳಗಿನ ಪಟ್ಟಿಯಲ್ಲಿ ಸಂಕ್ಷಿಪ್ತ ವಿವರಣೆಯನ್ನು ಕಾಣಬಹುದು.

  HTTP Error 401 Unauthorized

  ಒಂದು ವೇಳೆ ಇಂತಹ ಎರರ್ ಮೆಸೇಜ್ ಏನಾದರೂ ಕಾಣಿಸಿದರೆ, ಆ ವೆಬ್‌ಸೈಟಿಗೆ ಯೂಸರ್ ನೇಮ್, ಪಾಸ್‌ವರ್ಡ್ ಅನ್ನು ಸರಿಯಾಗಿ ಎಂಟರ್ ಮಾಡಿಲ್ಲ ಎಂದು ಅರ್ಥ. ಯೂಸರ್ ನೇಮ್, ಪಾಸ್‌ವರ್ಡ್ ಸರಿಯಾಗಿ ಇಲ್ಲದಿದ್ದರೆ, ಈ ರೀತಿಯ HTTP Error 401 ಎರರ್ ಸಂಖ್ಯೆ ಕಾಣಿಸುತ್ತದೆ. ಸರಿಯಾಗಿ ಎಂಟರ್ ಮಾಡದಿದ್ದರೆ ಅದು ಅನಧಿಕೃತ ಎಂದು ಈ ಎರರ್ ಸೂಚಿಸುತ್ತದೆ.

  HTTP status 403 Forbidden

  ಈ ರೀತಿಯ ಮೆಸೇಜ್ ಏನಾದ್ರು ಬಂತು ಎಂದರೇ ಅದರ ಅರ್ಥ, ವೆಬ್‌ಸೈಟ್‌ಗೆ ಭೇಟಿ ನೀಡಲು ಯೂಸರ್ ಪರ್ಮಿಷನ್ ಇಲ್ಲ ಎಂದು. ಸರ್ವರ್‌ನಲ್ಲಿರುವ ಸೆಕ್ಯೂರ್ಡ್ ಫೋಲ್ಡರನ್ನು ಯಾರಾದರು ಓಪನ್ ಮಾಡಬೇಕೆಂದುಕೊಂಡರೇ ಈ ರೀತಿಯ ಎರರ್ ಮೆಸೇಜ್ ಕಾಣಿಸುತ್ತದೆ. ಆ ಪೋಲ್ಡರ್ ರಕ್ಷಣೆಗಾಗಿ ಈ ರೀತಿಯ ಎರರ್ ಸಂಖ್ಯೆ ಕಾಣಿಸುತ್ತದೆ.

  HTTP status 404 Not Found

  ನೀವು ಹುಡುಕುತ್ತಿರುವ ವಿಷಯ ವಸ್ತುವು ಆ ವೆಬ್‌ಸೈಟ್ ಸರ್ವರ್‌ನಲ್ಲಿ ಇಲ್ಲ ಎಂದರೆ ಎರರ್ 404 Not Found ಎಂದು ತೋರಿಸುತ್ತದೆ. ಆ ಸೈಟ್‌ನ ಪೋಲ್ಡರ್‌ಗಳು, ಫೈಲ್ಸ್ ಏನೂ ಸರ್ವರ್‌ನಲ್ಲಿ ಇಲ್ಲದಿದ್ದರೆ ಆಗ ಆ ವೆಬ್‌ಸೈಟನ್ನು ಯಾರಾದರು ಓಪನ್ ಮಾಡಲು ಪ್ರಯತ್ನಿಸಿದರೇ ಈ ರೀತಿಯ ಎರರ್ ಸಂಖ್ಯೆ ಅವರಿಗೆ ಕಾಣಿಸುತ್ತದೆ.

  HTTP status 500 Internal Server Error

  ಒಂದು ಸರ್ವರ್ ಓವರ್‌ಲೋಡ್ ಆಗಿದ್ದಾಗ, ವಿನಂತಿಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದಿದ್ದಾಗ ಅಥವಾ ವೆಬ್‌ಸೈಡ್ ಕೋಡಿಂಗ್ ದೋಷವನ್ನು ಹೊಂದಿದ್ದರೆ HTTP status 500 ರೀತಿಯ ಎರರ್ ನಿಮಗೆ ಕಾಣಿಸುತ್ತದೆ. ಪಾಪ್ಸ್ ಅಪ್ ಆಗುವ ಸಂದೇಶವು ಆಂತರಿಕ ಸರ್ವರ್ ದೋಷವನ್ನು ಹೊಂದಿದೆ.

  HTTP status 504 (gateway timeout)

  ವೆಬ್‌ಸೈಟ್ ಅವಲಂಬಿಸಿರುವ ಸರ್ವರ್ ಜೊತೆಗೆ ಅದು ಸಂವಹನ ನಡೆಸುತ್ತಿರುವಾಗ ಇದು ಸಂಭವಿಸುತ್ತದೆ. ಈ ಸಮಸ್ಯೆಯನ್ನು ನಿರ್ವಾಹಕರು ಪರಿಹರಿಸುವವರೆಗೆ ನೀವು ವೆಬ್‌ಸೈಟ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ವೆಬ್‌ಸೈಟ್ ಅನ್ನು ಮತ್ತೊಮ್ಮೆ ಪ್ರವೇಶಿಸಲು ನಿರ್ವಾಹಕರು ನೀವು ತಾಳ್ಮೆಯಿಂದಿರಿ ಕಾಯಬೇಕಾಗುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Trying to figure out the different types of errors while browsing? This might help. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more