ರೆಡ್‌ಮಿ ನೋಟ್ 7 VS ರೆಡ್‌ಮಿ ನೋಟ್ 7 ಪ್ರೊ: ಏನು ವ್ಯತ್ಯಾಸ?..ಯಾವುದು ಬೆಸ್ಟ್?

|

ಶಿಯೋಮಿ ಕಂಪೆನಿಯ ಬಹನಿರೀಕ್ಷಿತ ರೆಡ್‌ಮಿ ನೋಟ್ 7 ಪ್ರೊ ಮತ್ತು ರೆಡ್‌ಮಿ ನೋಟ್ 7 ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ನೆನ್ನೆ ಬಿಡುಗಡೆಕಂಡು ಮೊಬೈಲ್ ಪ್ರಿಯರನ್ನು ಸೆಳೆಯುತ್ತಿವೆ. ಚೀನಾದಲ್ಲಿ ರೆಡ್‌ಮಿ ನೋಟ್ 7 ಮಾದರಿಯನ್ನಷ್ಟೇ ಬಿಡುಗಡೆ ಮಾಡಿದ್ದ ಶಿಯೋಮಿ ಕಂಪೆನಿ, ಭಾರತದಲ್ಲಿ ಮಾತ್ರ ರೆಡ್‌ಮಿ ನೋಟ್ 7 ಪ್ರೊ ಮತ್ತು ರೆಡ್‌ಮಿ ನೋಟ್ 7 ಎಂಬ ಎರಡು ಸ್ಮಾರ್ಟ್‌ಫೋನ್‌ ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ಶಿಯೋಮಿ ಮೊಬೈಲ್ ಪ್ರಿಯರಿಗೆ ಒಂದು ರೀತಿಯಲ್ಲಿ ಕನ್‌ಫ್ಯೂಸ್ ಮಾಡಿದೆ.

ರೆಡ್‌ಮಿ ನೋಟ್ 7 VS ರೆಡ್‌ಮಿ ನೋಟ್ 7 ಪ್ರೊ: ಏನು ವ್ಯತ್ಯಾಸ?..ಯಾವುದು ಬೆಸ್ಟ್?

ಹೌದು, ಭಾರತದಲ್ಲಿ 9,999 ರೂ. ಮತ್ತು 11,999 ರೂ.ಗಳಿಗೆ ರೆಡ್‌ಮಿ ನೋಟ್ 7 ಮಾರಾಟಕ್ಕೆ ಬಂದಿದ್ದರೆ, ರೆಡ್‌ಮಿ ನೋಟ್ 7 ಪ್ರೊ ಬೆಲೆಗಳು ಕ್ರಮವಾಗಿ 13,999 ರೂ. ಹಾಗೂ 16,999 ರೂ.ಗಳಾಗಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ರೆಡ್‌ಮಿ ನೋಟ್ 7 ಪ್ರೊ ಮತ್ತು ರೆಡ್‌ಮಿ ನೋಟ್ 7 ಸ್ಮಾರ್ಟ್‌ಫೋನ್‌ಗಳ ನಡುವೆ ಇರುವ ವ್ಯತ್ಯಾಸಗಳು ಯಾವುವು?, ಯಾವ ಸ್ಮಾರ್ಟ್‌ಫೋನ್ ಖರೀದಿ ಒಳ್ಳೆಯದು ಎಂಬುದನ್ನು ನೀವೇ ತಿಳಿದುಕೊಳ್ಳುವ ರೀತಿಯ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ.

ಪ್ರೊಸೆಸರ್‌ನಲ್ಲಿ ವ್ಯತ್ಯಾಸ!

ಪ್ರೊಸೆಸರ್‌ನಲ್ಲಿ ವ್ಯತ್ಯಾಸ!

ರೆಡ್‌ಮಿ ನೋಟ್ 7 ಪ್ರೊ ಮತ್ತು ರೆಡ್‌ಮಿ ನೋಟ್ 7 ಸ್ಮಾರ್ಟ್‌ಫೋನ್‌ಗಳ ನಡುವೆ ಇರುವು ಪ್ರಮುಖ ವ್ಯತ್ಯಾಸವೆಂದರೆ ಅದು ಪ್ರೊಸೆಸರ್. ರೆಡ್‌ಮಿ ನೋಟ್ 7 ಸ್ಮಾರ್ಟ್‌ಫೋನಿನಲ್ಲಿ ಸ್ನ್ಯಾಪ್‌ಡ್ರ್ಯಾಗನ್ 660 ಪ್ರೊಸೆಸರ್ ಅನ್ನು ನೀಡಲಾಗಿದ್ದರೆ, ರೆಡ್‌ಮಿ ನೋಟ್ 7 ಪ್ರೊ ಆವೃತ್ತಿಯಲ್ಲಿ ಸ್ನ್ಯಾಪ್‌ಡ್ರ್ಯಾಗನ್ 675 ಒಕ್ಟಾಕೋರ್ ಪ್ರೊಸೆಸರ್ ಅನ್ನು ನೀಡಲಾಗಿದೆ.

ಕ್ಯಾಮೆರಾದಲ್ಲಿ ವ್ಯತ್ಯಾಸ!

ಕ್ಯಾಮೆರಾದಲ್ಲಿ ವ್ಯತ್ಯಾಸ!

ಚೀನಾದಲ್ಲಿ ಬಿಡುಗಡೆಯಾಗಿದ್ದ ರೆಡ್‌ಮಿ ನೋಟ್ 7 ಮಾದರಿಯ ಸ್ಮಾರ್ಟ್‌ಫೋನಿನಲ್ಲಿ 48MP ರಿಯರ್ ಕ್ಯಾಮೆರಾವನ್ನು ನೀಡಲಾಗಿತ್ತು. ಆದರೆ, ಭಾರತದಲ್ಲಿ ರೆಡ್‌ಮಿ ನೋಟ್ 7 ಪ್ರೊ ಆವೃತ್ತಿಯಲ್ಲಿ ಮಾತ್ರ 48MP+5MP ಕ್ಯಾಮೆರಾವನ್ನು ತರಲಾಗಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ನೋಟ್ 7 ಮಾದರಿಯ ಫೋನಿನಲ್ಲಿ 12MP+2MP ರಿಯರ್ ಕ್ಯಾಮೆರಾವಷ್ಟೇ ಇದೆ.

RAM ಮತ್ತು ROM ವ್ಯತ್ಯಾಸ!

RAM ಮತ್ತು ROM ವ್ಯತ್ಯಾಸ!

ರೆಡ್‌ಮಿ ನೋಟ್ 7 ಪ್ರೊ ಮತ್ತು ರೆಡ್‌ಮಿ ನೋಟ್ 7 ಸ್ಮಾರ್ಟ್ಫೋನ್‌ಗಳ ನಡುವಿನ ಮತ್ತೊಂದು ವ್ಯತ್ಯಾಸವೆಂದರೆ, ನೋಟ್ 7ನಲ್ಲಿ 3 GB + 32 GB ಮತ್ತು 4 GB RAM + 64 GB ಆವೃತ್ತಿಗಳಿದ್ದರೆ, ನೋಟ್ 7 ಪ್ರೊನಲ್ಲಿ 4 GB + 64 GB, 6 GB RAM + 128 GB ಆವೃತ್ತಿಗಳಿವೆ. ರೆಡ್‌ಮಿ ಫೋನ್‌ಗಳಲ್ಲೇ 128 GB ಹೊಂದಿರುವ ಮೊದಲ ಫೋನ್ ನೋಟ್ ಪ್ರೊ ಆಗಿದೆ.

ಈ ಕೆಳೆಗೆ ಇತರೆ ಫೀಚರ್ಸ್ ನೋಡಿ!

ಈ ಕೆಳೆಗೆ ಇತರೆ ಫೀಚರ್ಸ್ ನೋಡಿ!

ಈ ಮೇಲಿನ ಸ್ಲೈಡರ್‌ಗಳಲ್ಲಿ ರೆಡ್‌ಮಿ ನೋಟ್ 7 ಪ್ರೊ ಮತ್ತು ರೆಡ್‌ಮಿ ನೋಟ್ 7 ಸ್ಮಾರ್ಟ್‌ಫೋನ್‌ಗಳ ನಡುವೆ ಇರುವು ಪ್ರಮುಖ ವ್ಯತ್ಯಾಸಗಳನ್ನು ನಾವು ನೀಡಿದ್ದೇವೆ. ಈ ಮೂರು ವ್ಯತ್ಯಾಸಗಳನ್ನು ಬಿಟ್ಟರೆ ಈ ಎರಡೂ ಪೋನ್‌ಗಳಲ್ಲಿ ಇರುವ ಇತರೆ ಫೀಚರ್ಸ್ ಒಂದೇತರನಾಗಿವೆ. ಹಾಗಾದರೆ, ಎರಡೂ ಫೋನ್‌ಗಳ ಇತರೆ ಫೀಚರ್ಸ್‌ಗಳನ್ನು ಮುಂದೆ ಓದಿ ತಿಳಿಯಿರಿ.

'ರೆಡ್‌ಮಿ ನೋಟ್ 7 ಪ್ರೊ' ಫೀಚರ್ಸ್‌

'ರೆಡ್‌ಮಿ ನೋಟ್ 7 ಪ್ರೊ' ಫೀಚರ್ಸ್‌

ಈಗಾಗಲೇ ವಿಶ್ವ ಮಾರುಕಟ್ಟೆಗೆ ಕಾಲಿಟ್ಟಿರುವ ರೆಡ್‌ಮಿ ನೋಟ್ 7 ಮಾದರಿಯಲ್ಲೇ 'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು. ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್‌ಪ್ರಿಂಟ್ ಆಯ್ಕೆಯ ಡಿಸೈನ್ ಹೊಂದಿರುವ ಸ್ಮಾರ್ಟ್‌ಪೋನ್ ಎರಡೂ ಭಾಗಗಳಲ್ಲಿ 2.D ಕರ್ವಡ್ ಗ್ಲಾಸ್ ಡಿಸೈನ್ ಹೊಂದಿರುವುದು ವಿಶೇಷ ಎನ್ನಬಹುದು.

'ರೆಡ್‌ಮಿ ನೋಟ್ 7 ಪ್ರೊ' ಡಿಸ್‌ಪ್ಲೇ.

'ರೆಡ್‌ಮಿ ನೋಟ್ 7 ಪ್ರೊ' ಡಿಸ್‌ಪ್ಲೇ.

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ FHD + ರೆಸಲ್ಯೂಶನ್ ಮತ್ತು 19.5:9ರ ಆಕಾರ ಅನುಪಾತದೊಂದಿಗೆ 6.3-ಇಂಚಿನ LTPS ಎಲ್‌ಸಿಡಿ ಪ್ರದರ್ಶನದೊಂದಿಗೆ ಬಿಡುಗಡೆಯಾಗಿದೆ. ಕಣ್ಣಿನ ಒತ್ತಡವನ್ನು ತಪ್ಪಿಸಲು ಸನ್‌ಲೈಟ್ ಡಿಸ್‌ಪ್ಲೇ ಮತ್ತು ಓದುವಿಕೆ ವಿಶೇಷ ಮೋಡ್ ಅನ್ನು ಹೊಂದಿರುವ ಫೋನ್ ಭಾಗಶಃ ಪೂರ್ಣ ಪ್ರಮಾಣದ ಸ್ಕ್ರೀನ್ ಡಿಸ್‌ಪ್ಲೇಯಂತೆ ಹೊಂದಿದೆ.

'ರೆಡ್‌ಮಿ ನೋಟ್ 7 ಪ್ರೊ' ಪ್ರೊಸೆಸರ್

'ರೆಡ್‌ಮಿ ನೋಟ್ 7 ಪ್ರೊ' ಪ್ರೊಸೆಸರ್

ಆಕ್ಟಕೋರ್ ಸ್ನಾಪ್‌ಡ್ರಾಗನ್ 675 SoC ಪ್ರೊಸೆಸರ್ ಜೊತೆಗೆ 6GB LPDDR4X RAM ಮತ್ತು 128GB ಆಂತರಿಕ ಮೆಮೊರಿಯನ್ನು 'ರೆಡ್‌ಮಿ ನೋಟ್ 7 ಪ್ರೊ'ನಲ್ಲಿ ನೋಡಬಹುದು. ರೆಡ್‌ಮಿ ಫೋನಿನಲ್ಲಿ ಇದೇ ಮೊದಲ ಬಾರಿಗೆ 128GB ಮೆಮೊರಿಯನ್ನು ತರಲಾಗಿದ್ದು, ಅಡ್ರಿನೋ 612 ಜಿಪಿಯು ಜೊತೆಗೆ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಸ್ಮಾರ್ಟ್‌ ಕಾರ್ಯನಿರ್ವಹಣೆ ನೀಡಲಿದೆ.

'ರೆಡ್‌ಮಿ ನೋಟ್ 7 ಪ್ರೊ' ರಿಯರ್ ಕ್ಯಾಮೆರಾ

'ರೆಡ್‌ಮಿ ನೋಟ್ 7 ಪ್ರೊ' ರಿಯರ್ ಕ್ಯಾಮೆರಾ

ರೆಡ್‌ಮಿ ನೋಟ್ 7 ಪ್ರೊನಲ್ಲಿ 48MP ಪ್ರಾಥಮಿಕ ಸಂವೇದಕ ಮತ್ತು 5 MP ಸೆಕೆಂಡರಿ ಸಂವೇದಕಗಳನ್ನು ನೀಡಲಾಗಿದೆ. 48MP ಕ್ಯಾಮರಾವು ಸೋನಿ IMX586 ಸಂವೇದಕವನ್ನು ಬಳಸುತ್ತಿದ್ದು, ಇದು ಸ್ಮಾರ್ಟ್ಫೋನ್ಗಳಿಗಾಗಿ ಅತ್ಯುನ್ನತ ರೆಸಲ್ಯೂಶನ್ ಸಂವೇದಕವಾಗಿದ್ದು ಉತ್ತಮ ಫೋಟೋಗಳಿಗಾಗಿ 4x ಡೈನಾಮಿಕ್ ಶ್ರೇಣಿಯನ್ನು ಬೆಂಬಲಿಸಲಿದೆ.

'ರೆಡ್‌ಮಿ ನೋಟ್ 7 ಪ್ರೊ' ಕ್ಯಾಮೆರಾ ತಂತ್ರಜ್ಞಾನ!

'ರೆಡ್‌ಮಿ ನೋಟ್ 7 ಪ್ರೊ' ಕ್ಯಾಮೆರಾ ತಂತ್ರಜ್ಞಾನ!

ರೆಡ್‌ಮಿ ನೋಟ್ 7 ಪ್ರೊ ಸಂವೇದಕವು 4 ಪಿಕ್ಸೆಲ್‌ಗಳನ್ನು 1 ಸೂಪರ್ ಪಿಕ್ಸೆಲ್‌ಗೆ ವಿಲೀನಗೊಳಿಸುವ ಮೂಲ ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಚಿತ್ರಗಳನ್ನು ಚಿತ್ರಿಸಲಿದೆ. ಕೃತಕ ಬುದ್ದಿಮತ್ತೆ ಸಹಾಯದಿಂದ ರಾತ್ರಿ ಸಮಯದಲ್ಲೂ ಛಾಯಾಗ್ರಹಣಕ್ಕೆ ಶಕ್ತವಾಗಿದೆ. AI ಪೋರ್ಟ್ರೇಟ್ 2.0 ಹೊಂದಿರುವ ಕ್ಯಾಮೆರಾ ಬೊಕೆ ಚಿತ್ರಗಳು, 4K ವೀಡಿಯೋ ರೆಕಾರ್ಡಿಂಗ್ ಫೀಚರ್ಸ್ ಹೊಂದಿದೆ

'ರೆಡ್‌ಮಿ ನೋಟ್ 7 ಪ್ರೊ' ಸೆಲ್ಫೀ ಕ್ಯಾಮೆರಾ!

'ರೆಡ್‌ಮಿ ನೋಟ್ 7 ಪ್ರೊ' ಸೆಲ್ಫೀ ಕ್ಯಾಮೆರಾ!

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನಿನಲ್ಲಿ 13 ಎಂಪಿ ಎಐ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಎಐ ಭಾವಚಿತ್ರ ಸೆಲ್ಫಿ, ಸ್ಟುಡಿಯೋ ಲೈಟಿಂಗ್ ಸೆಲ್ಫಿ, ಎಐ ಫೇಸ್ ಅನ್ಲಾಕ್, ಎಐ ಬ್ಯೂಟಿಗಳೊಂದಿಗೆ 13 ಎಂಪಿ ಎಐ ಸೆಲ್ಫ್ ಕ್ಯಾಮರಾ ಅದ್ಬುತವಾಗಿದೆ. ನಿರ್ದಿಷ್ಟ ಆಪ್ಟಿಮೈಸೇಶನ್ಗಳೊಂದಿಗೆ AI ದೃಶ್ಯ ಪತ್ತೆಹಚ್ಚುವಿಕೆ ತಂತ್ರಜ್ಞಾನ ಹೊಂದಿರುವುದು ಇದರ ವಿಶೇಷತೆ.

'ರೆಡ್‌ಮಿ ನೋಟ್ 7 ಪ್ರೊ' ಬ್ಯಾಟರಿ

'ರೆಡ್‌ಮಿ ನೋಟ್ 7 ಪ್ರೊ' ಬ್ಯಾಟರಿ

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರುವಂತಹ 4000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಇದು ವೇಗವಾಗಿ ಚಾರ್ಜಿಂಗ್ ಆಗಲು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 4.0 ಅನ್ನು ಬೆಂಬಲಿಸುತ್ತದೆ ಎಂದು ಶಿಯೋಮಿ ತಿಳಿಸಿದೆ. ಶಿಯೋಮಿ ರೆಡ್‌ಮಿ ನೋಟ್ 6 ನಲ್ಲಿ ಕ್ವಿಕ್ ಚಾರ್ಜ್ 3.0 ತಂದಿದನ್ನು ನಾವಿಲ್ಲಿ ನೋಡಬಹುದು.

'ರೆಡ್‌ಮಿ ನೋಟ್ 7 ಪ್ರೊ' ಇತರೆ ಫೀಚರ್ಸ್

'ರೆಡ್‌ಮಿ ನೋಟ್ 7 ಪ್ರೊ' ಇತರೆ ಫೀಚರ್ಸ್

ಅಂಟುಂಟು ಬೆಂಚ್‌ಮಾರ್ಕ್ನಲ್ಲಿ 180,808 ರಷ್ಟು ಸ್ಕೋರ್ ಮಾಡಿರುವ 'ರೆಡ್‌ಮಿ ನೋಟ್ 7 ಪ್ರೊ' ಡ್ಯುಯಲ್ ವೋಲ್ಟ್ ಸಿಮ್ ಸಪೋರ್ಟ್ ಮಾಡಲಿದೆ. ಇನ್ನುಳಿದಂತೆ 3.5mm ಜಾಕ್, ಫೇಸ್‌ಲಾಕ್, ಸ್ಟೂಡಿಯೋ ಲೈಟಿಂಗ್, 8 ಯುನಿಕ್ ಎಫೆಕ್ಟ್ ಕ್ಯಾಮೆರಾ ತಂತ್ರಜ್ಞಾನಗಳು, 4k ವಿಡಿಯೋ ರೆಕಾರ್ಡಿಂಗ್, ಹೆವಿ ಗೇಮಿಗ್‌ಗಾಗಿ ಅಡ್ರಿನೋ 612 ಜಿಪಿಯುಗಳನ್ನು ಹೊಂದಿದೆ.

'ರೆಡ್‌ಮಿ ನೋಟ್ 7 ಪ್ರೊ' ಬೆಲೆಗಳು

'ರೆಡ್‌ಮಿ ನೋಟ್ 7 ಪ್ರೊ' ಬೆಲೆಗಳು

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಎರಡು ವೆರಿಯಂಟ್‌ಗಳಲ್ಲಿ ಮೊಬೈಲ್ ಮಾರುಕಟ್ಟೆಗೆ ಲಾಂಚ್ ಆಗಿದ್ದು, 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಹೊಂದಿರುವ 'ರೆಡ್‌ಮಿ ನೋಟ್ 7 ಪ್ರೊ' ಫೋನಿನ ಬೆಲೆ 13,999 ರೂ.ಗಳಾಗಿವೆ. ಹಾಗೆಯೇ, 6GB RAM ಮತ್ತು 128GB ಆಂತರಿಕ ಮೆಮೊರಿಯ ನೋಟ್ 7 ಪ್ರೊ ಫೋನ್ ಬೆಲೆ 16,999 ರೂ.ಗಳಾಗಿವೆ.

ರೆಡ್‌ಮಿ ನೋಟ್ 7' ಫೀಚರ್ಸ್

ರೆಡ್‌ಮಿ ನೋಟ್ 7' ಫೀಚರ್ಸ್

ವಾಟರ್‌ಡ್ರಾಪ್ ಚಿಕ್ಕ ನೋಚ್ ವಿನ್ಯಾಸದ ಡಿಸ್‌ಪ್ಲೇ, ಡ್ಯುಯಲ್ ಕ್ಯಾಮೆರಾ, ಫಿಂಗರ್‌ಪ್ರಿಂಟ್ ಆಯ್ಕೆ ಸೇರಿದಂತೆ ಹಿಂಬಾಗದಲ್ಲಿ 2.5 ಡಿ ಬಾಗಿದ ಗಾಜಿನ ರಕ್ಷಣೆ ವಿನ್ಯಾಸವನ್ನು ಹೊಂದಿರುವ ಸ್ಮಾರ್ಟ್‌ಪೋನ್ ಹೈ ಎಂಡ್ ಲುಕ್ ಹೊಂದಿದೆ. ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಿಗೂ ಸೆಡ್ಡು ಹೊಡೆಯುವಂತಹ ಲುಕ್‌ನಲ್ಲಿ ಬಿಡುಗಡೆಯಾದ ಮೊದಲ ಬಜೆಟ್ ಫೋನಿನಂತೆ ಕಾಣುತ್ತಿದೆ.

'ರೆಡ್‌ಮಿ ನೋಟ್ 7' ಡಿಸ್‌ಪ್ಲೇ !

'ರೆಡ್‌ಮಿ ನೋಟ್ 7' ಡಿಸ್‌ಪ್ಲೇ !

'ರೆಡ್‌ಮಿ ನೋಟ್ 7' ಫೋನ್ 19.5: 9 ಆಕಾರ ಅನುಪಾತದಲ್ಲಿ 1080x2340 ಪಿಕ್ಸೆಲ್‌ಗಳ ಸಾಮರ್ಥ್ಯದ 6.3-ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿರುವ ಡಿಸ್‌ಪ್ಲೇ ವಾಟರ್‌ಡ್ರಾಪ್ ಚಿಕ್ಕ ನೋಚ್ ವಿನ್ಯಾಸವನ್ನು ಹೊಂದಿರುವುದನ್ನು ನೋಡಬಹುದಾಗಿದೆ. ಇದು ಮಲ್ಟಿಮೀಡಿಯಾ ಪ್ರಿಯರ ಮನಗೆಲ್ಲಲು ಯಶಸ್ವಿಯಾಗಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ 2.2GHz ಸ್ನಾಪ್ಡ್ರಾಗನ್ 660 ಎಸ್‌ಒಸಿ ಪ್ರೊಸೆಸರ್, ಅಡ್ರಿನೋ 512 ಗ್ರಾಫಿಕ್ಸ್, ಮತ್ತು 3 ಜಿಬಿಮತ್ತು 4 ಜಿಬಿ, RAM ಆಯ್ಕೆಗಳೊಂದಿಗೆ ಬಿಡುಗಡೆಯಾಗಿದೆ. 32GB ಮತ್ತು 64GB ಮೆಮೊರಿ ಆಯ್ಕೆಗಳ ಸ್ಮಾರ್ಟ್‌ಫೋನಿನ ಆಂತರಿಕ ಮೆಮೊರಿಯನ್ನು 256GB ವರೆಗೆ ವಿಸ್ತರಿಸುವ ಆಯ್ಕೆಯೂ ಸಹ ಲಭ್ಯವಿದೆ.

12+2MP ಕ್ಯಾಮೆರಾ!

12+2MP ಕ್ಯಾಮೆರಾ!

ಶಿಯೋಮಿ ಕಂಪೆನಿ ತನ್ನ ರೆಡ್‌ಮಿ ನೋಟ್ 7 ಸ್ಮಾರ್ಟ್‌ಪೋನಿನಲ್ಲಿ 12 ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಎರಡು ಕ್ಯಾಮೆರಾಗಳನ್ನು ಹಿಂಬಾಗದಲ್ಲಿ ನೀಡಿದೆ.(ಭಾರತದಲ್ಲಿ ರೆಡ್‌ಮಿ ನೋಟ್ 7 ಪ್ರೊ ನಲ್ಲಿ ಮಾತ್ರ 48MP+5MP ರಿಯರ್ ಕ್ಯಾಮೆರಾಗಳನ್ನು ನೀಡಲಾಗಿದೆ) ಡ್ಯುಯಲ್-ಎಲ್ಇಡಿ ಫ್ಲಾಶ್ ಬೆಂಬಲ, ಪಿಡಿಎಎಫ್ ಅನ್ನು ಸಹ ಹಿಂಬಾಗದಲ್ಲಿ ನೋಡಬಹುದಾಗಿದೆ.

13MP ಸೆಲ್ಫಿ ಕ್ಯಾಮೆರಾ!

13MP ಸೆಲ್ಫಿ ಕ್ಯಾಮೆರಾ!

ಹಿಂಬಾಗದಲ್ಲಿ 12MP+2MP ಸಾಮರ್ಥ್ಯದ ಕ್ಯಾಮೆರಾಗಳನ್ನು ಹೊಂದಿರುವ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನಿನಲ್ಲಿ 13-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಪೊರ್ಟ್ರೇಟ್ ಮೋಡ್, ಹೆಚ್‌ಡಿಆರ್, ಎಐ ಫೇಸ್ ಅನ್ಲಾಕ್, ಎಐ ಸ್ಮಾರ್ಟ್ ಬ್ಯೂಟಿ, ಎಐ ಸಿಂಗಲ್ ಶಾಟ್ ಬ್ಲರ್, ಫ್ರಂಟ್ ಹೆಚ್‌ಡಿಆರ್‌ನಂತಹ ವಿಶೇಷತೆಗಳನ್ನು ಈ ಕ್ಯಾಮೆರಾ ತಂತ್ರಜ್ಞಾನದಲ್ಲಿವೆ.

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ಕ್ವಿಕ್ ಚಾರ್ಜ್ 4 ತಂತ್ರಜ್ಞಾನ ಬೆಂಬಲದೊಂದಿಗೆ 4,000 mAh ಬ್ಯಾಟರಿಯನ್ನು 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಇದು 251 ಗಂಟೆಗಳ ಸ್ಟ್ಯಾಂಡ್‌ ಬೈ ಸಮಯ, 23 ಗಂಟೆಗಳ ಟಾಕ್ ಟೈಮ್, 13 ಗಂಟೆಗಳ ವೀಡಿಯೋ ಪ್ಲೇಬ್ಯಾಕ್, ಮತ್ತು 7 ಗಂಟೆಗಳ ಗೇಮಿಂಗ್‌ವರೆಗೆ ಬ್ಯಾಟರಿ ಸಾಮರ್ಥ್ಯವನ್ನು ನೀಡಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಟೈಪ್ ಸಿ ಪೋರ್ಟ್, 3.5mm ಆಡಿಯೋ ಜ್ಯಾಕ್, 4ಜಿ ವೋಲ್ಟ್, ಜಿಪಿಎಸ್, ಎಜಿಪಿಎಸ್, ಗ್ಲೋನಾಸ್, ಬ್ಲೂಟೂತ್ ವಿ5, ಮತ್ತು ವೈ-ಫೈ 802.11 ಎ / ಬಿ / ಜಿ / ಎನ್ / ಎಸಿ. ಸೇರಿದಂತೆ 450 ನಿಟ್ಸ್ ಬ್ರೈಟ್ನೆಸ್, 84 ಶೇಕಡಾ ಎನ್ ಟಿ ಎಸ್ ಸಿ ಕಲರ್ ಗ್ಯಾಮೆಟ್‌ನಂತಹ ಇತ್ತೀಚಿನ ಹಲವು ನೂತನ ತಂತ್ರಜ್ಞಾನಗಳನ್ನು 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಪೋನಿನಲ್ಲಿ ತರಲಾಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಭಾರತದಲ್ಲಿ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಎರಡು ವೆರಿಯಂಟ್‌ಗಳಲ್ಲಿ ಬಿಡುಗಡೆ ಕಂಡಿದ್ದು, 3GB RAM + 32GB ಮಾದರಿಯ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಬೆಲೆ ಕೇವಲ 9,999 ರೂ.ಗಳಿಂದ ಶುರುವಾಗಿದೆ. ಹಾಗೆಯೇ, 4GB RAM + 64GB ಮಾದರಿಯ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಬೆಲೆ 11,999 ರೂಪಾಯಿಗಳಾಗಿವೆ.

Best Mobiles in India

English summary
Xiaomi Redmi Note 7 vs Xiaomi Redmi Note 7 Pro Mobile Comparison - Compare Xiaomi Redmi Note 7 vs Xiaomi Redmi Note 7 Pro Price in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X