ಪ್ರಪಂಚದ ಬಹುದೊಡ್ಡ ಹ್ಯಾಕ್ ಬಗ್ಗೆ ನೀವು ತಿಳಿಯಲೇಬೆಕು!..ಹೇಗಿದೆ ಗೊತ್ತಾ ಅವರ ಪ್ಲಾನ್!!

ನಂಬಿದರೆ ನಂಬಿ ಬಿಟ್ಟರೆ ಬಿಡಿ ಮೂರನೆ ಮಹಾಯುದ್ದ ನಡೆದಿದ್ದರೂ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲವೇನೊ.!

|

'ವನ್ನಾಕ್ರೈ' ಎಂಬ ಪದ ಇಡೀ ವಿಶ್ವದಾಧ್ಯಂತ ಸದ್ದು ಮಾಡುತ್ತಿದೆ.!! ಇದೊಂದು ಕುತಂತ್ರಾಂಶವಾಗಿದ್ದು, ಭಾರತವೂ ಸೇರಿ ವಿಶ್ವದ 100 ಕ್ಕೂ ಹೆಚ್ಚು ದೇಶಗಳ ಲಕ್ಷಾಂತರ ಕಂಪ್ಯೂಟರ್‌ಗಳ ಮೇಲೆ ಹ್ಯಾಕರ್‌ಗಳು ಶುಕ್ರವಾರ ರಾತ್ರಿ ದಾಳಿ ನಡೆಸಿದ್ದಾರೆ.!!

ವನ್ನಾಕ್ರೈ ಕುತಂತ್ರಾಂಶ ಮೂಲಕ ಕಂಪ್ಯೂಟರ್‌ಗಳಲ್ಲಿನ ದತ್ತಾಂಶಗಳನ್ನು ಸಂಕೇತಾಕ್ಷರಗಳಾಗಿ ಹ್ಯಾಕರ್‌ಗಳು ಮಾರ್ಪಡಿಸಿದ್ದಾರೆ. ಇದನ್ನು ಸರಿಪಡಿಸಲು, ಪ್ರತಿ ಕಂಪ್ಯೂಟರ್‌ಗೆ 300 ಅಮೆರಿಕ ಡಾಲರ್ (ಸುಮಾರು ₹ 19,252) ಪಾವತಿಸಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.!!

ಇದರಿಂದಾಗಿ ದಾಳಿಗೆ ಒಳಗಾಗಿರುವ ಯಾವುದೇ ಕಂಪ್ಯೂಟರ್‌ಗಳಲ್ಲಿನ ಕಡತಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ. ಹಾಗಾದರೆ, ಹ್ಯಾಕರ್‌ಗಳು ಮಾಡಿರುವ ದುಸ್ಯಾಹಸವೇನು? ಇದಕ್ಕೆ ಕಂಪ್ಯೂಟರ್ ತಜ್ಞರು ಏನು ಹೇಳಿದ್ದಾರೆ.? ಪರಿಹಾರ ಸಾಧ್ಯವಿದೆಯೇ? ಎಂಬ ಪ್ರಶ್ನೆಗಳಿಗೆ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಇತಿಹಾಸಹ ಬುದೊಡ್ಡ ಹ್ಯಾಕ್ ಇದು!!

ಇತಿಹಾಸಹ ಬುದೊಡ್ಡ ಹ್ಯಾಕ್ ಇದು!!

ನಂಬಿದರೆ ನಂಬಿ ಬಿಟ್ಟರೆ ಬಿಡಿ ಮೂರನೆ ಮಹಾಯುದ್ದ ನಡೆದಿದ್ದರೂ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲವೇನೊ.! ಆದರೆ, ಹ್ಯಾಕರ್‌ಗಳು ಮಾಡಿರುವ ಕಾರ್ಯದಿಂದಾಗಿ ಹ್ಯಾಕ್‌ಗೆ ಗುರಿಯಾಗಿರುವ ಬಹುತೇಕ ಎಲ್ಲಾ ರಾಷ್ಟ್ರಗಳು ಬಹು ಸಮಸ್ಯೆಯನ್ನು ಎದುರಿಸುತ್ತಿವೆ.!! ಈ ಹ್ಯಾಕ್‌ನಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬುದೇ ಎಲ್ಲಾ ದೇಶಗಳಿಗೂ ಚಿಂತೆಯಾಗಿದೆ.!!

ಹ್ಯಾಕ್ ಮಾಡಿದವರ ಸುಳಿವು ಸಿಗೊದಿಲ್ಲ.!

ಹ್ಯಾಕ್ ಮಾಡಿದವರ ಸುಳಿವು ಸಿಗೊದಿಲ್ಲ.!

ಹೌದು, ಈ ಹ್ಯಾಕ್ ಮಾಡಿರುವ ಹ್ಯಾಕರ್‌ಗಳ ಒಂದು ಸಣ್ಣ ಸುಳಿವು ಸಹ ಯಾವ ದೇಶಗಳಿಗೆ ಸಿಗೊದಿಲ್ಲ ಎನ್ನಲಾಗಿದೆ.!! ಅತ್ಯಾಧುನಿಕ ಕುತಂತ್ರಾಂಶ ಇದಾಗಿದ್ದು, ಹ್ಯಾಕರ್‌ಗಳನ್ನು ಕಂಡುಹಿಡಿಯಲು ಸಾಧ್ಯವೇ ಇಲ್ಲ ಎನ್ನಲಾಗಿದೆ. ಇನ್ನು ಬಿಟ್‌ಕಾಯಿನ್ ಮೂಲಕ ಹಣಸಲ್ಲಿಕೆಗೆಹ್ಯಾಕರ್‌ಗಳು ಹೇಳಿದ್ದಾರೆ.

ಅವರಿಗೆ ಹಣ ಪಾವತಿಯಾಗುತ್ತೆ.!!

ಅವರಿಗೆ ಹಣ ಪಾವತಿಯಾಗುತ್ತೆ.!!

ಬಿಟ್‌ಕಾಯಿನ್ ಮೂಲಕ ಹಣಸಲ್ಲಿಕೆಗೆ ಹ್ಯಾಕರ್‌ಗಳು ಹೇಳಿದ್ದು, ಇದೊಂದು ಡಿಜಿಟಲ್ ರೂಪದ ಹಣವಾಗಿದೆ. ಆದ್ದರಿಂದ ಅತ್ಯಂತ ಸರಕ್ಷಿತ ರೂಪದಲ್ಲಿ ಅವರಿಗೆ ಹಣ ಕೈಸೇರಲಿದೆ. ಪ್ರಮುಖ ಫೈಲ್‌‌ಗಳನ್ನು ಉಳಿಸಿಕೊಳ್ಳುವ ಸಲುವಾಗಿ ಹಣ ನೀಡಲು ಹಲವು ಸಂಸ್ಥೆಗಳು ಮುಂದಾಗಿವೆ ಎಂದು ಹೇಳಲಾಗಿದೆ.!!

ತಕ್ಷಣದ ಬೆದರಿಕೆ ಹಾಕಿದ್ದಾರೆ.

ತಕ್ಷಣದ ಬೆದರಿಕೆ ಹಾಕಿದ್ದಾರೆ.

ಹ್ಯಾಕ್ ಆದ 3 ದಿನಗಳೊಳಗೆ ಹಣ ಪಾವತಿಸದಿದ್ದರೆ, ದುಪ್ಪಟ್ಟು ಹಣ ನೀಡಬೇಕಾಗುತ್ತದೆ ಎಂದು ಹ್ಯಾಕರ್‌ಗಳು ಬೆದರಿಕೆ ಹಾಕಿದ್ದಾರೆ. ಆರು ದಿನಗಳಲ್ಲಿ ಹಣ ಕೊಡದಿದ್ದರೆ, ಎಲ್ಲಾ ದತ್ತಾಂಶಗಳನ್ನು ಅಳಿಸಿ ಹಾಕುತ್ತೇವೆ' ಎಂದು ಹೇಳಿದ್ದಾರೆ.!!

Best Mobiles in India

English summary
The malicious "ransomware" attacks that seized computers worldwide Friday.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X