Computex 2024: Asus ಕಂಪನಿಯಿಂದ ಹೊಸ ಗೇಮಿಂಗ್ ಲ್ಯಾಪ್‌ಟಾಪ್ ಬಿಡುಗಡೆ: ಬೆಲೆ, ಫೀಚರ್ ಬಗ್ಗೆ ತಿಳಿಯಿರಿ
ಆಸುಸ್ (ASUS) ಕಂಪನಿಯ ಲ್ಯಾಪ್‌ಟಾಪ್‌ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಭರ್ಜರಿ ಡಿಮ್ಯಾಂಡ್ ಇದೆ. ವಿಭಿನ್ನ ಶೈಲಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಾ ಬಂದಿರುವ Asus ಕಂಪನಿ, ಇದೀಗ ಹೊಸ ಉನ್ನತ ಮಟ್ಟದ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸಿದೆ. TUF ಗೇಮಿಂಗ್, ಝೆನ್‌ಬುಕ್ (Zenbook) ಮತ್ತು ಪ್ರೊಆರ್ಟ್ (ProArt) ಸರಣಿಯ ಲ್ಯಾಪ್‌ಟಾಪ್‌ಗಳನ್ನು Asus ಕಂಪನಿ ಲಾಂಚ್ ಮಾಡಿದೆ. ಹಾಗಾದ್ರೆ, ಈ ಲ್ಯಾಪ್‌ಟಾಪ್ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ? ಬೆಲೆ ಎಷ್ಟು? ಎನ್ನುವುದನ್ನು ನಾವಿಂದು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ.
ಹೌದು, ಇತ್ತೀಚಿನ ಆವೃತ್ತಿಯ Asus ಕಂಪನಿಯ ASUS TUF ಗೇಮಿಂಗ್ ಸರಣಿ ಮತ್ತು ಪ್ರೋಆರ್ಟ್ ಸರಣಿಯ ಲ್ಯಾಪ್‌ಟಾಪ್ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಈ ಲ್ಯಾಪ್‌ಟಾಪ್ AMDಯ ಇತ್ತೀಚಿನ AI 300 ಸರಣಿಯ ಪ್ರೊಸೆಸರ್ ಹೊಂದಿದ್ದು, AI 300 ಸರಣಿಯ ಫೀಚರ್ಸ್‌ಗಳನ್ನು ಒಳಗೊಂಡಿದೆ. Asus Zenbook S 16, ProArt P16, ಮತ್ತು PX13 ಲ್ಯಾಪ್‌ಟಾಪ್ ಈಗ Asusನ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂಗಡ ಬುಕ್ಕಿಂಗ್‌ಗೆ ಲಭ್ಯವಿದೆ.

ಮುಖ್ಯಾಂಶಗಳು
- Asus ತನ್ನ ಇತ್ತೀಚಿನ ಆವೃತ್ತಿಯ ASUS TUF ಗೇಮಿಂಗ್ ಸರಣಿ ಮತ್ತು ಪ್ರೋಆರ್ಟ್ ಸರಣಿಯ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ.
- ಹೊಸ TUF ಗೇಮಿಂಗ್ ಸರಣಿಯು AMDಯ ಇತ್ತೀಚಿನ AI 300 ಸರಣಿಯ ಪ್ರೊಸೆಸರ್ ಅನ್ನು ಹೊಂದಿದೆ.
- ಝೆನ್‌ಬುಕ್, ವಿವೊಬುಕ್ S ಮತ್ತು ಪ್ರೊ ಸರಣಿಯ ಲ್ಯಾಪ್‌ಟಾಪ್‌ಗಳು, AMDಯ ಇತ್ತೀಚಿನ 300 ಸರಣಿಯ ಪ್ರೊಸೆಸರ್‌ಗಳನ್ನು ಹೊಂದಿವೆ.
ASUS 2024 ಲ್ಯಾಪ್‌ಟಾಪ್ ಬೆಲೆ ಎಷ್ಟು?
Asus Zenbook S 16, ProArt P16, ಮತ್ತು PX13 ಈಗ Asusನ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂಗಡ ಬುಕ್ಕಿಂಗ್ ಲಭ್ಯವಿದೆ. Zenbook S 16 ಬೆಲೆ 1,16,680 (USD 1,399) ರೂ.ನಿಂದ ಪ್ರಾರಂಭವಾಗುತ್ತದೆ. ProArt PX13 ಕನ್ವರ್ಟಿಬಲ್ 1,41,699 (USD 1,699) ರೂ.ನಿಂದ ಪ್ರಾರಂಭವಾಗುತ್ತದೆ. ಇನ್ನೂ ProArt P16 ಕ್ಲಾಮ್‌ಶೆಲ್ ಲ್ಯಾಪ್‌ಟಾಪ್ 1,58,380 (USD 1,899) ರೂ.ನಲ್ಲಿ ಪ್ರಾರಂಭವಾಗುತ್ತದೆ. TUF ಗೇಮಿಂಗ್ ಸರಣಿಯ ಲ್ಯಾಪ್‌ಟಾಪ್ ಬೆಲೆ ಇನ್ನೂ ಲಭ್ಯವಾಗಿಲ್ಲ.
Asus TUF ಗೇಮಿಂಗ್ ಲ್ಯಾಪ್‌ಟಾಪ್ ಫೀಚರ್‌ಗಳೇನು?
Asus TUF ಗೇಮಿಂಗ್ ಸರಣಿಯ ಲ್ಯಾಪ್‌ಟಾಪ್‌ಗಳು A14 ಮತ್ತು A16 ರೂಪಾಂತರಗಳನ್ನು ಒಳಗೊಂಡಿವೆ. TUF ಗೇಮಿಂಗ್ A14 14-ಇಂಚಿನ 2.5K IPS ಡಿಸ್ಪ್ಲೇ ಜೊತೆಗೆ 2560×1600p ರೆಸಲ್ಯೂಶನ್, 165Hz ರಿಫ್ರೆಶ್ ದರ ಹೊಂದಿವೆ. 400nits ಗರಿಷ್ಠ ಬ್ರೈಟ್‌ನೆಸ್ ಮತ್ತು NVIDIA G-Sync ಬೆಂಬಲವನ್ನು ಒಳಗೊಂಡಿದೆ. ಇತ್ತೀಚಿನ AMD Ryzen AI HX 370 ಪ್ರೊಸೆಸರ್ ಈ ಲ್ಯಾಪ್‌ಟಾಪ್ ಅನ್ನು ಪವರ್ ಮಾಡುತ್ತದೆ.
TUF ಗೇಮಿಂಗ್ A16 ಬದಲಿಗೆ 16 ಇಂಚಿನ ಡಿಸ್ಪ್ಲೇ ಜೊತೆಗೆ ಸೇಮ್ ಫೀಚರ್‌ಗಳನ್ನು ಹೊಂದಿದೆ. ಇದು NVIDIA GeForce RTX 4060 ಲ್ಯಾಪ್‌ಟಾಪ್ GPU ಜೊತೆಗೆ 100W ಗರಿಷ್ಠ TGP, 32GB ವರೆಗಿನ ಡ್ಯುಯಲ್-ಚಾನೆಲ್ LPDDR5X 7500MHz RAM ಮತ್ತು 2TB ವರೆಗಿನ ಸ್ಟೋರೇಜ್‌ನ ಎರಡು M.2 2280 SSD ಸ್ಲಾಟ್ ಲಭ್ಯವಿದೆ. ಇತರ ಫೀಚರ್‌ಗಳು TUF ಗೇಮಿಂಗ್ A14ಗೆ ಸ್ಥಿರವಾಗಿರುತ್ತವೆ.

ASUS Zenbook S 16ನಲ್ಲಿ ಏನೆಲ್ಲಾ ಫೀಚರ್‌ಗಳಿವೆ?
Asus Zenbook S 16 3K ರೆಸಲ್ಯೂಶನ್, 120Hz ರಿಫ್ರೆಶ್ ದರ, 400nits ಗರಿಷ್ಠ ಬ್ರೈಟ್‌ನೆಸ್ ಮತ್ತು ಶೇಕಡಾ 90 ರಷ್ಟು ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ 16-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಟಚ್‌ಸ್ಕ್ರೀನ್ ರೂಪಾಂತರವೂ ಲಭ್ಯವಿದೆ. ಲ್ಯಾಪ್‌ಟಾಪ್ AMD Ryzen AI 9 HX 370 ಪ್ರೊಸೆಸರ್ ಅನ್ನು ಹೊಂದಿದ್ದು, 32GB ವರೆಗಿನ LPDDR5X RAM ಮತ್ತು 2TB ವರೆಗಿನ PCIe Gen 4 SSD ಯೊಂದಿಗೆ ಲಭ್ಯವಾಗಲಿದೆ.
ASUS ProArtನ ವೈಶಿಷ್ಟ್ಯಗಳು ಹೀಗಿವೆ
Asus ProArt ಸರಣಿಯ ಲ್ಯಾಪ್‌ಟಾಪ್‌ಗಳನ್ನು ಕ್ರಿಯೇಟರ್ಸ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಸರಣಿಯು ProArt PX13 ಮತ್ತು ProArt P16 ಮಾದರಿಗಳನ್ನು ಒಳಗೊಂಡಿದೆ. ಲ್ಯಾಪ್‌ಟಾಪ್ AMDಯ Ryzen 9 AI HX 370 ಪ್ರೊಸೆಸರ್ ಹೊಂದಿದೆ. 64GB RAM, 4TB ವರೆಗೆ PCIe Gen4 SSD ಸ್ಟೋರೇಜ್ ಹೊಂದಿದೆ. ಟಾಪ್-ಎಂಡ್ ProArt P16 16 ಇಂಚಿನ 4K OLED ಡಿಸ್ಪ್ಲೇ ಜೊತೆಗೆ 16:10, 500nits ಗರಿಷ್ಠ ಬ್ರೈಟ್‌ನೆಸ್, 60Hz ರಿಫ್ರೆಶ್ ದರ ಹೊಂದಿದೆ.


Click it and Unblock the Notifications