ಒಂದು ಉತ್ತಮ ಬ್ಲೂಟೂತ್‌ ಸ್ಪೀಕರ್‌ ಖರೀದಿಸುವಾಗ ಈ ಸಂಗತಿಗಳನ್ನು ಗಮನಿಸಿ!

|

ಪ್ರಸ್ತುತ ಟೆಕ್‌ ಮಾರುಕಟ್ಟೆಯಲ್ಲಿ ಬ್ಲೂಟೂತ್‌ ಸ್ಪೀಕರ್‌ಗಳು ಸಿಕ್ಕಾಪ್ಟಟೆ ಟ್ರೆಂಡ್‌ ಹುಟ್ಟುಹಾಕಿವೆ. ಬಳಕೆದಾರರು ಇವುಗಳ ಸೌಂಡ್‌ ಕ್ವಾಲಿಟಿ ಮತ್ತು ಡಿಸೈನ್‌ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ.ಇಂದಿನ ಬಹುತೇಕ ಸ್ಪೀಕರ್ಸ್‌ಗಳು ಕೈಯಲ್ಲಿ ಹಿಡಿದುಕೊಂಡು ಹೋಗುವ ಚಿಕ್ಕ ಗಾತ್ರದ ಡಿಸೈನ್ ಪಡೆದಿವೆ. ಹೀಗಾಗಿ ಮ್ಯೂಸಿಕ್ ಪ್ರಿಯರು ಜೊತೆಗೊಂದು ಬ್ಲೂಟೂತ್ ಸ್ಪೀಕರ್ ಇರಲಿ ಎಂದು ಬಯಸುತ್ತಾರೆ.

ಬ್ಲೂಟೂತ್‌

ಹೌದು, ಮಾರುಕಟ್ಟೆಯಲ್ಲಿ ಭಿನ್ನ ಮಾದರಿಯ ಬ್ಲೂಟೂತ್‌ ಸ್ಪೀಕರ್ಸ್‌ಗಳು ಲಭ್ಯವಿದ್ದು, ಬೆಲೆಯಲ್ಲಿಯೂ ಸಹ ವಿವಿಧ ಶ್ರೇಣಿಗಳಿವೆ. ಬಹಳಷ್ಟು ಮಾದರಿಗಳು ವಾಟರ್‌ಪ್ರೊಫ್ ಸೇರಿದಂತೆ ಹಲವು ನೂತನ ಕನೆಕ್ಟಿವಿಟಿ ಫೀಚರ್ಸ್‌ಗಳನ್ನು ಹೊಂದಿವೆ. ಏನೇ ಇದ್ದರೂ ಬಳಕೆದಾರರು ಸ್ಪೀಕರ್‌ ಖರೀದಿಸುವಾಗ ಅವರ ಅನಕೂಲಕ್ಕೆ ಅನುಗುಣವಾಗಿ ಮತ್ತು ಉತ್ತಮ ಗುಣಮಟ್ಟದ ಡಿವೈಸ್‌ಗಳನ್ನು ಆಯ್ದುಕೊಳ್ಳಲು ಬಯಸುತ್ತಾರೆ. ಹಾಗಾದರೇ ಬ್ಲೂಟೂತ್‌ ಸ್ಪೀಕರ್‌ ಖರೀದಿಸುವಾಗ ಗಮನಿಸಬೇಕಾದ ಕೆಲವು ಅಂಶಗಳು ಯಾವುವು ಎಂಬುದನ್ನು ಮುಂದೆ ನೋಡೋಣ.

ಬ್ಲೂಟೂತ್‌ ಮಾದರಿ ಯಾವುದು

ಬ್ಲೂಟೂತ್‌ ಮಾದರಿ ಯಾವುದು

ಬ್ಲೂಟೂತ್‌ ಸ್ಪೀಕರ್ಸ್‌ಗಳು ಬ್ಲೂಟೂತ್‌ ಕನೆಕ್ಟಿವಿಟಿಯಿಂದಲೇ ಕಾರ್ಯನಿರ್ವಹಿಸುತ್ತವೆ. ಆದರೆ ಬ್ಲೂಟೂತ್‌ ಹಲವು ವರ್ಷನ್‌ಗಳನ್ನು ಹೊಂದಿದ್ದು, ಇತ್ತೀಚಿನ್ ವರ್ಷನ ಉತ್ತಮ ಕನೆಕ್ಟಿವಿಟಿ ಸೌಲಭ್ಯವನ್ನು ಮತ್ತು ಹೆಚ್ಚಿನ ವ್ಯಾಪ್ತಿಯಲ್ಲಿ ಸೇವೆ ನೀಡುತ್ತದೆ. ಸದ್ಯ ಬ್ಲೂಟೂತ್‌ 5 ಚಾಲ್ತಿ ಇರುವ ವರ್ಷನ್ ಆಗಿದೆ.

ಕನೆಕ್ಟಿವಿಟಿ ಆಯ್ಕೆಗಳು ಯಾವುವು

ಕನೆಕ್ಟಿವಿಟಿ ಆಯ್ಕೆಗಳು ಯಾವುವು

ನೀವು ಖರೀದಿಸುವ ಸ್ಪೀಕರ್‌ ಬ್ಲೂಟೂತ್‌ ಮಾದರಿಯದ್ದೆ ಸರಿ ಆದರೆ ಬ್ಲೂಟೂತ್‌ ಕನೆಕ್ಟಿವಿಟಿ ಜೊತೆಗೆ ಇತರೆ ಕನೆಕ್ಟಿವಿಟಿ ಆಯ್ಕೆಗಳಿವೆಯೇ ಎಂಬುದನ್ನು ಗಮನಿಸಿ. ಕೇಲವೊಮ್ಮೆ ಕೇಬಲ್‌ ಮೂಲಕ ಕನೆಕ್ಟ್‌ ಮಾಡುವ ಸಂದರ್ಭಗಳು ಎದುರಾಗಬಹುದ ಹೀಗಾಗಿ auxiliary ಕನೆಕ್ಟರ್‌ ಲಭ್ಯವಿದ್ದರೆ ಉತ್ತಮ.

ಫ್ರಿಕ್ವೆನ್ಸಿ ರೇಂಜ್ ಏನು

ಫ್ರಿಕ್ವೆನ್ಸಿ ರೇಂಜ್ ಏನು

ಬ್ಲೂಟೂತ್‌ ಸ್ಪೀಕರ್ಸ್‌ ತರಗಾಂತರಗಳ ಅಳತೆಯನ್ನು ಹರ್ಡ್ಜ್‌ನಲ್ಲಿ ಹೇಳುತ್ತಾರೆ ಸಾಮಾನ್ಯವಾಗಿ 100Hz - 20,000Hz ಅಂತರದಲ್ಲಿ ತರಗಾಂತರಗಳು ಇರುತ್ತದೆ. ಹೆಚ್ಚಿನ ಅಂತರದ ತರಗಾಂತರಗಳು ಕೇಳಲು ಅಷ್ಟಾಗಿ ಉತ್ತಮ ಎನಿಸುವುದಿಲ್ಲ. ಹೀಗಾಗಿ ನೀವು ಖರೀದಿಸುವ ಬ್ಲೂಟೂತ್‌ ಸ್ಪೀಕರ್‌ ಸಂಗೀತ ಸ್ಪಷ್ಟವಾಗಿ ಕೇಳುವಂತಿರುವ ತರಗಾಂತರದ ಅಂತರದಲ್ಲಿರಲಿ.

ಆಡಿಯೊ ಡ್ರೈವರ್ ಸಾಮರ್ಥ್ಯ ಎಷ್ಟು

ಆಡಿಯೊ ಡ್ರೈವರ್ ಸಾಮರ್ಥ್ಯ ಎಷ್ಟು

ಸ್ಪೀಕರ್ಸ್‌ಗಳಲ್ಲಿ ಸೌಂಡ್‌ ಹೊರಹಾಕಲು ಆಡಿಯೊ ಡ್ರೈವರ್‌ಗಳು ಕಾರ್ಯನಿರ್ವಹಿಸುತ್ತವೆ. ಬಹುತೇಕ ಪೋರ್ಟೆಬಲ್ ಮಾದರಿಯ ಸ್ಪೀಕರ್ಸ್‌ಗಳ ಡ್ರೈವರ್ಸ್‌ಗಳು 40mm ಸಾಮರ್ಥ್ಯದಲ್ಲಿ ಕಂಡುಬರುತ್ತವೆ. ಹಾಗೆಯೇ ಬ್ಲೂಟೂತ್‌ ಸ್ಪೀಕರ್ಸ್‌ ಖರೀದಿಸುವಾಗ ಆಡಿಯೊ ಡ್ರೈವರ್ಸ್‌ಗಳ ಬಗ್ಗೆ ಗಮನನೀಡಿ.

ಹೊಸ ಫೀಚರ್ಸ್‌ಗಳು ಏನಿದೆ

ಹೊಸ ಫೀಚರ್ಸ್‌ಗಳು ಏನಿದೆ

ಬಹುತೇಕ ಆಡಿಯೊ ಕಂಪನಿಗಳು ತಮ್ಮ ಬ್ಲೂಟೂತ್‌ ಸ್ಪೀಕರ್‌ ಉತ್ಪನ್ನಗಳ ಜಾಹಿರಾತು ನೀಡಿರುತ್ತವೆ. ಅವುಗಳಲ್ಲಿ ಆ ಉತ್ಪನ್ನದ ವಿಶೇಷ ಫೀಚರ್ಸ್‌ಗಳು ಮತ್ತು ಆಯ್ಕೆಗಳ ಕುರಿತು ಮಾಹಿತಿ ನೀಡಿರುತ್ತಾರೆ. ಖರೀದಿಸುವ ಸಮಯದಲ್ಲಿ ಬ್ಲೂಟೂತ್‌ ಸ್ಪೀಕರ್‌ನಲ್ಲಿ ನೀಡುರುವ ಫೀಚರ್ಸ್‌ಗಳ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ ಮತ್ತು ಅದರ ವಿಶೇಷತೆಯೆನು ಎಂಬುದನ್ನು ಅರಿಯಿರಿ.

Most Read Articles
Best Mobiles in India

English summary
Consider these things when buying a good Bluetooth speaker.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X