ವಿವಾದಾತ್ಮಕ ಕಾರ್ಟೂನ್ NCERT ವೆಬ್ಸೈಟಿನಲ್ಲಿವೆ!

By Varun
|
ವಿವಾದಾತ್ಮಕ ಕಾರ್ಟೂನ್ NCERT ವೆಬ್ಸೈಟಿನಲ್ಲಿವೆ!

ಸಂವಿಧಾನ ಶಿಲ್ಪಿ ಡಾ|| ಅಂಬೇಡ್ಕರ್ ಹಾಗು ನೆಹರೂರವರ ಅವರ ವಿವಾದಾತ್ಮಕ ಕಾರ್ಟೂನುಗಳು ಶಾಲಾ ಮಕ್ಕಳ ಪಠ್ಯಪುಸ್ತಕದಲ್ಲಿ ಪ್ರಕಟಗೊಂಡು, ಪಾರ್ಲಿಮೆಂಟಿನಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಕೇಂದ್ರ ಸರಕಾರವೂ ಕೂಡಲೇ ಆ ವಿವಾದಾತ್ಮಕ ಕಾರ್ಟೂನುಗಳ ಪಠ್ಯಪುಸ್ತಕವನ್ನು ಹಿಂಪಡೆಯುತ್ತೇವೆ ಎಂದು ಭರವಸೆ ನೀಡಿದ ಮೇಲೆಯೇ ಗಲಾಟೆ ಕಮ್ಮಿಯಾಗಿದ್ದು.

ಪಾಠದ ಪುಸ್ತಕಗಳನ್ನೇನೋ ಸರಕಾರ ಈಗಾಗಲೇ ವಾಪಸ್ಸು ಪಡೆಯುವ ಕೆಲಸ ಶುರು ಮಾಡಿರಬಹುದು. ಆದರೆ NCERT ನ ವೆಬ್ಸೈಟಿನಲ್ಲಿ ಈ ಪಠ್ಯ ಇ-ಪುಸ್ತಕಗಳು ಉಚಿತವಾಗಿ ಡೌನ್ಲೋಡ್ ಮಾಡಬಹುದಾಗಿದ್ದು ಇದನ್ನು ತೆಗೆಯುವ ಕೆಲಸವನ್ನು ಇನ್ನೂ ಮಾಡಿಲ್ಲ.

9ನೆ ತರಗತಿಯ ಪೊಲಿಟಿಕಲ್ ಸೈನ್ಸ್ ನ "ಭಾರತದ ಸಂವಿಧಾನ" ಎಂಬ ಅಧ್ಯಾಯದ ಅಡಿಯಲ್ಲಿ ಬರುವ ಈ ಕಾರ್ಟೂನುಗಳು ಇನ್ನೂ ಹಾಗೆ ಇವೆ. ಕೇವಲ ಪಠ್ಯಪುಸ್ತಕವನ್ನು ಮಾತ್ರ ಹಿಂಪಡೆದರೆ, ಲಕ್ಷಾಂತರ ಮಂದಿ ನೋಡಬಹುದಾದ NCERT ವೆಬ್ಸೈಟಿನಿಂದ ಇದನ್ನು ತೆಗೆಯಲು ಸರಕಾರ ಇನ್ನೂ ಕ್ರಮ ಕೈಗೊಂಡಿಲ್ಲ. (ಈ ವರದಿ ಬರೆಯುವ ಹೊತ್ತಿಗೆ).

ಇಲ್ಲಸಲ್ಲದ ವಿವಾದವನ್ನು ಸೃಷ್ಟಿಸುವ ಈ ರೀತಿಯ ಕಾರ್ಟೂನುಗಳು ಓದುವ ಮಕ್ಕಳಿಗೆ ಯಾಕಪ್ಪಾ ಬೇಕು. ಮೊದಲೇ ತಿರುಚಿದ ಇತಿಹಾಸವನ್ನು ಓದುತ್ತಿರುವ ನಾವು ಮತ್ತಷ್ಟು ಜಾತಿ ರಾಜಕಾರಣ, ಕೋಮು ವೈಷಮ್ಯ, ದ್ವೇಷಭಾವನೆ ಬೆಳೆಸುವ ಈ ರೀತಿಯ ಪಠ್ಯವನ್ನು ಆನ್ಲೈನಿನಿಂದ ತೆಗೆದರೆ ತುಂಬಾ ಉಪಯೋಗವಾದೀತು ಎಂಬುದು ನಮ್ಮ ಅಭಿಪ್ರಾಯ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X