ನಾಳೆ ಬದಲಾಯಿಸುವ ಊಹಿಸಿಕೊಳ್ಳಲು ಅಸಾಧ್ಯವಾದ ಭವಿಷ್ಯದ ತಂತ್ರಜ್ಞಾನ ..!
ಇಂದು ಮಾರುಕಟ್ಟೆಯಲ್ಲಿ ನಾವು ಕಾಣುತ್ತಿರುವ ಸಾಮಾನ್ಯ ತಂತ್ರಜ್ಞಾನಗಳು ಅಚ್ಚರಿಯನ್ನು ಮೂಡಿಸುತ್ತವೆ. ಇದೇ ಮಾದರಿಯಲ್ಲಿ ನಮಗೆ ಕಾಣದ ಇನ್ನಷ್ಟು ತಂತ್ರಜ್ಞಾನಗಳು ಭವಿಷ್ಯದಲ್ಲಿ ಹೇಗೆ ನಮ್ಮ ಜೀವನವು ಇರಲಿದೆ ಎಂಬುದನ್ನು ತಿಳಿಸುತ್ತವೆ, ಈ ಹಿನ್ನಲೆಯಲ್ಲಿ ಭವಿಷ್ಯದಲ್ಲಿ ನಾವು ಯಾವ ಮಾದರಿಯ ತಂತ್ರಜ್ಞಾನವನ್ನು ಬಳಕೆ ಮಾಡುತ್ತವೆ ಎನ್ನುವುದನ್ನು ತಿಳಿಸುವ ಪ್ರಯತ್ನವಾಗಿದೆ.

ಈಗಾಗಲೇ ಈ ತಂತ್ರಜ್ಞಾನಗಳು ಬಳಕೆಯಲ್ಲವೇ, ಆದರೆ ಅವುಗಳು ಸಾಮಾನ್ಯರಿಗೆ ಸುಲಭವಾಗಿ ದೊರೆಯುತ್ತಿಲ್ಲ. ಮುಂದಿನ ದಿನದಲ್ಲಿ ಇವೆಲ್ಲವು ನಮ್ಮೊಂದಿಗೆ ಇರಲಿದ್ದು, ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಜೀವವನ್ನು ಸುಲಭವಾಗಿಸುತ್ತದೆ. ಅಲ್ಲದೇ ಇದರಿಂದಾಗಿ ಇನ್ನಷ್ಟು ದೊಡ್ಡ ಮಟ್ಟದ ಆವಿಷ್ಕಾರ ಗಳಿಗೆ ಸ್ಪೂರ್ತಿಯೂ ದೊರೆಯಲಿದೆ.

ಪೋರ್ಟಬಲ್ ಟೋಸ್ಟರ್:
ಟೋಸ್ಟ ಮಾಡುವುದು ಇನ್ನಷ್ಟ ಸುಲಭವಾಗಲಿದೆ, ಸುಮ್ಮನೆ ಬ್ರಡ್ ಮೇಲ್ ಆಡಿಸಿದರೆ ಸಾಕು ಅಲ್ಲಿಯೇ ಟೋಸ್ಟ್ ಸಿದ್ದ

ಕೆಟಲ್:
ನಿಮಗೆ ಬೇಕಾದಷ್ಟು ಮಟ್ಟದಲ್ಲಿ ನೀರನ್ನು ಬಿಸಿ ಮಾಡಿಕೊಡಲಿರುವ ಭವಿಷ್ಯದ ಕೆಟಲ್ ಇದಾಗಲಿದೆ. ಇಟ್ಟರೇ ಸಾಕು ಬಿಸಿ ಮಾಡಿಕೊಡಲಿದೆ.

ಎಲೆಕ್ಟ್ರಾನಿಕ್ ಸೆನ್ಸಾರ್ ಪೆನ್:
ನೀವು ಎನ್ನಾದರು ಡಿಜಿಟಲ್ ಆಗಿ ಬರೆಯಬೇಕಾದರೆ ಪ್ಯಾಡ್ ಬೇಕಾಗಿಲ್ಲ. ಈ ಪೆನ್ ಇದ್ದರೆ ಸಾಕು ನೆಲದ ಮೇಲೆ ಬರೆದರು ಅದು ಸ್ಕ್ರಿನ್ ನಲ್ಲಿ ಕಾಣಿಕೊಳ್ಳಲಿದೆ.

ಸೆಲ್ ಫೋನ್:
ಹೊರಗಿನ ವೆದರ್ ಹೇಗಿದೆ ಎಂದುದನ್ನು ತೋರಿಸುವ ಟ್ರಾನ್ಸ್ ಪರೆಂಟ್ ಮೊಬೈಲ್‌ಗಳು ಶೀಘ್ರವೇ ಮಾರುಕಟ್ಟೆಗೆ ಕಾಲಿಡಲಿವೆ.

ಪೋರ್ಟಬಲ್ ಕಾಪಿ-ಪೇಸ್ಟ್
ಇನ್ನು ಎಲ್ಲಿ ಬೇಕಾದರು ಫೋಟೋಗಳನ್ನು ಕಾಪಿ ಮಾಡಿಕೊಂಡು, ಎಲ್ಲಿ ಬೇಕಾದರು ಪೇಸ್ಟ್ ಮಾಡುವ ಡಿವೈಸ್ ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಫ್ಲೇಕ್ಸಿಬಲ್ ಫೋನ್:
ಕೈನಲ್ಲಿ ಹಿಡಿದು ಪೇಪರ್ ಮಾದರಿಯಲ್ಲಿ ಮುದುರ ಬಹುದಾದ ಸ್ಮಾರ್ಟ್‌ಫೋನ್ ಶೀಘ್ರವೇ ಮಾರುಕಟ್ಟೆಯಲ್ಲಿ ಬರಲಿದೆ.

ಫುಡ್ ಸ್ಕ್ಯಾನರ್:
ಯಾವುದೇ ಫುಡ್ ಅನ್ನು ಸ್ನ್ಕಾನ್ ಮಾಡಿದರೆ ಅದರಲ್ಲಿ ಯಾವ ಅಂಶಗಳು ಇದೇ ಎಂಬುದನ್ನು ನಿಖರವಾಗಿ ತೋರಿಸುವ ಸಾಧನಗಳು ಮಾರುಕಟ್ಟೆಗೆ ಬರಲಿವೆ.

ಸೆಲ್‌ಫೋನ್ ವಿಥ್ ಬ್ಲೂಟೂತ್ ಹೆಡ್ ಸೆಟ್:
ನೀವು ಕೈನಲ್ಲಿ ಹಿಡಿದು ಬಳಕೆ ಮಾಡುವ ಸ್ಮಾರ್ಟ್‌ಫೋನ್ ಮಾದರಿಯಲ್ಲಿ ಫೋನ್ ಅನ್ನು ಬ್ಲೂಟೂತ್ ಡಿವೈಸ್ ಆಗಿ ಬಳಕೆ ಮಾಡಿಕೊಳ್ಳುವ ವಿನ್ಯಾಸವನ್ನು ಮಾಡಲಾಗಿದೆ.

ಆಕ್ವಾ ಥ್ರಡ್ ಮಿಲ್:
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವವರಿಗಾಗಿಯೇ ಆಕ್ವಾ ಥ್ರಡ್ ಮಿಲ್ ಅನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇದು ಹೊಸ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ.

ಸೋಲಾರ್ ಜಾರ್ಜರ್:
ನಿಮ್ಮ ಮನೆಯ ಕಿಟಕಿಗೆ ಚಿಕ್ಕದಾದ ಸೋಲರ್ ಪ್ಯಾನಲ್ ಅನ್ನು ಅಂಟಿಸಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡಿಕೊಳ್ಳುವ ಹೊಸ ಡಿವೈಸ್ ಕಾಣಿಸಿಕೊಳ್ಳಲಿದೆ.

ಶೂ ರಿಂಗ್:
ಇನ್ನು ಆಫೀಸ್‌ಗೆ ಹೋಗಲು ಈ ಮಾದರಿಯ ಎರಡು ಶೂ ರಿಂಗ್‌ಗಳು ಸಾಕು. ಇದು ನಿಮ್ಮನ್ನು ಸ್ಕೈಟಿಂಗ್ ಬೋರ್ಡ್ ಮಾದರಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲಿದೆ.

ವೈರ್ ಲೈಸ್ ಟ್ರಾನ್ಸ್‌ಲೇಟರ್:
ಹೆಡ್ ಫೋನ್ ಮಾದರಿಯಲ್ಲಿ ಕಾಣಿಸಿಕೊಳ್ಳುವ ವೈರ್ ಲೈಸ್ ಟ್ರಾನ್ಸ್ ಲೇಟರ್ ನಿಮ್ಮ ವಿದೇಶಿ ಪ್ರವಾಸವನ್ನು ಸುಗಮವಾಗಿಸಲಿದೆ.

ಸೈಡ್ ಮೊಬೈಲ್:
ಎರಡು ಡಿಸ್‌ಪ್ಲೇಯನ್ನು ಹೊಂದುವ ಮೂಲಕ ಸೈಡ್ ನಿಂದಲೇ ನೋಡಬಹುದಾದ ಮತ್ತು ಮಡಚಿ ಇಡಬಹುದಾದ ಸ್ಮಾರ್ಟ್ ಫೋನ್ ಶೀಘ್ರವೇ ದೊರೆಯಲಿದೆ.

ಬ್ಯಾಕ್ಟೀರಿಯಾ ಕಿಲ್ಲರ್:
ನಿಮ್ಮ ಅಡುಗೆ ಮನೆಯಲ್ಲಿ ಇರುವ ಹಾನಿಕಾರಕ ಬ್ಯಾಕ್ಟೀರಿಯಗಳನ್ನು ತೊಡೆದು ಹಾಕುವ ಹ್ಯಾಂಡ್ ಸ್ಕ್ಯಾನರ್‌ಗಳು ಶೀಘ್ರವೇ ಮಾರಾಟಕ್ಕೆ ದೊರೆಯಲಿವೆ.

ಸ್ಮಾರ್ಟ್ ಜಾಕೆಟ್:
ಈ ಜಾಕೆಟ್ ನಿಮಗೆ ಚಳಿಯಾದರೆ ಬಿಸಿ ಮಾಡುತ್ತದೆ, ಶೆಕೆ ಆದರೆ ತಂಪಾಗಿ ಇರಿಸುವ ತಂತ್ರಜ್ಞಾನವನ್ನು ಹೊಂದಿದೆ.

ತೇಲಾಡು ಬಲ್ಬ್:
ಇದಲ್ಲದೇ ಗಾಳಿಗೆ ತೇಲಾಡುವ ಬಲ್ಬ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಗಾಳಿಯಲ್ಲಿ ತೇಲಾಡುತ್ತಲೇ ಬೆಳಕು ನೀಡಲಿವೆ.


Click it and Unblock the Notifications