Home
ಸುದ್ದಿಜಾಲ

ಜಿಪಿಎಸ್ ಗ್ಯಾಜೆಟ್‌ಗಳನ್ನು ನೋಡಿದ್ದೀರಾ ?

By Ashwath

ನೀವು ಎಲ್ಲಿಗೆ ಹೋದರೂ, ನೀವೆಲ್ಲಿದ್ದೀರಿ ಎಂಬುದನ್ನು ತಿಳಿಸಿಕೊಡುವ ಹೋಗಬೇಕಾದ ಸ್ಥಳದ ಮಾಹಿತಿಯನ್ನು ತಿಳಿಸಿಕೊಡುವ ಸಾಧನ ಜಿಪಿಎಸ್‌. ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ ಅಥವಾ ಜಿಪಿಎಸ್‌ ಸದ್ಯ ಈಗ ಬರುತ್ತಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಬಿಲ್ಟ್‌ ಆಗಿ ಬರುತ್ತದೆ. ಸ್ಮಾರ್ಟ್‌ಫೋನ್‌ನಿಂದ ಜಿಪಿಎಸ್‌ ಆನ್‌ ಮಾಡಿಕೊಂಡು ಮ್ಯಾಪ್‌ ಆಪ್‌ಗೆ ಹೋಗಿ ಇರುವ ಸ್ಥಳ ಮತ್ತು ಹೋಗಬೇಕಾದ ಸ್ಥಳವನ್ನು ಟೈಪ್‌ ಮಾಡಿದ್ರೆ ಆ ಸ್ಥಳಕ್ಕೆ ಹೋಗಬೇಕಾದ ನಕ್ಷೆಯನ್ನು ಅಂಗೈಯಲ್ಲೇ ತೋರಿಸುತ್ತದೆ ಜಿಪಿಎಸ್‌.

ಅಮೆರಿಕ ತನ್ನ ಸೈನಿಕ ಬಳಕೆಗೆ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ ಇದಾಗಿದ್ದರೂ ಈಗ ವಿಶ್ವದ ನಾಗರಿಕರಿಗೆ ಉಚಿತ ಬಳಕೆ ಇದನ್ನು ನೀಡಲಾಗಿದೆ. ಸದ್ಯ ಈಗ ನಕ್ಷೆ ವೀಕ್ಷಿಸಲು ಹೆಚ್ಚು ಬಳಕೆಯಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಜಿಪಿಎಸ್‌ ಹೊಂದಿರುವ ಸಾಧನಗಳು ಬಳಕೆ ಹೆಚ್ಚಾಗಲಿದೆ. ಹೀಗಾಗಿ ಇಲ್ಲಿ ಕೆಲವು ಜಿಪಿಎಸ್‌ ತಂತ್ರಜ್ಞಾನವನ್ನು ಹೊಂದಿರುವ ಸಾಧನಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಜಿಪಿಎಸ್‌ ಸಾಧನಗಳು

ಝಿಲ್‌ ಅಪ್ಟಿಕ್ಸ್‌ (Zeal Optics )ಎನ್ನುವ ಕಂಪೆನಿಯೊಂದು ಹೊಸ ಜಿಪಿಎಸ್‌ ಕನ್ನಡಕವನ್ನು ಅಭಿವೃದ್ಧಿ ಪಡಿಸಿದೆ.ಈ ಸಾಧನವನ್ನು ಧರಿಸಿ ಓಡಿದ್ರೆ ನೀವು ಎಷ್ಟು ವೇಗದಲ್ಲಿ ಓಡಿದ್ದೀರಿ ಎಂಬುದನ್ನು ನಿಖರವಾಗಿ ತಿಳಿಸುತ್ತದೆ.

ಜಿಪಿಎಸ್‌ ಸಾಧನಗಳು

ಜಿಪಿಎಸ್‌ ಸಾಧನಗಳು

ಈಗ ಆಂಡ್ರಾಯ್ಡ್‌ ಸ್ಮಾರ್ಟ್‌‌ಫೋನ್‌,ಕಂಪ್ಯೂಟರ್‌ನಲ್ಲಿ ಆನ್‌ಲೈನ್‌ ಮೂಲಕ ನೋಡುವ ಗೂಗಲ್‌ ಮ್ಯಾಪ್‌ ಮುಂದೆ ಆಫ್‌ಲೈನ್‌ ಆಗಲಿದೆ. ಆಫ್‌ಲೈನ್‌ಲ್ಲಿ ಮ್ಯಾಪ್‌ ವೀಕ್ಷಿಸಲು ಅನುವಾಗುವಂತೆ ಈ ಮ್ಯಾಪ್‌ನ್ನು ಅಪ್‌ಡೆಟ್‌ ಮಾಡಲಾಗುವುದು ಎಂದು ಗೂಗಲ್‌ ಹೇಳಿದೆ.

ಜಿಪಿಎಸ್‌ ಸಾಧನಗಳು

contour ಎನ್ನುವ ಕಂಪೆನಿ ಹೊಸ ಕಾಮ್ಕೋರ್ಡರ್‌ನ್ನು ಅಭಿವದ್ಧಿ ಪಡಿಸಿದೆ. ಸೈಕಲ್ ಹೆಲ್ಮೆಟ್‌ಗೆ ಈ ಜಿಪಿಎಸ್‌ ತಂತ್ರಜ್ಞಾನ ಹೊಂದಿರುವ ಕ್ಯಾಮೆರಾವನ್ನು ಅಳವಡಿಸಿದ್ದಲ್ಲಿ ಸೈಕಲ್‌ ಹೋದ ದಾರಿಯನ್ನು ಸಂಪೂರ್ಣ ಸೆರೆಹಿಡಿಯುತ್ತದೆ.ನಂತರ ಇದನ್ನು ಮ್ಯಾಪ್‌ಗೆ ಜಿಯೋಟ್ಯಾಗಿಂಗ್ ಮಾಡಬಹುದಾಗಿದೆ.

ಜಿಪಿಎಸ್‌ ಸಾಧನಗಳು

ವಿಮಾನದಲ್ಲಿ ಬ್ಲ್ಯಾಕ್‌ಬಾಕ್ಸ್‌ ಇರುವುದನ್ನು ನೀವು ಕೇಳಿರಬಹುದು.ಈಗ ಕಾರುಗಳಿಗೆ ಅವಳಿಸಬಹುದಾದ ಜಿಪಿಎಸ್‌ ತಂತ್ರಜ್ಞಾನ ಹೊಂದಿರುವ ಬ್ಲ್ಯಾಕ್‌ಬಾಕ್ಸ್‌ ಬಂದಿದೆ. ಜಿಪಿಎಸ್‌ ಡ್ರೈವರ್‍ ರೆಕಾರ್ಡರ್‌ ಎನ್ನುವ ಹೆಸರಿನ ಸಾಧನ ರಸ್ತೆಯ ದಾರಿ ಮಾತ್ರ ತಿಳಿಸುವುದಲ್ಲದೆ, ಕಾರು ಎಷ್ಟು ವೇಗದಲ್ಲಿ ಹೋಗುತ್ತಿದೆ. ಕಾರು ಕ್ರಮಿಸಿಸುವ ದಾರಿಯನ್ನು ಸಂಪೂರ್ಣ ರೆಕಾರ್ಡ್‌ ಮಾಡುತ್ತದೆ.

ಜಿಪಿಎಸ್‌ ಸಾಧನಗಳು

ಜಿಪಿಎಸ್‌ ಅಳವಡಿಸಿರುವ ಕ್ಯಾಮೆರಾಗಳ ಮೂಲಕ ವೀಡಿಯೋ ರೆಕಾರ್ಡ್‌ ಮಾಡುವುದನ್ನು ನೀವು ತಿಳಿದಿದ್ದೀರಿ. ಆದರೆ ಕೆಲವು ದುಷ್ಕರ್ಮಿ‌ಗಳು ಸರ್ಕಾರದ ಗೌಪ್ಯ ಮಾಹಿತಿಗಳಿರುವ ಸ್ಥಳಗಳನ್ನು ರೆಕಾರ್ಡ್‌ ಮಾಡಿದ್ರೆ? ಅದ್ಕಕಾಗಿಯೇ ಈ ರೀತಿ ರೆಕಾರ್ಡ್‌ ಮಾಡದಂತೆ ಅವರನ್ನು ತಡೆಯಲು ಜಿಪಿಎಸ್‌ ಜಾಮರ್‌ ಬಂದಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+