ಭಾರತದಲ್ಲಿ ಕೂಲ್‌ಪ್ಯಾಡ್ ಕೂಲ್ ಬಾಸ್ ಇಯರ್‌ಬಡ್ಸ್ ಲಾಂಚ್‌!

|

ಸ್ಮಾರ್ಟ್‌ಫೋನ್‌ ಜೊತೆಗೆ ಇಯರ್‌ಫೋನ್‌ ಇದ್ದರೆ ಸಾಕು ಸಮಯ ಸಾಗುವುದೇ ತಿಳಿಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಇಯರ್‌ಫೋನ್‌ಗಳಿಗಿಂತ ಇಯರ್‌ಬಡ್ಸ್‌ ಗಳಿಗೆ ಹೆಚ್ಚಿನ ಜನಪ್ರಿಯತೆ ಇದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಇಯರ್‌ಬಡ್ಸ್‌ಗಳು ಲಭ್ಯವಿವೆ. ಸದ್ಯ ಇದೀಗ ಕೂಲ್‌ಪ್ಯಾಡ್‌ ಕಂಪೆನಿ ತನ್ನ ಹೊಸ ಕೂಲ್‌ ಬಾಸ್‌ ಬಡ್ಸ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಬ್ಲೂಟೂತ್ ವಿ 5.0 ಮತ್ತು ಡಿಜಿಟಲ್ ಬ್ಯಾಟರಿ ಸೂಚಕವನ್ನು ಹೊಂದಿದ್ದು, ಹೊಸ ಮಾದರಿಯ ವಿನ್ಯಾಸವನ್ನು ಒಳಗೊಂಡಿದೆ.

ಕೂಲ್‌ಪ್ಯಾಡ್

ಹೌದು, ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಟ್ರೂಲಿ ವಾಯರ್‌ಲೆಸ್‌ ಸ್ಟಿರಿಯೊ (TWS) ಇಯರ್‌ಫೋನ್‌ಗಳು ಕ್ವಿಕ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬರುತ್ತವೆ. ಅಲ್ಲದೆ ಈ ಇಯರ್‌ಬಡ್ಸ್‌ಗಳು 15 ನಿಮಿಷಗಳ ಚಾರ್ಜ್‌ನಲ್ಲಿ ಮೂರು ಗಂಟೆಗಳ ಸಂಗೀತ ಪ್ಲೇಬ್ಯಾಕ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಇನ್ನು ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್ TWS ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ವಾಯ್ಸ್‌ ಅಸಿಸ್ಟೆಂಟ್‌ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ 13mm ಆಡಿಯೋ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿವೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೂಲ್‌ಪ್ಯಾಡ್

ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್ ಇನ್-ಇಯರ್ ವಿನ್ಯಾಸವನ್ನು ಹೊಂದಿದೆ. ಇದು 13mm ಡೀಪ್ ಬಾಸ್ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದೆ. ಕೂಲ್‌ಪ್ಯಾಡ್ ಇಯರ್‌ಫೋನ್‌ಗಳನ್ನು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಒದಗಿಸಿದೆ. ಇದರ ಚಾರ್ಜಿಂಗ್ ಕೇಸ್ ಎಲ್ಇಡಿ ಪರದೆಯನ್ನು ಹೊಂದಿದ್ದು ಅದು ಬ್ಯಾಟರಿ ಅವಧಿಯನ್ನು ತೋರಿಸುತ್ತದೆ. ಕರೆ ಮಾಡುವ ಉದ್ದೇಶಗಳಿಗಾಗಿ ಇಯರ್‌ಬಡ್‌ಗಳು ಇನ್‌ಬಿಲ್ಟ್‌ ಮೈಕ್‌ನೊಂದಿಗೆ ಬರುತ್ತವೆ.

ಇಯರ್‌ಫೋನ್‌

ಇನ್ನು ಕಂಪೆನಿಯ ಕಂಪನಿಯ ಪ್ರಕಾರ ಈ ಇಯರ್‌ಫೋನ್‌ ಪ್ರತಿ ಇಯರ್‌ಬಡ್‌ಗೆ 40mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 4.5 ಗಂಟೆಗಳ ಸಂಗೀತ ಪ್ಲೇಬ್ಯಾಕ್ ನೀಡುತ್ತದೆ. ಜೊತೆಗೆ 400mAh ಬ್ಯಾಟರಿಯನ್ನು ಹೊಂದಿರುವ ಚಾರ್ಜಿಂಗ್ ಕೇಸ್‌ನೊಂದಿಗೆ ಬ್ಯಾಟರಿ ಅವಧಿಯನ್ನು 20 ಗಂಟೆಗಳವರೆಗೆ ವಿಸ್ತರಿಸಬಹುದು. ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್ ಕಂಪನಿಯು ಈ ಇಯರ್‌ಬಡ್ಸ್‌ ಅನ್ನು ಡಾಲ್ಫಿನ್ ಡಿಸೈನ್ 2.0 ಎಂದು ಹೆಸರಿಸಿದೆ. ಇನ್ನು ಈ ಇಯರ್‌ಫೋನ್‌ಗಳು ಬೆವರು ನಿರೋಧಕವೆಂದು ಹೇಳಲಾಗುತ್ತದೆ.

ಕೂಲ್‌ಪ್ಯಾಡ್

ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್ TWS ಬ್ಲೂಟೂತ್ V5.0 ಸಂಪರ್ಕದೊಂದಿಗೆ 10 ಮೀಟರ್ ಶ್ರೇಣಿ ಮತ್ತು ತ್ವರಿತ ಜೋಡಣೆ ಫೀಚರ್ಸ್‌ಗಳನ್ನು ಹೊಂದಿದೆ. ಎಡ ಸಹಾಯಕ ಇಯರ್‌ಬಡ್ ಗುಂಡಿಯನ್ನು ಎರಡು ಬಾರಿ ಒತ್ತುವ ಮೂಲಕ ಗೂಗಲ್ ಅಸಿಸ್ಟೆಂಟ್ ಮತ್ತು ಸಿರಿ ಧ್ವನಿ ಸಹಾಯಕರನ್ನು ಬಳಸಬಹುದು. ಇನ್ನು ಈ ಕೂಲ್‌ಪ್ಯಾಡ್ ಕೂಲ್ ಬಾಸ್ ಬಡ್ಸ್‌ ಭಾರತದಲ್ಲಿ ಬೆಲೆ ರೂ. 1,199 ಹೊಂದಿದೆ. ಇನ್ನು ಈ ಇಯರ್‌ಬಡ್ಸ್‌ ಅಮೆಜಾನ್‌ನಲ್ಲಿ ಖರೀದಿಸಲು ಲಭ್ಯವಿದೆ. TWS ಇಯರ್‌ಬಡ್ಸ್‌ ಬ್ಲ್ಯಾಕ್‌ ಮತ್ತು ನೀಲಿ ಬಣ್ಣದ ರೂಪಾಂತರಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Coolpad Cool Bass Buds with Bluetooth v5.0 and a digital battery indicator have been launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X