Subscribe to Gizbot

ಜನವರಿ 15 ರಂದು ಕೂಲ್‌ಪ್ಯಾಡ್‌ನ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಫೋನ್ ಬಿಡುಗಡೆ

Written By:

ಚೀನಾ ಸ್ಮಾರ್ಟ್‌ಫೋನ್ ಕಂಪೆನಿ, ಕೂಲ್ ಪ್ಯಾಡ್ ಭಾರತದಲ್ಲಿ ಹೊಸ ಕಂಪೆನಿಯಾಗಿದ್ದು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನಗೊಂದು ಸ್ಥಾನ ಕಲ್ಪಿಸಿಕೊಳ್ಳುವಲ್ಲಿ ತೀವ್ರ ಪೈಪೋಟಿಯನ್ನು ಸೆಣಸಾಟನ್ನು ಕಂಪೆನಿ ಮಾಡುತ್ತಿದೆ.

ಅಕ್ಟೋಬರ್‌ನಲ್ಲಿ ಕಂಪೆನಿಯು ತನ್ನ ನೋಟ್ 3 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, ಕೈಗೆಟಕುವ ಬೆಲೆಯಲ್ಲಿ ಅದ್ವಿತೀಯ ವಿಶೇಷತೆಗಳನ್ನೊಳಗೊಂಡು ಬರುತ್ತಿರುವ ಡಿವೈಸ್ ಎಂಬ ಹಿರಿಮೆಯನ್ನು ಪಡೆದುಕೊಂಡಿತ್ತು. 3ಜಿಬಿ RAM ಉಳ್ಳ ಸ್ಮಾರ್ಟ್‌ಫೋನ್ ಅನ್ನು ರೂ 8,999 ಕ್ಕೆ ಕಂಪೆನಿ ಬಿಡುಗಡೆ ಮಾಡಿತ್ತು.

ಜನವರಿ 15 ರಂದು ಕೂಲ್‌ಪ್ಯಾಡ್‌ನ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಫೋನ್ ಬಿಡುಗಡೆ

ಇದೇ ಹುರುಪಿನಲ್ಲಿ ಕಂಪೆನಿ ಇನ್ನೊಂದು ಡಿವೈಸ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡುವ ತವಕದಲ್ಲಿದೆ. ಜನವರಿ 15 ರಂದು ಭಾರತದಲ್ಲಿ ಈ ಹೊಸ ಡಿವೈಸ್ ಅನ್ನು ನೀವು ಕಾಣಲಿರುವಿರಿ.

ಮುಂಬರುವ ಈವೆಂಟ್‌ನಲ್ಲಿ ಕಂಪೆನಿ ಈ ಹೊಸ ಫೋನ್ ಅನ್ನು ಲಾಂಚ್ ಮಾಡಲಿದ್ದು, ಗಿಜ್‌ಬಾಟ್‌ಗೆ ದೊರೆತಿರುವ ಮಾಹಿತಿಯಂತೆ ನೋಟ್ 3 ಗೆ ಸಹಭಾಗಿಯಂತೆ ಈ ಡಿವೈಸ್ ಅನ್ನು ಹೊರತರುತ್ತಿದೆ. ಮೂಲ ನೋಟ್ 3 ಯ ಆವೃತ್ತಿಯನ್ನು ಹೋಲುವ ಫೋನ್ ಅನ್ನೇ ನೀವು ಕಾಣಲಿರುವಿರಿ. ಇದು ಫಿಂಗರ್ ಪ್ರಿಂಟ್ ಸ್ಕ್ಯಾನರ್, 3ಜಿಬಿ RAM ಅನ್ನು ಒಳಗೊಂಡಿದೆ.

ಲಾಲಿಪಪ್ 5.1 ಲಾಲಿಪಪ್ ಅನ್ನು ನೀವು ಡಿವೈಸ್‌ನಲ್ಲಿ ಕಾಣಲಿದ್ದು ನೇಟೀವ್ ಯುಐ ಇದರಲ್ಲಿದೆ. ಜನವರಿ 15 ರಂದು ಈ ಹೊಸ ಫೋನ್ ಕುರಿತ ಇನ್ನಷ್ಟು ಮಾಹಿತಿ ನಿಮಗೆ ಲಭ್ಯವಾಗಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot