Home
ಸುದ್ದಿಜಾಲ

'ಗೊರಿಲ್ಲಾ ಗ್ಲಾಸ್ 6'!...ಇನ್ಮುಂದೆ ನಿಮ್ಮ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಒಡೆಯುವುದಿಲ್ಲ!!

By Bhaskar N J

ಇತ್ತೀಚಿನ ಒಂದು ಅಧ್ಯಯನದ ಪ್ರಕಾರ, ಮೊಬೈಲ್ ಬಳಕೆದಾರರು ವರ್ಷಕ್ಕೆ ಸರಾಸರಿ ಏಳು ಬಾರಿ ತಮ್ಮ ಫೋನ್‌ಗಳನ್ನು ಬೀಳಿಸುತ್ತಾರೆ ಎಂಬ ಮಾಹಿತಿ ನೀಡಿದೆ. ಈ ಅಧ್ಯಯನ ಹೇಳುವಂತೆ, ಓರ್ವ ವ್ಯಕ್ತಿ ಮೊಬೈಲ್ ಅನ್ನು ಕೆಳಗೆ ಬೀಳಿಸಿಕೊಳ್ಳುವವರಲ್ಲಿ ಶೇ 50% ಹೆಚ್ಚು ಬೀಳುವಿಕೆ 1 ಮೀಟರ್ ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ ಎಂಬ ಮಾಹಿತಿಯನ್ನು ನೀಡಿದೆ.

ಇದರಿಂದ ತಿಳಿಯುವುದು ಏನೆಂದರೆ, ಸರಾಸರಿ ಕೇವಲ 1 ಮೀಟರ್ ಗಿಂತ ಕಡಿಮೆ ಎತ್ತರದಿಂದ ಮೊಬೈಲ್ ಅನ್ನು ಬೀಳಿಸಿದರೂ ಸಹ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಒಡೆದುಹೋಗುತ್ತದೆ. ಬಹುತೇಕರ ಸ್ಮಾರ್ಟ್‌ಪೋನ್ ಡಿಸ್‌ಪ್ಲೇ ಒಡೆದುಹೋಗಿರುವುದನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಇದು ನಮಗೆ ಸ್ಪಷ್ಟವಾಗುತ್ತದೆ. ಆದರೆ, ಇದು ಇನ್ನು ಶಾಶ್ವತವಲ್ಲ.!

'ಗೊರಿಲ್ಲಾ ಗ್ಲಾಸ್ 6'!...ಇನ್ಮುಂದೆ ನಿಮ್ಮ ಫೋನ್ ಡಿಸ್‌ಪ್ಲೇ ಒಡೆಯುವುದಿಲ್ಲ!!

ಹೌದು, ಆಕಸ್ಮಿಕವಾಗಿ ಕೈ ಜಾರಿ ಬಿದ್ದ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಒಡೆಯದಿರುವಂತಹ ರಕ್ಷಣೆ ನೀಡಲು 'ಗೊರಿಲ್ಲಾ ಗ್ಲಾಸ್ 6' ಮಾರುಕಟ್ಟೆಗೆ ಬಂದಿದೆ. ಈ 'ಗೊರಿಲ್ಲಾ ಗ್ಲಾಸ್ 6' ಸ್ಮಾರ್ಟ್‌ಫೋನ್ ಬಳಕೆದಾರರ ಡಿಸ್‌ಪ್ಲೇ ಒಡೆಯುವ ಸಮಸ್ಯೆಗೆ ಬಹುತೇಕ ಪರಿಹಾರವನ್ನು ತರುವ ಶಕ್ತಿ ಹೊಂದಿದೆ. ಹಾಗಾದರೆ, 'ಗೊರಿಲ್ಲಾ ಗ್ಲಾಸ್ 6' ಹೇಗಿದೆ ಎಂಬುದನ್ನು ಮುಂದೆ ತಿಳಿಯೋಣವೇ.?

'ಗೊರಿಲ್ಲಾ ಗ್ಲಾಸ್ 6'!

'ಗೊರಿಲ್ಲಾ ಗ್ಲಾಸ್ 6'!

ಕಾರ್ನಿಂಗ್ ಇನ್‌ಕಾರ್ಪೊರೇಟೆಡ್ ಸಂಸ್ಥೆ ಗಾಜಿನ ತಂತ್ರಜ್ಞಾನದಲ್ಲಿ ತನ್ನ ಅತ್ಯಾಧುನಿಕ ಪ್ರಗತಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ಪರಿಚಯಿಸಿದೆ. ಮೊಬೈಲ್ ಡಿವೈಸ್‌ಗಳಲ್ಲಿ ಕಠಿಣ ಕವರ್ ಗ್ಲಾಸ್ ಪೂರೈಕೆಯಲ್ಲಿ ಒಂದು ದಶಕದ ಸುದೀರ್ಘ ಪರಂಪರೆ ಹೊಂದಿರುವ ಕಂಪೆನಿ ಗೊರಿಲ್ಲಾ ಗ್ಲಾಸ್ 6 ಕಾರ್ನಿಂಗ್ ಅನ್ನು ತಂತ್ರಜ್ಞಾನ ಕ್ಚೇತ್ರಕ್ಕೆ ಸಮರ್ಪಿಸಿದೆ.

ಇನ್ಮುಂದೆ ಡಿಸ್‌ಪ್ಲೇ ಒಡೆಯುವುದಿಲ್ಲ.!

ಇನ್ಮುಂದೆ ಡಿಸ್‌ಪ್ಲೇ ಒಡೆಯುವುದಿಲ್ಲ.!

ಕಾರ್ನಿಂಗ್ ಇನ್‌ಕಾರ್ಪೊರೇಟೆಡ್ ತಯಾರಿಸಿರುವ 'ಗೊರಿಲ್ಲಾ ಗ್ಲಾಸ್ 6' ಮೊಬೈಲ್‌ಗಳಲ್ಲಿ ಬಳಕೆಗೆ ಬಂದರೆ ಇನ್ಮುಂದೆ ಯಾವುದೇ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಒಡೆಯುವುದಿಲ್ಲ ಎನ್ನಬಹುದು. ಏಕೆಂದರೆ, ಸರಾಸರಿ ಪ್ರಯೋಗಾಲಯಗಳ ಪರೀಕ್ಷೆಗಳಲ್ಲಿ ಗೊರಿಲ್ಲಾ ಗ್ಲಾಸ್ 6 ಒರಟಾದ ಮೇಲ್ಮೈನಲ್ಲಿ 1 ಮೀಟರ್ ಎತ್ತರದಿಂದ 15 ಬೀಳುವಿಕೆಯನ್ನು ತಡೆದುಕೊಂಡಿದೆ.

ಗೊರಿಲ್ಲಾ ಗ್ಲಾಸ್ 5 + ಗೊರಿಲ್ಲಾ ಗ್ಲಾಸ್ 5!

ಗೊರಿಲ್ಲಾ ಗ್ಲಾಸ್ 5 + ಗೊರಿಲ್ಲಾ ಗ್ಲಾಸ್ 5!

ನೂತನವಾಗಿ ಬಿಡುಗಡೆಯಾಗಿರುವ 'ಗೊರಿಲ್ಲಾ ಗ್ಲಾಸ್ 6' ಸಾಮರ್ಥ್ಯ ಗೊರಿಲ್ಲಾ ಗ್ಲಾಸ್ 5ಕ್ಕಿಂತ ಎರಡು ಪಟ್ಟು ಉತ್ತಮವಾಗಿದೆ.ಗೊರಿಲ್ಲಾ ಗ್ಲಾಸ್ 6 ಸಂಪೂರ್ಣ ಹೊಸ ಗಾಜಿನ ಸಂಯೋಜನೆ ಅದನ್ನು ಗೊರಿಲ್ಲಾ ಗ್ಲಾಸ್ 5ರೊಂದಿಗೆ ಸಾಧ್ಯವಿದ್ದ ಕಂಪ್ರೆಷನ್‌ಗಿಂತ ಹೆಚ್ಚಿನ ಪ್ರಮಾಣ ನೀಡಿ ಸದೃಢಗೊಳಿಸಲಾಗಿದೆ.

ಹಾನಿಗೆ ಹೆಚ್ಚು ನಿರೋಧಕ!

ಹಾನಿಗೆ ಹೆಚ್ಚು ನಿರೋಧಕ!

ಗೊರಿಲ್ಲಾ ಗ್ಲಾಸ್ 6' ಪರೀಕ್ಷೆಯ ಪರಿಸ್ಥಿತಿಗಳಲ್ಲಿ ಸ್ಪರ್ಧಿಯಾಗಿರುವ ಗಾಜಿನ ಸಂಯೋಜನೆಗಳಲ್ಲಿ ಸೋಡಾ ಲೈಮ್ ಮತ್ತು ಅಲ್ಯುಮಿನೊಸಿಲಿಕೇಟ್ ಸೇರಿಸಿದ್ದು ಮೊದಲ ಸಲ ಬೀಳುವಿಕೆಯನ್ನೇ ತಡೆಯುವುದಿಲ್ಲ. ಆದರೆ, ಗೊರಿಲ್ಲಾ ಗ್ಲಾಸ್ 6 ಕಾರ್ನಿಂಗ್‌ನ ಅತ್ಯಂತ ದೀರ್ಘ ಬಾಳಿಕೆಯ ಮತ್ತು ಹೆಚ್ಚು ಸಾಮರ್ಥ್ಯದ ಕವರ್ ಗ್ಲಾಸ್ ಆಗಿದೆ.

'ಗೊರಿಲ್ಲಾ ಗ್ಲಾಸ್ 6' ಬಳಕೆ ಯಾವಾಗ?

'ಗೊರಿಲ್ಲಾ ಗ್ಲಾಸ್ 6' ಬಳಕೆ ಯಾವಾಗ?

ಇಷ್ಟೆಲ್ಲಾ ಸಾಮರ್ಥ್ಯವನ್ನು ಹೊಂದಿರುವ 'ಗೊರಿಲ್ಲಾ ಗ್ಲಾಸ್ 6' ಅನ್ನು ನಾವು ಇನ್ಮುಂದೆ ಮಾರುಕಟ್ಟೆಗೆ ಕಾಲಿಡುವ ಸ್ಮಾರ್ಟ್‌ಪೋನ್‌ಗಳಲ್ಲಿ ನಿರೀಕ್ಷಿಸಬಹುದಾಗಿದೆ. ಚಿಕ್ಕಪುಟ್ಟ ಏಟುಗಳನ್ನೆಲ್ಲಾ ಸುಲಭವಾಗಿ ತಡೆದುಕೊಳ್ಳುವ ಈ ಗ್ಲಾಸ್ ತಂತ್ರಜ್ಞಾನದ ಸಹಾಯದಿಂದಾಗಿ ಇನ್ಮುಂದೆ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಒಡೆಯುವುದು ಒಂದು ಸಮಸ್ಯೆಯಾಗಿರುವುದಿಲ್ಲ.

Best Mobiles in India

English summary
Corning's new Gorilla Glass 6 will let your phone survive 15 drops. But its scratch resistance remains the same as previous generations. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+