Home
ಸುದ್ದಿಜಾಲ

ಐಫೋನ್ 17 ಪ್ರೊ: ಬಿಡುಗಡೆಗೂ ಮುನ್ನವೇ ಪ್ರತ್ಯಕ್ಷ!.ಹೊಸ ಚಿತ್ರಗಳಿಂದ ಭಾರಿ ಸಂಚಲನ!

ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಆಪಲ್‌ನ ಮುಂಬರುವ ಐಫೋನ್ 17 ಸರಣಿಯು ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಸೋರಿಕೆಯಾದ ಮಾಹಿತಿಯಂತೆ, ಪ್ರಮುಖ ಕ್ಯಾಮೆರಾ ಸುಧಾರಣೆಗಳಿಂದ ಹಿಡಿದು ವಿನ್ಯಾಸದ ಆಮೂಲಾಗ್ರ ಬದಲಾವಣೆಗಳವರೆಗೆ ಐಫೋನ್ 17 ವರ್ಷಗಳಲ್ಲಿ ನಾವು ನೋಡಿದ ಕೆಲವು ದೊಡ್ಡ ಅಪ್‌ಗ್ರೇಡ್‌ಗಳನ್ನು ತರುವ ನಿರೀಕ್ಷೆಯಿದೆ. ಈ ನಿರೀಕ್ಷೆಗಳ ಮಧ್ಯೆ, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಈ ಮಾದರಿಯ ಮೊದಲ ನೈಜ ನೋಟವನ್ನು ನೀಡಿವೆ ಎನ್ನಲಾಗುತ್ತಿದೆ.!

ಹೌಉ, X (ಹಿಂದೆ ಟ್ವಿಟರ್) ನಲ್ಲಿ @Skyfops ಅಕೌಂಟ್‌ನಲ್ಲಿ ಇತ್ತೀಚೆಗೆ ಇಬ್ಬರು ವ್ಯಕ್ತಿಗಳು ಎರಡು ಐಫೋನ್‌ಗಳನ್ನು ಹಿಡಿದಿರುವ ಫೋಟೋಗಳನ್ನು ಪೋಸ್ಟ್ ಆಗಿದೆ. ಅವುಗಳಲ್ಲಿ ಒಂದು ಕಪ್ಪು ಕೇಸ್‌ನಲ್ಲಿ ಸುತ್ತುವರಿದಿದ್ದು, ಅದನ್ನು ಐಫೋನ್ 17 ಪ್ರೊ ಎಂದು ನಂಬಲಾಗಿದೆ. ಈ ಪೋಸ್ಟ್ ಮಾಡಿದವರು ಪ್ರಸಿದ್ಧ ಸೋರಿಕೆದಾರರಲ್ಲದಿದ್ದರೂ, ಬ್ಲೂಮ್‌ಬರ್ಗ್‌ನ ವಿಶ್ವಾಸಾರ್ಹ ತಂತ್ರಜ್ಞಾನ ವರದಿಗಾರ ಮಾರ್ಕ್ ಗುರ್ಮನ್, "ಇದು ಅಸಲಿ ಎಂದು ಕಾಣುತ್ತದೆ" ಎಂಬ ಕಾಮೆಂಟ್‌ನೊಂದಿಗೆ ಅದನ್ನು ಮರುಪೋಸ್ಟ್ ಮಾಡಿದ ನಂತರ ಈ ಚಿತ್ರಗಳು ವ್ಯಾಪಕ ಗಮನ ಸೆಳೆದವು. ಆಪಲ್ ಉತ್ಪನ್ನಗಳ ಕುರಿತ ನಿಖರ ಸೋರಿಕೆಗಳಿಗೆ ಗುರ್ಮನ್ ಅವರ ಖ್ಯಾತಿಯು ಈ ವೀಕ್ಷಣೆಗೆ ಮತ್ತಷ್ಟು ತೂಕವನ್ನು ನೀಡಿದೆ.

ಐಫೋನ್ 17 ಪ್ರೊ: ಬಿಡುಗಡೆಗೂ ಮುನ್ನವೇ ಪ್ರತ್ಯಕ್ಷ!.ಹೊಸ ಚಿತ್ರಗಳಿಂದ ಭಾರಿ ಸಂಚಲನ!
Photo Credit: Fox Pupy

ಚಿತ್ರಗಳಲ್ಲಿ ಕಂಡುಬಂದಿರುವ ಐಫೋನ್‌ನ ಹಿಂಭಾಗವು ವಿಸ್ತರಿಸಿದ, ಅಡ್ಡಲಾಗಿರುವ ಕ್ಯಾಮೆರಾ ಬಾರ್ ಅನ್ನು ಹೊಂದಿದೆ. ಈ ವಿನ್ಯಾಸವು ಹಿಂದಿನ ಸೋರಿಕೆಗಳಲ್ಲಿ ಕೇಳಿಬಂದಿದ್ದ ವಿವರಗಳೊಂದಿಗೆ ಹೊಂದಿಕೆಯಾಗುತ್ತದೆ. ಸೋರಿಕೆಯಾದ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕ್ಯಾಮೆರಾ ಬಾರ್‌ನ ಎಡಭಾಗದಲ್ಲಿ ಮೂರು ಲೆನ್ಸ್‌ಗಳು ಮತ್ತು ಬಲಭಾಗದಲ್ಲಿ ಲಂಬವಾಗಿ ಜೋಡಿಸಲಾದ ಎಲ್ಇಡಿ ಫ್ಲಾಶ್ ಮತ್ತು LiDAR ಸ್ಕ್ಯಾನರ್ ಇರುವುದನ್ನು ಕಾಣಬಹುದು. ಈ ಕ್ಯಾಮೆರಾ ವಿನ್ಯಾಸವು ಐಫೋನ್ 17 ಪ್ರೊನ ಪ್ರಮುಖ ಆಕರ್ಷಣೆಯಾಗುವ ಸಾಧ್ಯತೆಯಿದೆ.

ಮ್ಯಾಕ್‌ರೂಮರ್ಸ್ ಗಮನಸೆಳೆದಿರುವ ಮತ್ತೊಂದು ಆಸಕ್ತಿದಾಯಕ ವಿವರವೆಂದರೆ, ಅದೇ ವ್ಯಕ್ತಿಯ ಕೈಯಲ್ಲಿರುವ ಎರಡನೇ ಫೋನ್ ಐಫೋನ್ 16 ಪ್ರೊ ಆಗಿರಬಹುದು ಎಂದು ತೋರುತ್ತಿದೆ. ಈ ಫೋನ್‌ನ ಹಿಂಭಾಗದಲ್ಲಿ ಸ್ಟಿಕ್ಕರ್ ಇದ್ದು, ಆಪಲ್ ಆಂತರಿಕ ಪರೀಕ್ಷಾ ಘಟಕಗಳನ್ನು ಟ್ರ್ಯಾಕ್ ಮಾಡಲು ಬಳಸುವ ಡೇಟಾ ಮ್ಯಾಟ್ರಿಕ್ಸ್ ಕೋಡ್ ಅನ್ನು ಇದು ಮರೆಮಾಡಿದೆ ಎಂದು ಅಂದಾಜಿಸಲಾಗಿದೆ. ಇದು ನಿಜವಾದರೆ, ಚಿತ್ರದಲ್ಲಿರುವ ವ್ಯಕ್ತಿ ಬಿಡುಗಡೆಯಾಗದ ಹಾರ್ಡ್‌ವೇರ್ ಅನ್ನು ಪರೀಕ್ಷಿಸುತ್ತಿರುವ ಆಪಲ್ ಉದ್ಯೋಗಿಯಾಗಿರುವ ಸಾಧ್ಯತೆಯಿದೆ. ಮೂಲ ಪೋಸ್ಟ್ ಪ್ರಸಿದ್ಧ ಮೂಲದಿಂದ ಬಂದಿಲ್ಲದ ಕಾರಣ, ಈ ಮಾಹಿತಿಯನ್ನು ಸಂಪೂರ್ಣವಾಗಿ ನಂಬುವಹಾಗಿಲ್ಲ. ಆದರೆ, ನಂಬಲೂಬೇಕಾಗಬಹುದು.!

ಮುಂಬರುವ ಐಫೋನ್ 17 ಪ್ರೊ ವೈಶಿಷ್ಟ್ಯಗಳು (ನಿರೀಕ್ಷಿತ)

ಸದ್ಯ ಲಭ್ಯವಿರುವ ಸೋರಕೆಗಳ ಮಾಹಿತಿ ಮತ್ತು ವದಂತಿಗಳ ಪ್ರಕಾರ, ಮುಂಬರುವ ಆಪಲ್ ಐಫೋನ್ 17 ಪ್ರೊ 120Hz ರಿಫ್ರೆಶ್ ರೇಟ್‌ನೊಂದಿಗೆ 6.3-ಇಂಚಿನ ಡಿಸ್ಪ್ಲೇಯನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕಾರ್ಯಕ್ಷಮತೆಯ ದೃಷ್ಟಿಯಿಂದ, ಇದು A19 ಪ್ರೊ ಚಿಪ್‌ಸೆಟ್‌ನಿಂದ ಶಕ್ತಿ ಪಡೆಯಲಿದೆ ಎಂದು ಹೇಳಲಾಗುತ್ತಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಇದು iOS 26 ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದ್ದು, ಸಿರಿಯ ಸುಧಾರಿತ ಆವೃತ್ತಿಯನ್ನು ಒಳಗೊಂಡಿರಬಹುದು.

ಕ್ಯಾಮೆರಾ ವಿಭಾಗದಲ್ಲಿ, ಐಫೋನ್ 17 ಪ್ರೊ ಮಾದರಿಯು ಹಿಂಭಾಗದಲ್ಲಿ ಮೂರು 48MP ಲೆನ್ಸ್‌ಗಳನ್ನು ಹೊಂದಿರಬಹುದು ಎಂದು ಹೇಳಲಾಗಿದ್ದು, ಇದರಲ್ಲಿ ಮುಖ್ಯ ಸಂವೇದಕ, ಅಲ್ಟ್ರಾ-ವೈಡ್ ಸಂವೇದಕ ಮತ್ತು ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ಗಳು ಇರಬಹುದು ಈ ಕ್ಯಾಮೆರಾ ಸೆಟಪ್ ಛಾಯಾಗ್ರಹಣದಲ್ಲಿ ಗಮನಾರ್ಹ ಸುಧಾರಣೆಗಳನ್ನು ತರುವ ಸಾಧ್ಯತೆಯಿದೆ. ಈ ಎಲ್ಲಾ ನಿರೀಕ್ಷೆಗಳು ನಿಜವಾಗುವುದೇ ಎಂದು ತಿಳಿಯಲು ಆಪಲ್‌ನ ಅಧಿಕೃತ ಘೋಷಣೆಯವರೆಗೂ ಕಾಯಬೇಕಿದೆ.!

Best Mobiles in India

English summary
A man was seen in public with the iPhone 17 Pro ahead of its official release—could this really be the phone?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+