Subscribe to Gizbot

ರಾತ್ರಿವೇಳೆ ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತೀರಾ?..ಈ ಶಾಕಿಂಗ್ ಸ್ಟೋರಿ ನೋಡಿ!!

Written By:

ಡ್ರಗ್ಸ್, ಆಲ್ಕೋಹಾಲ್‌ನಂತಹ ಕೆಟ್ಟ ಚಟಗಳಿಗೆ ಅಡಿಕ್ಟ್ ಆಗಿರುವಂತೆ ಸ್ಮಾರ್ಟ್‌ಫೋನ್‌ಗಳಿಗೆ ಇಂದಿನ ಜನ ಅಡಿಕ್ಟ್ ಆಗುತ್ತಿದ್ದಾರೆ ಎಂದು ಈಗಾಗಲೇ ಹಲವು ವರದಿಗಳು ಹೇಳಿವೆ.!! ಆದರೆ, ಇದೀಗ ಬಿಡುಗಡೆಯಾಗಿರುವ ನೂತನ ವರದಿಯೊಂದು ಸ್ಮಾರ್ಟ್‌ಫೋನ್ ಬಳಕೆಗೂ ಒಂದು ಮಿತಿ ಎನ್ನುವುದನ್ನು ಸಾರಿಸಾರಿ ಹೇಳುತ್ತಿದೆ.!!

ಹೌದು, ಜನರಿಗೆ ಸ್ಮಾರ್ಟ್‌ಪೋನ್ ಸಿಕ್ಕನಂತರವಂತೂ ಪ್ರಪಂಚವೇ ಮರೆತುಹೋಗಿದ್ದಾರೆ. ರಾತ್ರಿಹಗಲೂ ಎನ್ನದೇ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾ ಮಾನಸಿಕ ಖಿನ್ನತೆಗೆ ತುತ್ತಾಗಿ ಆತ್ಮಹತ್ಯೆಯ ದಾರಿ ಹಿಡಿಯುವ ಪ್ರಮಾಣ ಹೆಚ್ಚಾಗಿದೆ ಎಂದು ಅಮೆರಿಕಾದ 'ಸ್ಯಾನ್ ಡೈಗೊ ಸ್ಟೇಟ್' ಯೂನಿವರ್ಸಿಟಿಯ ಅಧ್ಯಯನವೊಂದು ಎಚ್ಚರಿಕೆ ನೀಡಿದೆ.!!

ರಾತ್ರಿವೇಳೆ ಹೆಚ್ಚು ಸ್ಮಾರ್ಟ್‌ಫೋನ್ ಬಳಸುತ್ತೀರಾ?

ಸ್ಮಾರ್ಟ್‌ಫೋನ್ ಮುಖ್ಯವಾಗಿ ಮಾನವನ ನಿದ್ದೆಯನ್ನು ಕದಿಯುತ್ತಿರುವುದರಿಂದಲೇ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದ್ದು, ಹಾಗಾದರೆ, ಸ್ಮಾರ್ಟ್‌ಫೋನ್ ಹೆಚ್ಚು ಬಳಕೆಯಿಂದ ಉಂಟಾಗುವ ಪರಿಣಾಮಗಳೆನು? ಮಾನಸಿಕ ಖಿನ್ನತೆಗೆ ದಾರಿಯಾಗುತ್ತಿರುವುದು ಏಕೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಾತ್ರಿವೇಳೆ ಹೆಚ್ಚು ಮೊಬೈಲ್ ಬಳಕೆ!!

ರಾತ್ರಿವೇಳೆ ಹೆಚ್ಚು ಮೊಬೈಲ್ ಬಳಕೆ!!

ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡುವವರ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಶೇ. 75 ಕ್ಕಿಂತ ಹೆಚ್ಚು ಯುವಜನರು ರಾತ್ರಿ ಸ್ಮಾರ್ಟ್‌ಫೋನ್ ಬಳಕೆಯಿಂದ ನಿದ್ದೆ ಮಾಡುತ್ತಿಲ್ಲ ಎಂಬ ಶಾಕಿಂಗ್ ವಿಷಯವನ್ನು ಅಧ್ಯಯನವು ತಿಳಿಸಿದೆ.!!

ಸಾವಿಗೆ ಸ್ಮಾರ್ಟ್‌ಫೋನ್ ದಾರಿ!!

ಸಾವಿಗೆ ಸ್ಮಾರ್ಟ್‌ಫೋನ್ ದಾರಿ!!

ನಿದ್ದೆ ಮಾಡುವ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾಡುವ ಪ್ರಮಾಣ ಹೆಚ್ಚಿರುವುದರಿಂದ ಮಾನವನ ಆರೋಗ್ಯ ಸ್ಥಿತಿ ಏರುಪೇರಾಗುತ್ತಿದೆ. ಇದು ಮಾನವನಲ್ಲಿ ಖಿನ್ನತೆ ಮೂಡಲು ಪ್ರಮುಖ ಕಾರಣವಾಗುತ್ತಿರುವ ಪರಿಣಾಮದಿಂದ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗಿದೆ.!!

ಖಿನ್ನತೆಗೆ ಜಾರಲು ಕಾರಣ ಏನು?

ಖಿನ್ನತೆಗೆ ಜಾರಲು ಕಾರಣ ಏನು?

ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ದೆ ಮಾಡದಿದ್ದರೆ ಮಾನವನ ಮೆದುಳಿನ ಮೇಲೆ ಹೆಚ್ಚು ಒತ್ತಡ ಬೀಳಲಿದೆ. ಇದರಿಂದ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಮೇಲೆ ಪರಿಣಾಮಗಳು ಬೀರುತ್ತದೆ.!! ಹೀಗೆ ಪ್ರತಿದಿನವೂ ಅಭ್ಯಾಸವಾಗುತ್ತಾ ಓದರೆ ಮಾನವನ ಮೆದುಳು ಖಿನ್ನತೆಗೆ ಜಾರುತ್ತದೆ ಎಂದು ಹೇಳಲಾಗಿದೆ.!!

ಆರೋಗ್ಯ ಸಮಸ್ಯೆಗೆ ದಾರಿ!!

ಆರೋಗ್ಯ ಸಮಸ್ಯೆಗೆ ದಾರಿ!!

ಮಾನವನ ದೇಹಕ್ಕೆ ಸರಿಯಾಗಿ ನಿದ್ದೆ ಸಿಗದಿದ್ದರೆ ಅವನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಮಧುಮೇಹ, ತಲೆನೊವ್ವುಗಳಂತಹ ಸಮಸ್ಯೆಗಳ ಜೊತೆಗೆ ಕ್ಯಾನ್ಸರ್‌ ಮತ್ತು ಬಬ್ರೈನ್ ಟ್ಯೂಮರ್‌ನಂತಹ ದೊಡ್ಡ ರೋಗಗಳೂ ಕೂಡ ಮಾನವನನ್ನು ಕಾಡುತ್ತವೆ ಎಂದು ವರದಿ ಹೇಳಿದೆ. ಇದು ಕೂಡ ಮುಂದೆ ಖಿನ್ನತೆಗೆ ಕಾರಣವಾಗುತ್ತದೆ.!!

ಸ್ಮಾರ್ಟ್‌ಫೋನ್ ಬಳಕೆಗೆ ಮಿತಿಇದೆ!!

ಸ್ಮಾರ್ಟ್‌ಫೋನ್ ಬಳಕೆಗೆ ಮಿತಿಇದೆ!!

ಮಾನವನಿಗೆ ಸ್ಮಾರ್ಟ್‌ಫೋನ್ ಬಿಟ್ಟಿರಲು ಸಾಧ್ಯವಿಲ್ಲ ಎನ್ನುವುದು ನಿಜ. ಆದರೆ, ಮಾನವನ ದೇಹಕ್ಕೆ ಮತ್ತು ಮನಸ್ಸಿಗೆ ಉಲ್ಲಾಸ ನೀಡುವ ನಿದ್ದೆಯನ್ನು ಕೂಡ ಈ ಸ್ಮಾರ್ಟ್‌ಫೋನ್ ಕಸಿದುಕೊಳ್ಳುತ್ತಿರುವುದು ಎಚ್ಚರಿಕೆಯ ವಿಷಯವಾಗಿದೆ. ಹಾಗಾಗಿ, ಸ್ಮಾರ್ಟ್‌ಫೋನ್ ಬಳಕೆಗೆ ಒಂದು ಮಿತಿಇದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Could using your phone at night cause death?.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot