ಈ ಚಿತ್ರ ಎಲ್ಲೆಡೇ ವೈರಲ್ ಆಗಲು 2 ಕಾರಣಗಳಿವೆ.!! ಏನು?
ಈ ಫೋಟೋದ ಮೂಲಕ ಅಪ್‌ಲೋಡ್ ಮಾಡಿದ ಆಡಿ ಖಾತೆದಾರ ಫೇಮಸ್ ಆದ.!!
ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ ಚಿತ್ರವೊಂದು ಇದೀಗ ವ್ಯಾಪಕ ವೈರಲ್ ಆಗಿದೆ.! ಆಡಿ ಎಂಬ ಟ್ವಿಟರ್ ಖಾತೆಯ ಮೂಲಕ ಐ ಲವ್ ಮೈ ಗರ್ಲ್ ಫ್ರೆಂಡ್ (I love my girlfriend even if she's a Gemini)ಎಂಬ ಅಡಿಬರಹದ ಒಂದು ಫೋಟೋ ಟ್ವಿಟರ್‌ನಲ್ಲಿ ಆಪ್ಲೋಡ್ ಆಗಿದ್ದು, ಎಲ್ಲರಲ್ಲಿಯೂ ದಿಗ್ಬ್ರಮೆ ಮೂಡಿಸಿದೆ.!!
ಈ ಚಿತ್ರದಲ್ಲಿ ಫೋಟೋಗೆ ಫೋಸ್ ಕೊಡುವ ಯುವತಿ ಏಕಕಾಲದಲ್ಲಿ ಎರಡೆರಡು ದಿಕ್ಕಿಗೆ ಮುಖ ತೋರಿಸಿದ್ದಾಳೆ. ಫೋಟೋ ನೋಡಿದರೆ ಆಕೆ ಸೆಲ್ಫೀಗೆ ಫೋಸ್ ನೀಡಿರುವುದು ಸ್ಪಷ್ಟವಾಗುತ್ತದೆ. ಆದರೆ ಆದೇ ಸಂದರ್ಭದಲ್ಲಿ ಆ ಕನ್ನಡಿಯಲ್ಲಿ ಕಾಣುತ್ತಿರುವುದೇನು ಎಂಬುದು ಟ್ವಿಟ್ಟಿಗರ ಪ್ರಶ್ನೆಯೂಆಗಿದೆ.!!

ಇದು ಫೋಟೋಶಾಪ್ ಎಂದು ಹಲವರು ಇದನ್ನು ಜರಿದಿದ್ದರೂ ಇಷ್ಟು ಚೆನ್ನಾಗಿ ಫೋಟೋಶಾಪ್ ಮಾಡಿದವರು ಯಾರು ಎನ್ನುವ ಅಚ್ಚರಿಯನ್ನು ಟ್ವಿಟ್ಟಿಗರು ವ್ಯಕ್ತಪಡಿಸಿದ್ದಾರೆ.!! ಈ ಫೋಟೋದ ಮೂಲಕ ಅಪ್‌ಲೋಡ್ ಮಾಡಿದ ಆಡಿ ಖಾತೆದಾರ ಫೇಮಸ್ ಆದನಾದರೂ ಈ ಟ್ವೀಟ್ ಸ್ವಲ್ಪ ಟೀಕೆಗಳನ್ನು ಕೂಡ ಎದುರಿಸಿದ್ದಾನೆ.

ಇಂದಿನ ತಂತ್ರಜ್ಞಾನದಲ್ಲಿ ಫೋಟೋಶಾಪ್ ಮೂಲಕ ಇಂತಹ ವಿನ್ಯಾಸಗಳನ್ನು ಮಾಡುವುದು ಕಷ್ಟವೇನಲ್ಲ. ಇದೇ ರೀತಿ ಹಲವಾರು ದಿಗ್ಬ್ರಮೆ ಮೂಡಿಸುವ ಫೊಟೊ ಕೈ ಚಳಕಗಳನ್ನು ಮಾಡಿರುವವರು ಇದ್ದಾರೆ. ಆದರೂ ಈ ಚಿತ್ರ ಇಷ್ಟು ವೈರಲ್ ಆಗಲು ಇದೇ ಕಾರಣ ಇರಬಹುದಾ?


Click it and Unblock the Notifications








