Home
ಸುದ್ದಿಜಾಲ

ವಿವಾಹ ವಾರ್ಷಿಕ ಸಂಭ್ರಮದಲ್ಲಿದ್ದ ದಂಪತಿಗೆ ಆಗಿದ್ದೇನು? ಇದರ ಬಗ್ಗೆ ನೀವು ಕೂಡ ಎಚ್ಚರಿಕೆ ವಹಿಸಿ!

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ವಂಚಕರಿಗೆ ಸಮಯ ಸನ್ನಿವೇಶ ಯಾವುದೇ ಆಗಿರಲಿ ಅವರ ಗುರಿ ಮಾತ್ರ ಹಣ ದೋಚುವುದು ಮಾತ್ರವೇ ಆಗಿರುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲೊಂದು ಪ್ರಕರಣ ನಡೆದಿದೆ. ಈ ಪ್ರಕರಣಲ್ಲಿ ಬರೋಬ್ಬರಿ ಅಂದಾಜು 2,82,620ರೂ ಗಳನ್ನು ವಂಚಿಸಲಾಗಿದೆ.

ಹೌದು, ಫ್ಲೈಟ್‌ ಟಿಕೆಟ್‌ ಬುಕ್‌ ಮಾಡುವುದಕ್ಕೆ ಹೋದ ದಂಪತಿಗಳಿಗೆ ಅಂದಾಜು 2,82,620ರೂ ವಂಚಿಸಿದ ಘಟನೆ ನಡೆದಿದೆ. ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ದಂಪತಿಗಳಿ ಸ್ಕ್ಯಾಮರ್‌ಗಳು ವಂಚನೆ ಮಾಡಿದ್ದಾರೆ. ಹಾಗಾದ್ರೆ ಈ ಘಟನೆ ನಡೆದಿದ್ದು ಎಲ್ಲಿ, ದಂಪತಿಗಳು ವಂಚನೆ ಹೋಗುವುದಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿವಾಹ ವಾರ್ಷಿಕ ಸಂಭ್ರಮದಲ್ಲಿದ್ದ ದಂಪತಿಗೆ ಆಗಿದ್ದೇನು? ಎಚ್ಚರಿಕೆ  ವಹಿಸಿ!

ಕ್ಯಾಲಿಫೋರ್ನಿಯಾದ ಮೇಗನ್ ಮತ್ತು ಕೆವಿನ್ ಮಾರ್ಗನ್ ಎಂಬ ದಂಪತಿಗಳು ತಮ್ಮ 8 ತಿಂಗಳ ಮಗುವಿನೊಂದಿಗೆ ರಜೆ ದಿನಗಳನ್ನು ಕಳೆಯಲು ಮಾಯಿ ಪ್ರದೇಶಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿ ತಮ್ಮ ಐದನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಬಂದಿದ್ದಾರೆ. ಆದರೆ ಇದೇ ಸಮಯದಲ್ಲಿ ಮಾಯಿಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕಾಡ್ಗಿಚ್ಚು ಮಾಯಿ ದ್ವೀಪವನ್ನು ಆವರಿಸುವ ಮುನ್ನವೇ ಅವರು ಅಲ್ಲಿಂದ ಹೊರಡುವುದಕ್ಕೆ ಮುಂದಾಗಿದ್ದಾರೆ. ಇದರಿಂದ ತಮ್ಮ ಬೋಜನ ಕೂಟವನ್ನು ಕೂಡ ರದ್ದು ಪಡಿಸಿದ್ದಾರೆ. ಅಲ್ಲದೆ ಕೂಡಲೇ ಲಭ್ಯವಿರುವ ಪ್ಲೈಟ್‌ ಟಿಕೆಟ್‌ ಬುಕ್‌ ಮಾಡಲು ಪ್ರಯತ್ನಿಸಿದ್ದಾರೆ.

ಯೆಸ್‌ ನಿಗಧಿತ ದಿನಕ್ಕೂ ಮುನ್ನವೇ ತಾವು ಮನೆಗೆ ವಾಪಸ್‌ ಹೋಗುವುದಕ್ಕೆ ದಂಪತಿಗಳು ಮುಂದಾಗಿದ್ದಾರೆ. ಇದಕ್ಕಾಗಿ ಸೌತ್‌ವೆಸ್ಟ್ ಏರ್‌ಲೈನ್ಸ್ ನಲ್ಲಿ ಟಿಕೆಟ್‌ ಬುಕ್‌ ಮಾಡಲು ಮುಂದಾಗಿದ್ದಾರೆ. ಅದರಂತೆ ಆನ್‌ಲೈನ್‌ನಲ್ಲಿ ಏರ್‌ಲೈನ್ಸ್‌ ಕಂಟ್ಯಾಕ್ಟ್‌ ನಂಬರ್‌ ಸರ್ಚ್‌ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿ, ತಮ್ಮ ಪರಿಸ್ಥಿತಿ ಹೇಳಿಕೊಂಡಿದ್ದಾರೆ. ತಕ್ಷಣವೇ ತಮಗೆ ಟಿಕೆಟ್‌ ಬುಕ್‌ ಕಾಯ್ದಿರಿಸುವುದಕ್ಕೆ ಮನವಿ ಮಾಡಿದ್ದಾರೆ. ಆದರೆ ಅಸಲಿಗೆ ಅವರು ಕರೆ ಮಾಡಿದ ನಂಬರ್‌ ಒಬ್ಬ ಸ್ಕ್ಯಾಮರ್‌ದ್ದಾಗಿದೆ.

ದಂಪತಿಗಳಿಂದ ಪೂರ್ಣ ಮಾಹಿತಿ ಪಡೆದ ವಂಚಕರು ಟಿಕೆಟ್‌ಪ್ರಿ ಪೋನ್‌ಗಾಗಿ ತಮ್ಮ ದೃಢೀಕರಣ ಸಂಖ್ಯೆಗಳು ಮತ್ತು ಟಿಕೆಟ್‌ ವಿವರ ಪಡೆದುಕೊಂಡಿದ್ದಾರೆ. ಈ ವಿವರಗಳ ಮೂಲಕ ವಂಚಕರು ದಂಪತಿಗಳಿಗೆ ವಂಚನೆ ಮಾಡಿದ್ದಾರೆ. ಸ್ಕ್ಯಾಮರ್‌ಗಳು ದಂಪತಿಗಳ ಟಿಕೆಟ್‌ ಅನ್ನು ಕ್ಯಾನ್ಸಲ್‌ ಮಾಡಿದ್ದಲ್ಲದೆ, ಪೂರ್ವ ಕರಾವಳಿಯಲ್ಲಿ ಬೇರೆಯವರಿಗೆ ಟಿಕೆಟ್‌ ಬುಕ್ ಮಾಡಲು ಫ್ಲೈಟ್ ಕ್ರೆಡಿಟ್ ಅನ್ನು ಬಳಸಿದ್ದಾರೆ. ಈ ಮೂಲಕ ಟಿಕೆಟ್‌ ಹಣವನ್ನು ವಂಚಕರು ಎಗರಿಸಿದ್ದಾರೆ.

ಇದರಿಂದ ವಂಚಕರು ಬರೋಬ್ಬರಿ $3,400 (ಸುಮಾರು 282,620ರೂ)ಹಣ ವಂಚಿಸಿದ್ದಾರೆ. ಈ ಮೂಲಕ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದ ದಂಪತಿಗಳಿಗೆ ವಂಚಕರು ಬಿಗ್‌ ಶಾಕ್‌ ನೀಡಿದ್ದಾರೆ. ಈ ರೀತಿಯ ವಂಚನೆಯನ್ನು ನಾವು ಎಂದೂ ನೋಡಿರಲಿಲ್ಲ ಎಂದು ದಂಪತಿಗಳು ಹೇಳಿಕೊಂಡಿದ್ದಾರೆ.

ಇನ್ನು ನೀವು ಕೂಡ ಆನ್‌ಲೈನ್‌ನಲ್ಲಿ ಯಾವುದೇ ನಂಬರ್‌ಗಳನ್ನು ಸರ್ಚ್‌ ಮಾಡುವಾಗಲೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಸುಖಾಸುಮ್ಮನೆ ಆನ್‌ಲೈನ್‌ ಸರ್ಚ್‌ನಲ್ಲಿ ಲಭ್ಯವಾಗುವ ಸಂಖ್ಯೆಗಳಿಗೆ ಕರೆ ಮಾಡಿ ಮೋಸಹೋಗಬೇಡಿ. ಅದರಲ್ಲೂ ವಿಶೇಷವಾಗಿ ಗೂಗಲ್‌ ಸರ್ಚ್ ಇಂಜಿನ್‌ಗಳ ಮೂಲಕ ಲಭ್ಯವಾಗುವ ನಂಬರ್‌ಗಳಗೆ ಡಯಲ್ ಮಾಡುವ ಮೊದಲು ಎಚ್ಚರಿಕೆ ವಹಿಸುವುದು ಸೂಕ್ತ. ಮೊದಲು ಸರ್ಚ್‌ನಲ್ಲಿ ನಿಮಗೆ ಲಭ್ಯವಾಗುವ ನಂಬರ್‌ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ.

ಇದಲ್ಲದೆ ಫೋನ್ ಸಂಖ್ಯೆಯ ಮೂಲವನ್ನು ಎರಡು ಬಾರಿ ಪರಿಶೀಲಿಸಿ. ನೀವು ಸಂಪರ್ಕಿಸಲು ಪ್ರಯತ್ನಿಸುತ್ತಿರುವ ಸಂಸ್ಥೆ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಖ್ಯೆಯನ್ನು ಸರ್ಚ್‌ ಮಾಡಿರಿ. ಅಲ್ಲದೆ ಆನ್‌ಲೈನ್‌ನಲ್ಲಿ ಕಂಡುಕೊಂಡ ಸಂಖ್ಯೆಯನ್ನು ಅಧಿಕೃತ ವೆಬ್‌ಸೈಟ್‌ಗಳ ಮೂಲಕ ವಿಶಾಸಾರ್ಹ ಮೂಲಗಳಿಂದ ಲಭ್ಯವಾಗುವ ನಂಬರ್‌ಗಳ ಜೊತೆಗೆ ಹೋಲಿಕೆ ಮಾಡಿರಿ.

Best Mobiles in India

English summary
couple suffered a financial loss of $3,400 due to the scam while trying to prepone her flight
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+