COVID-19: ಆಶ್ರಯ ಬಯಸುವವರಿಗೆ ಸಹಾಯ ಮಾಡಲು ಗೂಗಲ್ ನಿಂದ ಹೊಸ ಫೀಚರ್ಸ್ ಬಿಡುಗಡೆ!
ನಿಮಗೆ ಯಾವುದೇ ಮಾಹಿತಿ ಬೇಕಿದ್ದರೂ ಥಟ್ಟನೆ ನೆನಪಾಗೋದು ಗೂಗಲ್ ಸರ್ಚ್ ಇಂಜಿನ್.. ಜಗತ್ತಿನ ಸರ್ಚ್ ಇಂಜಿನ್ ದೈತ್ಯ ಎನಿಸಿಕೊಂಡಿರುವ ಗೂಗಲ್ ಬಳಕೆದಾರರ ಸ್ನೇಹಿ ಎನಿಸಿಕೊಂಡಿದೆ. ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿರುವ ಗೂಗಲ್ ಇದೀಗ ಮತ್ತೊಂದು ಫೀಚರ್ಸ್ ಅನ್ನು ಪರಿಚಯಿಸಿದೆ. ಸದ್ಯ ಕೋವಿಡ್-19 ವಿರುದ್ದದ ಹೊರಾಟದಲ್ಲಿ ಲಾಕ್‌ಡೌನ್‌ನಲ್ಲಿರುವ ಜನರಿಗೆ ಇದು ಸಹಾಯವಾಗಲಿದೆ. ಅಂದರೆ ಊಟ,ರಾತ್ರಿ ಆಶ್ರಯ ಬಯಸುವವರಿಗೆ ವಿಶ್ವಾಸಾರ್ಹ ಮಾಹಿತಿ ನೀಡುವ ಫೀಚರ್ಸ್ ಇದಾಗಿದೆ ಎನ್ನಲಾಗಿದೆ.

ಹೌದು, ಗೂಗಲ್ ಪರಿಚಯಿಸಿರುವ ಹೊಸ ಫೀಚರ್ಸ್ ಜನರಿಗೆ ಸಾಕಷ್ಟು ಉಪಯೋಗವಾಗಲಿದೆ. ಊಟ ಮತ್ತು ವಸತಿ ದೊರೆಯುವ ಸ್ಥಳಗಳನ್ನ ಹುಡುಕುವವರಿಗೆ ಈ ಫೀಚರ್ಸ್ ತುಂಬಾನೆ ಸಹಾಕಾರಿಯಾಗಲಿದೆ. ಇದರಿಂದ ಜನರಿಗೆ ವಿಶ್ವಾಸಾರ್ಹ ಮಾಹಿತಿ ದೊರೆಯಲಿದ್ದು, ನಗರ ಪ್ರದೇಶಗಳಲ್ಲಿ ರಾತ್ರಿ ಆಶ್ರಯ ಅಥವಾ ಊಟವನ್ನ ಅರಸುತ್ತಾ ಹೋದವರಿಗೆ ಇದು ಸಹಾಯ ಮಾಡಲಿದೆ. ಇದಕ್ಕಾಗಿ ಗೂಗಲ್ ಇಂಡಿಯಾ ಹೊಸ ಮಾದರಿಯ ಪ್ರಯತ್ನಗಳನ್ನು ಮಾಡಿದೆ.

ಇನ್ನು ಜನರಿಗೆ ಆಹಾರ ಮತ್ತು ರಾತ್ರಿ ಆಶ್ರಯವನ್ನು ಹುಡುಕಲು ಸಹಾಯ ಮಾಡುವಂತಹ ಫೀಚರ್ಸ್ ಅನ್ನು ಪ್ರಾರಂಭಿಸಲು ಗೂಗಲ್ ಭಾರತ ಸರ್ಕಾರದೊಂದಿಗೆ ಕೈಜೋಡಿಸಿದೆ. ಈ ಫೀಚರ್ಸ್ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲದೆ ಕ ಐಒಎಸ್ ಡಿವೈಸ್‌ಗಳಲ್ಲಿಯೂ ಲಭ್ಯವಿದೆ. ಈ ಹೊಸ ಫೀಚರ್ಸ್ ಅನ್ನು ಗೂಗಲ್ ಮ್ಯಾಪ್, ಗೂಗಲ್ ಸರ್ಚ್, ಮತ್ತು ಗೂಗಲ್ ಅಸಿಸ್ಟೆಂಟ್ ಮೂಲಕ ಪ್ರವೇಶಿಸಬಹುದಾಗಿದೆ ಎಂದು ಗೂಗಲ್ ಹೇಳಿದೆ. ಆದ್ದರಿಂದ ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅಥವಾ ಐಒಎಸ್ ಹೊಂದಿದ್ದರೆ ಇದರ ಉಪಯೋಗವನ್ನ ಪಡೆದುಕೊಳ್ಳಬಹುದಾಗಿದೆ.

ಇದಲ್ಲದೆ ಈಗಾಗಲೇ ದೇಶಾದ್ಯಂತ ಸರ್ಕಾರ ಸ್ಥಾಪಿಸಿರುವ ನೂರಾರು ಆಹಾರ ಮತ್ತು ರಾತ್ರಿ ಆಶ್ರಯ ಸ್ಥಳಗಳನ್ನು ಸೂಚಿಸಲು ಪ್ರಾರಂಭಿಸಿದೆ ಎಂದು ಕಂಪನಿ ತಿಳಿಸಿದೆ. ಜೊತೆಗೆ ಗೂಗಲ್ ಇಂಡಿಯಾ ಸಹ ಸಹಾಯವಾಣಿ ಸಂಖ್ಯೆಯನ್ನು ಪರಿಚಯಿಸಿದೆ. ಈ ಸಹಾಯವಾಣಿ ಸಂಖ್ಯೆ ಫೀಚರ್ ಫೋನ್‌ಗಳಿಗೆ ಕರೆಮಾಡಲು ಸೂಚಿಸುತ್ತದೆ. ಏಕೆಂದರೆ ಇದು 2G ಬಳಕೆದಾರರಿಗೆ ಗೂಗಲ್ ಅಸಿಸ್ಟೆಂಟ್ ಅನ್ನು ಪ್ರವೇಶಿಸ ಬೇಕಾದರೆ ಈ ಸಂಖ್ಯೆಯನ್ನು ಕರೆ ಮಾಡಲು ಅನುಮತಿಸುತ್ತದೆ.

ಅಲ್ಲದೆ ಪ್ರಸ್ತುತ, 2G ಮತ್ತು ಫೀಚರ್ ಫೋನ್‌ಗಳಲ್ಲಿರುವ ವೊಡಾಫೋನ್ ಮತ್ತು ಐಡಿಯಾ ಗ್ರಾಹಕರು ಕೇವಲ ಹೆಲ್ಪ್‌ಲೈನ್ ಸಂಖ್ಯೆ 000-800-919-1000 ಅನ್ನು ಡಯಲ್ ಮಾಡಬಹುದು ಮತ್ತು ಅವರ ನಗರಗಳಲ್ಲಿ ಆಹಾರ ಆಶ್ರಯ ಮತ್ತು ರಾತ್ರಿ ಆಶ್ರಯಗಳ ಬಗ್ಗೆ ಕೇಳಬಹುದು. ಈ ಸೌಲಭ್ಯ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ. ದೇಶದ 33 ನಗರಗಳಲ್ಲಿ ಗೂಗಲ್ ಈ ಸೌಲಭ್ಯವನ್ನು ಒದಗಿಸುತ್ತಿದೆ. ದೆಹಲಿ, ಅಲಿಗರ್‌ಮತ್ತು ಭಾಗಲ್ಪುರ್ ಸ್ಥಳಗಳಲ್ಲಿ ಜನರು ಆಹಾರ ಮತ್ತು ರಾತ್ರಿ ಆಶ್ರಯವನ್ನು ಪಡೆದುಕೊಳ್ಳಲು ಸಹಾಯಕವಾಗಿದೆ.

ಸದ್ಯ ಈ ಫೀಚರ್ಸ್ ಇಲ್ಲಿಯವರೆಗೆ, 1,500 ಕ್ಕೂ ಹೆಚ್ಚು ಆಹಾರ ಮತ್ತು ರಾತ್ರಿ ಆಶ್ರಯಗಳನ್ನು ಹೊಂದಿರುವ 33 ಕ್ಕೂ ಹೆಚ್ಚು ನಗರಗಳನ್ನು ಒಳಗೊಂಡಿದೆ. ಬಳಕೆದಾರರು ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ಪ್ರಶ್ನಿಸಬಹುದಾಗಿದ್ದು, ಮುಂಬರುವ ವಾರಗಳಲ್ಲಿ ಇದನ್ನು ಇತರ ಭಾರತೀಯ ಭಾಷೆಗಳಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ, ಜೊತೆಗೆ ದೇಶಾದ್ಯಂತ ಹೆಚ್ಚಿನ ನಗರಗಳಲ್ಲಿ ಹೆಚ್ಚುವರಿ ಆಶ್ರಯವನ್ನು ಸೇರಿಸುತ್ತವೆ ಎಂದು ಗೂಗಲ್ ಹೇಳಿದೆ. ಇನ್ನು ಈಗಾಗಲೇ ಗೂಗಲ್ COVID-19 ಇಂಡಿಯಾ ವೆಬ್‌ಸೈಟ್ ಅನ್ನು ಪ್ರಾರಂಭಿಸಿತ್ತು. ಸದ್ಯ ಸದಾ ಬಳಕೆದಾರರ ಸ್ನೇಹಿಯಾಗಿರುವ ಗೂಗಲ್ ಕೊರೋನಾ ವಿರುದ್ದದ ಹೋರಾಟದಲ್ಲೂ ಬಳಕೆದಾರರ ಪರವಾಗಿ ನಿಂತಿದೆ.


Click it and Unblock the Notifications








