ಕೋವಿಡ್ -19 ವಿರುದ್ದ ಹೋರಾಡಲು ಭಾರತಕ್ಕೆ ನೆರವು ನೀಡಿದ ಟಿಕ್‌ಟಾಕ್‌ ಸಂಸ್ಥೆ!

|

ಇಡೀ ವಿಶ್ವವೇ ಇಂದು ಕೊರೊನಾ ಸೊಂಕಿನ ಬೀತಿಯಿಂದ ಬಳಲುತ್ತಿದೆ. ಚೀನಾದಲ್ಲಿ ಹುಟ್ಟಿ ಇಂದು ವಿಶ್ವವನ್ನೇ ಕಾಡುತ್ತಿರುವ ಕೋವಿಡ್‌-19 ಬಾರತವನ್ನು ಸಹ ಬಿಟ್ಟಿಲ್ಲ. ಸದ್ಯ ಭಾರತದಲ್ಲಿಯೂ ಕೊರೊನಾ ವೈರಸ್‌ ಪೀಡಿತರ ಸಂಖ್ಯೆ ಸಾವಿರದ ಗಡಿ ದಾಟಿದ್ದು, ದಿನೇ ದಿನೇ ಸೊಂಕಿತರ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಅಷ್ಟೇ ಅಲ್ಲ ಸೊಂಕಿನ ವಿರುದ್ದ ಹೋರಾಡುವುದಕ್ಕೆ ಭಾರತ ಸರ್ಕಾರ ಕರೆ ನೀಡಿದ್ದು, 21 ದಿನಗಳ ಕಾಲ ಇಡೀ ರಾಷ್ಟ್ರವನ್ನೇ ಲಾಕ್‌ಡೌನ್‌ ಘೋಷಿಸಲಾಗಿದೆ. ಅಲ್ಲದೆ ಕೋವಿಡ್‌-19 ವಿರುದ್ದದ ಹೋರಾಟಕ್ಕೆ ಸಹಾಯವನ್ನು ಸಹ ಕೇಳಿದೆ. ಈ ನಿಟ್ಟಿನಲ್ಲಿ ಹಲವಾರು ಸಂಘ ಸಂಸ್ಥೆಗಳು , ಪ್ರಸಿದ್ದ ಕಂಪೆನಿಗಳು ಸಹಾಯ ಹಸ್ತವನ್ನ ಚಾಚಿವೆ. ಇವುಗಳಲ್ಲಿ ಟಿಕ್‌ಟಾಕ್‌ ಸಂಸ್ಥೆ ಕೋಡ ಸೇರಿದೆ.

ಹೌದು

ಹೌದು, ಬೈಟ್‌‌ ಡ್ಯಾನ್ಸ್‌ ಒಡೆತನದ ಜನಪ್ರಿಯ ಟಿಕ್‌ಟಾಕ್‌ ಸಂಸ್ಥೆ ಭಾರತದ ನೆರವಿಗೆ ಬಂದಿದೆ. ಕೊರೊನಾ ವೈರಸ್‌ ವಿರುದ್ದ ಹೋರಾಡುತ್ತಿರುವ ವೈದ್ಯಕೀಯ ವಲಯಕ್ಕೆ ಅಗತ್ಯ ಸೇವೆಗಳನ್ನ ಪೂರೈಸುವ ಮಾತುಗಳನ್ನ ಆಡಿದೆ. ಅಷ್ಟೇ ಅಲ್ಲ ಭಾರತದಲ್ಲಿ 100 ಕೋಟಿ ರೂ ಬೆಲೆಬಾಳುವ ವೈದ್ಯಕೀಯ ಉಪಕರಣಗಳನ್ನ ದಾನವಾಗಿ ನೀಡಿದೆ.

ಟಿಕ್‌ಟಾಕ್‌

ಟಿಕ್‌ಟಾಕ್‌ ದೇಶದ ಯುವಜನತೆಯನ್ನ ತನ್ನತ್ತ ಸೆಳೆದಿರುವ ಜನಪ್ರಿಯ ವೀಡಿಯೋ ಸ್ಟ್ರೀಮಿಂಗ್‌ ಆಪ್‌ಗಳಲ್ಲಿ ಒಂದಾಗಿದೆ. ಜಾಗತಿಕವಾಗಿ ವೇಗವಾಗಿ ಪ್ರಸಿದ್ದಿ ಪಡೆದ ಸೊಶೀಯಲ್‌ ಮಿಡಿಯಾ ಆಪ್‌ಗಳಲ್ಲಿ ಒಂದಾಗಿರುವ ಟಿಕ್‌ಟಾಕ್‌ ಇದೀಗ ಭಾರತಕ್ಕೆ ನೂರು ಕೊಟಿಗಳ ವೈಧ್ಯಕೀಯ ನೆರವನ್ನ ನಿಡಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಭಾರತದ ವೈಧ್ಯಕೀಯ ವಲಯಕ್ಕೆ ಸಹಾಯ ಮಾಡುವ ಉದ್ದೇಶದಿಂದ 4,00,000 ಅಧಿಕ ಹಜ್ಮತ್ ವೈದ್ಯಕೀಯ ರಕ್ಷಣಾತ್ಮಕ ಸೂಟುಗಳು ಮತ್ತು 2,00,000 ಮಾಸ್ಕ್‌ಗಳ ನೆರವನ್ನು ನೀಡಿದೆ.

ಭಾರತ

ಸದ್ಯ ಭಾರತ ಸರ್ಕಾರವು ವೈರಸ್ ಹರಡುವಿಕೆಯನ್ನು ಸಂಘಟಿಸಲು ಸಮಗ್ರ ಪ್ರಯತ್ನಗಳನ್ನು ಮಾಡುತ್ತಿದೆ. ಮತ್ತು ಈ ದೇಣಿಗೆಯ ಮೂಲಕ ನಾವು ಸರ್ಕಾರದ ಪ್ರಯತ್ನಕ್ಕೆ ಇನ್ನಷ್ಟು ಕೊಡುಗೆ ನೀಡಲು ಬಯಸುತ್ತೇವೆ. ಕೇಂದ್ರ ಜವಳಿ ಸಚಿವಾಲಯದ ಬೆಂಬಲದೊಂದಿಗೆ, ನಿಗದಿತ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸುವ ಈ ಅಗತ್ಯ ಸೇವೆಗಳನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದು ಕಂಪನಿಯು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

ದೇಶವು

ಇನ್ನು ಈಗಾಗ್ಲೆ ದೇಶವು ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ ಎಲ್ಲಾ ಹಂತದ ಕಂಪನಿಗಳು ಮತ್ತು ವ್ಯಕ್ತಿಗಳು ಸಹಾಯ ಹಸ್ತ ಚಾಚುತ್ತಿದ್ದಾರೆ. ಟೆಕ್ ಕಂಪನಿಗಳು ಸಹ ಹೆಚ್ಚುವರಿ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ಹಿಂದೆ, ಶಿಯೋಮಿ ಲಕ್ಷಾಂತರ ಎನ್ 95 ಮಾಸ್ಕ್‌ಗಳನ್ನ ಒದಗಿಸಿದೆ. ಅಲ್ಲದೆ 15 ಕೋಟಿ ರೂ ಸಹಾಯವನ್ನು ಸಹ ನೀಡಿದೆ. ಇದೇ ರೀತಿ Paytm ಕೂಡ ಈ ವಾರದ ಆರಂಭದಲ್ಲಿ ಪ್ರಧಾನ ಮಂತ್ರಿ ಪರಿಹಾರ ನಿಧಿ (PM-CARES)ಗೆ ಹಣ ಸಹಾಯ ಮಾಡಿದೆ. ಫೋನ್‌ ಪೇ ಕೂಡ 100 ಕೋಟಿ ರೂ ಸಹಾಯವನ್ನ ನಿಡಿರೊದನ್ನ ನಾವಿಲ್ಲಿ ಗಮನಿಸಬಹುದಾಗಿದೆ.

Best Mobiles in India

English summary
Covid-19: TikTok donates 400,000 hazmat suits and 200,000 masks in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X