Home
ಸುದ್ದಿಜಾಲ

ನಿಮಗೆ ಇಷ್ಟವಾದ ಇಮೋಜಿಗಳನ್ನ ನೀವೇ ರಚಿಸಿಕೊಳ್ಳುವುದು ಹೇಗೆ ಗೊತ್ತಾ?

ಇದು ಸೋಶಿಯಲ್‌ ಮೀಡಿಯಾ ಜಮಾನ. ನಿಮ್ಮ ಅನಿಸಿಕೆ ಭಾವನೆಗಳನ್ನ ಒಬ್ಬರಿಂದ ಒಬ್ಬರಿಗೆ ಶೇರ್‌ ಮಾಡೋದಕ್ಕೆ ಸಾಕಷ್ಟು ಮೆಸೇಜಿಂಗ್‌ ಆಪ್ಲಿಕೇಶನ್‌ಗಳಿವೆ. ಸದ್ಯ ಸೊಶೀಯಲ್‌ ಮೀಡಿಯಾ ಆಪ್ಲಿಕೇಶನ್‌ಗಳಲ್ಲಿ ಬಹುತೇಕ ಜನರು ತಮ್ಮ ಭಾವನೆಗಳನ್ನ ಸಂದೇಶಗಳ ರೂಪದಲ್ಲಿ ಕಳುಹಿಸುತ್ತಾರೆ. ಇನ್ನು ಕೆಲವರು ಸಂದರ್ಭಕ್ಕೆ ಅನುಗುಣವಾಗಿ ಇಮೋಜಿಗಳನ್ನು ಕಳುಹಿಸುತ್ತಾರೆ. ಈಗೀಗ ಟೆಕ್ಸ್ಟ್‌ ಮೆಸೆಜ್‌ಗಿಂತ ಇಮೋಜಿ ಮತ್ತು ಸ್ಟೀಕರ್‌ ಗಳನ್ನ ಕಳುಹಿಸೋದು ಆ ಮೂಲಕ ಭಾವನೆಗಳನ್ನ ವ್ಯಕ್ತಪಡಿಸೋದು ಜಾಸ್ತಿಯಾಗಿದೆ.

ಹೌದು

ಹೌದು, ಮೊದಲಿಗಿಂತಲೂ ಇದೀಗ ಸೊಶೀಯಲ್‌ ಮೀಡಿಯಾದಲ್ಲಿ ಬರುವ ಸಂದೇಶಗಳು ಬದಲಾಗುತ್ತಿವೆ. ಮೊದ ಮೊದಲೆಲ್ಲಾ ಹೇಲಬೇಕಾದ ವಿಷಯಗಳನ್ನ ಬರವಣಿಗೆಯ ರೂಪದಲ್ಲಿ ಹೇಳುತ್ತಿದ್ದರೆ ಈಗೀಗ ಸಮಯಕ್ಕೆ ಅನುಗುಣವಾಗಿ ಅದಕ್ಕೆ ಸೂಕ್ತ ಅರ್ಥ ನೀಡಬಲ್ಲ ಇಮೋಜಿ ಸಂದೇಶಗಳನ್ನ ಬಹುತೇಕರು ಕಳುಹಿಸುತ್ತಾರೆ. ಆದರೆ ಕೆಲವೊಮ್ಮೆ ನೀವು ಹೇಳಲು ಬಯಸುವ ವಿಷಯಕ್ಕೆ ಸರಿಹೊಂದುವಂತಹ ಇಮೋಜಿ ಲಭ್ಯವಾಗದೇ ಹೋದರೆ ಏನು ಮಾಡೋದು.? ಚಿಂತಿಸಬೇಡಿ ಅದಕ್ಕಾಗಿಯೇ ಆಂಡ್ರಾಯ್ಡ್‌ ಬಳಕೆದಾರರಿಗೆ Gboard ಆಪ್ಲಿಕೇಶನ್‌ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಅದು ಹೇಗೆ ಕಾರ್ಯನಿರ್ವಹಿಸಲಿದೆ, ಅದರಿಂದ ಹೇಗೆ ಇಮೋಜಿ ರಚಿಸುವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

Gboard ಆಪ್ಲಿಕೇಶನ್‌

Gboard ಆಪ್ಲಿಕೇಶನ್‌

ಗೂಗಲ್‌ ಕಿಬೋರ್ಡ್‌ ಆಪ್ಲಿಕೇಶನ್‌ ಇದು ಗೂಗಲ್‌ನ ಒಂದು ಆಪ್ಲಿಕೇಶನ್‌ ಆಗಿದ್ದು. ಆಂಡ್ರಾಯ್ಡ್‌ ಆಧಾರಿತ ಸ್ಮಾರ್ಟ್‌ಪೋನ್‌ಗಳಲ್ಲಿ ಲಭ್ಯವಿರಲಿದೆ. ಈ ಕೀಬೋರ್ಡ್ ವೇಗ ಮತ್ತು ವಿಶ್ವಾಸಾರ್ಹತೆ, ಗ್ಲೈಡ್ ಟೈಪಿಂಗ್, ವಾಯ್ಸ್‌ ಟೈಪಿಂಗ್ ಮತ್ತು ಹ್ಯಾಂಡ್‌ ರೈಟಿಂಗ್‌, ಸರ್ಚ್‌ ಆಂಡ್‌ ಶೇರ್‌ ಹಾಗೂ ಇಮೋಜಿ ಸರ್ಚ್‌ ಅನ್ನು ಮಾಡುತ್ತದೆ. ಸದ್ಯ ಬಹುತೇಕ ಮಂದಿ Gboard ಅನ್ನು ಇಮೋಜಿ ಗಳ ಹುಡುಕಾಟಕ್ಕಾಗಿ ಬಳಸುತ್ತಾರೆ. ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಇಮೊಜಿಗಳನ್ನ ಮಾತ್ರ ನೀಡುತ್ತಿದ್ದ Gboard ಇದೀಗ ನೀವು ಮೆಚ್ಚುವ ಇಮೋಜಿಗಳನ್ನ ನೀವೆ ರಚಿಸಿಕೊಳ್ಳಬಹುದಾದ ಅವಕಾಶವನ್ನ ಕಲ್ಪಿಸಿಕೊಟ್ಟಿದೆ.

ಇಮೋಜಿಗಳನ್ನ ರಚಿಸುವುದು ಹೇಗೆ

ಇಮೋಜಿಗಳನ್ನ ರಚಿಸುವುದು ಹೇಗೆ

Gboard ಆಪ್ಲಿಕೇಶನ್‌ನಲ್ಲಿ ಇಮೋಜಿ ಕಿಚನ್‌ ಇದ್ದು ಅಲ್ಲಿ ನಿಮಗೆ ಬೇಕಾದ ಇಮೋಜಿಗಳು ಸಿಗುತ್ತವೆ. ನಿಮ್ಮ ಸಂದೇಶಕ್ಕೆ ಹೋಲುವಂತಹ ವ್ಯಕ್ತಿತ್ವದ ಇಮೋಜಿಗಳನ್ನ ಅಲ್ಲಿ ಸೇರಿಸಬಹುದಾಗಿರುತ್ತೆ. ಬೇರೆ ಆಪ್ಲಿಕೇಶನ್‌ಗಳಿಂದ ನೀವು ಬಯಸಿದ ಹಾಗೂ ಸೇರಿಸಬಹುದಾದ ಇಮೋಜಿಗಳು ಸಿಗುವುದಿಲ್ಲ. ನಿಮಗೆ ಇಮೋಜಿಗಳು ಬೇಕೆಂದರೆ ನೀವು Gboardಗೆ ಎಂಟ್ರಿ ನೀಡಲೇಬೇಕಿದೆ. ಇನ್ನು ನಿಮಗೆ ಬೇಕಾದ ಇಮೋಜಿಗಳನ್ನ ಕ್ರಿಯೆಟ್‌ ಮಾಡುವುದು ಹೇಗೆ ಅನ್ನೊದನ್ನ ಇಲ್ಲಿ ಹಂತಹಂತವಾಗಿ ತಿಳಿಸಿಕೊಡ್ತೀವಿ ನೋಡಿ.

ನೀವು ಇಮೋಜಿ

1. ನೀವು ಇಮೋಜಿಗಳನ್ನ ರಚಿಸಬೇಕೆಂದರೆ ಮೊದಲಿಗೆ Gboard ನಿಮ್ಮ ಡಿಫಾಲ್ಟ್‌ ಕೀಬೋರ್ಡ್‌ ಆಗಿರಬೇಕು. ನಂತರ ನೀವು ಮೆಸೆಜ್ ಟೈಪ್‌ ಮಾಡಿರುವ ಆಪ್ಲಿಕೇಶನ್‌ ಅನ್ನು ತೆರೆಯಬೇಕು, ತದ ನಂತರ Gboardಗೆ ಎಂಟ್ರಿ ನೀಡಿ ಅಲ್ಲಿ ಇಮೋಜಿ ವಿಭಾಗವನ್ನ ತೆರೆಯ ಬೇಕು.

2. ಇಮೋಜಿಯನ್ನು ಟ್ಯಾಪ್ ಮಾಡಿ. ಯಾವ ವಿಷಯವನ್ನು ವ್ಯಕ್ತಪಡಿಸಲು ಇಮೋಜಿಯನ್ ಹುಡುಕಲಾಗುತ್ತಿದೆ ಎಂಬುದನ್ನು ನೋಡಲು ನೀವು ಕೆಲವು ಇಮೋಜಿಗಳನ್ನು ಪರೀಕ್ಷಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನಂತರ ಗೂಗಲ್‌ನ ಅಧಿಕೃತ ಪ್ರಕಟಣೆಯಲ್ಲಿ ಕೌಬಾಯ್ ಮುಖ, ಕೋಡಂಗಿ, ಮಂಕಿ, ರೋಬೋಟ್, ಕಳ್ಳಿ, ಪೂಪ್, ಭೂತ ಮತ್ತು ಹೃದಯ ಇಮೋಜಿಗಳು ಕಾಣ ಸಿಗುತ್ತವೆ. ಅದಕ್ಕೂ ಮಿಗಿಲಾದ ಇಮೋಜಿಗಳನ್ನ ನೀವು ಇಲ್ಲಿ ಕಾಣಬಹುದಾಗಿರುತ್ತೆ. ಅಲ್ಲಿ ನಿಮಗೆ ಬೇಕಾದ ಇಮೋಜಿಗಳನ್ನ ರಚಿಸಿಕೊಳ್ಳಿ.

ನಂತರ

3. ನಂತರ ಇಮೋಜಿಗಳನ್ನು ಕಸ್ಟಮೈಸ್ ಮಾಡಲು ಅಥವಾ ಇನ್ನೊಂದು ಇಮೋಜಿಯ ಜೊತೆ ಸಂಯೋಜಿಸಲು ಸಾಧ್ಯವಾದರೆ, ಕೀಬೋರ್ಡ್ ಮೇಲಿನ ಮೆನುವಿನಲ್ಲಿ ಜಿಬೋರ್ಡ್ ಕೆಲವು ಸಲಹೆಗಳನ್ನು ನೀಡುತ್ತದೆ. ಇದಕ್ಕೆ ಸ್ವಲ್ಪ ಹೆಚ್ಚಿನ ಸಮಯ ತಗುಲಬಹುದು ನಂತರ ಇಮೋಜಿಗಳು ಕಾಣಸಿಗುತ್ತವೆ.

4. Gboard ನಲ್ಲಿ ನಿಮಗೆ ಲಭ್ಯವಾದ ಇಮೋಜಿಗಳನ್ನ ಸ್ಕ್ರಾಲ್ ಮಾಡಿ ಮತ್ತು ನೀವು ಬಳಸಲು ಬಯಸುವ ಹೊಸ ಇಮೋಜಿಗಳನ್ನು ಆಯ್ಕೆ ಮಾಡಿ, ಮತ್ತು ಅದನ್ನು ನಿಮ್ಮ ಸಂದೇಶಕ್ಕೆ ಅನುಗುಣವಾಗಿ ಬಳಸಿಕೊಳ್ಳಿ.

Best Mobiles in India

English summary
Android users will soon be able to mix and match two different emojis to create new ones, all thanks to the Gboard keyboard app’s new “Emoji Kitchen” feature.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+