aptX ಬೆಂಬಲಿಸುವ ಕ್ರಿಯೇಟಿವ್ ಔಟ್‌ಲಿಯರ್‌ ಏರ್‌ ಇಯರ್‌ಫೋನ್‌ ಬಿಡುಗಡೆ!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಜೊತೆಗೆ ಬಹುತೇಕ ಮಂದಿ ಇಯರ್ ಫೋನ್‌ ಹೊಂದಿರುತ್ತಾರೆ. ಸ್ಮಾರ್ಟ್‌ಫೋನ್‌ನಲ್ಲಿನ ಮ್ಯೂಸಿಕ್‌ ಅನುಭವವನ್ನು ಆನಂದಿಸಲು ಇಯರ್‌ಫೋನ್‌ ಇರಲೇಬೇಕು. ಅದರಲ್ಲೂ ಬಹುತೇಕ ಸ್ಮಾರ್ಟ್‌ಫೋನ್‌ ಬಳಕೆದಾರರು ಉತ್ತಮ ಮ್ಯೂಸಿಕ್‌ ಅನುಭವಕ್ಕಾಗಿ ಅತ್ಯುತ್ತಮ ಮಾದರಿಯ ಇಯರ್‌ಫೋನ್‌, ಇಯರ್‌ಬಡ್ಸ್‌ಗಳನ್ನ ಖರೀದಿಸಲು ಇಚ್ಚೆ ಪಡುತ್ತಾರೆ. ಸದ್ಯ ಇಂತಹ ಉತ್ತಮ ಮಾದರಿಯ ಇಯರ್‌ಫೋನ್‌ಗಳನ್ನ ಹಲವು ಕಂಪೆನಿಗಳು ಪರಿಚಯಿಸಿದ್ದು, ಇದೀಗ ಕ್ರಿಯೆಟಿವ್‌ ಔಟ್‌ಲಿಯರ್ ಕಂಪೆನಿ ಹೊಸ ಮಾದರಿಯ ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಕ್ರಿಯೇಟಿವ್ ಔಟ್‌ಲಿಯರ್

ಹೌದು, ಕ್ರಿಯೇಟಿವ್ ಔಟ್‌ಲಿಯರ್ ಕಂಪೆನಿ ತನ್ನ ಹೊಸ ಕ್ರಿಯೇಟಿವ್ ಔಟ್‌ಲೈಯರ್ ಏರ್ ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆಯನ್ನ ಸಾಧಿಸುತ್ತಿರುವ ಕ್ರಿಯೇಟಿವ್‌ ಕಂಪೆನಿ ಇದೀಗ ಟಿಡಬ್ಲ್ಯೂಎಸ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈಗಾಗಲೇ ಕಂಪ್ಯೂಟರ್ ಪೆರಿಫೆರಲ್ಸ್ ಮತ್ತು ಆಡಿಯೊ ಉತ್ಪನ್ನಗಳಿಗೆ ಹೆಸರುವಾಸಿಯಾದ ಕ್ರಿಯೇಟಿವ್,ಕಂಪೆನಿ ಸಧ್ಯ ಕ್ರಿಯೆಟಿವ್‌ ಔಟ್‌ಲಿಯರ್‌ಲೈಯರ್ ಏರ್ ಇಯರ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್‌ಗಳ ವಿಶೇಷತೆ ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಒದಿರಿ.

ಔಟ್‌ಲಿಯರ್

ಕ್ರಿಯೇಟಿವ್ಔಟ್‌ಲಿಯರ್ ಏರ್‌ ಇಯರ್‌ಫೋನ್‌ APTX ಬ್ಲೂಟೂತ್ ಕೊಡೆಕ್‌ಗೆ ಬೆಂಬಲಿಸಲಿದ್ದು, ಇದರ ಮೂಲಕ ಧ್ವನಿ ಗುಣಮಟ್ಟವನ್ನು ಸುಧಾರಿಸಲು ಸಾದ್ಯವಾಗಲಿದೆ. ಅಲ್ಲದೆ ಈ ಇಯರ್‌ಫೋನ್‌ 5.6mm ಗ್ರ್ಯಾಫೀನ್ ಆಡಿಯೋ ಡ್ರೈವರ್‌ಗಳನ್ನು ಹೊಂದಿವೆ. ಇನ್ನು ಈ ಇಯರ್‌ಫೋನ್‌ ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನ ಹೊಂದಿದ್ದು, IPX5 ರೇಟ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಇಯರ್‌ಫೋನ್‌ ಫಿಟ್‌ನೆಸ್ ಮತ್ತು ಕೆಲವು ಮಟ್ಟದ ಔಟ್‌ಸೈಡ್‌ ಸ್ಪೋರ್ಟ್ಸ್‌ ಬಳಕೆಗೆ ಸೂಕ್ತವಾಗಿದೆ.

ಇಯರ್ ಫೋನ್

ಇನ್ನು ಈ ಇಯರ್ ಫೋನ್‌ಗಳು ಜೋಡಿಯಾಗಿರುವ ಸ್ಮಾರ್ಟ್‌ಫೋನ್‌ನಲ್ಲಿ ವಾಯ್ಸ್‌ ಅಸಿಸ್ಟೆಂಟ್ ಅನ್ನು ಸಹ ಇದರ ಮೂಲಕ ನಿಂಯತ್ರಿಸಬಹುದಾಗಿದೆ. ಜೊತೆಗೆ ಕನೆಕ್ಟಿವಿಟಿ ಗಾಗಿ ಬ್ಲೂಟೂತ್ 5.0 ಅನ್ನು ಬೆಂಬಲಿಸುತ್ತದೆ. ಅಲ್ಲದೆ ಉತ್ತಮ ನಿಷ್ಕ್ರಿಯ ಶಬ್ದ ಪ್ರತ್ಯೇಕತೆಗಾಗಿ ಕಾಲುವೆಯ ಫಿಟ್ ಅನ್ನು ಒಳಗೊಂಡಿದೆ. ಇನ್ನು ಈ ಇಯರ್‌ಫೋನ್‌ ಬ್ಯಾಟರಿ ಪ್ಯಾಕ್‌ಅಪ್‌ 30 ಗಂಟೆಗಳು ಇರುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಲ್ಲದೆ ಈ ಇಯರ್‌ಫೋನ್‌ಗಳು ಪ್ರತಿ ಚಾರ್ಜ್‌ಗೆ 10 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಜೊತೆಗೆ ಅಲ್ಯೂಮಿನಿಯಂ ಚಾರ್ಜಿಂಗ್ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ.

ಇಯರ್‌ಫೋನ್‌

ಇನ್ನು ಆಪ್ಟಿಎಕ್ಸ್ ಬೆಂಬಲ ಮತ್ತು ಕ್ಲೈಮ್ಡ್ ಕ್ಲಾಸ್-ಲೀಡಿಂಗ್ ಬ್ಯಾಟರಿ ಹೊಂದಿರುವ ಈ ಇಯರ್‌ಫೋನ್‌ಗಳ ಬೆಲೆ 6,999ರೂ ಹೊಂದಿದ್ದು, ಕೈಗೆಟುಕುವ ಮತ್ತು ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಲಬ್ಯವಾಗಲಿದೆ. ಸದ್ಯ ಈ ಇಯರ್‌ಫೋನ್‌ಗಳು ಅಮೆಜಾನ್‌ನಲ್ಲಿ ಲಭ್ಯವಿದೆ. ಅಲ್ಲದೆ 1 ಮೋರ್, ಬೋಟ್ ಮತ್ತು ನಾಯ್ಸ್‌ ಬ್ರಾಂಡ್‌ಗಳ ಇಯರ್‌ಫೋನ್‌ಗಳಿಗೆ ಪ್ರಬಲಸ್ಫರ್ಧೆ ನಿಡಲಿದೆ ಎನ್ನಲಾಗಿದೆ.

Best Mobiles in India

English summary
Creative Outlier Air is support for the aptX Bluetooth codec, which will improve sound quality on supported devices, which includes most Android smartphones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X