Just In
- 17 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 19 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 19 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 21 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- News
ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಗುಜರಾತ್ನಲ್ಲಿ ಜೂನಿಯರ್ ಕ್ಲರ್ಕ್ ನೇಮಕಾತಿ ಪರೀಕ್ಷೆ ರದ್ದು, ಓರ್ವನ ಬಂಧನ
- Sports
ಫಿಟ್ನೆಸ್ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ತೇರ್ಗಡೆ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಬುಮ್ರಾ ವಾಪಸ್?
- Movies
3 ದಿನಗಳಲ್ಲಿ ಕ್ರಾಂತಿ ಪಡೆದುಕೊಂಡ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್; ಇಷ್ಟು ಸಾಕಾ?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಂಬಿಕಸ್ಥರಿಗೂ ಸಹ ನಿಮ್ಮ 'ಎಟಿಎಂ ಕಾರ್ಡ್' ಕೊಡ್ಬೇಡಿ ಅಂತ ಇದಕ್ಕೆ ಹೇಳೋದು!!
ಎಷ್ಟೇ ನಂಬಿಕಸ್ಥರಾದರೂ ಯಾವುದೇ ಕಾರಣಕ್ಕೂ ಬೇರೆಯವರಿಗೆ ಎಟಿಎಂ ಕಾರ್ಡ್ ಕೊಡಬೇಡಿ ಎಂದು ಯಾವಾಗಲೂ ಹೇಳುವುದುಂಟು. ಆದರೆ, ಒಮ್ಮೆ ಎಚ್ಚರ ತಪ್ಪುವ ಜನರು ಹೇಗೆ ಹಣ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಈ ಘಟನೆಯೊಂದು ಸಾಕ್ಷಿಯಾಗಿದೆ. ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ 79 ವರ್ಷದ ವೃದ್ಧೆಯ ನಂಬಿಕೆ ದುರುಪಯೋಗಪಡಿಸಿಕೊಂಡು ಅವರ ಡೆಬಿಟ್ ಕಾರ್ಡ್ನಿಂದ ಹಂತ ಹಂತವಾಗಿ ಹಣ ಕದ್ದ ವ್ಯಕ್ತಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಶ್ರೀಮಂತ ವೃದ್ಧೆಯ ಕಾರು ಚಾಲಕನಾಗಿದ್ದ ನಾಗರಾಜ ಎಂಬುವವನು ಅವರ ವಿಶ್ವಾಸ ಗಳಿಸಿದ್ದ. ಆತನನ್ನು ನಂಬಿದ್ದ ವೃದ್ಧೆ ತಮ್ಮ ಬ್ಯಾಂಕ್ ಎಟಿಎಂ ಕಾರ್ಡ್ ಹಾಗೂ ಮೊಬೈಲ್ನ್ನು ನಾಗರಾಜ್ ಕೈಗೆ ಆಗಾಗ ಕೊಡುತ್ತಿದ್ದರು. ದಿನಬಳಕೆ ವಸ್ತುಗಳ ಖರೀದಿ, ವಿದ್ಯುತ್ ಇನ್ನಿತರ ಬಿಲ್ ಪಾವತಿಗೆ ನಾಗರಾಜ್ ಕಾರ್ಡ್ ಬಳಕೆ ಮಾಡುತ್ತಿದ್ದ. ಆದರೆ, ಇದೆ ನಂಬಿಕೆಯನ್ನು ಸ್ನೇಹಿನೊಡನೆ ದುರುಪಯೋಗಪಡಿಸಿಕೊಂಡ ನಾಗರಾಜ್ ವೃದ್ಧೆಯ ಬ್ಯಾಂಕ್ ಖಾತೆಗೆ ಕನ್ನಹಾಕಿ ಹಣ ಎಗರಿಸಿದ್ದಾನೆ.

ವೃದ್ಧೆಯ ಡೆಬಿಟ್ ಕಾರ್ಡ್ ದುರುಪಯೋಗ ಮಾಡಿಕೊಂಡ ನಾಗರಾಜ್, ಕಾರ್ಡ್ನ 2 ಬದಿಯ ಫೋಟೋ ಕ್ಲಿಕ್ಕಿಸಿ ಸ್ನೇಹಿತನಿಗೆ ಕಳುಹಿಸಿದ್ದ. ಕಾರ್ಡ್ನ ನಂಬರ್, ಅವಧಿ ಮುಕ್ತಾಯ ದಿನಾಂಕ ಮತ್ತು ಸಿವಿವಿ ನಮೂದು ಮಾಡಿಕೊಂಡು ವೃದ್ಧೆಯ ಮೊಬೈಲ್ ತನ್ನ ಬಳಿ ಇದ್ದಾಗ ಪೇಟಿಎಂಗೆ ಹಣ ವರ್ಗಾವಣೆ ಮಾಡಿಕೊಳ್ಳಲು ನಾಗರಾಜ್ ಹೇಳಿದ್ದ. ಆ ನಂತರ ವೃದ್ಧೆಯ ಮೊಬೈಲ್ಗೆ ಬರುತ್ತಿದ್ದ 'ಒಟಿಪಿ'ಯನ್ನು ತನ್ನ ಮೊಬೈಲ್ನಿಂದ ಕಳುಹಿಸಿ ಹಣ ಎಗರಿಸಿದ್ದ.
ನಾಗರಾಜ್ ಮೇಲಿನ ವಿಶ್ವಾಸದಿಂದ ಮೋಸದ ವಿಚಾರ ಗಮನಕ್ಕೆ ಬಂದಿರಲಿಲ್ಲ. ಇತ್ತೀಚಿಗೆ ತಮ್ಮ ಖಾತೆಯಲ್ಲಿದ್ದ ಹಣದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಅನುಮಾನಗೊಂಡ ಮಾಲಕಿ, ಬ್ಯಾಂಕ್ನಿಂದ ವಹಿವಾಟು ವಿವರದ ಮಾಹಿತಿ ಪಡೆದಾಗ ಅಪರಿಚಿತನ ಪೇಟಿಎಂ ಖಾತೆಗೆ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ನಾಗರಾಜ್ ಒಟಿಪಿಯನ್ನು ತನ್ನ ಸ್ನೇಹಿತನಿಗೆ ಕಳುಹಿಸುತ್ತಿದ್ದ ನಂತರ ಅದನ್ನು ಡಿಲೀಟ್ ಮಾಡುತ್ತಿದ್ದುದರಿಂದ ಇದು ವೃದ್ಧೆಯ ಗಮನಕ್ಕೆ ಬಂದಿರಲಿಲ್ಲ.

ಕಳೆದ 1 ತಿಂಗಳಲ್ಲಿ ಇಬ್ಬರೂ ಸೇರಿ 9 ವಹಿವಾಟುಗಳಲ್ಲಿ 47 ಸಾವಿರ ರೂ. ವರ್ಗಾವಣೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವೃಧ್ದೆ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಣ ವರ್ಗಾವಣೆಯಾಗಿದ್ದ ಪೇಟಿಎಂ ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೇರೆಯವರಿಗೆ ತಮ್ಮ ಬ್ಯಾಂಕ್ ಖಾತೆಯ ವಿವರ, ಎಟಿಎಂ ಕಾರ್ಡ್ ಮತ್ತು ಆನ್ಲೈನ್ ಬ್ಯಾಂಕ್ಗೆ ಅಧಿಕೃತವಾಗಿ ನೋಂದಣಿಯಾದ ಮೊಬೈಲ್ ನಂಬರ್ ನೀಡಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಸೈಬರ್ ಕ್ರಿಮಿನಲ್‌ಗಳ ವಂಚನೆಯಿಂದ ಪಾರಾಗುವುದು ಹೇಗೆ?
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಇಂಟರ್‍ನೆಟ್ ಮೂಲಕ ಪ್ರತಿ ಗಂಟೆಗೆ ಅಮಾಯಕರಿಗೆ ಸುಮಾರು 2 ಲಕ್ಷ ರೂ.ಗಳನ್ನು ಸೈಬರ್ ಕ್ರಿಮಿನಲ್‌ಗಳು ವಂಚಿಸುತ್ತಿದ್ದಾರೆ ಎಂಬ ಶಾಕಿಂಗ್ ಸುದ್ದಿ ನಿಮಗೆ ಈಗಾಗಲೇ ತಿಳಿದಿರಬಹುದು. ಡಿಜಿಟಲ್ ವಹಿವಾಟಿಗೆ ಹೆಚ್ಚು ಪ್ರೋತ್ಸಾಹ ಸಿಕ್ಕ ನಂತರ ಸೈಬರ್ ಅಪರಾಧಿಗಳಿಗೆ ಇದು ವರದಾನವಾಗಿದ್ದು, ಸಾಮಾನ್ಯ ಜನರನ್ನು ಬಹುಬೇಗ ಮೋಸಗೊಳಿಸುತ್ತಿದ್ದಾರೆ.
ದೇಶದ ವಿವಿಧ ರಾಜ್ಯಗಳಿಂದ ದಿನಕ್ಕೆ 48 ಲಕ್ಷ ರೂ.ಗಳನ್ನು ಹೀಗೆ ವಂಚಿಸಲಾಗುತ್ತಿದೆ ಎಂಬುದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಂಕಿ-ಅಂಶಗಳಿಂದ ಬಹಿರಂಗಗೊಂಡಿದ್ದರೆ,ರಾಜ್ಯದಲ್ಲಿ ಕಳೆದ ವರ್ಷ 221 ಪ್ರಕರಣಗಳು ದಾಖಲಾಗಿದ್ದು, 9.16 ಕೋಟಿ ರೂ. ವಂಚನೆಯಾಗಿದೆ. ಇವುಗಳಲ್ಲಿ ಒಂದು ಲಕ್ಷ ರೂ.ಗಳಿಗೆ ಮೇಲ್ಪಟ್ಟ ಮೊತ್ತಗಳು ಮಾತ್ರ ಸೇರಿಕೊಂಡಿವೆ ಎನ್ನಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಪ್ರಕಾರ, ದೇಶದಲ್ಲಿ ಸೈಬರ್ ಹಣಕಾಸು ಅಪರಾಧಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳು ಕನಿಷ್ಟ ಎಂದರೂ 250 ರಿಂದ 300 ಪ್ರಕರಣಗಳು ದಾಖಲಾಗುತ್ತಿವೆ. ಇನ್ನು ನಮ್ಮನ್ನು ಚೆನ್ನಾಗಿ ತಿಳಿದವರೇ ಹೆಚ್ಚು ವಂಚನೆ ಮಾಡುತ್ತಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಸೈಬರ್ ವಂಚಕರಿಂದ ಹಣಕಾಸು ಸಂಗತಿಗಳ ರಕ್ಷಣೆ ಹೇಗೆ ಎಂಬುದನ್ನು ನಾವು ತಿಳಿಯೋಣ.

ಪರಿಚಿತ/ಅಪರಿಚಿತರಿಗೆ ಪಾಸ್ವರ್ಡ್ ಹೇಳಬೇಡಿ
ಪ್ರಾಥಮಿಕ ಹಂತದಲ್ಲಿ ಪರಿಚಿತ ಅಥವಾ ಅಪರಿಚಿತ ವ್ಯಕ್ತಿಗಳಿಗೆ ನಿಮ್ಮ ಪಾಸ್ವರ್ಡ್ ಮಾಹಿತಿಯನ್ನು ಕೊಡಬಾರದು. ನಾವು ವ್ಯಕ್ತಿಗಳ ದುರುದ್ದೇಶಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯ ಇರುವುದಿಲ್ಲ. ಕುಟುಂಬದ ವ್ಯಕ್ತಿಗಳು ಮತ್ತು ಕೆಲ ವಿಶ್ವಾಸಾರ್ಹ ಸ್ನೇಹಿತರನ್ನು ಹೊರತು ಪಡಿಸಿ ಹಣಕಾಸು ಸಂಗತಿಗಳನ್ನು ಇನ್ಯಾರೊಂದಿಗೂ ಹಂಚಿಕೊಳ್ಳಬಾರದು. ನಮಗೆ ಗೊತ್ತಿರುವಂತೆ ಹೆಚ್ಚಿನ ಹಣಕಾಸು ವಂಚನೆ/ಕಳ್ಳತನ ಪರಿಚಯದವರಿಂದಲೇ ಆಗುತ್ತದೆ.

ಫೋನಿನಲ್ಲಿ ವೈಯಕ್ತಿಕ ಮಾಹಿತಿ ನೀಡಬೇಡಿ
ಯಾರಿಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾವುದೇ ಕಾರಣಕ್ಕೂ ನೀಡಬೆಡಿ. ಸೇವೆ ಒದಗಿಸುವವರಿಗೆ ಅನವಶ್ಯಕ ವಿಷಯಗಳಿಗಾಗಿ ತೊಂದರೆ ಕೊಡಬೇಡಿ("Do not disturb") ಎಂದು ನೋಂದಣಿ ಮಾಡಿಸಿಕೊಳ್ಳಿ. ಇದರಿಂದಾಗಿ ಅನವಶ್ಯಕ ಮತ್ತು ಫೇಕ್ ಕರೆಗಳಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೇ ವಂಚಕರಿಂದಲೂ ಮುಕ್ತಿ ಪಡೆಯಬಹುದು.

ಇ-ಮೇಲ್ ಭದ್ರತೆ
ಬ್ಯಾಂಕಿನವರು ನೀಡುವ ಇ-ಮೇಲ್ ಐಡಿಗಳನ್ನು ಸಹ ಹೆಚ್ಚು ಬಳಸಬಾರದು. ಅದರಿಂದಾಗಿ ಹೆಚ್ಚೆಚ್ಚು ಮೋಸ ಹೋಗಬೇಕಾಗುತ್ತದೆ. ಇ-ಮೇಲೆ ಮುಖಾಂತರ ಯಾವುದೇ ಸ್ಟೇಟ್ಮೆಂಟ್ ಗಳನ್ನು ತೆರೆಯಬಾರದು ಇದರಿಂದ ಅಪಾಯವೇ ಹೆಚ್ಚು. ಇ-ಮೇಲ್ ಗಳ ಮೇಲೆ ಕ್ಲಿಕ್ ಮಾಡುವುದರಿಂದ ಅವು ಬೇರೆ ವೆಬ್ಸೈಟ್ ಗೆ ಲಿಂಕ್ ಆಗುತ್ತವೆ. ಇದರಿಂದಾಗಿ ನಮ್ಮ ಅಂಕಿಅಂಶ ಹಾಗೂ ಮಾಹಿತಿಯ ಸೋರಿಕೆ ಆಗುತ್ತದೆ. ಇದರ ಜತೆ ಪ್ರಚಾರದ ಇ-ಮೇಲ್ ಗಳು ಸಹ ಬರುತ್ತವೆ. ಆದರಿಂದಾಗಿ ತುಂಬಾ ಜಾಗೂರತೆಯಿಂದ ಇರಬೇಕಾಗುತ್ತದೆ.

ಆಗಾಗ್ಗೆ ಪಾಸ್ವರ್ಡ್ ಗಳನ್ನು ಬದಲಾಯಿಸುತ್ತಿರಬೇಕು
ನಾವು ಹಣಕಾಸು ವ್ಯವಹಾರದ ಸಂದರ್ಭಗಳಲ್ಲಿ ಬಳಸುವ ಪಾಸ್ವರ್ಡ್ ಗಳನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು. ಅದರಲ್ಲೂ ಹಿರಿಯ ನಾಗರಿಕರು ಇದನ್ನು ಖಚಿತಪಡಿಸಿಕೊಳ್ಳುತ್ತಿರಬೇಕು. ಇದರಿಂದಾಗಿ ಇನ್ನೊಬ್ಬರೂ ನಿಮ್ಮ ಪಾಸ್ವರ್ಡ್ ಊಹಿಸಲು ಸಾಧ್ಯ ಇರುವುದಿಲ್ಲ. ಇದು ಬ್ಯಾಂಕ್ ಸಂಬಂಧಿ ವ್ಯವಹಾರಗಳಲ್ಲೂ ಪಾಲಿಸಬೇಕು.

ಶಾಪಿಂಗ್ ಮಾಡುವ ವೆಬ್ಸೈಟ್ ಗಳನ್ನು ಪರಿಶೀಲಿಸುತ್ತಿರಿ
ಶಾಪಿಂಗ್ ವೆಬ್ಸೈಟ್ ಗಳನ್ನು ಬಳಸುವಾಗ ತುಂಬಾ ಜಾಗರೂಕತೆಯಿಂದ ವ್ಯವಹರಿಸಬೇಕಾಗುತ್ತದೆ. ಏಕೆಂದರೆ ವಂಚಕರು ವೆಬ್ಸೈಟ್ ಗಳನ್ನು ಹ್ಯಾಕ್ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಕೆಲ ನಕಲಿ ವೆಬ್ಸೈಟ್ ಗಳಿದ್ದು ಅವುಗಳಲ್ಲಿ ಶಾಪಿಂಗ್ ಮಾಡುವುದರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ಎಲ್ಲವು ಅವರಿಗೆ ಲಭ್ಯವಾಗುತ್ತದೆ. ಇವೆಲ್ಲವೂ ವಂಚನೆಯ ಅನೆಕ ಮುಖಗಳಾಗಿದ್ದು ಇವುಗಳಿಂದ ತಪ್ಪಿಸಿಕೊಳ್ಳುವುದು ನಿಮ್ಮ ಕರ್ತವ್ಯ.

ಆಯಂಟಿ ವೈರಸ್(Anti Virus Software ) ಬಳಸಿ
ಉತ್ತಮವಾದ ವೈರಸ್(Anti Virus Software ) ಸಾಪ್ಟವೇರ್ ಖರೀದಿಸಿ. ಇದೊಂದು ಸಮಗ್ರವಾದ ಉತ್ತಮ ತಂತ್ರಾಂಶವಾಗಿದ್ದು ಕೇವಲ ಅಂತರ್ಜಾಲ ವಿರೋಧಿ ತಂತ್ರಾಂಶ ಮಾತ್ರ ಅಲ್ಲ. ಬದಲಾಗಿ ಸಂಪೂರ್ಣವಾದ ಫೈರ್ ವಾಲ್ ರಕ್ಷಣೆಯನ್ನು ಹೊಂದಿರಬೆಕು.ಇದು ಎಲ್ಲ ಅಂಕಿಅಂಶಗಳನ್ನು ಸುರಕ್ಷಿತವಾಗಿಡಬೇಕು. ಜತೆಗೆ ವಂಚಕರು/ಕಳ್ಳರು ದುರುಪಯೋಗ ಮಾಡದಂತೆ ರಕ್ಷಿಸುವಂತಿರಬೇಕು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470