ಭಾರತಕ್ಕೆ ಎಂಟ್ರಿ ಕೊಟ್ಟ ಕ್ರಾಸ್‌ಬೀಟ್ಸ್ ನೆಕ್ಸಸ್ ಸ್ಮಾರ್ಟ್‌ವಾಚ್! ChatGPT ಟೆಕ್ನಾಲಜಿಗೆ ಬೆಂಬಲ!
ಇಂದಿನ ಜಮಾನದಲ್ಲಿ ಸ್ಮಾರ್ಟ್‌ವಾಚ್‌ಗಳು ಕೇವಲ ಸಮಯವನ್ನು ತೋರಿಸುವ ಕೈ ಗಡಿಯಾರಗಳಾಗಿ ಉಳಿದಿಲ್ಲ. ಸ್ಮಾರ್ಟ್‌ವಾಚ್‌ಗಳು ಕೂಡ ಇಂದು ಸ್ಮಾರ್ಟ್‌ಫೋನ್‌ಗಳಿಗೆ ಸರಿಸಮಾನಾದ ಕಾರ್ಯ ನಿರ್ವಹಿಸುವ ಮಟ್ಟಿಗೆ ಮುಂದುವರೆದಿವೆ. ಅದಕ್ಕೆ ಇಂಬು ಕೊಡುವಂತೆ ಕ್ರಾಸ್‌ಬೀಟ್ಸ್ ಹೊಸ ವಾಚ್ ಪರಿಚಯಿಸಿದೆ. ಇದು ChatGPT ಟೆಕ್ನಾಲಜಿಯನ್ನು ಹೊಂದಿದೆ.
ಹೌದು, ಕ್ರಾಸ್‌ಬೀಟ್ಸ್ ನೆಕ್ಸಸ್ ಸ್ಮಾರ್ಟ್‌ವಾಚ್ ಇದೀಗ ಭಾರತದಲ್ಲಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ವಾಚ್ ಬಳಕೆದಾರರ ಹಲವು ಅಗತ್ಯತೆಗಳನ್ನು ಪೂರೈಸಲಿದೆ ಅನ್ನೊದು ಇದರ ಮೇನ್ ಹೈಲೈಟ್ ಆಗಿದೆ. ಇನ್ನು ಸ್ಮಾರ್ಟ್‌ವಾಚ್ ಡೈನಾಮಿಕ್ ಐಲ್ಯಾಂಡ್ ಮತ್ತು ಜಿಪಿಎಸ್ ಡೈನಾಮಿಕ್ ರೂಟ್ ಟ್ರ್ಯಾಕಿಂಗ್ ಬೆಂಬಲವನ್ನು ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕ್ರಾಸ್‌ಬೀಟ್ಸ್ ನೆಕ್ಸಸ್ ಸ್ಮಾರ್ಟ್‌ವಾಚ್ ಫೀಚರ್ಸ್ ಹೇಗಿದೆ?
Crossbeats Nexus ಸ್ಮಾರ್ಟ್‌ವಾಚ್ 2.1-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 320 x 384 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಬರಲಿದೆ. ಈ ಸ್ಮಾರ್ಟ್‌ವಾಚ್ 500 ಕಸ್ಟಮೈಸ್ ಮಾಡಬಹುದಾದ ವಾಚ್ ಫೇಸ್ ಆಯ್ಕೆಗಳನ್ನು ನೀಡಲಿದೆ. ಸ್ಮಾರ್ಟ್‌ವಾಚ್ ಡೈನಾಮಿಕ್ ಐಲ್ಯಾಂಡ್ ಮತ್ತು ಜಿಪಿಎಸ್ ಡೈನಾಮಿಕ್ ರೂಟ್ ಟ್ರ್ಯಾಕಿಂಗ್ ಬೆಂಬಲವನ್ನು ಹೊಂದಿದೆ. ಇನ್ನು ಈ ಡಿವೈಸ್ ಆಂಡ್ರಾಯ್ಡ್ 5.1 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಗಳನ್ನು ಬೆಂಬಲಿಸಲಿದೆ. ಅಲ್ಲದೆ iOS 10+ ನಲ್ಲಿ ರನ್ ಆಗುತ್ತಿರುವ ಡಿವೈಸ್‌ಗಳೊಂದಿಗೆ ಹೊಂದಿಕೊಳ್ಳಲಿದೆ.

ChatGPT ಗೆ ಬೆಂಬಲ
ಈ ಸ್ಮಾರ್ಟ್‌ವಾಚ್ ಇಷ್ಟೊಂದು ಸೌಂಡ್ ಮಾಡಲು ಮುಖ್ಯ ಕಾರಣ ಇದು ChatGPT technology ಬೆಂಬಲಿಸುವುದು. ಸ್ಮಾರ್ಟ್‌ವಾಚ್‌ನಲ್ಲಿ ಇದೇ ಮೊದಲ ಬಾರಿಗೆ ChatGPT technology ಬೆಂಬಲವನ್ನು ನೀಡಲಾಗುತ್ತಿದೆ. ಇದು ಬಳಕೆದಾರರಿಗೆ ಭಿನ್ನ ಆಯ್ಕೆಗಳನ್ನು ಅನುಭವಿಸುವುದಕ್ಕೆ ಸಾಧ್ಯವಾಗಲಿದೆ. ಚಾಟ್‌ಜಿಪಿಟಿಯನ್ನು ಸ್ಮಾರ್ಟ್‌ವಾಚ್‌ನಲ್ಲಿ ಬಳಸುವ ಮೂಲಕ ನಿಮ್ಮ ಅನುಭವವನ್ನು ಇನ್ನಷ್ಟು ಉತ್ತಮ ಹಂತಕ್ಕೆ ತೆಗೆದುಕೊಂಡು ಹೋಗಲಿದೆ.

ಇದಲ್ಲದೆ, ಸ್ಮಾರ್ಟ್ ವಾಚ್ ತಿರುಗುವ ಕಿರೀಟ, ಇಬುಕ್ ರೀಡರ್, ಡೈನಾಮಿಕ್ ಐಲ್ಯಾಂಡ್ ಮತ್ತು ಜಿಪಿಎಸ್ ಡೈನಾಮಿಕ್ ರೂಟ್ ಟ್ರ್ಯಾಕಿಂಗ್ ಬೆಂಬಲವನ್ನು ಹೊಂದಿದೆ. ಇದಲ್ಲದೆ, ಆಲ್ಟಿಮೀಟರ್, ಬ್ಯಾರೋಮೀಟರ್ ಮತ್ತು ಕಂಪಾಸ್ ಸಾಮರ್ಥ್ಯಗಳನ್ನು ಸಹ ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ಬ್ಲೂಟೂತ್ v5.3, ಹೃದಯ ಬಡಿತ, SpO2, ನಿದ್ರೆ ಟ್ರ್ಯಾಕಿಂಗ್, ರಕ್ತದೊತ್ತಡ ಮಾನಿಟರಿಂಗ್ ಅನ್ನು ಸಹ ಬೆಂಬಲಿಸಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್ ಸಿಂಗಲ್ ಚಾರ್ಜ್‌ನಲ್ಲಿ 7 ದಿನಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.

Crossbeats Nexus ಬೆಲೆ ಮತ್ತು ಲಭ್ಯತೆ
ಈ ಸ್ಮಾರ್ಟ್‌ವಾಚ್ ಭಾರತದಲ್ಲಿ 5,999ರೂ ಬೆಲೆಯನ್ನು ಹೊಂದಿದೆ. ಇದು ಸಿಲ್ವರ್ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಬರಲಿದ್ದು, ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದಾಗಿದೆ.
ಇನ್ನು ಇತ್ತೀಚಿಗೆ ಕಾಸ್‌ಬೀಟ್ ಕಂಪೆನಿ ಮಹಿಳೆಯರಿಗಾಗಿಯೇ ವಿಶೇಷವಾಗಿ ಕ್ರಾಸ್‌ಬೀಟ್ಸ್ ದಿವಾ ಸ್ಮಾರ್ಟ್‌ವಾಚ್ ಪರಿಚಯಿಸಿತ್ತು. ಈ ಸ್ಮಾರ್ಟ್‌ವಾಚ್ 700 nits ಪೀಕ್ ಬ್ರೈಟ್‌ನೆಸ್‌ನೊಂದಿಗೆ 1.28'' AMOLED ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ 7 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇದಲ್ಲದೆ ಸ್ಮಾರ್ಟ್ ವಾಚ್ ಕ್ಯಾಲ್ಕುಲೇಟರ್‌ಗಳು, ಸಿಟ್ಟಿಂಗ್ ಅಧಿಸೂಚನೆ, ಸ್ಟಾಪ್‌ವಾಚ್, ಹವಾಮಾನ ವರದಿ ನವೀಕರಣ, ಫೈಂಡ್ ಮೈ ಫೋನ್ ನಂತಹ ಫೀಚರ್ಸ್‌ಗಳೊಂದಿಗೆ ಬರಲಿದೆ.
ಇದು ಸಂಗೀತ ಮತ್ತು ಕ್ಯಾಮರಾ ನಿಯಂತ್ರಣದಂತಹ ವಿವಿಧ ಕಾರ್ಯಗಳನ್ನು ಒಳಗೊಂಡಿದೆ. ಬ್ಲೂಟೂತ್ 5.3 ಬೆಂಬಲದೊಂದಿಗೆ, ಇದು ನಿಮ್ಮ ಸಾಧನಕ್ಕೆ ಸ್ಥಿರ ಮತ್ತು ಕಡಿಮೆ-ಸುಪ್ತ ಸಂಪರ್ಕವನ್ನು ಒದಗಿಸುತ್ತದೆ. ಈ ಸ್ಮಾರ್ಟ್ ವಾಚ್ ಹೃದಯ ಬಡಿತ ಮಾನಿಟರ್, SpO2, ನಿದ್ರೆ ಮಾನಿಟರ್, ರಕ್ತದೊತ್ತಡದ ಆರೋಗ್ಯ ಮೇಲ್ವಿಚಾರಣೆಯನ್ನು ಸಹ ನೀಡುತ್ತದೆ. ಕಲ್ಲಿನಿಂದ ಕೂಡಿದ ವಿನ್ಯಾಸವು ಈ ಸ್ಮಾರ್ಟ್ ವಾಚ್‌ಗೆ ಶೈಲಿಯ ಸ್ಪರ್ಶವನ್ನು ನೀಡುತ್ತದೆ.


Click it and Unblock the Notifications








