ಕ್ರಿಕೆಟ್ ಪ್ರಿಯರಿಗಾಗಿಯೇ ಹೊಸ ಸ್ಮಾರ್ಟ್‌ವಾಚ್ ಪರಿಚಯಿಸಿದ Cult.sport! ಏನಿದರ ವಿಶೇಷ!
Cult.sport ಕಂಪೆನಿ ಕ್ರೀಡೆ ಮತ್ತು ಫಿಟ್‌ನೆಸ್ ಪರಿಕರಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ಆದರೆ ಇತ್ತೀಚಿಗೆ ತನ್ನ ಪ್ರಭಾವವನ್ನು ಸ್ಮಾರ್ಟ್‌ವಾಚ್ ವಲಯದಲ್ಲಿಯೂ ಕೂಡ ವಿಸ್ತರಿಸಿಕೊಂಡಿದೆ. ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳ ಮೂಲಕ ಸದ್ದು ಮಾಡಿದೆ. ಇದೀಗ ಸ್ಪೋರ್ಟ್ಸ್ ಪ್ರಿಯರಿಗೆ ಸೂಕ್ತವಾಗುವ ಹೊಸ Cult.sport ಬರ್ನ್+ ವಾಚ್ ಪರಿಚಯಿಸಿದೆ.
ಹೌದು, Cult.sport ಬರ್ನ್ ಪ್ಲಸ್ ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್ ಕ್ರಿಕೆಟ್ ಲೈವ್ ಸ್ಕೋರ್‌ಗಳನ್ನು ಸಹ ನೋಡುವುದಕ್ಕೆ ಅವಕಾಶ ನೀಡಲಿದೆ. ಇನ್ನು ಸ್ಮಾರ್ಟ್‌ವಾಚ್ ಆಲ್‌ವೇಸ್ ಆನ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ರಿಕೆಟ್ ಪ್ರೇಮಿಗಳನ್ನು ಗುರಿಯಾಗಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಅದರಲ್ಲೂ ವಿಶ್ವಕಪ್ ಕ್ರಿಕೆಟ್ 2023 ಪಂದ್ಯಗಳ ಅಪ್ಡೇಟ್ ಪಡೆಯಲು ಬಯಸುವವರಿಗೆ ಇದು ಬೆಸ್ಟ್ ವಾಚ್ ಆಗಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Cult.sport ಬರ್ನ್+ ವಿಶೇಷತೆ ಏನು?
Cult.sport ಬರ್ನ್+ ಸ್ಮಾರ್ಟ್‌ವಾಚ್ 1.78-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 368 x 448 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಸ್ಕ್ರೀನ್ ಆಲ್‌ವೇಸ್ ಆನ್ ಫೀಚರ್ಸ್ ಬೆಂಬಲಿಸಲಿದ್ದು, ಡಿಸ್‌ಪ್ಲೇಯನ್ನು ಎಚ್ಚರಗೊಳಿಸದೆಯೇ ಪ್ರಮುಖ ವಿವರಗಳನ್ನು ಪರಿಶೀಲಿಸಲು ಅವಕಾಶ ನೀಡಿದೆ. ಈ ಸ್ಮಾರ್ಟ್‌ವಾಚ್‌ನ ಮೇನ್ ಹೈಲೈಟ್ ಎಂದರೆ ಅದು ಕ್ರಿಕ್‌ಬಡ್ಡಿ ಫೀಚರ್ಸ್ ಆಗಿದೆ. ಇದು ಬಳಕೆದಾರರಿಗೆ ಸ್ಮಾರ್ಟ್‌ವಾಚ್ ಮೂಲಕ ಲೈವ್ ಕ್ರಿಕೆಟ್ ಸ್ಕೋರ್‌ಗಳನ್ನು ಒದಗಿಸುತ್ತದೆ.
ಈ ಹೊಸ ಫೀಚರ್ಸ್ ಕ್ರಿಕೆಟ್ ಪ್ರಿಯರನ್ನು ಗುರಿಯಾಗಿಸಿಕೊಂಡಿದ್ದು, ಪ್ರಯಾಣದ ಸಂದರ್ಭದಲ್ಲಿಯೂ ವಿಶ್ವಕಪ್ ಕ್ರಿಕೆಟ್‌ನ ಲೈವ್ ಸ್ಕೋರ್ ಅಪ್ಡೇಟ್ ತಿಳಿಯಲು ಬಯಸುವವರಿಗೆ ಉತ್ತಮ ಆಯ್ಕೆ ಇದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಕೂಡ ಒಳಗೊಂಡಿದೆ. ಇದರಿಂದ ನೀವು ಸ್ಮಾರ್ಟ್‌ಫೋನ್ ಕರೆಗಳನ್ನು ವಾಚ್ ಮೂಲಕವೇ ಕಂಟ್ರೋಲ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಇದರೊಂದಿಗೆ ನಿಮ್ಮ ಫಿಟ್‌ನೆಸ್ ಗುರಿಗಳನ್ನು ಟ್ರ್ಯಾಕ್ ಮಾಡಲು ಹಲವು ಹೆಲ್ತ್ ಫೀಚರ್ಸ್‌ಗಳನ್ನು ಸಹ ನೀಡಲಾಗಿದೆ.

ಇದರಲ್ಲಿ ಪ್ರಮುಖವಾಗಿ ಹೃದಯ ಬಡಿತ ಮಾನಿಟರಿಂಗ್, ಸ್ಟೆಪ್ ಕೌಂಟರ್, ಕ್ಯಾಲೋರಿ ಕೌಂಟರ್, ಅವಧಿ ಟ್ರ್ಯಾಕರ್ ಮತ್ತು SpO2 ಟ್ರ್ಯಾಕರ್ ನಂತಹ ಫಿಟ್‌ನೆಸ್ ಫೀಚರ್ಸ್‌ಗಳನ್ನು ನೀಡಲಾಗಿದೆ. ಅಲ್ಲದೆ ಸೊಶೀಯಲ್ ಮೀಡಿಯಾ QR ಕೋಡ್‌ಗಳನ್ನು ಸಹ ನೀಡುತ್ತದೆ. ಜೊತೆಗೆ 1,000ಕ್ಕೂ ಹೆಚ್ಚು ವರ್ಕ್‌ಔಟ್ ವೀಡಿಯೊಗಳನ್ನು ಒಳಗೊಂಡಿರುವ cult.sports ಅಪ್ಲಿಕೇಶನ್‌ನೊಂದಿಗೆ ನೀವು ಅದನ್ನು ಜೋಡಿಸಬಹುದಾಗಿದೆ.
ಇನ್ನು Cult.sport Burn+ ಸ್ಮಾರ್ಟ್‌ವಾಚ್ 7 ದಿನಗಳವರೆಗೆ ಬ್ಯಾಟರಿ ಬ್ಯಾಕ್ ಅಪ್ ನೀಡಲಿದೆ. ಆದರೆ ಬ್ಲೂಟೂತ್ ಕಾಲಿಂಗ್ ಅನ್ನು ಬಳಸುವಾಗ ಎರಡರಿಂದ ಮೂರು ದಿನಗಳವರೆಗೆ ಮಾತ್ರ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಈ ಸ್ಮಾರ್ಟ್ ವಾಚ್ ಭೌತಿಕ ಕಿರೀಟವನ್ನು ಸಹ ಹೊಂದಿದೆ. ಜೊತೆಗೆ ವಿವಿಧ ಮೆನುಗಳು ಮತ್ತು ಸೆಟ್ಟಿಂಗ್‌ಗಳ ಮೂಲಕ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ.

Cult.sport ಬರ್ನ್+ ಬೆಲೆ ಮತ್ತು ಲಭ್ಯತೆ
Cult.sport Burn+ ಸ್ಮಾರ್ಟ್ ವಾಚ್ ಸಿಲಿಕೋನ್ ಮತ್ತು ಲೋಹದ ಪಟ್ಟಿಯ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಸಿಲಿಕೋನ್ ಸ್ಟ್ರಾಪ್ ಆಯ್ಕೆಯು ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ 2,999ರೂ ಬೆಲೆಯನ್ನು ಹೊಂದಿದೆ. ಇದರ ಲೋಹದ ಪಟ್ಟಿಯ ರೂಪಾಂತರದ ಆಯ್ಕೆಯು 3,499 ರೂ.ಬೆಲೆ ಪಡೆದಿದೆ. ಆದರೆ ಅಮೆಜಾನ್ ಇಂಡಿಯಾ ಮೂಲಕ ಇವುಗಳನ್ನು ಕ್ರಮವಾಗಿ 2,499ರೂ ಮತ್ತು 2,999ರೂ ಬೆಲೆಗೆ ಖರೀದಿಸಬಹುದು. ಈ ಸ್ಮಾರ್ಟ್‌ವಾಚ್‌ಗಳ ಸೇಲ್ ಡೇಟ್ ಅನ್ನು ಕಂಪೆನಿಯು ಇನ್ನು ಬಹಿರಂಗಪಡಿಸಿಲ್ಲ.


Click it and Unblock the Notifications








