BSNL ಜಿಂಗಾಲಾಲ!!..249 ರೂ.ಗೆ ಪ್ರತಿದಿನ 5GB ಡೇಟಾ..ಅನಿಯಮಿತ ಕರೆ!!ಮತ್ತೆ?

Written By:

ಜಿಯೋಯಿಂದಾಗಿ ಟೆಲಿಕಾಂ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲವೇ ಆಗುತ್ತಿದ್ದು, ಪ್ರತಿಯೊಂದು ಟೆಲಿಕಾಂ ಕಂಪೆನಿಗಳೂ ಸಹ ದರಸಮರಕ್ಕೆ ನಿಂತುಬಿಟ್ಟಿವೆ.!ಏನಾದರೂ ಆಗಲಿ ಗ್ರಾಹಕರನ್ನು ಉಳಿಸಿಕೊಳ್ಳಲೇಬೇಕು ಎಂದು ಪಣತೊಟ್ಟ ಎಲ್ಲಾ ಟೆಲಿಕಾಂಗಳು ಒಂದಕ್ಕಿಂತ ಒಂದು ಆಫರ್ ಬಿಡುಗಡೆ ಮಾಡುತ್ತಿವೆ.!!

ಇದಕ್ಕೆ ಹೊಸ ಸೇರ್ಪಡೆ BSNL!! ಏನೇ ಆಫರ್ ನೀಡಿದರೂ ಜನರನ್ನು ಸೆಳೆಯಲು ವಿಫಲವಾಗುತ್ತಿರುವ BSNL ಇದೀಗ ಭಾರಿ ಯೋಜನೆಯನ್ನು ರೂಪಿಸಿಕೊಂಡು ಅಖಾಡಕ್ಕೆ ಇಳಿದಿದೆ. ಹಾಗಾಗಿ, ಆಗಸ್ಟ್ 1 ರಿಂದ 15 ರ ವರೆಗೆ ಭಾರಿ ಬಿಎಸ್ಎನ್ಎಲ್ ಉತ್ಸವ ನಡೆಯಲಿದ್ದು, ಉತ್ಸವದಲ್ಲಿ ಭಾರಿ ಆಫರ್‌ಗಳನ್ನು ಘೋಷಣೆ ಮಾಡಿದೆ.!!

GSM, ಲ್ಯಾಂಡ್‌ಲೈನ್, ಬ್ರಾಡ್‌ಬ್ಯಾಂಡ್ ಹಾಗೂ ಫೈಬರ್‌ ಸೇವೆಗಳನ್ನು ಅತ್ಯಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ತಲುಪಿಸಲು BSNL ಈ ಯೋಜನೆ ರೂಪಿಸಿದ್ದು, ಹಾಗಾದರೆ, ಆಗಸ್ಟ್ 1 ರಿಂದ 15 ರ ವರೆಗೆ BSNL ನೀಡುತ್ತಿರುವ ಆಫರ್‌ಗಳು ಯಾವುವು? ಏನು ವಿಶೇಷತೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
BSNL ಉತ್ಸವದ ಉದ್ದೇಶವೇನು?

BSNL ಉತ್ಸವದ ಉದ್ದೇಶವೇನು?

ಮೊದಲಿಗಿಂತಲೂ ಗುಣಮಟ್ಟದ ಸೇವೆಯನ್ನು ನೀಡುವಲ್ಲಿ BSNL ಪ್ರಸ್ತುತ ಯಶಸ್ವಿಯಾಗಿದ್ದು, ಕಡಿಮೆ ಬೆಲೆಯಲ್ಲಿ ಉತ್ತಮ ಆಫರ್‌ಗಳನ್ನು ನೀಡಲು ಮುಂದಾಗಿದೆ.!! ಖಾಸಾಗಿ ಟೆಲಿಕಾಂಗಳಿಗೆ ಪೈಪೋಟಿ ನೀಡಲು ಈ ಉತ್ಸವ ಏರ್ಪಾಡಾಗಿದ್ದು, BSNL ಭರ್ಜರಿ ಆಫರ್‌ಗಳನ್ನು ಘೋಷಿಸಿದೆ.!!

249 ರೂ.ಗೆ 5GB ಡೇಟಾ!!

249 ರೂ.ಗೆ 5GB ಡೇಟಾ!!

BSNL ತನ್ನ ಲ್ಯಾಂಡ್‌ಲೈನ್ ಬಳಕೆದಾರರಿಗೆ ಭಾರಿ ಆಫರ್ ಘೋಷಿಸಿದ್ದು, ಕೇವಲ 49 ರೂಪಾಯಿಗಳಿಗೆ ಪ್ರತಿ ತಿಂಗಳು ಅನ್‌ಲಿಮಿಟೆಡ್ ಕಾಲ್ ಮತ್ತು 249 ರೂಪಾಯಿಗಳನ್ನು ರೀಚಾರ್ಜ್ ಮಾಡಿಸಿದರೆ ಪ್ರತಿದಿನ 5GB ಡೇಟಾ ಪಡೆಯಬಹುದಾಗಿದೆ.!! ಸ್ಪೀಡ್ ಡೇಟಾ ಖಾಲಿಯಾದ ನಂತರ 1MBPS ನಲ್ಲಿ ಕಾರ್ಯನಿರ್ವಹಣೆ!!

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
ಪ್ರೀಪೆಡ್ ಆಫರ್ ವ್ಯಾಲಿಡಿಟಿ ಹೆಚ್ಚಿಸಿದ BSNL!!

ಪ್ರೀಪೆಡ್ ಆಫರ್ ವ್ಯಾಲಿಡಿಟಿ ಹೆಚ್ಚಿಸಿದ BSNL!!

BSNL ತನ್ನ ಪ್ರೀಪೇಡ್ ಗ್ರಾಹಕರಿಗೂ ಭಾರಿ ಆಫರ್‌ಗಳನ್ನು ನೀಡಿದ್ದು, ಚೌಕಾ-444, ಸಿಕ್ಸರ್-666, BSNL ಟ್ರಿಪಲ್ ಏಸ್-333 ಆಫರ್‌ಗಳ ವ್ಯಾಲಿಡಿಟಿಯನ್ನು ಹೆಚ್ಚಿಸಿದೆ.! ಹಾಗಾಗಿ, ಈ ಎಲ್ಲಾ ಆಫರ್‌ಗಳಿ ಜಿಯೋ ಮತ್ತು ಏರ್‌ಟೆಲ್‌ಗಿಂತಲೂ ಬೆಸ್ಟ್ ಆಫರ್ ಆಗಿದೆ!!

BSNL ಟ್ರಿಪಲ್ ಏಸ್-333

BSNL ಟ್ರಿಪಲ್ ಏಸ್-333

BSNL ಟ್ರಿಪಲ್ ಏಸ್-333 ಆಫರ್ ಮೂಲಕ ಮೂರು ತಿಂಗಳು ಪ್ರತಿದಿನ 3GB ಡೇಟಾ ಬಳಕೆಮಾಡಬಹುದಾಗಿದೆ.! ಪ್ರತಿ ಒಂದು GB ಡೇಟಾ 1 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಸಿಗುತ್ತಿದೆ.!!

BSNL ಚೌಕಾ-444

BSNL ಚೌಕಾ-444

ಚೌಕಾ-444 ಆಫರ್ ಮೂಲಕ BSNL ಪ್ರೀಪೆಡ್ ಗ್ರಾಹಕರು ಪ್ರತಿದಿನ 4GB ಡೇಟಾವನ್ನು 4 ತಿಂಗಳ ವ್ಯಾಲಿಡಿಟಿಯಲ್ಲಿ ಬಳಸಬಹುದಾಗಿದೆ.!!

BSNL ಸಿಕ್ಸರ್-666

BSNL ಸಿಕ್ಸರ್-666

ಟೆಲಿಕಾಂನಲ್ಲಿ ಹೆಚ್ಚು ವ್ಯಾಲಿಡಿಟಿಯ ಆಫರ್ ಇದಾಗಿದ್ದು, BSNL ಸಿಕ್ಸರ್-666 ಆಫರ್ ಮೂಲಕ ಆರು ತಿಂಗಳ ವ್ಯಾಲಿಡಿಟಿಯಲ್ಲಿ ಪ್ರತಿದಿನ ಎರಡು ಜಿಬಿ ಡೇಟಾವನ್ನು ಬಳಕೆ ಮಾಡಬಹುದು.!!

ಗ್ರಾಹಕರಿಗೆ ಮತ್ತೋಂದು ವಿಶೇಷ ಆಫರ್!!

ಗ್ರಾಹಕರಿಗೆ ಮತ್ತೋಂದು ವಿಶೇಷ ಆಫರ್!!

BSNL ಉತ್ಸವದಲ್ಲಿ ಗ್ರಾಹಕರಿಗೆ ಮತ್ತೋಂದು ವಿಶೇಷ ಆಫರ್ ಘೋಷಿಸಿದ್ದು, ಬಿಲ್ ಪಾವತಿ ಮಾಡದೆ ಸಂಪರ್ಕ ಕಡಿತಗೊಳಿಸಿರುವ ಗ್ರಾಹಕರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.! ಕಂತುಗಳ ರೂಪದಲ್ಲಿ ಬಿಲ್ ಪಾವತಿಸಲು BSNLಅವಕಾಶ ನೀಡಿದೆ.!!

ಓದಿರಿ:ವಿಡಿಯೊ ಗೇಮ್‌ನಲ್ಲಿ ಗೆಲ್ಲಲು ಬಾಲಕ ಆತ್ಮಹತ್ಯೆ..ಪೋಷಕರೆ ಏನಿದು ಗೊತ್ತಾ?..ಎಚ್ಚರ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
To counter threat from Reliance Jio, state-run telecom firm BSNL today launched a new plans.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot