Home
ಸುದ್ದಿಜಾಲ

ಶಾಕಿಂಗ್ ನ್ಯೂಸ್!!..ಕೆವೈಸಿ ಸಲ್ಲಿಸದಿದ್ದರೆ ಪೇಟಿಎಂ, ಮೊಬಿಕ್ವಿಕ್, ತೇಜ್ ವ್ಯವಹಾರ ಬಂದ್!!

ಬಳಕೆದಾರರ ಕುರಿತ ಸಂಪೂರ್ಣ ಮಾಹಿತಿ (ಕೆವೈಸಿ) ಸಲ್ಲಿಸದಿದ್ದರೆ ಪೂರ್ಣ ಪ್ರಮಾಣದಲ್ಲಿ ಮೊಬೈಲ್‌ ವಾಲೆಟ್ ವಹಿವಾಟು ನಡೆಸಲು ಸಾಧ್ಯವಾಗದಂತೆ ಮಾಡಲಾಗಿದೆ.

By Bhaskar N J

ಬಳಕೆದಾರರ ಕುರಿತ ಸಂಪೂರ್ಣ ಮಾಹಿತಿ (ಕೆವೈಸಿ) ಸಲ್ಲಿಸದಿದ್ದರೆ ಪೂರ್ಣ ಪ್ರಮಾಣದಲ್ಲಿ ಮೊಬೈಲ್‌ ವಾಲೆಟ್ ವಹಿವಾಟು ನಡೆಸಲು ಸಾಧ್ಯವಾಗದಂತೆ ಮಾಡಲಾಗಿದೆ.! ಭಾರತೀಯ ರಿಸರ್ವ್‌ ಬ್ಯಾಂಕ್‌ ವಿಧಿಸಿರುವ ಈ ನಿಬಂಧನೆಯನ್ನು ಇದೇ ಮಾರ್ಚ್‌ 1ರಿಂದ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವುದರಿಂದ ವಾಲೆಟ್ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.!!

ಸರ್ಕಾರ ಹೇಳಿರುವ ಅಗತ್ಯ ದಾಖಲೆ ಪತ್ರಗಳನ್ನು ಮೊಬೈಲ್‌ ವಾಲೆಟ್ ಸಂಸ್ಥೆಗಳಿಗೆ ಸಲ್ಲಿಸದ ಮತ್ತು ಈ ದಾಖಲೆಗಳನ್ನು ದೃಢೀಕರಿಸದ ಗ್ರಾಹಕರು ತಮ್ಮ ಮೊಬೈಲ್‌ ವಾಲೆಟ್‌ಗೆ ಹೊಸದಾಗಿ ಹಣ ಸೇರ್ಪಡೆ ಮಾಡಲು, ಇತರ ವಾಲೆಟ್‌ಗಳಿಗೆ ಸುಲಭವಾಗಿ ಹಣ ವರ್ಗಾಯಿಸಲು ಈಗ ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.!!

ಕೆವೈಸಿ ಸಲ್ಲಿಸದಿದ್ದರೆ ಪೇಟಿಎಂ, ಮೊಬಿಕ್ವಿಕ್, ತೇಜ್ ವ್ಯವಹಾರ ಬಂದ್!!

ಕೆವೈಸಿ ಇಲ್ಲದೆ 10 ಸಾವಿರವರೆಗಿನ ಮೊಬೈಲ್‌ ವಾಲೆಟ್ ವಹಿವಾಟಿಗೆ ಅವಕಾಶ ಮಾಡಿಕೊಡಬೇಕು ಎಂದು ಪೇಮೆಂಟ್ಸ್‌ ಕೌನ್ಸಿಲ್‌ ಆಫ್‌ ಇಂಡಿಯಾ ಮನವಿ ಮಾಡಿಕೊಂಡಿದ್ದರೂ ಆರ್‌ಬಿಐ ಅದಕ್ಕೆ ಮನ್ನಣೆ ನೀಡಿಲ್ಲ. ಹಾಗಾದರೆ, ಏನಿದು ವರದಿ? ಗ್ರಾಹಕರ ವಹಿವಾಟಿನ ಮೇಲೆ ಪರಿಣಾಮ ಹೇಗಿದೆ? ಎಂಬುದನ್ನು ಮುಂದೆ ತಿಳಿಯಿರಿ.!!

ಶೇ 90ರಷ್ಟು ಗ್ರಾಹಕರು ‘ಕೆವೈಸಿ' ಪೂರ್ಣಗೊಳಿಸಿಲ್ಲ.!!

ಶೇ 90ರಷ್ಟು ಗ್ರಾಹಕರು ‘ಕೆವೈಸಿ' ಪೂರ್ಣಗೊಳಿಸಿಲ್ಲ.!!

ಪೇಟಿಎಂ, ಮೊಬಿಕ್ವಿಕ್, ಸಿಟ್ರಸ್ ಸೇರಿದಂತೆ ವಿವಿಧ ಪ್ರಿಪೇಯ್ಡ್‌ ವಾಲೆಟ್‌ ಬಳಸುವ ಶೇ 90ರಷ್ಟು ಗ್ರಾಹಕರು ‘ಕೆವೈಸಿ' ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂದು ಹೇಳಲಾಗಿದೆ. ಹಾಗಾಗಿ, ಮಾರ್ಚ್‌ 1ರಿಂದ ಮೊಬೈಲ್‌ ವಾಲೆಟ್‌ ಅನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ‘ದ ಮೊಬೈಲ್‌ ವಾಲೆಟ್' ಸ್ಥಾಪಕ ವಿನಯ್ ಕೆ. ಅವರು ಹೇಳಿದ್ದಾರೆ.

ವಾಲೆಟ್ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ!!

ವಾಲೆಟ್ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ!!

ದೇಶದಲ್ಲಿ ನೋಟು ರದ್ದತಿ ನಿರ್ಧಾರದಿಂದ ಮತ್ತು ಇಂಟರ್‌ನೆಟ್ ಬಳಕೆಯಿಂದ ನಗದುರಹಿತ ವಹಿವಾಟಿಗೆ ಹೆಚ್ಚು ಉತ್ತೇಜನ ಸಿಕ್ಕಿತ್ತು. ಹತ್ತಾರು ಮೊಬೈಲ್‌ ವಾಲೆಟ್‌ಗಳು ಈ ಡಿಜಿಟಲ್‌ ವಹಿವಾಟಿನ ಮಾರುಕಟ್ಟೆಯನ್ನು ಪ್ರವೇಶಿಸಿದ್ದವು. ಆದರೆ, ಈಗ ಕೆವೈಸಿ ನಿಬಂಧನೆ ಕಾರಣಕ್ಕೆ ನಗದುರಹಿತ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಕಂಡುಬರಲಿದೆ.

ಗ್ರಾಹಕರ ಸುರಕ್ಷತೆಗೆ ಕೆವೈಸಿ!!

ಗ್ರಾಹಕರ ಸುರಕ್ಷತೆಗೆ ಕೆವೈಸಿ!!

ಮೊಬೈಲ್‌ ವಾಲೆಟ್‌ಗಳ ಮೂಲಕ ನಡೆಯುವ ವಹಿವಾಟಿನ ಸುರಕ್ಷತೆ ಹೆಚ್ಚಿಸಿ ಗ್ರಾಹಕರು ನಷ್ಟಕ್ಕೆ ಗುರಿಯಾಗದಂತೆ ನೋಡಿಕೊಳ್ಳಲು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಆರ್‌ಬಿಐ ನಿರ್ಧರಿಸಿದೆ. ಹಾಗಾಗಿ, ಕೆವೈಸಿ ಸಲ್ಲಿಸದಿದ್ದರೆ ಪೂರ್ಣ ಪ್ರಮಾಣದಲ್ಲಿ ಮೊಬೈಲ್‌ ವಾಲೆಟ್ ವಹಿವಾಟು ನಡೆಸಲು ಸಾಧ್ಯವಾಗದಂತೆ ಮಾಡಲಾಗಿದೆ.!!

ಗ್ರಾಹಕರ ಹಣ ಸುರಕ್ಷಿತ!!

ಗ್ರಾಹಕರ ಹಣ ಸುರಕ್ಷಿತ!!

ಈಗಾಗಲೇ ಮೊಬೈಲ್ ವಾಲೆಟ್‌ನಲ್ಲಿ ಇರುವ ಹಣವನ್ನಷ್ಟೇ ಬಳಸಿ ಮತ್ತು ಸರಕು ಮತ್ತು ಸೇವೆಗಳನ್ನು ಖರೀದಿಸಬಹುದಾಗಿದೆ. ವಾಲೆಟ್‌ನಲ್ಲಿ ಈ ಮೊದಲೇ ಇರುವ ಹಣ ಸುರಕ್ಷಿತವಾಗಿರುತ್ತದೆ. ಆ ಬಗ್ಗೆ ಗ್ರಾಹಕರು ಚಿಂತೆ ಪಡಬೇಕಾಗಿಲ್ಲ ಎಂದು ಕೇಂದ್ರೀಯ ಬ್ಯಾಂಕ್‌ ತಿಳಿಸಿದೆ.!!

ಕೂಡಲೇ ಕೆವೈಸಿ ಸಲ್ಲಿಸಿ!!

ಕೂಡಲೇ ಕೆವೈಸಿ ಸಲ್ಲಿಸಿ!!

‘ಕೆವೈಸಿ' ಸಲ್ಲಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಫೆಬ್ರುವರಿ 28 ಕೊನೆಯ ದಿನ ಎಂದು ಗಡುವು ವಿಧಿಸಿತ್ತು. ಅದನ್ನು ವಿಸ್ತರಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿತ್ತು. ಹಾಗಾಗಿ, ಪೂರ್ಣ ಪ್ರಮಾಣದಲ್ಲಿ ಮೊಬೈಲ್‌ ವಾಲೆಟ್ ವಹಿವಾಟು ನಿಮಗೆ ನಿಂತಿದೆ. ಕೂಡಲೇ ಕೆವೈಸಿಯನ್ನು ಸಲ್ಲಿಸಿ ತೊಂದರೆಯಿಂದ ಪಾರಾಗಿ.!!

Best Mobiles in India

English summary
India’s mobile wallet companies are seeing red as angry customers threaten to stop using these digital platforms. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+