ಒಂದೇ ಒಂದು SMS ಸಾಕು ನಿಮ್ಮ ಬ್ಯಾಂಕ್‌ನಲ್ಲಿರುವ ಹಣವನ್ನು ಲೂಟಿ ಮಾಡಲು..!
ಸೈಬರ್ ಕ್ರೈಮ್ ದಿನಕ್ಕೊಂದು ಹೊಸ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಮಾರುಕಟ್ಟೆಯಲ್ಲಿ ಯಾವುದು ಹೊಸ ಮಾದರಿಯ ಸೇವೆ ಕಾಣಿಸಿಕೊಳ್ಳಲಿದೆಯೋ ಅದರ ಮೂಲಕವೇ ಬಳಕೆದಾರರನ್ನು ಹ್ಯಾಕ್ ಮಾಡಿ ತಾವು ಲಾಭವನ್ನು ಮಾಡಿಕೊಳ್ಳಲು ಸೈಬರ್ ಕ್ರಿಮಿನಲ್‌ಗಳು ಕಾಯ್ದು ಕುಳಿತ್ತಿದ್ದಾರೆ. ಇದೇ ಮಾದರಿಯಲ್ಲಿ ಸದ್ಯ ಎಲ್ಲರೂ ಇನ್‌ಕಮ್ ಟಾಕ್ಸ್ ಫೈಲ್ ಮಾಡುತ್ತಿದ್ದು, ಕಡೆ ದಿನಾಂಕವೂ ಹತ್ತಿರ ಬಂದಿದೆ. ಈ ಹಿನ್ನಲೆಯಲ್ಲಿ IT ಟ್ಯಾಕ್ಸ್ ಕಟ್ಟುವವರ ಹಿಂದೆ ಬಿದ್ದಿರುವ ಹ್ಯಾಕರ್ಸ್‌ಗಳು ಅವರನ್ನು ಮೊಸ ಮಾಡಲು ಮುಂದಾಗಿದ್ದಾರೆ.

ಸೈಬರ್ ಕ್ರಿಮಿನಲ್‌ಗಳು IT ಡಿಪಾರ್ಟ್‌ಮೆಂಟ್ ಸೋಗಿನಲ್ಲಿ ಸಾರ್ವಜನಿಕರನ್ನು ವಂಚನೆ ಮಾಡಿ ಆನ್‌ಲೈನಿನಲ್ಲಿ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಮಂದಿ ಸೈಬರ್ ಕ್ರಿಮಿನಲ್‌ಗಳ ಜಾಲಕ್ಕೆ ಬಿದ್ದು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನೀವು ಹೇಗೆ ಎಚ್ಚರವಾಗಿರಬೇಕು ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಮೇಸೆಜ್ ಬಂದರೆ ತಲೆ ಕೆಡಿಸಿಕೊಳ್ಳಬೇಡಿ:
ಸೈಬರ್ ಕ್ರಿಮಿನಲ್‌ಗಳು IT ಡಿಪಾರ್ಟ್‌ಮೆಂಟ್ ಸೋಗಿನಲ್ಲಿ ನಿಮಗೆ ಮೇಸೆಜ್ ಅನ್ನು ಕಳುಹಿಸಲಿದ್ದಾರೆ. ಇದನ್ನು ನಂಬಿಕೊಂಡರೆ ನೀವು ಖಂಡಿತವಾಗಿಯೂ ನಷ್ಟ ಹೊಂದುವಿರಿ. ಅದರಲ್ಲಿಯೂ ಆ ಮೇಸೆಜ್ ಮೇಲೆ ಕ್ಲಿಕ್ ಮಾಡಿ, ಅದರಲ್ಲಿ ಇರುವ ಲೀಕ್ ಅನ್ನು ತೆರೆಯುವ ಪ್ರಯತ್ನವನ್ನು ಮಾಡಲೇ ಬೇಡಿ. ಹೀಗೆ ಮಾಡಿದರೆ ನೀವು ಹ್ಯಾಕರ್‌ಗಳ ಜಾಲಕ್ಕೆ ಸಿಕ್ಕಿ ಬೀಳುವಿರಿ.

ಅನಾಮಿಕ ಮೆಸೇಜ್ ಮತ್ತು ಮೇಲ್ ಓಪನ್ ಬೇಡ:
ನಿಮ್ಮ ಮೊಬೈಲ್‌ಗೆ ಬರುವ ಅನಾಮಿಕ ಮೆಸೇಜ್ ಮತ್ತು ಇಮೇಲ್ ಗಳನ್ನ ಒಪನ್ ಮಾಡದೆ ಇರುವುದೇ ಉತ್ತಮ, ಅದರಲ್ಲಿಯೂ IT ಡಿಪಾರ್ಟ್‌ಮೆಂಟ್ ಸೋಗಿನಲ್ಲಿ ಬರುವ ಯಾವುದೇ ವಿಷಯಗಳಿಗೆ ಹೆಚ್ಚಿನ ಗಮನವನ್ನು ನೀಡದೆ ಇದ್ದರೆ ಒಳ್ಳೆಯದು. ಸುಮ್ಮನೆ IT ಡಿಪಾರ್ಟ್‌ಮೆಂಟ್ ಎಂದುಕೊಂಡು ನೀವು ಮೇಸೆಜ್ ಒಪನ್ ಮಾಡಿದರೆ ಕ್ರಿಮಿನಲ್‌ಗಳು ನಿಮ್ಮ ಮಾಹಿತಿಯನ್ನು ಹ್ಯಾಕ್ ಮಾಡುತ್ತಾರೆ.

IT ಡಿಪಾರ್ಟ್‌ಮೆಂಟ್ ನಕಲಿ ವೆಬ್‌ಸೈಟ್:
ಹ್ಯಾಕರ್‌ಗಳು IT ಡಿಪಾರ್ಟ್‌ಮೆಂಟ್ ವೆಬ್‌ಸೈಟಿನ ಮಾದರಿಯಲ್ಲಿಯೇ ನಕಲಿ ವೆಬ್‌ಸೈಟ್‌ವೊಂದನ್ನು ತೆರೆದಿದ್ದು, ನಿಮಗೆ ಬರುವ ಮೇಸೆಜ್‌ನಲ್ಲಿ ಅದೇ ಲಿಂಕ್ ಅನ್ನು ಹಾಕಿರುತ್ತಾರೆ. ನೀವು ಅಲ್ಲಿ ಹೋಗಿ ನಿಮ್ಮ ಮಾಹಿತಿಗಳನ್ನು ಭರ್ತಿ ಮಾಡಿದರೆ ಸಾಕು ಅವುಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ನಿಮ್ಮನ್ನು ನಷ್ಟಕ್ಕೆ ಗುರಿ ಮಾಡುತ್ತಾರೆ.

ನಿಮ್ಮ ಹಣ ಅವರ ಆಕೌಂಟ್‌ಗೆ:
ನಿಮ್ಮ ಖಾತೆಯಲ್ಲಿ ಇರುವ ಎಲ್ಲಾ ಹಣವನ್ನು ಅವರು ತಮ್ಮ ಖಾತೆಗಳಿಗೆ ವರ್ಗಾವಣೆಯನ್ನು ಮಾಡಿಕೊಳ್ಳಲು ನಿಮ್ಮ ಲಾಗ್ ಇನ್ ಮಾಹಿತಿಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ. ಮಾಡಿಕೊಂಡು ನಿಮ್ಮ IT ಫಂಡ್ ಗಳನ್ನು ಅವರ ಖಾತೆಗೆ ವರ್ಗಾಹಿಸಿಕೊಳ್ಳುತ್ತಾರೆ. ಈ ಕುರಿತು ಹಲವು ಪ್ರಕರಣಗಳು ಈಗಾಗಲೇ ದಾಖಲಾಗಿದೆ.

ಎಚ್ಚರಿಕೆವಹಿಸಿ:
ಮುಂದೆ ನಿಮಗೆ ಈ ಮಾದರಿಯಲ್ಲಿ ಯಾವುದಾರರು ಮೇಸೆಜ್‌ಗಳು ಇಲ್ಲವೇ ಮೇಲ್‌ಗಳು ಬಂದ ಸಂದರ್ಭದಲ್ಲಿ ಅವುಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಡಿ. IT ಡಿಪಾರ್ಟ್‌ಮೆಂಟ್‌ನ ಅಧಿಕೃತ ವೆಬ್‌ಸೈಟಿನಲ್ಲಿಯೇ ನಿಮ್ಮ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಈ ವಿಷಯದಲ್ಲಿ ಅಪರಿಚಿತರನ್ನು ನಂಬುವಂತಹ ಕಾರ್ಯಕ್ಕೆ ಕೈ ಹಾಕಬೇಡಿ.


Click it and Unblock the Notifications





