Subscribe to Gizbot

ಸ್ಮಾರ್ಟ್‌ಫೋನ್‌ನಂತೆ ಕಾರ್ಯನಿರ್ವಹಿಸುವ ಟಿವಿ ಇದೀಗ ಭಾರತದಲ್ಲೂ!

By: Shwetha PS

ದೈವಾ ಕಂಪೆನಿಯು ಭಾರತಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಜೆಟ್ ಬೆಲೆಯಲ್ಲಿ ತರುವ ನಿರ್ಧಾರವನ್ನು ಮಾಡಿಕೊಂಡಿದ್ದು ಅದಕ್ಕಾಗಿ ಇತ್ತೀಚೆಗೆ ತಾನೇ ಎಫ್‌ಎಚ್‌ಡಿ ಸ್ಮಾರ್ಟ್ ಟಿವಿಯನ್ನು ಲಾಂಚ್ ಮಾಡಿದೆ. ಈ ಟಿವಿಯು ಅತ್ಯಾಧುನಿಕ ತಂತ್ರಜ್ಞಾನವನ್ನು ಪಡೆದುಕೊಂಡಿದ್ದು L55FVC5N ಎಂಬ ಹೆಸರನ್ನು ಪಡೆದುಕೊಂಡಿದ್ದು ಜಗತ್ತು ಬಯಸುವ ಸೌಲಭ್ಯಗಳನ್ನು ಈ ಟಿವಿ ಪಡೆದುಕೊಳ್ಳಲಿರುವುದು ಖಚಿತವಾಗಿದೆ.

ಸ್ಮಾರ್ಟ್‌ಫೋನ್‌ನಂತೆ ಕಾರ್ಯನಿರ್ವಹಿಸುವ ಟಿವಿ ಇದೀಗ ಭಾರತದಲ್ಲೂ!
 

ಕಂಪೆನಿ ಹೇಳುವಂತೆ ನ್ಯೂ ದೈವಾ 140 ಸೆಂ.ಮೀ ಸ್ಮಾರ್ಟ್ ಟಿವಿಯು ಎಚ್‌ಆರ್‌ಡಿಪಿ ತಂತ್ರಜ್ಞಾನವನ್ನು ಪಡೆದುಕೊಂಡಿದ್ದು ಮೂರು ಬಣ್ಣಗಳಲ್ಲಿ ಬರಲಿದೆ. ಬಣ್ಣ, ಕಾಂಟ್ರಾಸ್ಟ್, ಕ್ಲಾರಿಟಿಯನ್ನು ಪಡೆದುಕೊಂಡು ಉತ್ತಮ ವೀಕ್ಷಣಾ ಅನುಭವವನ್ನು ಬಳಕೆದಾರರಿಗೆ ನೀಡಲಿದೆ.

ಇದು ಡ್ಯುಯಲ್ ಕೋರ್ ಪ್ರೊಸೆಸರ್ ಅನ್ನು ಒಳಗೊಂಡಿದ್ದು 1 ಜಿಬಿ RAM ಇದರಲ್ಲಿದೆ ಮತ್ತು 8 ಜಿಬಿ ಸಂಗ್ರಹಣೆ ಸಾಮರ್ಥ್ಯವನ್ನು ಟಿವಿಯು ಪಡೆದಿದ್ದು ಇತರ ಟಿವಿಗಳಿಗಿಂತ ಈ ಟಿವಿ ಹೆಚ್ಚು ವೇಗವಾಗಿದೆ. ಸ್ಕ್ರೀನ್ ಮಿರರಿಂಗ್ ತಂತ್ರಜ್ಞಾನದೊಂದಿಗೆ ಹೆಚ್ಚಿನ ಸಾಧನಗಳಿಗೆ ಸಂಪರ್ಕಪಡಿಸುವ ವ್ಯವಸ್ಥೆ ಇದರಲ್ಲಿದೆ. 2HDMI, 2 ಯುಎಸ್‌ಬಿ ಇನ್‌ಪುಟ್ ಪೋರ್ಟ್‌ಗಳನ್ನು ಇದು ಹೊಂದಿದ್ದು CO-AX ouput ಪೋರ್ಟ್ ಮೂಲಕ ಬಳಕೆದಾರರು ತಮ್ಮ ಟಿವಿಯನ್ನು ಕಂಪ್ಯೂಟರ್‌ಗಳು, ಗೇಮಿಂಗ್ ಸಾಧನಗಳು ಮತ್ತು ಡಿವಿಡಿಗಳು ಹಾಗೂ ಇನ್ನಷ್ಟು ಸಾಧನಗಳನ್ನು ಸಂಪರ್ಕಪಡಿಸಬಹುದು.

ಇತಿಹಾಸದ ದಾಖಲೆ ಸೃಷ್ಟಿಸಿದ ಜಿಯೋ ಫೋನ್!!..ಬುಕ್ ಆದ ಸಂಖ್ಯೆ ಎಷ್ಟು ಗೊತ್ತಾ?

ಇಷ್ಟಲ್ಲದೆ ಟಿವಿಯಲ್ಲಿ ಅನನ್ಯ ವೈಶಿಷ್ಟ್ಯತೆ ಇದ್ದು ಟಿವಿಯನ್ನು ಬಳಸದೇ ಇರುವಾಗ ಹಿನ್ನೆಲೆಯಲ್ಲಿ ಈ ಅಪ್ಲಿಕೇಶನ್ ಚಾಲನೆಯಾಗಲಿದೆ. ತೆಳುವಾದ ವಿನ್ಯಾಸವನ್ನು ಇದು ಹೊಂದಿದ್ದು ಅಲ್ಯುಮಿನಿಯಮ್ ಡೈಮೆಂಡ್ ಸ್ಟ್ಯಾಂಡ್‌ಗಳನ್ನು ಇದು ಪಡೆದಿದೆ. ಇದು ಕಡಿಮೆ ಸ್ಥಳವನ್ನು ಪಡೆದುಕೊಳ್ಳಲಿದ್ದು ಮನೆಗೂ ಶೋಭೆ ತರಲಿದೆ.

ಟಿವಿಯು ಸ್ಮಾರ್ಟ್ ರಿಮೋಟ್ ದೈವಾ ವೆಬ್ ಫ್ಲರ್ಟ್ ರಿಮೋಟ್‌ನೊಂದಿಗೆ ಬರಲಿದ್ದು ಸ್ಮಾರ್ಟ್ ಟಿವಿಯಲ್ಲಿ ಅಪ್ಲಿಕೇಶನ್ ಫಿಲ್ಟರ್ ಮಾಡುವ ವ್ಯವಸ್ಥೆಯನ್ನು ಇದು ಪಡೆದುಕೊಂಡಿದೆ. ಇದು ಸುಲಭ ಪ್ರವೇಶಕ್ಕಾಗಿ ಇನ್‌ಬಿಲ್ಟ್ ಮೌಸ್ ಅನ್ನು ಹೊಂದಿದೆ. ಬಳಕೆದಾರರಿಗೆ ಮೆಚ್ಚಿನ ಚಾನಲ್‌ಗಳನ್ನು ಪ್ರವೇಶಿಸಲು ಶಾರ್ಟ್ ಕಟ್ ಬಟನ್‌ಗಳನ್ನು ಒಳಗೊಂಡಿದೆ.

ದೈವಾ L55FVC5N140cm ಸ್ಮಾರ್ಟ್ ಟಿವಿಯು ಭಾರತದಲ್ಲಿ ರೂ 41,990 ಕ್ಕೆ ಲಭ್ಯವಿದೆ ಮತ್ತು 2 ವರ್ಷಗಳ ವಾರಂಟಿಯನ್ನು ಇದು ಹೊಂದಿದೆ. ಆನ್‌ಲೈನ್ ಸ್ಟೋರ್‌ಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಪೇಟಮ್, ಶಾಪ್‌ಕ್ಲಸ್, ಸ್ನ್ತಾಪ್‌ಡೀಲ್ ಮತ್ತು ಇಬೇನಲ್ಲಿ ಟಿವಿಯು ಲಭ್ಯವಿದೆ.

Read more about:
English summary
Daiwa is a company committed to bring the latest technology to India at budgeted prices.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot