ಭಾರತದಲ್ಲಿ ಡೈವಾ ಕಂಪೆನಿಯ ಎರಡು ಹೊಸ ಸ್ಮಾರ್ಟ್‌ಟಿವಿ ಲಾಂಚ್‌! ವಿಶೇಷತೆ ಏನು?

|

ಇತ್ತೀಚಿನ ದಿನಗಳಲ್ಲಿ ಟಿವಿ ಮಾರುಕಟ್ಟೆ ಸಾಕಷ್ಟು ಕಲರ್‌ಫುಲ್‌ ಆಗಿದೆ. ವಿಭಿನ್ನ ಗಾತ್ರದ ಜೊತೆಗೆ ಹೆಚ್ಚುವರಿ ಟೆಕ್ನಾಲಜಿಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳು ತಮ್ಮ ವೈವಿಧ್ಯ ಮಾದರಿಯ ಸ್ಮಾರ್ಟ್‌ಟಿವಿಯನ್ನು ಪರಿಚಯಿಸಿವೆ. ಸದ್ಯ ಇದೀಗ ಡೈವಾ ಕಂಪೆನಿ ತನ್ನ ಹೊಸ 32-ಇಂಚಿನ D 32 S7B ಮತ್ತು 39 ಇಂಚಿನ D40 HDRS ಸ್ಮಾರ್ಟ್ ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಎರಡು ಸ್ಮಾರ್ಟ್ ಸ್ಮಾರ್ಟ್‌ಟಿವಿಗಳು ಅಮೆಜಾನ್ ಅಲೆಕ್ಸಾ ಚಾಲಿತ ಸ್ಮಾರ್ಟ್‌ಟಿವಿಗಳಾಗಿವೆ.

ಡೈವಾ

ಹೌದು, ಡೈವಾ ಕಂಪೆನಿ ಭಾರತದಲ್ಲಿ ಅಲೆಕ್ಸಾ ಬೆಂಬಲಿತ ಎರಡು ಹೊಸ ಸ್ಮಾರ್ಟ್‌ಟಿವಿಗಳನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಟಿವಿಗಳು A35 ಕ್ವಾಡ್‌ ಕೋರ್‌ ಪ್ರಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 8 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ 32 ಇಂಚಿನ ಡೈವಾ D32 S7B ಟಿವಿಯ ಬೆಲೆ 15,990 ರೂ. ಮತ್ತು 39 ಇಂಚಿನ ಡೈವಾ D40 HDRS ಟಿವಿಯ ಬೆಲೆ 21,990 ರೂ ಆಗಿದೆ. ಈ ಎರಡೂ ಟಿವಿಗಳು ಒಟ್ಟು 2 ವರ್ಷಗಳ ಖಾತರಿಯೊಂದಿಗೆ (1 ವರ್ಷದ ಮೂಲ + 1 ವರ್ಷ ಹೆಚ್ಚುವರಿ)ಬರುತ್ತವೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಟಿವಿ

ಈ ಎರಡೂ ಸ್ಮಾರ್ಟ್‌ಟಿವಿಗಳು 1366 × 768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಹೊಂದಿವೆ. ಅಲ್ಲದೆ ಕ್ವಾಂಟಮ್ ಲುಮಿನಿಟ್ ತಂತ್ರಜ್ಞಾನದೊಂದಿಗೆ ಹೆಚ್‌ಡಿ ರೆಡಿ ಪ್ಯಾನೆಲ್‌ ಅನ್ನು ಹೊಂದಿವೆ. ಇದು ಪ್ರೀ-ಸೆಟ್ ಪಿಕ್ಚರ್ ಮೋಡ್‌ಗಳೊಂದಿಗೆ (ಸಿನೆಮಾ ಮತ್ತು ಕ್ರಿಕೆಟ್) ಬರುತ್ತದೆ. ಕಂಪನಿಯ ಪ್ರಕಾರ ಬಳಕೆದಾರರ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಟವಿಗಳು 20W ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿವೆ, ಇದು ಬಳಕೆದಾರರಿಗೆ ಸರೌಂಡ್ ಸೌಂಡ್ ಅನುಭವವನ್ನು ನೀಡುತ್ತದೆ.

ಸ್ಮಾರ್ಟ್‌ಟಿವಿ

ಇನ್ನು ಈ ಸ್ಮಾರ್ಟ್‌ಟಿವಿಗಳು ಇಂಟಿಗ್ರೇಟೆಡ್ GPU ಚಿಪ್ ಹೊಂದಿರುವ A35 ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 8 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಹಾಗೆಯೇ 1GB RAM ಮತ್ತು 8GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿವೆ. ಇದಲ್ಲದೆ, ಅಮೆಜಾನ್‌ನ ಸ್ಮಾರ್ಟ್ ಅಸಿಸ್ಟೆಂಟ್, ಅಲೆಕ್ಸಾಕ್ಕೆ ಬೆಂಬಲವನ್ನು ಸಹ ನೀಡಲಿವೆ. ಇದನ್ನು ರಿಮೋಟ್ ಬಳಸಿ ಪ್ರವೇಶಿಸಬಹುದು. ಅಲೆಕ್ಸಾ ಶಕ್ತಗೊಂಡ ಡಿವೈಸ್‌ ಅನ್ನು ಬಳಸಿಕೊಂಡು ಇವುಗಳನ್ನು ನಿಯಂತ್ರಿಸಬಹುದು. ಟಿವಿಯನ್ನು ಬಳಸಿಕೊಂಡು ಬಳಕೆದಾರರು ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ಸಹ ನಿಯಂತ್ರಿಸಬಹುದು.

ಹಾಟ್‌ಸ್ಟಾರ್

ಇದಲ್ಲದೆ ಈ ಟಿವಿಗಳು ಡಿಸ್ನಿ + ಹಾಟ್‌ಸ್ಟಾರ್, ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಸೋನಿ ಲಿವ್, ವೂಟ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಅನೇಕ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತವೆ. ಮುಖ್ಯ ಹೋಮ್ ಸ್ಕ್ರೀನ್ ಅನ್ನು ಜನಪ್ರಿಯಗೊಳಿಸುವ, ಅದರ ವಿಷಯ ಅನ್ವೇಷಣೆ ಎಂಜಿನ್‌ನ ಒಳಗೆ ನೀವು ಆಸಕ್ತಿ ಹೊಂದಿರುವ ವಿಷಯವನ್ನು ಇದು ಸಂಗ್ರಹಿಸುತ್ತದೆ. ಇವು 3 ಎಚ್‌ಡಿಎಂಐ ಪೋರ್ಟ್‌ಗಳು, 2 ಯುಎಸ್‌ಬಿ ಪೋರ್ಟ್‌ಗಳು, ಬ್ಲೂಟೂತ್ ಬೆಂಬಲ ಮತ್ತು ಇಶೇರ್ ಬೆಂಬಲದೊಂದಿಗೆ ಬರುತ್ತವೆ. ಟಿವಿಗಳ ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಏರ್ ಮೌಸ್ ಆಗಿ ಸಹ ನೀವು ಬಳಸಬಹುದು.

Most Read Articles
Best Mobiles in India

English summary
Daiwa launches two budget smart TVs in India With Alexa Integration.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X