ಇಯರ್‌ಫೋನ್‌/ಹೆಡ್‌ಫೋನ್‌ ಬಳಕೆ ಅಪಾಯ ನಿಮ್ಮ ಸನಿಹಕ್ಕೆ

By Suneel
|

"ಒಂದು ಟೈಮ್‌ ಊಟ ಬಿಟ್ಟೇವು ಸ್ಮಾರ್ಟ್‌ಫೋನ್‌ ಬಿಡೆವು, ನೋಟ್ಸ್‌ ಮರೆತೇವು ಇಯರ್‌ಫೋನ್‌ ಮರೆಯಲಾರೆವು" ಇದು ಕಾಲೇಜು ಹುಡುಗ/ಹುಡುಗಿಯರು ಬೆಳಗಿನ ಸಮಯದಲ್ಲಿ ಮನೆಯಲ್ಲಿ ಹೇಳೋ ಡೈಲಾಗು. ಯಾಕಂದ್ರೆ ಅವರಿಗೆ ಆರೋಗ್ಯದ ಮೇಲಿನ ದೂರದೃಷ್ಟಿ ಕಡಿಮೆ ಇರಬೇಕು. ಇಯರ್‌ಫೋನ್‌ ಮತ್ತು ಹೆಡ್‌ಫೋನ್‌ ಬಳಕೆದಾರರಿಗೆ ಮನರಂಜನೆಯ ಮತ್ತಿನಲ್ಲಿ ಆರೋಗ್ಯದ ದೂರದೃಷ್ಟಿಯೇ ಮರೆತುಹೋಗುತ್ತದೆ.

ಹೌದು, ಬಹುಸಂಖ್ಯಾತರು ಮನರಂಜನೆಗಾಗಿ ಇಂದು ಇಯರ್‌ಫೋನ್‌ ಮತ್ತು ಹೆಡ್‌ಫೋನ್‌ಗಳನ್ನು ದಿನನಿತ್ಯವು ದೀರ್ಘ ಸಮಯ ಬಳಸುತ್ತಾರೆ. ಆದರೆ ಅವುಗಳ ಬಳಕೆಯಿಂದ ಆರೋಗ್ಯದ ಮೇಲಾಗುವ ಸೈಡ್‌ ಎಫೆಕ್ಟ್‌ಗಳ ಮೇಲೆ ಯಾರು ಸಹ ಇದುವರೆಗೂ ಗಮನಹರಿಸಿಯೇ ಇಲ್ಲಾ. ದಿನದಿಂದ ದಿನಕ್ಕೆ ಇಯರ್‌ಫೋನ್‌ ಮತ್ತು ಹೆಡ್‌ಫೋನ್‌ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಅಂತಹವರು ತಮ್ಮ ಆರೋಗ್ಯದ ದೃಷ್ಟಿಯಿಂದ, ಇಯರ್‌ಫೋನ್‌ ಮತ್ತು ಹೆಡ್‌ಫೋನ್‌ ಬಳಸುವುದರಿಂದ ಉಂಟಾಗುವ ಆರೋಗ್ಯದ ಸೈಡ್‌ ಎಫೆಕ್ಟ್‌ಗಳು ಏನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಯಿರಿ.

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

90 ಡೆಸಿಬಲ್‌ ಮೀರಿದ ಸೌಂಡ್‌ನಲ್ಲಿ ಇಯರ್‌ಫೋನ್‌/ಹೆಡ್‌ಫೋನ್‌ ಬಳಸಿ ಹಾಡುಗಳನ್ನು ಕೇಳುವುದರಿಂದ ಧ್ವನಿ ಸೌಂಡ್‌ ನೇರವಾಗಿ ಕಿವಿಯೊಳಗೆ ಹೋಗುವುದರಿಂದ, ಕಿಮಿ ಕೇಳಿಸುವಲ್ಲಿ ನಷ್ಟ ಹಾಗೂ ತೊಡಕುಗಳು ಉಂಟಾಗುತ್ತವೆ.

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ವೈಯಕ್ತಿಕ ಇಯರ್‌ಫೋನ್‌/ಹೆಡ್‌ಫೋನ್‌ಗಳು ಇದ್ದರೂ ಸಹ, ಆಗಾಗ ಇತರರಿಗೆ ಕೊಡುವುದು ಅಥವಾ ಅವರಿಂದ ತೆಗೆದುಕೊಂಡು ಬಳಸುವುದು ಸಾಮಾನ್ಯ ಅಲ್ಲವೇ. ಆದರೆ ಎಚ್ಚರ ಇದರಿಂದ ಒಬ್ಬರ ಕಿಮಿಯಿಂದ ಇನ್ನೊಬ್ಬರ ಕಿವಿಗೆ ಬ್ಯಾಕ್ಟೀರಿಯಾಗಳು ಓಡಾಡಿ ಕಿವಿಗಳಿಗೆ ಸೋಂಕುಗಳು ಬರುವುದರಲ್ಲಿ ಸಂಶಯವಿಲ್ಲ.

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇಯರ್‌ಫೋನ್/ಹೆಡ್‌ಫೋನ್‌ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮವಾಗಿ ಹಾಡು ಕೇಳುವ ಅನುಭವವನ್ನು ವೃದ್ದಿಸುವ ರೀತಿಯಲ್ಲಿ ಇಯರ್‌ಫೋನ್/ಹೆಡ್‌ಫೋನ್‌ಗಳನ್ನು ಅಭಿವೃದ್ದಿಪಡಿಸುತ್ತಿವೆ. ಆದರೆ ಅವುಗಳನ್ನು ಕಿವಿಗೆ ಹಾಕುವುದರಿಂದ ನೇರವಾಗಿ ಕಿವಿಯ ಕೆನಲ್‌ಗಳಿಗೆ ತಾಕುವುದರಿಂದ ಯಾವುದೇ ಗಾಳಿ ಚಲನೆ ಇಲ್ಲದೇ ಕಿವಿಗಳು ಬಹುಬೇಗ ಸಮಸ್ಯೆಗೆ ಗುರಿಯಾಗಿ ಕೇಳುವುದರಲ್ಲಿ ತೊಂದರೆ ಉಂಟಾಗುತ್ತದೆ.

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇಯರ್‌ಫೋನ್/ಹೆಡ್‌ಫೋನ್‌ನಲ್ಲಿ ನಿರಂತರವಾಗಿ ಹಾಡು ಕೇಳುವವರಿಗೆ ಕಿವಿಮೊರೆತ, ಧ್ವನಿ ಕೇಳುವಲ್ಲಿ ಸಮಸ್ಯೆ, ಸೋಂಕುಗಳು ಉಂಟಾಗುತ್ತದೆ.

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇತ್ತೀಚಿನ ಒಂದು ಅಧ್ಯಯನದ ಪ್ರಕಾರ "ಪ್ರತಿದಿನ ಹೆಚ್ಚು ಕಾಲ ಇಯರ್‌ಫೋನ್‌/ಹೆಡ್‌ಫೋನ್‌ ಬಳಸುವವರಿಗೆ ಕಿವಿ ಉರಿಯುವಿಕೆ, ಜುಮ್ಮೆನುವಿಕೆ ಪ್ರಾರಂಭವಾಗಿ ಸ್ವಲ್ಪ ಸಮಯದ ನಂತರ ಸಾಮನ್ಯವಾಗುತ್ತದೆ. ಆದರೆ ಇಂತಹ ಸಮಸ್ಯೆಯೇ ಮುಂದೆ ಕಿವಿಡುತನಕ್ಕೆ ಕಾರಣವಾಗುತ್ತದೆ" ಎಂದು ಹೇಳಲಾಗಿದೆ.

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇಯರ್‌ಫೋನ್‌/ಹೆಡ್‌ಫೋನ್‌ ಬಳಸುವವರಿಗೆ ಸಾಮಾನ್ಯವಾಗಿ ಕಿವಿ ನೋಯುವಿಕೆ, ಹಾಗೂ ಕಿವಿಯೊಳಗೆ ಧ್ವನಿ ಮೊರೆತ, ಕಿವಿಯ ಯಾವುದಾದರೊಂದು ಭಾಗ ನೋಯುವಿಕೆ ಪ್ರಾರಂಭವಾಗುತ್ತದೆ.

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇಯರ್‌ಫೋನ್‌/ಹೆಡ್‌ಫೋನ್‌ಗಳಿಂದ ಇಲೆಕ್ಟ್ರೋ ಮ್ಯಾಗ್ನಟಿಕ್‌ ತರಂಗಗಳು ಉತ್ಪತ್ತ ಆಗುವುದರಿಂದ ಮೆದುಳಿನ ಮೇಲೆ ನೇರವಾಗಿ ಅಧಿಕವಾದ ದುಷ್ಟರಿಣಾಮ ಉಂಟಾಗುತ್ತದೆ. ಇದಕ್ಕೆ ಮೆಡಿಕಲ್‌ ಆಧಾರವು ಇದೆ.

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇತ್ತೀಚೆಗೆ ಇಯರ್‌ಫೋನ್‌/ಹೆಡ್‌ಫೋನ್‌ ಬಳಸುವವರು ಅಧಿಕವಾಗಿ ಕಾರು ಅಪಘಾತ, ರಸ್ತೆ ಅಪಘಾತ, ಅಲ್ಲದೇ ರೈಲು ಅಪಘಾತಗಳಿಗೆ ಗುರಿಯಾಗಿದ್ದಾರೆ.

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

ಇಯರ್‌ಫೋನ್/ ಹೆಡ್‌ಫೋನ್‌ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು

* ಟಿನಿ ಇಯರ್‌ಫೋನ್‌/ಹೆಡ್‌ಫೋನ್‌ ಬಳಕೆ ನಿಯಂತ್ರಿಸುವುದು
* ಬಳಸುವ ಇಯರ್‌ಫೋನ್‌ ಕಿವಿಯ ಕೆನಲ್‌ಗೆ ತಾಕದಿರಲಿ
* ಇಯರ್‌ಫೋನ್‌/ಹೆಡ್‌ಫೋನ್‌ ಒಬ್ಬರಿಂದ ಇನ್ನೊಬ್ಬರಿಗೆ ಶೇರ್‌ ಮಾಡುವುದನ್ನು ನಿಲ್ಲಿಸುವುದು
* ಟ್ರಾವೆಲಿಂಗ್ ಸಮಯದಲ್ಲಿ ಬಳಸದಿರುವುದು
* ಏರುಧ್ವನಿಯಲ್ಲಿ ಹಾಡು ಕೇಳದಿರುವುದು.

ಗಿಜ್‌ಬಾಟ್‌

ಗಿಜ್‌ಬಾಟ್‌

ಮೊಬೈಲ್‌ನಲ್ಲಿ ಮೊಬೈಲ್‌ನಲ್ಲಿ "ಹೆಲ್ತ್ ಆಪ್‌" ಬಳಸುತ್ತಿದ್ದೀರಾ? ಎಚ್ಚರ!!

ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌ ಮಾಡುವುದು ಹೇಗೆ?ವಾಟ್ಸಾಪ್‌ನಲ್ಲಿ ಮೆಸೇಜ್‌ ಶೆಡ್ಯೂಲ್‌ ಮಾಡುವುದು ಹೇಗೆ?

ಬ್ಲ್ಯಾಕ್‌ಬೆರಿ, ನೋಕಿಯಾಗಳಲ್ಲಿ ವಾಟ್ಸಾಪ್ ಇನ್ನುಮುಂದೆ ಇಲ್ಲಬ್ಲ್ಯಾಕ್‌ಬೆರಿ, ನೋಕಿಯಾಗಳಲ್ಲಿ ವಾಟ್ಸಾಪ್ ಇನ್ನುಮುಂದೆ ಇಲ್ಲ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಗಿಜ್‌ಬಾಟ್‌ ಟೆಕ್ನಾಲಜಿ ಲೇಖನಗಳು

Best Mobiles in India

English summary
Dangerous Health Side Effects of Using Headphones and Earphones. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X