ಡೇಟಾ ಸಮರದಲ್ಲಿ ಗೆಲ್ಲಲು ವೊಡಾಫೋನ್‌ನ ಹೊಸ ಅಸ್ತ್ರ: ರೂ.153ಕ್ಕೆ 28GB ಡೇಟಾ..!
ದೇಶಿಯ ಟೆಲಿಕಾಂ ವಲಯದಲ್ಲಿ ಡೇಟಾ ವಾರ್ ಜೋರಾಗಿ ನಡೆಯುತ್ತಿದೆ ಎನ್ನಲಾಗಿದೆ. ಏರ್‌ಟೆಲ್ ಎರಡು ದಿನಗಳ ಹಿಂದೆ ಹೊಸದೊಂದು ಆಫರ್ ಲಾಂಚ್ ಮಾಡಿತ್ತು. ಇದೇ ಮಾದರಿಯಲ್ಲಿ ವೊಡಾಫೋನ್ ಹೊಸ ಆಫರ್ ಲಾಂಚ್ ಮಾಡಿದ್ದು, ಬಳಕೆದಾರರಿಗೆ ಡೇಟಾ ಆಪರ್ ಅನ್ನು ನೀಡಲು ಮುಂದಾಗಿದೆ. ಈ ಮೂಲಕ ಡೇಟಾ ಸ್ಪರ್ಧೆಯನ್ನು ಮತ್ತೇ ಶುರು ಮಾಡಿದೆ.

ಓದಿರಿ: ಒಲಾದಿಂದ ಕೇವಲ ರೂ. 5ಕ್ಕೆ ಹೊಸ ಸೇವೆ...!
ಈಗಾಗಲೇ ಜಿಯೋ ಮತ್ತು ಏರ್‌ಟೆಲ್ ಗಳು ಗ್ರಾಹಕರಿಗೆ ಕಡಿಮೆ ಬೆಲೆಗೆ ಹೆಚ್ಚಿನ ಲಾಭವನ್ನು ಮಾಡಿಕೊಟ್ಟಿದೆ. ಇದೇ ಮಾದರಿಯಲ್ಲಿ ವೊಡಾಪೋನ್ ಮತ್ತೊಂದು ಬಂಪರ್ ಆಫರ್ ಅನ್ನು ಲಾಂಚ್ ಮಾಡಿದೆ. ವೊಡಾಫೋನ್ ರೂ.153 ಪ್ಲಾನ್ ಅನ್ನು ಲಾಂಚ್ ಮಾಡಿದೆ. ಇದರಲ್ಲಿ ಗ್ರಾಹಕರು ಹೆಚ್ಚಿನ ಡೇಟಾವನ್ನು ಬಳಕೆಗೆ ಪಡೆಯಲಿದ್ದಾರೆ.

ರೂ. 153 ಪ್ಲಾನ್:
ವೊಡಾಪೋನ್ ರೂ. 153ರ ಪ್ಲಾನ್ ಅನ್ನು ಲಾಂಚ್ ಮಾಡಿದ್ದು, ಇದರಲ್ಲಿ ಗ್ರಾಹರಿಗೆ ಡೇಟಾ ಲಾಭ ದೊರೆಯಲಿದೆ. ಅಲ್ಲದೇ ಇದರಲ್ಲಿ 3G/4G ಡೇಟಾವು ಬಳಕೆಗೆ ದೊರೆಯಲಿದೆ ಎನ್ನಲಾಗಿದೆ.

ಪ್ರತಿ ನಿತ್ಯ ಒಂದು GB:
ಈ ಆಫರ್ ನಲ್ಲಿ ವೊಡಾಫೋನ್ ಬಳಕೆದಾರರು ಪ್ರತಿ ನಿತ್ಯ ಒಂದು GB ಡೇಟಾವನ್ನು ಬಳಕೆ ಮಾಡಿಕೊಳ್ಳಲು ನೀಡಲಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಈ ಆಫರ್ ಹೊಂದಿದೆ ಎನ್ನಲಾಗಿದೆ.

ಕರ್ನಾಟಕದಲ್ಲಿಯೂ ಲಭ್ಯ:
ಈ ಆಫರ್ ಕೇಲವು ಕಡೆಗಳಲ್ಲಿ ಮಾತ್ರವೇ ದೊರೆಯಲಿದ್ದು, ಕರ್ನಾಟಕದಲ್ಲಿ ಸಹ ಇದು ಲಭ್ಯವಿದೆ ಎನ್ನಲಾಗಿದೆ. ತೆಲಂಗಾಣ, ಆಂದ್ರಪ್ರದೇಶ ಮತ್ತು ದೆಹಲಿಯಲ್ಲಿ ಮಾತ್ರವೇ ಈ ಆಪರ್ ದೊರೆಯಲಿದೆ.

ಏರ್‌ಟೆಲ್-ಜಿಯೋಗೆ ಸೆಡ್ಡು:
ಏರ್‌ಟೆಲ್ - ಜಿಯೋ ಮಾರುಕಟ್ಟೆಯಲ್ಲಿ ಹೊಸ ಆಫರ್ ಲಾಂಚ್ ಮಾಡಿವೆ, ಆದರೆ ವೊಡಾಫೋನ್ ಹೆಚ್ಚು ಲಾಭವನ್ನು ಮಾಡಿಕೊಡುವ ಸಲುವಾಗಿ ಈ ಆಫರ್ ಲಾಂಚ್ ಮಾಡಿದ್ದು, ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಈ ಆಫರ್ ಬಿಡುಗಡೆ ಮಾಡಿದೆ.


Click it and Unblock the Notifications








