Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್‌ಗೆ ದಿನಾಂಕ ನಿಗದಿ: ಯಾವೆಲ್ಲಾ ಡಿವೈಸ್‌ ಲಾಂಚ್‌ ಆಗಲಿವೆ?

ಸ್ಯಾಮ್‌ಸಂಗ್‌ (Samsung) ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಸುನಾಮಿಯನ್ನೇ ಉಂಟು ಮಾಡಲಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ಯಾಮ್‌ಸಂಗ್‌ ಕೇವಲ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಇತರೆ ಡಿವೈಸ್‌ಗಳ ವಿಭಾಗದಲ್ಲೂ ಸಹ ಅಗ್ರಸ್ಥಾನ ಪಡೆದಿದೆ. ಅದರಂತೆ ಹೊಸ ಡಿವೈಸ್‌ಗಳನ್ನು ಅನಾವರಣ ಮಾಡಲು ಸ್ಯಾಮ್‌ಸಂಗ್ ದಿನಾಂಕ ನಿಗದಿ ಮಾಡಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್ (Samsung Galaxy Unpacked event) ಜನವರಿ 17, 2024 ರಂದು ನಡೆಯಲಿದೆ ಎಂದು ಸ್ಯಾಮ್‌ಸಂಗ್ ಅಧಿಕೃತವಾಗಿ ಮಾಹಿತಿ ದೃಢಪಡಿಸಿದೆ. ಈ ಬಗ್ಗೆ ಅಧಿಕೃತ ಟೀಸರ್ ಅನ್ನು ಸಹ ಬಿಡುಗಡೆ ಮಾಡಿದೆ. ಆ ವೇಳೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಹಾಗೂ ಇತರೆ ಡಿವೈಸ್‌ಗಳ ಬಗ್ಗೆ ಘೋಷಣೆ ಮಾಡಲಾಗುತ್ತದೆ. ಹಾಗಿದ್ರೆ, ಯಾವೆಲ್ಲಾ ಡಿವೈಸ್‌ಗಳನ್ನು ಆ ವೇಳೆ ಅನಾವರಣ ಮಾಡಲಾಗುತ್ತದೆ?, ಈ ಕಾರ್ಯಕ್ರಮದ ವಿಶೇಷತೆ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ  ಅನ್ಪ್ಯಾಕ್ಡ್ ಈವೆಂಟ್‌ಗೆ ದಿನಾಂಕ ನಿಗದಿ...

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್: ಸ್ಯಾಮ್‌ಸಂಗ್‌ ಜವರಿಯಲ್ಲಿ ಈವೆಂಟ್ ಅನ್ನು ಆಯೋಜಿಸುತ್ತದೆ ಎಂದು ಈಗಾಗಲೇ ಕೆಲವು ವರದಿಗಳು ಲೀಕ್‌ ಆಗಿದ್ದವು. ಈ ಲೀಕ್‌ ವರದಿಗಳು ಈಗ ನಿಜವಾಗಿದೆ. ಅದರಂತೆ ಜನವರಿ 17 ರಂದು ಈವೆಂಟ್ ಜರುಗಲಿದೆ ಎಂದು ಸ್ಯಾಮ್‌ಸಂಗ್‌ ದೃಢಪಡಿಸಿದೆ. ಅದರಲ್ಲೂ ಈ ಬಾರಿ ಎಐ ಬಗ್ಗೆ ಟೀಸರ್‌ನಲ್ಲಿ ಒತ್ತಿ ಹೇಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್ ತನ್ನ ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ S24 ಸರಣಿಯನ್ನು (Galaxy S24 series) ಕೆಲವು ಎಐ ಚಾಲಿತ ಫೀಚರ್ಸ್‌ನೊಂದಿಗೆ ಅನಾವರಣ ಮಾಡುತ್ತದೆ ಎಂದು ತಿಳಿದುಬಂದಿದೆ. ಲೈವ್ ಈವೆಂಟ್ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿರುವ ಎಸ್‌ಎಪಿ ಕೇಂದ್ರದಲ್ಲಿ 10 a.m PT ಅಥವಾ ಭಾರತೀಯ ಕಾಲಮಾನ 11:30 pm ಕ್ಕೆ ಆರಂಭ ಆಗಲಿದೆ. ಈ ಈವೆಂಟ್ ಅನ್ನು ಸ್ಯಾಮ್‌ಸಂಗ್‌ನ ಸಾಮಾಜಿಕ ಮಾಧ್ಯಮ ಚಾನಲ್‌ಗಳು ಮತ್ತು ಯೂಟ್ಯೂಬ್‌ನಲ್ಲಿಯೂ ನೇರ ಪ್ರಸಾರ ಮಾಡಲಾಗುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ  ಅನ್ಪ್ಯಾಕ್ಡ್ ಈವೆಂಟ್‌ಗೆ ದಿನಾಂಕ ನಿಗದಿ...

ಸ್ಮಾರ್ಟ್ ರಿಂಗ್ ಅನಾವರಣ ಆಗುತ್ತಾ?: ಬಹುನಿರೀಕ್ಷಿತ ಗ್ಯಾಲಕ್ಸಿ S24 ಜೊತೆಗೆ ಈ ಈವೆಂಟ್‌ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಸ್ಮಾರ್ಟ್ ರಿಂಗ್ (Galaxy Smart Ring) ಅನ್ನು ಸಹ ಪರಿಚಯಿಸುವ ನಿರೀಕ್ಷೆಯಿದೆ. ಈ ಉಂಗುರವು ಸ್ಮಾರ್ಟ್‌ವಾಚ್‌ಗಳಂತಹ ಆರೋಗ್ಯ-ಟ್ರ್ಯಾಕಿಂಗ್ ಡಿವೈಸ್‌ಗಳಿಗಿಂತ ಭಿನ್ನವಾಗಿ ಕೆಲಸ ಮಾಡಲಿದೆ ಎನ್ನಲಾಗಿದೆ. ಅಂದರೆ ಹೆಚ್ಚು ನಿಖರವಾದ ಮಾಹಿತಿಯನ್ನು ಇದು ನೀಡುತ್ತದೆ ಎಂದು ತಿಳಿದುಬಂದಿದೆ.

ಇನ್ನು ಗ್ಯಾಲಕ್ಸಿ ಒನ್, ಗ್ಯಾಲಕ್ಸಿ ಪಲ್ಸ್ ಮತ್ತು ಗ್ಯಾಲಕ್ಸಿ ರಿದಮ್ ಸೇರಿದಂತೆ ಹೊಸ ಸ್ಮಾರ್ಟ್ ರಿಂಗ್‌ಗಾಗಿ ಸ್ಯಾಮ್‌ಸಂಗ್ ಸರಣಿ ಹೆಸರುಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ ಎಂಬ ಲೀಕ್‌ ಮಾಹಿತಿ ಈಗಾಗಲೇ ವರದಿಯಾಗಿದೆ. ಆದಾಗ್ಯೂ, ಕಂಪನಿಯು ಈ ರಿಂಗ್‌ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಸ್ಯಾಮ್‌ಸಂಗ್ ಈ ಹಿಂದೆಯೇ ಇದೇ ರಿಂಗ್‌ಗೆ ಗ್ಯಾಲಕ್ಸಿ ಇಂಡೆಕ್ಸ್, ಗ್ಯಾಲಕ್ಸಿ ಇನ್‌ಸೈಟ್ ಮತ್ತು ಗ್ಯಾಲಕ್ಸಿ ಸರ್ಕಲ್ ಅನ್ನು ಟ್ರೇಡ್‌ಮಾರ್ಕ್ ಮಾಡಿತ್ತು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ  ಅನ್ಪ್ಯಾಕ್ಡ್ ಈವೆಂಟ್‌ಗೆ ದಿನಾಂಕ ನಿಗದಿ...

ಪರಿಣಾಮವಾಗಿ ಈ ವಿಶೇಷ ಈವೆಂಟ್‌ನಲ್ಲಿ ಈ ರಿಂಗ್‌ ಸ್ಟಾರ್ ಉತ್ಪನ್ನವಾಗುವ ನಿರೀಕ್ಷೆಯಿದೆ ಎಂದು ಕೆಲವು ವರದಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಜೊತೆಗೆ ಈ ರಿಂಗ್ ಗ್ಯಾಲಕ್ಸಿ ವಾಚ್ ಮಾದರಿಗಳನ್ನು ಪ್ರಾಥಮಿಕ ಆರೋಗ್ಯ ಟ್ರ್ಯಾಕಿಂಗ್ ಡಿವೈಸ್‌ ಆಗಿ ಬದಲಾಯಿಸಬಹುದೆಂದು ಊಹಿಸಲಾಗಿದೆ. ಅದರಲ್ಲೂ ಈ ಹಿಂದೆ ಈ ರಿಂಗ್‌ ಬಗ್ಗೆ ಉಲ್ಲೇಖವಾದ ಲೀಕ್‌ ಮಾಹಿತಿ ಏನೆಂದರೆ ಆರೋಗ್ಯ, ಫಿಟ್‌ನೆಸ್ ಮತ್ತು ನಿದ್ರೆ ಸಂಬಂಧಿತ ಡೇಟಾವನ್ನು ಸಂಗ್ರಹಿಸುತ್ತದೆ.

ಹಾಗೆಯೇ ಮಾನವನ ವಿವಿಧ ರೀತಿಯ ಆರೋಗ್ಯ ಮಾಹಿತಿಯನ್ನು ಮೌಲ್ಯಮಾಪನ ಮಾಡುತ್ತದೆ, ಟ್ರ್ಯಾಕ್ ಮಾಡುತ್ತದೆ ಮತ್ತು ರವಾನಿಸುತ್ತದೆ ಎಂದು ಉಲ್ಲೇಖಿಸಿದೆ. ಅಷ್ಟೇ ಅಲ್ಲದೆ ಈ ರಿಂಗ್‌ ಅಗತ್ಯವಿದ್ದಾಗ ವೈದ್ಯಕೀಯ ಸಲಹೆಯನ್ನೂ ಸಹ ನೀಡುವ ಕೆಲಸ ಮಾಡುತ್ತದೆ ಎಂದು ತಿಳಿಸಲಾಗಿದೆ. ಇದಕ್ಕಾಗಿ ಈ ರಿಂಗ್‌ ಬಯೋಮೆಟ್ರಿಕ್ ಮತ್ತು ಶಾರೀರಿಕ ಡೇಟಾ, ಪ್ರಮುಖ ಚಿಹ್ನೆಗಳು ಮತ್ತು ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
Samsung has officially confirmed that the Samsung Galaxy Unpacked event will be held on January 17, 2024.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+