ಇದೇ 12ಕ್ಕೆ ಫಿಕ್ಸ್‌ ಆಗಿದೆ ಆಪಲ್‌ನ ಬಿಗ್‌ ಇವೆಂಟ್‌..! ಏನೆಲ್ಲಾ ಲಾಂಚ್‌ ಆಗುತ್ತೆ ಗೊತ್ತಾ..?

By Lekhaka
|

ಆಪಲ್ ಸಂಸ್ಥೆಯ 2018 ರ ಅತೀ ದೊಡ್ಡ ಕಾರ್ಯಕ್ರಮದ ದಿನಾಂಕವನ್ನು ಬಿಡುಗಡೆಗೊಳಿಸಲಾಗಿದೆ.ಆಪಲ್ ಪಾರ್ಕ್ ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್ ನಲ್ಲಿ ಕ್ಯೂಪರ್ಟಿನೋ ಮೂಲದ ಆಪಲ್ ಸಂಸ್ಥೆ ತನ್ನ ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು ನೂತನ ಐಫೋನ್ ಗಳನ್ನು ಅಂದೇ ಬಿಡುಗಡೆಗೊಳಿಸಲಿದೆ.

ಇದೇ 12ಕ್ಕೆ ಫಿಕ್ಸ್‌ ಆಗಿದೆ ಆಪಲ್‌ನ ಬಿಗ್‌ ಇವೆಂಟ್‌..! ಏನೆಲ್ಲಾ ಲಾಂಚ್‌..?

ಸಿಇಓ ಟಿಮ್ ಕುಕ್ 2018ಐಫೋನ್ ಗಳನ್ನು ಬಿಡುಗಡೆಗೊಳಿಸಲಿದ್ದಾರೆ ಮತ್ತು ಅದರ ಜೊತೆಗೆ ಆಪಲ್ ನ ಇನ್ನಷ್ಟು ಗೆಜೆಟ್ ಗಳನ್ನು ಕೂಡ ಅಂದೇ ಬಿಡುಗಡೆ ಮಾಡುತ್ತಾರೆ. ಹಾಗಾದ್ರೆ ಸೆಪ್ಟೆಂಬರ್ 12 ರಂದು ಆಪಲ್ ಯಾವೆಲ್ಲ ವಸ್ತುಗಳನ್ನು ಬಿಡುಗಡೆ ಮಾಡುತ್ತದೆ ಎಂಬ ಬಗ್ಗೆ ಒಂದು ಕಿರುನೋಟ ಇಲ್ಲಿದೆ.

ಮೂರು ಹೊಸ ಐಫೋನ್ ಗಳು:

ಮೂರು ಹೊಸ ಐಫೋನ್ ಗಳು:

ಆಪಲ್ ಈ ಬಾರಿ ಮೂರು ಐಫೋನ್ ಗಳನ್ನು ಬಿಡುಗಡೆಗೊಳಿಸಲಿದೆ. ಎಲ್ಲಾ ಐಫೋನ್ ಗಳು ನಾಚ್ ಡಿಸೈನ್ ಹೊಂದಿರಲಿದ್ದು ಐಫೋನ್ ಎಕ್ಸ್ ನಲ್ಲಿ ಕಳೆದ ವರ್ಷ ಇದನ್ನು ಪರಿಚಯಿಸಲಾಗಿತ್ತು. ಐಫೋನ್ ಎಕ್ಸ್ ನಂತೆ ಕಾಣುವ ಐಫೋನ್ ಗಳನ್ನು ಈ ಬಾರಿ ಬಿಡುಗಡೆಗೊಳಿಸಲಿದ್ದು ಮೂರು ವಿಭಿನ್ನ ಡಿಸ್ಪ್ಲೇ ಸೈಜ್ ನ್ನು ಇದು ಹೊಂದಿರಲಿದೆ. 6.5-ಇಂಚಿನ OLED ಡಿಸ್ಪ್ಲೇ, 5.8-ಇಂಚಿನ OLED ಮತ್ತು 6.1-ಇಂಚಿನ TFT-LCD ಆಗಿರಲಿದೆ.

ಗಾಳಿಸುದ್ದಿಯ ಪ್ರಕಾರ 6.5 ಇಂಚಿನ ಐಫೋನ್ ಬೆಲೆ 1000 ಡಾಲರ್ ಆಗಿರಲಿದೆ. ಅಂದರೆ ಅದರ ಭಾರತೀಯ ಬೆಲೆ ಹೆಚ್ಚು ಕಡಿಮೆ 90 ಸಾವಿರ ರುಪಾಯಿಗಳು. 5.8 ಇಂಚಿನ ಐಫೋನ್ ಮಾಡೆಲ್ ನ ಬೆಲೆ $800 ಅಂದಾಜು 70,000 ರುಪಾಯಿ ಭಾರತದಲ್ಲಿ ಆಗಿರಲಿದೆ ಇದು ಜಿಎಸ್ ಟಿಯನ್ನು ಸೇರಿಸಿ ಬರುವ ಮೊತ್ತವಾಗಿರುತ್ತದೆ. ಕುತೂಹಲಕಾರಿ ವಿಷಯವೆಂದರೆ 6.1 ಇಂಚಿನ ಡಿಸ್ಪ್ಲೇ ಮಾಡೆಲ್ ನ ಬೆಲೆ 700 ಡಾಲರ್ ಅಂದರೆ ಭಾರತೀಯ ಮಾರುಕಟ್ಟೆಯಲ್ಲಿ ಟ್ಯಾಕ್ಸ್ ಸೇರಿಸಿ 60,000 ರುಪಾಯಿ ಆಗಿರಬಹುದು.

ಎಲ್ಲಾ ಮೂರು ಐಫೋನ್ ಗಳಿಗೂ ಹಿಂಭಾಗದಲ್ಲಿ ಗ್ಲಾಸಿನ ಬ್ಯಾಕ್ ಇರಲಿದ್ದು ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ. ಹೊಸ ಐಫೋನ್ ಗಳು ನೂತನ A12 ಚಿಪ್ ನೊಂದಿಗೆ ಹೆಚ್ಚು RAM ಮತ್ತು ಬ್ಯಾಟರಿ ಜೊತೆಗೆ ಸ್ಟೋರೇಜ್ ಅವಕಾಶಗಳನ್ನು ಹೊಂದಿರಲಿದೆ.

Buy Xiaomi Mi A2 and get 4500GB Jio data
ಆಪಲ್ ವಾಚ್ 4

ಆಪಲ್ ವಾಚ್ 4

ಆಪಲ್ ಈ ಬಾರಿಯ ಸೆಪ್ಟೆಂಬರ್ ಕಾರ್ಯಕ್ರಮದಲ್ಲಿ ಆಪಲ್ ವಾಚ್ ನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಹೌದು ಸೆಪ್ಟೆಂಬರ್ 12 ರಂದು ಆಪಲ್ ಸಂಸ್ಥೆ ತನ್ನ ಮುಂದಿನ ಸ್ಮಾರ್ಟ್ ವಾಚ್ ಅಂದರೆ ಆಪಲ್ ವಾಚ್ 4 ನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ. 4Th ಜನರೇಷನ್ನಿನ ಈ ಆಪಲ್ ವಾಚ್ ಎರಡು ಡಯಲ್ ಸೈಜ್ ನ್ನು ಹೊಂದಿರಲಿದೆ.

38mm ಮತ್ತು 42mm ಜೊತೆಗೆ S4 ಚಿಪ್ ಸೆಟ್ ನ್ನು ಇದು ಹೊಂದಿದ್ದು ಉತ್ತಮ ಬ್ಯಾಟರಿ ಲೈಫ್ ಮತ್ತು ಫರ್ಫಾಮೆನ್ಸ್ ನ್ನು ನೀಡುವ ನಿರೀಕ್ಷೆ ಇದೆ. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಆಪಲ್ ಇದನ್ನು LTE ಮತ್ತು WiFi ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಹಿಂದಿನ ಮಾಡೆಲ್ ಆಪಲ್ ವಾಚ್ ಗಳಿಗಿಂತ ಆಪಲ್ ವಾಚ್ 4 ಇನ್ನಷ್ಟು ತೆಳುವಾಗಿ ಡಿಸೈನ್ ಮಾಡಿರುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

ಆಪಲ್ ಏರ್ ಪವರ್ 

ಆಪಲ್ ಏರ್ ಪವರ್ 

ಕಳೆದ ವರ್ಷ ಆಪಲ್ ಏರ್ ಪವರ್ ಚಾರ್ಜಿಂಗ್ ಬಗ್ಗೆ ಟೀಸರ್ ಬಿಟ್ಟಿತ್ತು. ಸೆಪ್ಟೆಂಬರ್ 12 ರ ಕಾರ್ಯಕ್ರಮದಲ್ಲಿ ಅದನ್ನು ಆಪಲ್ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಏರ್ ಪವರ್ ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ ನೀಡುವ ಪ್ಯಾಡ್ ಆಗಿದ್ದು ಐಫೋನ್ ನ್ನು ಚಾರ್ಜ್ ಮಾಡಲು ಇದು ಸಹಕಾರಿ ಮತ್ತು ಆಪಲ್ ವಾಚ್ ಮತ್ತು ಐಪಾಡ್ ಗಳನ್ನು ಕೂಡ ಚಾರ್ಜ್ ಮಾಡಬಹುದು.

ಏರ್ ಪಾಡ್ಸ್ 2

ಏರ್ ಪಾಡ್ಸ್ 2

ಏರ್ ಪಾಡ್ಸ್ ಗಳ ಬಗ್ಗೆ ಹೇಳುವುದಾದರೆ ಆಪಲ್ ಮುಂದಿನ ಜನರೇಷನ್ನಿನ ವಯರ್ ಲೆಸ್ ಏರ್ ಪಾಡ್ ಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಅದನ್ನು ಬಹುಶ್ಯಃ AirPods 2 ಎಂದು ನಾಮಕರಣ ಮಾಡಲಾಗಿರುತ್ತದೆ. ಈ ಏರ್ ಪಾಡ್ ಗಳು ವಾಟರ್ ರೆಸಿಸ್ಟೆನ್ಸ್ , ಉತ್ತಮ ಬ್ಯಾಟರಿ ಬ್ಯಾಕ್ ಅಪ್ ಮತ್ತು ಆಡಿಯೋ ಕ್ವಾಲಿಟಿಯನ್ನು ಹೊಂದಿರಲಿದೆ.

ಹೊಸ ಐಪಾಡ್ ಪ್ರೋ ಮಾಡೆಲ್ ಬಗ್ಗೆ ಇರುವ ಗಾಳಿಸುದ್ದಿಗಳು 

ಹೊಸ ಐಪಾಡ್ ಪ್ರೋ ಮಾಡೆಲ್ ಬಗ್ಗೆ ಇರುವ ಗಾಳಿಸುದ್ದಿಗಳು 

ಇನ್ನು ಕೆಲವು ರೂಮರ್ ಗಳ ಪ್ರಕಾರ ಆಪಲ್ ಹೊಸ ಐಪ್ಯಾಡ್ ಪ್ರೋ ಮಾಡೆಲ್ ನ್ನು ಬಿಡುಗಡೆಗೊಳಿಸಲಿದೆ. ಅದು 11-ಇಂಚು ಮತ್ತು 12.9-ಇಂಚಿನ ಸೈಜ್ ನಲ್ಲಿದ್ದು ಫೇಸ್ ಐಡಿಯನ್ನು ಬೆಂಬಲಿಸುತ್ತದೆ ಜೊತೆಗೆ ತೆಳುವಾದ bezels ನ್ನು ಸ್ಕ್ರೀನಿನ ಸುತ್ತಲೂ ಹೊಂದಿರುತ್ತದೆ. ಆಶ್ಚರ್ಯಗೊಳ್ಳಬೇಡಿ ಆಪಲ್ ಹೆಡ್ ಫೋನ್ ಜ್ಯಾಕ್ ನ್ನು ಹೊಸ ಐಪ್ಯಾಡ್ ಗಳಿಂದ ರೂಮೂವ್ ಮಾಡಿರುವ ಸಾಧ್ಯತೆಗಳಿದ್ದು ಅದು ಉತ್ತಮ ಬ್ಯಾಟರಿ ಲೈಫ್ ಮತ್ತು ಫರ್ಫಾಮೆನ್ಸ್ ಗೆ ಬೆಂಬಲ ನೀಡುವಂತಿರುತ್ತದೆ.

Best Mobiles in India

English summary
Dates of Apple's biggest event announced: 3 iPhones, AirPods 2 and other likely launches. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X