IIT, IIM ನವರ ಜೊತೆ ಡೇಟಿಂಗ್ ಮಾಡಲು ಮಾರ್ಗ

By Varun
|
IIT, IIM ನವರ ಜೊತೆ ಡೇಟಿಂಗ್ ಮಾಡಲು ಮಾರ್ಗ

ಐಐಟಿ ಹಾಗು ಐಐಎಂ ನಲ್ಲಿ ಓದಿ ಪದವಿ ಪಡೆದವರು ಎಂಥಾ ಬುದ್ಧಿವಂತರು ಎಂಬ ವಿಷಯ ನಿಮಗೆಲ್ಲಾ ಗೊತ್ತೇ ಇದೆ. ಈ ಪ್ರತಿಷ್ಟಿತ ವಿದ್ಯಾ ಸಂಸ್ಥೆಗಳಲ್ಲಿ ಸೀಟ್ ಸಿಗುವುದೇ ಕಷ್ಟ. ಸಿಕ್ಕರಂತೂ ಲೈಫ್ ಸೆಟಲ್ ಆದ ಹಾಗೆ. ಕ್ಯಾಂಪಸ್ ಇಂಟರ್ವ್ಯೂನಲ್ಲಂತೂ ಭರ್ಜರಿ ಸಂಬಳವಂತೂ ಗ್ಯಾರಂಟಿ. ಅಂಥವರ ಜೊತೆ ನೀವು ಫ್ಲರ್ಟ್ ಮಾಡಬೇಕಾ?ಅವರ ಜೊತೆ ಡೇಟಿಂಗ್ ಮಾಡಬೇಕಾ ?

ಇದೇನಿದು ಜೋಕಾ ಎಂದುಕೊಳ್ಳಬೇಡಿ. ಇದು ನಿಜವಾಗಲೂ ಸತ್ಯ. ಐಐಟಿ ಖರಗ್ಪುರ್ ನ ಮೂರು ಐಐಟಿ ವಿದ್ಯಾರ್ಥಿಗಳಾದ ಲಾಯಕ್ ಸಿಂಗ್, ಕಿಂಶುಕ್ ಬೈರಾಗಿ ಹಾಗು ನಿಖಿಲ್ ಕೌಶಿಕ್ ಸೇರಿಕೊಂಡು ಐಐಟಿ ಹಾಗು ಐಐಎಂ ಪದವೀಧರರು ಒಂದೇ ವೇದಿಕೆಯಡಿ ಸೇರಿ ತಮ್ಮ ತಮ್ಮ ಸೋಲ್ ಮೆಟ್ ಹುಡುಕಿಕೊಳ್ಳಲು, ಫ್ಲರ್ಟ್ ಮಾಡಲು dateiitians.com ಎಂಬ ವೆಬ್ಸೈಟ್ ಅನ್ನು ಶುರು ಮಾಡಿದ್ದಾರೆ.

ಸುಮಾರು 7 ಸಾವಿರ ಬಳಕೆದಾರರು ಇದರಲ್ಲಿ ನೊಂದಣಿಯಾಗಿದ್ದು, ಶೇ. 35 ಹುಡುಗಿಯರು ಇದ್ದಾರಂತೆ. ಇದೇ ವರ್ಷದ ಫೆಬ್ ತಿಂಗಳಲ್ಲಿ ಶುರುವಾದ ಈ ವೆಬ್ಸೈಟ್, ಗೀಕ್ ಗಳಿಗೆ ಹಾಗು ಟೆಕ್ಕಿಗಳಿಗೆ ಇದು ಸಖತ್ ಆದ ವೇದಿಕೆಯಾಗಿದೆ.

ಪ್ರಾರಂಭದಲ್ಲಿ ಐಐಟಿ ಹಾಗು ಐಐಎಂ ಪದವಿಧರರು ಮಾತ್ರ ಇದರಲ್ಲಿ ಖಾತೆ ತೆರೆಯುವ ಅವಕಾಶವಿತ್ತು. ಆದರೆ ಬೇರೆ ಕ್ಷೇತ್ರದ ವಿದ್ಯಾರ್ಥಿಗಳೂ ಒತ್ತಾಯಿಸಿದ್ದರಿಂದ ಎಲ್ಲರಿಗೂ ಅವಕಾಶ ಕಲ್ಪಿಸಲಾಯಿತಂತೆ.

ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಇರುವುದರಿಂದ ಪ್ರೊಫೈಲ್ ಇರುವವರ ನೈಜ ಜಾಡು ಸಿಗುವುದಿಲ್ಲ. ಆದರೆ ಈ ವೆಬ್ಸೈಟಿನಲ್ಲಿ ನೀವು ಖಾತೆ ತೆರೆಯಬೇಕಾದರೆ ನಿಮ್ಮ ಮೊಬೈಲ್ ನಿಂದ validate ಮಾಡಬೇಕಾಗಿರುವುದರಿಂದ ಈ ರೀತಿಯ ಸಮಸ್ಯೆ ತಪ್ಪಿಸಬಹುದು ಎಂದು ಈ ವೆಬ್ಸೈಟ್ ಶುರು ಮಾಡಿದವರ ಅಭಿಪ್ರಾಯ.

ನಾನು ಈ ಅಂಕಣ ಬರೆಯುವುದಕ್ಕೆ ಮುನ್ನವೇ ಪ್ರೊಫೈಲ್ ಕ್ರಿಯೇಟ್ ಮಾಡಿ ಐಐಟಿಯವರ ಜೊತೆ ಸ್ನೇಹ ಬೆಳೆಸಲು, ಡೇಟಿಂಗ್ ಮಾಡಲು ರೆಡಿಯಾಗಿದ್ದೇನೆ. ಫ್ಲರ್ಟಿಂಗ್, ಡೇಟಿಂಗ್ ಗೆ ನೀವೂ ರೆಡಿನಾ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X