Home
ಸುದ್ದಿಜಾಲ

ಇನ್ಮುಂದೆ ಡಿಡಿ ಕಿಸಾನ್​ನಲ್ಲಿ ಸುದ್ದಿ ಓದಲಿದ್ದಾರೆ ಎಐ ಆ್ಯಂಕರ್ಸ್! : ಇವರ ಹೆಸರು 'ಎಐ ಕ್ರಿಶ್' ಮತ್ತು 'ಎಐ ಭೂಮಿ'

ನಾವೀಗ ಕೃತಕ ಬುದ್ಧಿಮತ್ತೆ (Artificial Intelligence) ಯುಗದಲ್ಲಿದ್ದೇವೆ. ಪ್ರತೀ ಕ್ಷೇತ್ರದಲ್ಲೂ ಕೃತಕ ಬದ್ಧಿಮತ್ತೆ ಬಳಕೆಯಾಗುತ್ತಿದೆ. ಕೈಗಾರಿಕೆಗಳು, ಮಾಹಿತಿ ತಂತ್ರಜ್ಞಾನ, ಸೇವಾ ಕ್ಷೇತ್ರಗಳಲ್ಲಂತೂ ಈ ತಂತ್ರಜ್ಞಾನ ಧೂಳೆಬ್ಬಿಸಿದೆ. ಡಿಡಿ ಕಿಸಾನ್ ಚಾನೆಲ್‌ (DD Kisan Channel) ಇದಕ್ಕೆ ಹೊರತಾಗಿಲ್ಲ.

ಹೌದು, ಸುದ್ದಿ ವಾಹಿನಿಗಳಲ್ಲಿ (News Channel) ಕೃತಕ ಬುದ್ಧಿಮತ್ತೆಯ ಕರಾಮತ್ತು ಶುರುವಾಗಿದೆ. ಭಾರತದ ಹಲವು ಚಾನೆಲ್‍‌ಗಳಲ್ಲಿ ಎಐ ಆ್ಯಂಕರ್‌ಗಳು (AI News Anchors) ಕಾಣಿಸಿಕೊಂಡಿದ್ದಾರೆ. ಇದೀಗ, ದೂರದರ್ಶನ ಕಿಸಾನ್ ಚಾನೆಲ್​ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಮತ್ತಷ್ಟು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಮುಂದಾಗಿದೆ.

ಇನ್ಮುಂದೆ ಡಿಡಿ ಕಿಸಾನ್​ನಲ್ಲಿ ಸುದ್ದಿ ಓದಲಿದ್ದಾರೆ ಎಐ ಆ್ಯಂಕರ್ಸ್!

ಈ ಬಗ್ಗೆ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಖಚಿತಪಡಿಸಿದೆ. ದೂರದರ್ಶನ ಕಿಸಾನ್ ಚಾನೆಲ್​ (ಡಿಡಿ ಕಿಸಾನ್) 50 ಭಾಷೆಗಳಲ್ಲಿ ಮಾತನಾಡಬಲ್ಲ ಇಬ್ಬರು ಎಐ ಆ್ಯಂಕರ್​ಗಳನ್ನು ನಿಯೋಜನೆ ಮಾಡಿದೆ. ಈ ಎಐ ಆ್ಯಂಕರ್​ಗಳು ಭಾರತೀಯ ಭಾಷೆಗಳು ಸೇರಿದಂತೆ 50 ವಿದೇಶಿ ಭಾಷೆಗಳನ್ನು ಮಾತನಾಡಬಲ್ಲರು. ಡಿಡಿ ಕಿಸಾನದ ಚಾನೆಲ್‌ನ 9ನೇ ವಾರ್ಷಿಕೋತ್ಸವದ ಅಂಗವಾಗಿ ಹೊಸ ಎಐ ಆ್ಯಂಕರ್​ಗಳನ್ನು ನಿಯೋಜಿಸಲಾಗಿದೆ.

ಈ ನೂತನ ಎಐ ಆ್ಯಂಕರ್​ಗಳಿಗೆ ಎಐ ಕ್ರಿಶ್ (AI Krish) ಮತ್ತು ಎಐ ಭೂಮಿ (AI Bhoomi) ಎಂದು ಹೆಸರಿಡಲಾಗಿದೆ. ಈ ಇಬ್ಬರೂ ಅಧಿಕೃತವಾಗಿ ಸುದ್ದಿಗಳನ್ನು ಓದಲಿದ್ದಾರೆ. ಎಐ ಕ್ರಿಶ್ ಮತ್ತು ಎಐ ಭೂಮಿ ಇಬ್ಬರೂ ಎಐ ನಿರೂಪಕರು ಕಂಪ್ಯೂಟರ್​ಗಳಾಗಿದ್ದು, ಇವರು ಮನುಷ್ಯರಂತೆಯೇ ಕೆಲಸ ಮಾಡುತ್ತವೆ ಎಂದು ಸಚಿವಾಲಯ ತಿಳಿಸಿದೆ. ಆದರೆ, ಮನುಷ್ಯರಿಗೆ ಭಿನ್ನವಾಗಿ ಯಾವುದೇ ದಣಿವು ಆಯಾಸವಿಲ್ಲದೆ, ಇವರು 24 ಗಂಟೆ 365 ದಿನಗಳು ಕಾಲ ಸುದ್ದಿಗಳನ್ನು ಓದಬಲ್ಲರು.

ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ

ಹೊಸ ಎಐ ಆ್ಯಂಕರ್​ಗಳು ಈಗಾಗಲೇ (ಮೇ 26) ಅಧಿಕೃತವಾಗಿ ಸುದ್ದಿಗಳನ್ನು ಓದಲು ಪ್ರಾರಂಭಿಸಿದ್ದಾರೆ. ಎಐ ಆ್ಯಂಕರ್​ಗಳು ಕಾಶ್ಮೀರದಿಂದ ತಮಿಳುನಾಡಿನವರೆಗೆ ಮತ್ತು ಗುಜರಾತ್​ನಿಂದ ಅರುಣಾಚಲದವರೆಗೆ, ದೇಶ ಮತ್ತು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನೆಗಳು, ಕೃಷಿ ಮಂಡಿಗಳಲ್ಲಿನ ಪ್ರವೃತ್ತಿಗಳು, ಹವಾಮಾನ ಬದಲಾವಣೆಗಳು ಅಥವಾ ಸರ್ಕಾರಿ ಯೋಜನೆಗಳ ಬಗೆಗಿನ ಎಲ್ಲ ಮಾಹಿತಿಗಳನ್ನು ರೈತರಿಗೆ ತಲುಪಿಸಲಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಮಾನವ ನ್ಯೂಸ್ ಆ್ಯಂಕರ್‌ನ ಪ್ರತಿರೂಪ

ಮೇ 26, 2015 ರಂದು ಪ್ರಾರಂಭಗೊಂಡ ದೂರದರ್ಶನ ಕಿಸಾನ್ ಚಾನೆಲ್​, ರೈತರಿಗೆ ಮೀಸಲಾಗಿರುವ ದೇಶದ ಏಕೈಕ ಟಿವಿ ಚಾನೆಲ್ ಆಗಿದೆ. ಪ್ರಗತಿಪರ ರೈತರ ಸಾಧನೆಗಳನ್ನು ಎಲ್ಲಾ ಜನರಿಗೆ ತಲುಪಿಸಲು, ದೇಶದ ಕೃಷಿ ಮತ್ತು ಗ್ರಾಮೀಣ ಸಮುದಾಯಕ್ಕೆ ಸೇವೆ ಸಲ್ಲಿಸಲು ಮತ್ತು ಅವರಿಗೆ ಶಿಕ್ಷಣ ನೀಡುವ ಮೂಲಕ ಸಮಗ್ರ ಅಭಿವೃದ್ಧಿಯ ವಾತಾವರಣವನ್ನು ಸೃಷ್ಟಿಸುವತ್ತ ಕೆಲಸ ಮಾಡಲು ಡಿಸಿ ಕಿಸಾನ್ ಕಾರ್ಯನಿರ್ವಹಿಸುತ್ತಿದೆ. ವರ್ಚುವಲ್ ನ್ಯೂಸ್ ಆ್ಯಂಕರ್ ಅಥವಾ ಸಿಂಥೆಟಿಕ್ ನ್ಯೂಸ್ ಆ್ಯಂಕರ್ ಎಂದೂ ಕರೆಯಲ್ಪಡುವ ಎಐ ಆಂಕರ್, ಕಂಪ್ಯೂಟರ್ ರಚಿತ ಮಾನವ ಸುದ್ದಿ ನಿರೂಪಕನ ಪ್ರತಿರೂಪವಾಗಿದೆ.

ಏನಿದು ಎಐ ನ್ಯೂಸ್ ಆ್ಯಂಕರ್?

ಕನ್ನಡದ ಕೆಲವು ಸುದ್ದಿವಾಹಿನಿಗಳೂ ಸೇರಿದಂತೆ ಭಾರತದ ಹಲವು ಸುದ್ದಿವಾಹಿನಿಗಳಲ್ಲಿ ಕೃತಕ ಬುದ್ಧಿಮತ್ತೆ ಆಧರಿತ ಸುದ್ದಿ ನಿರೂಪಕರು (ಸುದ್ದಿ ವಾಚಕರು) ಕಾಣಿಸಿಕೊಳ್ಳುತ್ತಿದ್ದಾರೆ. ಸರಳ ಭಾಷೆಯಲ್ಲಿ ಹೇಳಬೇಕು ಎಂದರೆ, ಇದೊಂದು ರೋಬೋ ನ್ಯೂಸ್ ಆ್ಯಂಕರ್ ಅಷ್ಟೇ. ಇದೊಂದು ಕಂಪ್ಯೂಟರ್ ಸೃಜಿತ ಮಾಡೆಲ್ ಆಗಿದ್ದು, ನ್ಯಾಚುರಲ್ ಲ್ಯಾಂಗ್ವೇಚ್ ಪ್ರೊಸೆಸಿಂಗ್ ಮತ್ತು ಡೀಪಲ್ ಲರ್ನಿಂಗ್ ಬಳಸಿಕೊಂಡು, ಮುಖದ ಅಭಿವ್ಯಕ್ತಿಗಳನ್ನು ಹಾಗೂ ವಾಸ್ತವಿಕ ಮಾತುಗಳನ್ನು ಹೊರಡಿಸುತ್ತದೆ. ಈ ಎಐ ನ್ಯೂಸ್ ಆ್ಯಂಕರ್‌ಗಳು ಯಾವುದೇ ನೀಡಲಾಗುವ ಪಠ್ಯವನ್ನು ಓದಬಲ್ಲವು ಮತ್ತು ಅದನ್ನು ಅಷ್ಟೇ ಸ್ವಾಭಾವಿಕವಾಗಿ ಹಾಗೂ ಎಂಗೇಂಜಿಂಗ್ ರೀತಿಯಲ್ಲಿ ಪ್ರಸ್ತುತಪಡಿಸಬಲ್ಲವು.

Best Mobiles in India

English summary
DD Kisan channel deploys two AI anchors. These AI anchors can speak over 50 foreign languages, including Indian languages.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+