ಬರೋಬ್ಬರಿ 22 ವರ್ಷಗಳ ಬಳಿಕ ಸಿಕ್ಕ ನಾಪತ್ತೆಯಾದ ಕಾರು..!

By Gizbot Bureau
|

ಜನ ನಾಪತ್ತೆಯಾಗೋದು ಸಾಮಾನ್ಯ. ಕಳೆದು ಹೋದವರು ಮತ್ತೆ ಜೀವಂತವಾಗಿ ಬರಬಹುದು ಅಥವಾ ಬರದಿರಬಹುದು. ಆದರೆ, ಇಲ್ಲೊಂದು ಪ್ರಕರಣ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹೌದು, ಬರೋಬ್ಬರಿ 22 ವರ್ಷಗಳ ಹಿಂದೆ ನಾಪತ್ತೆಯಾದವನ ದೇಹ ಈಗ ಕಳೆಬರಹದ ಸ್ಥಿತಿಯಲ್ಲಿ ದೊರಕಿದೆ. ಅದು, ಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಫೋಟೋಗಳಿಂದ ಎಂದರೆ ನಿಮಗೆ ಇನ್ನಷ್ಟು ಆಶ್ಚರ್ಯ ಆಗೇ ಆಗುತ್ತದೆ. ಅಮೆರಿಕದ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದ್ದು, ಜುಲೈ 1997ರಲ್ಲಿ ವಿಲಿಯಂ ಎರ್ಲ್‌ ಮೋಲ್ಡ್‌ ಎಂಬಾತ ನೈಟ್‌ಕ್ಲಬ್‌ನಿಂದ ಹೊರ ಹೋದಾತ ಮರಳಿ ಬರದೇ ನಾಪತ್ತೆಯಾದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ.

ಬಿಳಿ ಕಾರಿನಲ್ಲಿ ನಾಪತ್ತೆ

ಬಿಳಿ ಕಾರಿನಲ್ಲಿ ನಾಪತ್ತೆ

ನೈಟ್‌ಕ್ಲಬ್‌ನಿಂದ ಹೊರಡುವ ಸಮಯದಲ್ಲಿ ಮೋಲ್ಡ್‌ ಬಿಳಿ ಬಣ್ಣದ 1994ರ ಸ್ಯಾಟರ್ನ್‌ ಸೇಡಾನ್‌ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದ ಎಂಬ ಅಂಶ 22 ವರ್ಷದ ನಂತರ ಆತನ ಪತ್ತೆಗೆ ನೆರವಾಗಿದ್ದು, ಉಪಗ್ರಹ ಕ್ಲಿಕ್ಕಿಸಿದ ಫೋಟೋದಲ್ಲಿ ಬಿಳಿ ಬಣ್ಣದ ಕಾರು ಸ್ಪಷ್ಟವಾಗಿ ಗೋಚರಿಸಿದೆ.

ಕೊಳದಲ್ಲಿ ಪತ್ತೆ

ಕೊಳದಲ್ಲಿ ಪತ್ತೆ

22 ವರ್ಷದ ಹಿಂದೆ ಫ್ಲೋರಿಡಾದ ವೆಲ್ಲಿಂಗ್ಟನ್‌ನಲ್ಲಿರುವ ಗ್ರಾಂಡ್‌ ಐಸ್ಲಿಸ್‌ ಮನೆ ಹಿಂಭಾಗದಲ್ಲಿರುವ ಕೊಳದಲ್ಲಿ ಮೋಲ್ಡ್‌ ಚಲಿಸುತ್ತಿದ್ದ ಕಾರು ಬಿದ್ದಿದೆ. ಆದರೆ, ಎರಡು ದಶಕಗಳಿಂದ ಯಾರ ಕಣ್ಣಿಗೂ ಕಾಣದಿರುವ ಕಾರು ಈಗ ಉಪಗ್ರಹ ಕಣ್ಣಿಗೆ ಬಿದ್ದಿದ್ದು, ನಾಪತ್ತೆಯಾದವನ ಹುಡುಕಾಟಕ್ಕೆ ಸಹಾಯಕವಾಗಿದೆ.

ಗೂಗಲ್‌ ಮ್ಯಾಪ್‌ನಲ್ಲಿ ಸಿಕ್ಕ ಕಾರು

ಗೂಗಲ್‌ ಮ್ಯಾಪ್‌ನಲ್ಲಿ ಸಿಕ್ಕ ಕಾರು

ಕಳೆದ ತಿಂಗಳು ಫ್ಲೋರಿಡಾದ ಹಳೇ ನಿವಾಸಿಯೊಬ್ಬರು ಮುಳುಗಿರುವ ಕಾರನ್ನು ಗೂಗಲ್ ಮ್ಯಾಪ್‌ನಲ್ಲಿ ಗುರುತಿಸಿದ್ದಾರೆ. ನಂತರ, ಮನೆಯ ಪ್ರಸ್ತುತ ಮಾಲೀಕ ಬ್ಯಾರಿ ಫೇ ಅವರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಬ್ಯಾರಿ ಫೇ ಈ ಸುದ್ದಿಯನ್ನು ನಂಬಿರಲಿಲ್ಲ. ಮನೆಯ ಹಿಂದೆ ಯಾವುದೇ ಕಾರು ಇಲ್ಲ ಎಂದೇ ಹೇಳಿದ್ದರು.

ಕೊಳದಲ್ಲಿ ಕಾಣದ ಕಾರು

ಕೊಳದಲ್ಲಿ ಕಾಣದ ಕಾರು

14 ತಿಂಗಳಿನಿಂದ ಮನೆಯಲ್ಲಿ ವಾಸಿಸುತ್ತಿದ್ದರು ಕೆಲವೇ ಮೀಟರ್‌ನಲ್ಲಿರುವ ಕೊಳದಲ್ಲಿದ್ದ ವಾಹನವನ್ನು ಎಂದಿಗೂ ಗುರುತಿಸಿದ್ದಿಲ್ಲ. ಇನ್ನು, ಗೂಗಲ್‌ ಮ್ಯಾಪ್ಸ್‌ನಲ್ಲಿ ಕಾರು ಇರುವ ಫೋಟೋಗಳನ್ನು ನೋಡಿದರು ಸಹ ಬ್ಯಾರಿ ಫೇ ಕಣ್ಣಿಗೆ ಕಾರು ಕಂಡಿರಲಿಲ್ಲ.

ಅಧಿಕಾರಿಗಳ ತನಿಖೆಯಲ್ಲಿ ಪತ್ತೆ

ಅಧಿಕಾರಿಗಳ ತನಿಖೆಯಲ್ಲಿ ಪತ್ತೆ

ಕಾಣೆಯಾದ ವಾಹನದ ಬಗ್ಗೆ ತನಿಖೆ ನಡೆಸಲು ಬಂದ ಅಧಿಕಾರಿಗಳು ಸೆಡಾನ್‌ ಕಾರನ್ನು ಕಂಡುಹಿಡಿದರು. ಕಾರಿನೊಳಗೆ ಅಸ್ಥಿಪಂಜರದ ಅವಶೇಷಗಳಿದ್ದು, ಅಧಿಖಾರಿಗಳು ಕೊಳದಲ್ಲಿ ವಾಹನವಿದೆ ಎಂದು ದೃಢಪಡಿಸಿದರು. ಸುಮಾರು ಹದಿನೈದು ದಿನಗಳ ನಂತರ, ಅಸ್ಥಿಪಂಜರದ ಅವಶೇಷಗಳು ವಿಲಿಯಂ ಮೋಲ್ಡ್‌ನದ್ದೇ ಎಂದು ಗುರುತಿಸಲಾಗಿದೆ.

 ಕಲ್ಪನೆಗೆ ನಿಲುಕದ ವಾಹನ

ಕಲ್ಪನೆಗೆ ನಿಲುಕದ ವಾಹನ

ಈ ವಾಹನ ಕೆಲವು ಹಳೆಯ ಕಾರುಗಳಷ್ಟೇ ಎಂದು ಕಲ್ಪಿಸಿಕೊಂಡಿದ್ದೆ. ಆದರೆ, ಅದರಲ್ಲಿ 22 ವರ್ಷದ ಮೃತ ದೇಹವಿರುತ್ತೆ ಎಂದು ನಾನೂ ಊಹಿಸಿರಲಿಲ್ಲ ಎಂದು ಪ್ರಸ್ತುತ ಮನೆಯ ಮಾಲೀಕ ಬ್ಯಾರಿ ಫೇ ಹೇಳುತ್ತಾರೆ.

ಡ್ರಿಂಕ್‌ ಅಂಡ್‌ ಡ್ರೈವ್‌

ಡ್ರಿಂಕ್‌ ಅಂಡ್‌ ಡ್ರೈವ್‌

ಕಾರು ಬಂದು ಕೊಳದಲ್ಲಿ ಹೇಗೆ ಬಿತ್ತು ಎಂಬುದನ್ನು ಖಚಿತವಾಗಿ ಹೇಳಲಾಗದಿದ್ದರೂ, ಮೋಲ್ಡ್‌ ಕಣ್ಮರೆಯಾದ ರಾತ್ರಿ ಕುಡಿಯುತ್ತಿದ್ದನು. ರಾತ್ರಿ 11 ಗಂಟೆಗೆ ನೈಟ್‌ಕ್ಲಬ್‌ ಬಿಟ್ಟಿದ್ದಾನೆ. ಅದಕ್ಕೂ ಮೊದಲು ಅಂದರೆ ರಾತ್ರಿ 9.30ಕ್ಕೆ ತನ್ನ ಗೆಳತಿಗೆ ಕರೆ ಮಾಡಿ ಶೀಘ್ರದಲ್ಲೇ ಮನೆಗೆ ಬರುತ್ತೇನೆಂದು ಹೇಳಿದ್ದ. ಆದರೆ, ನಂತರ ಯಾರ ಕಣ್ಣಿಗೂ ಮೋಲ್ಡ್‌ ಕಂಡಿದ್ದಿಲ್ಲ.

ನಿರ್ಮಾಣವಾಗುತ್ತಿದ್ದ ಸಮುಚ್ಛಯ

ನಿರ್ಮಾಣವಾಗುತ್ತಿದ್ದ ಸಮುಚ್ಛಯ

1997ರಲ್ಲಿ ಗ್ರಾಂಡ್‌ ಐಲ್ಸ್‌ ವಸತಿ ಸಮುಚ್ಚಯವನ್ನು ನಿರ್ಮಿಸಲಾಗುತ್ತಿತ್ತು. ಆದರೆ, ನಿರ್ಮಾಣ ಕೆಲಸದ ನಡುವೆಯೂ ಕಾಣೆಯಾದ ವ್ಯಕ್ತಿ ಮತ್ತು ಕಾರನ್ನು ಯಾರೋಬ್ಬರು ಗುರುತಿಸಿರಲಿಲ್ಲ. ಗೂಗಲ್ ಅರ್ಥ್‌ನ ಫೀಚರ್‌ಗಳು ಕನಿಷ್ಠ 2017ರ ಹಿಂದಿನ ಚಿತ್ರಗಳಲ್ಲಿ ಕಾರನ್ನು ಬಹಿರಂಗಪಡಿಸಿದ್ದರೂ, ಕಡಿಮೆ ರೆಸಲ್ಯೂಷನ್‌ ಚಿತ್ರಗಳಿದ್ದರಿಂದ ಗುರುತಿಸಲು ಸಾಧ್ಯವಾಗಿರಲಿಲ್ಲ.

Best Mobiles in India

Read more about:
English summary
Dead Body Discovered After 22 Years Using Space Images

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X