ಸೆಲ್ಫಿ ಗೀಳಿಗೆ ಜೀವನವನ್ನೇ ಬಲಿ ಕೊಡ್ತೀರಾ..? ನಿಮಗೂ ಸ್ವಂತಿ ಕ್ರೇಜ್‌ ಇದ್ದರೆ ಈ ಸ್ಟೋರಿ ನೋಡಿ..!

  ಸಮುದ್ರದ ಮಧ್ಯೆ ಹೋಗಿ ಸೆಲ್ಫೀ ತೆಗೆಯುವುದು, ಜಲಪಾತದ ತುದಿಯಲ್ಲಿ ನಿಂತು ಕ್ಯಾಮೆರಾಕ್ಕೆ ಫೋಸ್‌ ಕೊಡುವುದು, ಉಕ್ಕಿ ಹರಿಯುತ್ತಿರುವ ನದಿ ತೀರದಂತಹ ಅಪಾಯಕಾರಿ ತಾಣಗಳಲ್ಲಿ ನಿಂತು ನಾನೇ ಬೆಸ್ಟ್‌ ಎಂದು ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್‌ ಮಾಡುವವರು ಅಥವಾ ಸೆಲ್ಫೀ ಕ್ರೇಜ್‌ ಹೊಂದಿದವರಿಗೆ ಒಂದು ಶಾಕಿಂಗ್‌ ನ್ಯೂಸ್‌ ಕಾದಿದೆ.

  ಸೆಲ್ಫಿ ಗೀಳಿಗೆ ಜೀವನವನ್ನೇ ಬಲಿ ಕೊಡ್ತೀರಾ..? ನಿಮಗೂ ಸ್ವಂತಿ ಕ್ರೇಜ್‌ ಇದೆಯಾ.?

  ಹೌದು, ಸೆಲ್ಫೀ ತೆಗೆಯುವಾಗ ಸ್ವಲ್ಪ ಯಾಮಾರಿದ್ರು, ನೇರವಾಗಿ ಯಮನ ಪಾದ ಸೇರುವುದು ಖಚಿತ ಎಂದು ಅಧ್ಯಯನವೊಂದು ಹೇಳಿದೆ. ಅದರಂತೆ ವರ್ಷದಿಂದ ವರ್ಷಕ್ಕೆ ಸೆಲ್ಫೀ ಹುಚ್ಚಿಗೆ ಬಲಿಯಾಗುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದೆ ಎಂದು ವರದಿ ಹೇಳಿದೆ. ಭೋಪಾಲ್‌ನ ಅಖಿಲ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಆತಂಕಕಾರಿ ಅಂಶ ಬಹಿರಂಗವಾಗಿದೆ. ಆಗಿದ್ದರೆ AIIMS ಬಿಡುಗಡೆಗೊಳಿಸಿದ ವರದಿಯಲ್ಲಿ ಏನೇನಿದೆ ಎಂಬುದನ್ನು ನೋಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ವರ್ಷದಿಂದ ವರ್ಷಕ್ಕೆ ಹೆಚ್ಚು

  ಸೆಲ್ಫಿ ಕ್ರೇಜ್‌ನಿಂದ ಸಾಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 2011ರಿಂದ ಪ್ರತಿ ವರ್ಷ ಸರಾಸರಿ 43 ಜನ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆಯಲು ಹೋಗಿ ಸಾಯುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಜಲಪಾತ ಹಾಗೂ ಎತ್ತರದ ಸ್ಥಳದಿಂದ ಬಿದ್ದು ಸತ್ತವರೇ ಹೆಚ್ಚೆನ್ನಲಾಗಿದೆ.

  ಯುವಕರೇ ಹೆಚ್ಚು

  ಸ್ಮಾರ್ಟ್‌ಫೋನ್‌ ಮತ್ತು ಸೆಲ್ಫೀ ಕ್ರೇಜ್‌ ಇರುವ ಯುವಕರೇ ಸೆಲ್ಫೀ ಗೀಳಿಗೆ ಸತ್ತವರಲ್ಲಿ ಅಧಿಕ. ಅದಲ್ಲದೇ ಪ್ರತಿ 10 ಸೆಲ್ಫೀ ಸಾವುಗಳಲ್ಲಿ 7 ಜನ ಪುರುಷರೇ ಸಾಯುತ್ತಿರುವುದು ಕಂಡು ಬಂದಿದೆ, ಇನ್ನು ವಯಸ್ಸನ್ನು ಗಮನಿಸಿದೆ 20 ರಿಂದ 29 ವಯಸ್ಸಿನ ಯುವಜನತೆ ಸೆಲ್ಫೀ ಸಾವಿಗೆ ಶರಣಾಗಿರುವುದು ವರದಿಯಿಂದ ಬೆಳಕಿಗೆ ಬಂದಿದೆ.

  ಪರಿಹಾರ ಇದೆಯಾ..?

  ಸೆಲ್ಫೀ ಕ್ರೇಜ್‌ಗೆ ಯಾವುದೇ ಪರಿಹಾರವಿಲ್ಲ ಯುವಜನತೆ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ಮತ್ತು ಜಗತ್ತಿನಾದ್ಯಂತ ಅಪಾಯಕಾರಿ ಸ್ಥಳಗಳಲ್ಲಿ ನೋ ಸೆಲ್ಫೀ ಜೋನ್‌ಗಳನ್ನು ಸ್ಥಾಪಿಸಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಭಾರತದಲ್ಲಿ ಹೀಗಾಗಲೇ ಅನೇಕ ಸ್ಥಳಗಳಲ್ಲಿ ಕಳೆದ ವರ್ಷಗಳಿಂದ ಸೆಲ್ಫೀಯನ್ನು ಬ್ಯಾನ್‌ ಮಾಡಿ ನೋ ಸೆಲ್ಫೀ ಜೋನ್‌ಗಳನ್ನು ಸ್ಥಾಪಿಸಲಾಗಿದೆ. ಆದರೂ, ಸೆಲ್ಫೀ ಸಾವುಗಳು ಮುಂದುವರೆಯುತ್ತಲೆ ಇವೆ.

  ಸೆಲ್ಫೀ ಹಾನಿಕಾರಕವಲ್ಲ

  ಭೋಪಾಲ್‌ನ ಅಖಿಲ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಡಾ.ಅಗಾಮ್ ಬನ್ಸಾಲ್ ಹೇಳುವಂತೆ ಸೆಲ್ಫೀಗಳು ಯಾವತ್ತು ಹಾನಿಕಾರಕವಲ್ಲ. ಆದರೆ, ಸೆಲ್ಫೀ ಜತೆ ಮಾನವನ ನಡವಳಿಕೆ ಸೆಲ್ಫೀಯನ್ನು ಅಪಾಯಕಾರಿ ಹೌದೋ, ಅಲ್ಲವೋ ಎಂದು ಗುರುತಿಸುತ್ತದೆ. ಕೆಲವು ಅಪಾಯಕಾರಿ ಸ್ಥಳಗಳಲ್ಲಿ ರಿಸ್ಕ್‌ ತೆಗೆದುಕೊಂಡು ಸೆಲ್ಫೀ ತೆಗೆದುಕೊಳ್ಳಬಾರದು ಎಂಬುದನ್ನು ಯುವಕರು ಕಲಿಯಬೇಖು ಎಂದು ಹೇಳಿದ್ದಾರೆ.

  ಅಧ್ಯಯನ ಹೇಗೆ..?

  ಸೆಲ್ಫಿ ಫೋಟೋಗಳನ್ನು ಪೋಸ್ಟ್‌ ಮಾಡುವ ಮತ್ತು ತೆಗೆಯುವಾಗ ಸಂಭವಿಸುವ ಅಪಘಾತಗಳ ಬಗ್ಗೆ ವಿಸ್ತೃತ ಅಧ್ಯಯನವನ್ನು ಸಂಶೋಧಕರು ನಡೆಸಿದ್ದು, ವಿಶ್ವದಾದ್ಯಂತ ಇಂಗ್ಲಿಷ್ ಮಾತನಾಡುವ ರಾಷ್ಟ್ರಗಳಲ್ಲಿನ ಪತ್ರಿಕೆಗಳ ವರದಿ, ಮತ್ತಿತರ ಸುದ್ದಿಗಳನ್ನು ಗಮನಿಸಿ ವಿಶ್ಲೇಷಿಸಿದ್ದಾರೆ. ಪ್ರತಿ ಸಂತ್ರಸ್ತನ ಲಿಂಗ, ವಯಸ್ಸು ಮತ್ತು ಮರಣದ ಕಾರಣವನ್ನು ಗುರುತಿಸಿ ಅಧ್ಯಯನ ನಡೆಸಿದ್ದಾರೆ.

  ವಿಶ್ವದಾದ್ಯಂತ 259 ಸೆಲ್ಫೀ ಸಾವು

  ಒಟ್ಟಾರೆಯಾಗಿ, ಅಕ್ಟೋಬರ್ 2011 ಮತ್ತು ನವೆಂಬರ್ 2017 ರ ನಡುವೆ ಜಗತ್ತಿನಾದ್ಯಂತ ಸುಮಾರು 259 ಸೆಲ್ಫೀ ಸಾವುಗಳು ದಾಖಲಾಗಿವೆ. ಇದರಲ್ಲಿ ನೀರಿನಲ್ಲಿ ಮುಳುಗಿ ಸತ್ತವರ ಸಂಖ್ಯೆ (70), ವಾಹನದಿಂದ ಗುದ್ದಿ (51), ಮೇಲಿನಿಂದ ಬಿದ್ದು (48), ಪ್ರಾಣಿಗಳಿಂದ (8), ವಿದ್ಯುತ್‌ ಶಾಕ್‌ನಿಂದ (16) ಮತ್ತು ಬೆಂಕಿಯಿಂದ (11) ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

  ಹೆಚ್ಚಿನ ಪ್ರಕರಣಗಳು ವರದಿಯಾಗಿಲ್ಲ

  ಡಾ. ಬನ್ಸಾಲ್ ಹೇಳುವಂತೆ ಈ ವರದಿಯಲ್ಲಿನ ಅಂಕಿ, ಅಂಶಗಳು ಕೇವಲ ಸಣ್ಣ ಪ್ರಮಾಣದ್ದಾಗಿದೆ. ಇಲ್ಲಿ ಕೇವಲ ನ್ಯೂಸ್‌ ರೂಂನಿಂದ ವರದಿಯಾದ ಸೆಲ್ಫೀ ಸಾವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಸೆಲ್ಫೀಯಿಂದ ಸತ್ತಿರುವ ಅನೇಕ ಪ್ರಕರಣಗಳು ನ್ಯೂಸ್‌ ರೂಂವರೆಗೂ ಬರುವುದಿಲ್ಲ. ಈ ಸೆಲ್ಫೀ ಸಾವುಗಳಲ್ಲಿ 10 ರಿಂದ 19 ವರ್ಷ ವಯಸ್ಸಿನವರು ಶೇ. 36ರಷ್ಟು ಎಂದು ವರದಿ ಬಹಿರಂಗ ಪಡಿಸಿದೆ.

  ಭಾರತದಲ್ಲಿಯೇ ಹೆಚ್ಚು

  ಸೆಲ್ಫೀ ಸಂಬಂಧಿತ ಸಾವುಗಳು ಇದುವರೆಗೂ ಭಾರತದಲ್ಲಿ ಹೆಚ್ಚು ವರದಿಯಾಗಿವೆ. ಆದ್ದರಿಂದ ಗೋವಾದಲ್ಲಿ ಈ ವರ್ಷದ ಜೂನ್‌ನಿಂದ ನೋ ಸೆಲ್ಫೀ ವಲಯಗಳು ಕಾಣಿಸುತ್ತಿವೆ. ಭಾರತದ ನಂತರ ರಷ್ಯಾ, ಯುಎಸ್ಎ ಮತ್ತು ಪಾಕಿಸ್ತಾನದಲ್ಲಿ ಸೆಲ್ಫೀ ಸಾವುಗಳು ಹೆಚ್ಚು ಎಂದು ವರದಿ ಹೇಳಿದೆ.

  ಒಂದಿಷ್ಟು ಪ್ರಕರಣಗಳು

  1.ಈ ವರ್ಷ ಜೂನ್‌ನಲ್ಲಿ ಪೋರ್ಚುಗಲ್‌ನ ಎರೀಸೀರಾ ಕಡಲತೀರದ 30 ಮೀಟರ್ ಗೋಡೆಯ ಮೇಲಿಂದ ಸೆಲ್ಫೀ ತೆಗೆದುಕೊಳ್ಳುವಾಗ ಬಿದ್ದು ಬ್ರಿಟಿಷ್ ಮಹಿಳೆ ಲೂಯಿಸ್ ಬೆನ್ಸನ್ (37)ಮತ್ತು ಆಕೆಯ ಸಂಗಾತಿ ಮೈಕೆಲ್ ಕೀರ್ನ್ಸ್ (33) ಸಾವನ್ನಪ್ಪಿದರು.
  2. 2014ರಲ್ಲಿ ಅಮೇರಿಕಾದ ಮಹಿಳೆ ಕಾರು ಅಪಘಾತಕ್ಕೂ ಕೆಲವೇ ಸೆಕೆಂಡ್‌ಗಳ ಮುನ್ನ ಸೆಲ್ಫೀ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದು ಚರ್ಚೆಗೆ ಗ್ರಾಸ ಮಾಡಿಕೊಟ್ಟಿತ್ತು.
  3. ಮೆಕ್ಸಿಕೋದ ಆಸ್ಕರ್‌ ಒಟೆರೋ ಆಗ್ಯೂಲರ್‌ ತಲೆಗೆ ಗನ್‌ ಇಟ್ಟುಕೊಂಡು ಸೆಲ್ಫೀ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಗನ್‌ನಿಂದ ಗುಂಡು ಹಾರಿ ಪ್ರಾಣ ಬಿಟ್ಟ.
  4. ಈ ವರ್ಷದ ಫೆಬ್ರವರಿಯಲ್ಲಿ 24 ವರ್ಷದ ಥಾಯ್‌ ಮಹಿಳೆ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಳು. ಬ್ಯಾಂಕಾಕ್‌ನ ರೈಲ್ವೇ ಟ್ರಾಕ್‌ನಲ್ಲಿರೈಲಉ ಬರುವಾಗ ಸೆಲ್ಫೀ ತೆಗೆದುಕೊಳ್ಳುತ್ತಿರುವುದ ಇದಕ್ಕೆ ಕಾರಣವಾಗಿತ್ತು.

  ಇರಲಿ ಕಾಮನ್‌ಸೆನ್ಸ್‌

  ಸೆಲ್ಫೀ ಈಗ ಟ್ರೇಂಡ್‌ ಆಗಿದೆ. ಸೆಲ್ಫೀ ತೆಗೆಯುವ ಎಲ್ಲರನ್ನೂ ತೆಗಳುವುದಕ್ಕೆ ಸಾಧ್ಯವಿಲ್ಲ. ಆದರೆ, ಸೆಲ್ಫೀ ತೆಗೆಯುವದಕ್ಕೂ ಮುಂಚೆ ಒಂದಿಷ್ಟು ಕಾಮನ್‌ಸೆನ್ಸ್‌ ಉಪಯೋಗಿಸಿ. ಜೀವನವನ್ನು ನಿಜವಾಗಲೂ ಅನುಭವಿಸುತ್ತೇವೆ ಎಂದು ರಿಸ್ಕ್‌ ತೆಗೆದುಕೊಂಡರೆ ಮಣ್ಣಲ್ಲಿ ಮಣ್ಣಾಗುವುದು ಖಂಡಿತ. ಆದ್ದರಿಂದ ಸೆಲ್ಫೀ ತೆಗೆಯುವಾಗ ಸ್ವಲ್ಪ ಎಚ್ಚರಿಕೆ ಇರಲಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  'Death by selfie' is on the rise with 43 people killed every year taking risky vanity snaps. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more