ನಮಗೆ ಆಪಲ್ ಕಂಪೆನಿ ಮಾದರಿ ಎಂದ ಹುವಾವೇ ಸ್ಥಾಪಕ 'ರೆನ್ ಝೆಂಗ್ ಫೆ'!

|

"ಸೈಬರ್ ಸುರಕ್ಷತೆ ಮತ್ತು ಗೌಪ್ಯತೆ ರಕ್ಷಣೆಯ ವಿಷಯಕ್ಕೆ ಬಂದಾಗ ನಾವು ನಮ್ಮ ಗ್ರಾಹಕರೊಂದಿಗೆ ಇರಲು ಬದ್ಧರಾಗಿದ್ದೇವೆ. ನಾವು ಯಾವತ್ತೂ ಯಾವುದೇ ರಾಷ್ಟ್ರ ಅಥವಾ ಯಾವುದೇ ವ್ಯಕ್ತಿಗೆ ಹಾನಿ ಮಾಡುವುದಿಲ್ಲ" ಎಂದು ಹುವಾವೇ ಕಂಪೆನಿ ಸ್ಥಾಪಕ 'ರೆನ್ ಝೆಂಗ್ ಫೆ' ಅವರು ಹೇಳಿದ್ದಾರೆ. ಚೀನಾದ ಶೆನ್‌ಜೆನ್‌ನಲ್ಲಿರುವ ಕಂಪೆನಿಯ ಪ್ರಧಾನ ಕಚೇರಿಯಲ್ಲಿ ನೆರೆದಿದ್ದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹುವಾವೇ ಕಂಪೆನಿ ಯಾವುದೇ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ನಮಗೆ ಆಪಲ್ ಕಂಪೆನಿ ಮಾದರಿ ಎಂದ ಹುವಾವೇ ಸ್ಥಾಪಕ 'ರೆನ್ ಝೆಂಗ್ ಫೆ'!

ಹೌದು, ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ಹುವಾವೇ ವಿಶ್ವ ಮಟ್ಟದಲ್ಲಿ ಗ್ರಾಹಕರ ಮಾಹಿತಿ ಕದಿಯುತ್ತಿದೆ ಎಂಬ ಆರೋಪದ ಬೆನ್ನಲ್ಲೇ, ಹುವಾವೇ ಸ್ಥಾಪಕರಾದ ರೆನ್ ಝೆಂಗ್ ಫೆ ಅವರು ಪ್ರತಿಕ್ರಿಯಿಸಿದ್ದಾರೆ. ಗ್ರಾಹಕರ ಮಾಹಿತಿ ರಕ್ಷಣೆ ವಿಚಾರದಲ್ಲಿ ನಮಗೆ ಆಪಲ್ ಮಾದರಿ. ಒಂದೊಮ್ಮೆ ಚೀನಾ ಸರಕಾರವು ನಮ್ಮ ಹುವಾವೇ ಬಳಕೆದಾರರ ಯಾವುದೇ ಮಾಹಿತಿಯನ್ನು ಕೇಳಿದ್ದೇ ಆದಲ್ಲಿ, ನಾವು ಅದನ್ನು ಕೊಡಲು ಖಂಡಿತಾ ಸಿದ್ಧರಿಲ್ಲ ಎಂದು ಹೇಳುವ ಮೂಲಕ ಕಂಪೆನಿ ಮೇಲಿನ ನಂಬಿಕೆಯನ್ನು ಹೆಚ್ಚಿಸಲು ಮುಂದಾಗಿದ್ದಾರೆ.

ತನ್ನ ಗ್ರಾಹಕರ ಮಾಹಿತಿ ರಕ್ಷಣೆ ವಿಚಾರದಲ್ಲಿ ಆಪಲ್ ಕಠಿಣ ನಿಲುವು ಹೊಂದಿದೆ. ಅದು ಯಾವುದೇ ಕಾರಣಕ್ಕೂ ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡುವುದಿಲ್ಲ. ಹಾಗೆಯೇ, ಹುವಾವೆ ಕೂಡ ಅದೇ ಮಾದರಿಯನ್ನು ಅನುಸರಿಸುತ್ತದೆ. ನಮ್ಮ ಬಳಕೆದಾರರ ಮಾಹಿತಿ ಸೋರಿಕೆಯಾದರೆ ನಾವು ನಮ್ಮ ಗ್ರಾಹಕರ ನಂಬಿಕೆಯನ್ನು ನಾವು ಕಳೆದುಕೊಳ್ಳುತ್ತೇವೆ. ಅದು ನಮ್ಮ ಉತ್ಪನ್ನ ಕಂಪನಿ, ಬ್ರ್ಯಾಂಡ್ ಸೇರಿದಂತೆ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ನಾವು ಸ್ಪಷ್ಟವಾಗಿ ಅರಿತಿದ್ದೇವೆ ಎಂಬುದನ್ನು ತಿಳಿಯಿರಿ ಎಂದು ಹೇಳಿದ್ದಾರೆ.

ನಮಗೆ ಆಪಲ್ ಕಂಪೆನಿ ಮಾದರಿ ಎಂದ ಹುವಾವೇ ಸ್ಥಾಪಕ 'ರೆನ್ ಝೆಂಗ್ ಫೆ'!

ಹುವಾವೇ ಕಂಪೆನಿ ಮೇಲೆ ನಿರಂತರ ರಾಜಕೀಯ ಒತ್ತಡದ ಮಧ್ಯೆ ಕಂಪನಿಯ ಸಿಇಒ ಮತ್ತು ಸಂಸ್ಥಾಪಕರೇ ಆದ 'ರೆನ್ ಝೆಂಗ್ ಫೆ' ಅವರೇ ಇದೀಗ ಕಂಪೆನಿ ಉಳಿವಿನ ಹೋರಾಟವನ್ನು ನಡೆಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಾಧ್ಯಮಗಳೊಂದಿಗಿನ ಕುಳಿತುಕೊಳ್ಳುವಿಕೆಯಲ್ಲಿ, ಯು.ಎಸ್. ಸರ್ಕಾರವು ವ್ಯಕ್ತಪಡಿಸಿರುವ ಕಳವಳಗಳನ್ನು ತೊಡೆದುಹಾಕಬೇಕಾದ ಅನಿವಾರ್ಯತೆ ಕಂಪೆನಿಗೆ ಇದೆ. ಚೀನಾದ ಸರ್ಕಾರಕ್ಕೆ ಹುವಾವೇ ರಾಷ್ಟ್ರದ ದೂರಸಂಪರ್ಕ ಜಾಲವಲ್ಲ ಎಂಬುದನ್ನು ಅವರು ವಿಶ್ವಕ್ಕೇ ಮನದಟ್ಟ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಶಿಯೋಮಿ, ಒಪ್ಪೊ ಬಿಟ್ಟು 'ಹುವಾವೇ' ಮಾತ್ರ ಬ್ಯಾನ್ ಆಗಲು ಶಾಕಿಂಗ್ ಕಾರಣವಿದೆ!!ಶಿಯೋಮಿ, ಒಪ್ಪೊ ಬಿಟ್ಟು 'ಹುವಾವೇ' ಮಾತ್ರ ಬ್ಯಾನ್ ಆಗಲು ಶಾಕಿಂಗ್ ಕಾರಣವಿದೆ!!

ಇನ್ನು ಚೀನಾದ ಯಾವುದೇ ಕಾನೂನಿನಲ್ಲಿಯೂ ಕೂಡ ಕಡ್ಡಾಯವಾಗಿ ಹಿಂಬಾಗಿಲುಗಳನ್ನು ಸ್ಥಾಪಿಸುವ ಅಗತ್ಯವಿಲ್ಲ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಅನುಚಿತ ಮಾಹಿತಿಯನ್ನು ಒದಗಿಸಲು ಹುವಾವೇ ಮತ್ತು ನಾನು ವೈಯಕ್ತಿಕವಾಗಿ ಯಾವುದೇ ಸರ್ಕಾರದಿಂದ ಯಾವುದೇ ವಿನಂತಿಯನ್ನು ಸ್ವೀಕರಿಸಿಲ್ಲ ಎಂದು ರೆನ್ ಝೆಂಗ್ ಫೆ ಹೇಳಿರುವುದನ್ನು ನಾವು ಇಲ್ಲಿ ನೋಡಬಹುದಾಗಿದೆ. ಆದರೆ, ಹುವಾವೇ ಮೇಲಿನ ಅನುಮಾನ ಇಷ್ಟಕ್ಕೆ ಕೊನೆಗೊಳ್ಳುವುದು ದೂರದ ಮಾತು ಎನ್ನಲಾಗುತ್ತಿದೆ.

Best Mobiles in India

English summary
Huawei CEO: No matter my Communist Party ties, I’ll ‘definitely’ refuse if Beijing (china) wants our customers’ data. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X