ಈತ ಮಾಡಿದ ಕೆಲಸಕ್ಕೆ ರೈಲ್ವೆ ಇಲಾಖೆಯೇ ಶಾಕ್!..ಅಷ್ಟಕ್ಕೂ ಈತ ದೋಚಿದ ಹಣ ಎಷ್ಟು ಗೊತ್ತಾ?
ಭಾರತೀಯರ ರೈಲ್ವೆ ಇಲಾಖೆಯ ವೆಬ್‌ಸೈಟ್‌ಗೆ ಕನ್ನಹಾಕಿದ್ದ ವ್ಯಕ್ತಿಯೊಬ್ಬ ಎರಡು ವರ್ಷಗಳ ಕಾಲ ಚಳ್ಳೆಹಣ್ಣು ತಿನ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಡಿಮೆ ಬೆಲೆಯ ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಬೆರೆಯವರಿಗೆ ಮಾರಾಟ ಮಾಡುವ ಮೂಲಕ ಹಣಗಳಿಸುವುದೇ ಈತನ ಕಾಯಕವಾಗಿತ್ತು ಅನ್ನೊದು ತಿಳಿದುಬಂದಿದೆ.
ಹೌದು, IRCTC ವೆಬ್‌ಸೈಟ್‌ಗೆ ಕನ್ನ ಹಾಕುವ ಮೂಲಕ ಅಕ್ರಮವಾಗಿ ತಾತ್ಕಾಲ್ ಟಿಕೆಟ್ ಬುಕ್ ಮಾಡುತ್ತಿದ್ದ ಆರೋಪಿ ಅವುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನೇ ಕಸುಬು ಮಾಡಿಕೊಂಡಿದ್ದ ಆರೋಪಿ ಇಲ್ಲಿಯವರೆಗೆ 30ಲಕ್ಷ ರೂ ವರೆಗೆ ಮೋಸ ಮಾಡಿದ್ದಾನೆ ಎಂದು ಹೇಳಲಾಗಿದೆ. ಸದ್ಯ ಆರೋಪಿಯನ್ನು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಬಂಧಿಸಿದೆ. ಅಷ್ಟಕ್ಕೂ ಆತ IRCTC ವೆಬ್‌ಸೈಟ್‌ಗೆ ಕನ್ನಹಾಕಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

IRCTC ವೆಬ್‌ಸೈಟ್‌ನಲ್ಲಿ ಪ್ರಯಾಣಿಕರು ಟಿಕೆಟ್‌ಗಳನ್ನು ಕಾಯ್ದಿರಿಸುವ ಹಾಗೂ ತಾತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ. ಆದರೆ ಉತ್ತರ ಪ್ರದೇಶದ ದಾದ್ರಿ ಮೂಲದ ಮೊಯಿನುದ್ದೀನ್ ಚಿಸ್ತಿ ಎಂಬ ಆಸಾಮಿ IRCTC ವೆಬ್‌ಸೈಟ್‌ಗೆ ಕನ್ನ ಹಾಕಿ ಎರಡು ವರ್ಷಗಳ ಕಾಲ ರೈಲ್ವೆ ಇಲಾಖೆಯನ್ನೇ ಯಾಮಾರಿಸಿದ್ದಾನೆ. ಇದಕ್ಕಾಗಿ ಆತ ಅನಧಿಕೃತ ಸಾಫ್ಟ್‌ವೇರ್‌ಗಳಾದ Nexus, Sikka V2, ಮತ್ತು BigBoss ಅನ್ನು ಬಳಸಿಕೊಂಡಿದ್ದಾನೆ. ಈ ಸಾಫ್ಟ್‌ವೇರ್‌ಗಳ ಮೂಲಕ IRCTC ವೆಬ್‌ಸೈಟ್ ಅನ್ನು ಅಕ್ರಮವಾಗಿ ಪ್ರವೇಶಿಸಿ ತನಗೆ ಬೇಕೆನಿಸಿದ ಟಿಕೆಟ್‌ಗಳನ್ನು ಬುಕ್ ಮಾಡಿಕೊಂಡಿದ್ದಾನೆ. ಅಲ್ಲದೆ ಅವುಗಳನ್ನು ಹೆಚ್ಚಿನ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡಿದ್ದಾನೆ.
ಇನ್ನು ಈ ಆರೋಪಿ ಬಳಸಿದ್ದ ಅನಧಿಕೃತ ಸಾಫ್ಟ್‌ವೇರ್‌ಗಳು ನಕಲಿ ಪ್ರೊಫೈಲ್‌ಗಳನ್ನು ರಚಿಸಲು ಅವಕಾಶ ಮಾಡಿಕೊಟ್ಟಿವೆ. ಅಲ್ಲದೆ ಪಾವತಿ ಸೇರಿದಂತೆ ಬುಕಿಂಗ್ ಪ್ರಕ್ರಿಯೆಯನ್ನು ಆಟೋಮ್ಯಾಟಿಕ್ ಗೊಳಿಸುವುದಕ್ಕೆ ಅವಕಾಶ ನೀಡಿದೆ. ಇದರಿಂದ ಇತರ ಜನರಿಗಿಂತ ವೇಗವಾಗಿ ವಿಶೇಷ ಟಿಕೆಟ್‌ಗಳನ್ನು ಪಡೆಯುವುದು ಆರೋಪಿಗೆ ಸುಲಭವಾಗಿದೆ. ಇದರಿಂದ ತತ್ಕಾಲ್ ಟಿಕೆಟ್ ಸಿಗದವರಿಗೆ ಈತ ಟಿಕೆಟ್ ಬುಕ್ ಮಾಡಿಕೊಡುವುದು ಅವರಿಂದ ಹೆಚ್ಚಿನ ಹಣ ಪಡೆದುಕೊಳ್ಳುವುದು ಮಾಡಿದ್ದಾನೆ.
ಅದರಲ್ಲೂ ಈತ ಬುಕ್ ಮಾಡುತ್ತಿದ್ದ ಟಿಕೆಟ್‌ಗಳು ಹೆಚ್ಚಿನವು ತತ್ಕಾಲ್ ಮತ್ತು ವಿಐಪಿ ವಿಭಾಗಕ್ಕೆ ಸೇರಿದ್ದವು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಆತ ಈ ಟಿಕೆಟ್‌ಗಳನ್ನು ಕೆಲವೊಮ್ಮೆ ನಿಜವಾದ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಿರುವುದು ಕಂಡು ಬಂದಿದೆ. ಈ ಮೂಲಕ ಆರೋಪಿಯು ಟಿಕೆಟ್ ಬುಕಿಂಗ್‌ಗಾಗಿ ಥರ್ಡ್ ಪಾರ್ಟಿ ಸಾಫ್ಟ್‌ವೇರ್ ನಿಷೇಧ ಮತ್ತು ಮಾರಾಟವಾದ ಟಿಕೆಟ್‌ಗಳ ವರ್ಗಾವಣೆ ಸೇರಿದಂತೆ ಹಲವಾರು ಭಾರತೀಯ ರೈಲ್ವೆ ನಿಯಮಗಳನ್ನು ಉಲ್ಲಂಘಿಸಿದ್ದಾನೆ.
ಸ್ಥಳೀಯ ಸೈಬರ್ ಕ್ರೈಮ್ ಘಟಕವು ಒಂದೇ ಮೊಬೈಲ್ ಸಂಖ್ಯೆಯಿಂದ ಅನೇಕ ತತ್ಕಾಲ್ ಬುಕಿಂಗ್ ಆಗುತ್ತಿರುವುದನ್ನು ಪತ್ತೆಹಚ್ಚಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಅವರು ಕೂಡಲೇ ರೈಲ್ವೇ ಪೋಲೀಸ್ ಫೋರ್ಸ್ಗೆ ಮಾಹಿತಿ ನೀಡಿದ್ದಾರೆ. ನಂತರ ಎಚ್ಚೆತ್ತ ರೈಲ್ವೇ ಪೋಲೀಸ್ ಫೋರ್ಸ್ ಆರೋಪಿ ಚಿಸ್ತಿಯನ್ನು ಬಂಧಸಿದೆ. ಇನ್ನು ತನಿಖೆಯ ವೇಳೆ ಆರೋಪಿಯಿಂದ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್, ಪ್ರಿಂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ 88 ಹೆಚ್ಚುವರಿ ವಂಚನೆಯ ಟಿಕೆಟ್‌ಗಳು ಮತ್ತು 1.55 ಲಕ್ಷ ರೂ ನಗದನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಚಿಸ್ತಿಯ ಕ್ರಮಗಳು ರೈಲ್ವೇ ನಿಯಮಗಳನ್ನು ಉಲ್ಲಂಘಿಸಿದ್ದಲ್ಲದೆ 1989 ರ ಭಾರತೀಯ ಹೋಮ್ ರೈಲ್ವೇ ಕಾಯಿದೆಯನ್ನು ಉಲ್ಲಂಘಿಸಿ ನೋಂದಣಿ ಮಾಡದ ಪ್ರಯಾಣಿಕರಿಗೆ ಸುಳ್ಳು ಹೆಸರುಗಳಲ್ಲಿ ಟಿಕೆಟ್‌ಗಳನ್ನು ವಿತರಿಸಿದರು. ಗಣಿತದಲ್ಲಿ ಬಿಎಸ್ಸಿ ಪದವಿ ಪಡೆದಿದ್ದರೂ ಅಕ್ರಮ ಎಸಗಿ ಎರಡು ವರ್ಷಗಳಿಂದ ಪ್ರಯಾಣಿಕರಿಗೆ 30 ಲಕ್ಷ ರೂಪಾಯಿ ವಂಚಿಸಿದ್ದಾನೆ. ಇದು ಈಗಾಗಲೇ IRCTCಯನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಮತ್ತೊಂದು ಉದಾಹರಣೆಯಾದಂತಿದೆ.


Click it and Unblock the Notifications








